ಭಾರತದ ಪ್ರಸಿದ್ದ ಹಾಗೂ ಸಿರಿವಂತ ಬಾಣಸಿಗರಲ್ಲಿ ರಣವೀರ್ ಬ್ರಾರ್ ಕೂಡಾ ಒಬ್ಬರಾಗಿದ್ದಾರೆ. ಬಾಣಸಿಗರಾಗಿ ಮಾತ್ರವಲ್ಲದೇ ಬರಹಗಾರರಾಗಿ ರೆಸ್ಟೋರೆಂಟ್ ಮಾಲೀಕರಾಗಿ ಟಿವಿ ವಾಹಿನಿಯ ಸೆಲೆಬ್ರಿಟಿ ಆಗಿಯೂ ಪ್ರಸಿದ್ದರಾಗಿದ್ದಾರೆ. ಶೆಫ್ ರಣವೀರ್ ಬ್ರಾರ್ ಕ್ರಿಯೇಟಿವ್ ರೆಸಿಪಿಗಳಿಂದ ವಿವಿಧ ಬಹುಮಾನಗಳನ್ನು ಗೆದ್ದಿರುವುದು ಮಾತ್ರವಲ್ಲದೇ ಅನೇಕ ಗೌರವಗಳು ರಣವೀರ್ ಬ್ರಾರ್ ಅವರಿಗೆ ಸಂದಿವೆ.
ಟಿವಿ ರಿಯಾಲಿಟಿ ಶೋ ಮಾಸ್ಟರ್‌ಶೆಫ್‌ನಿಂದ ರಣವೀರ್ ಬ್ರಾರ್ ಪರಿಚಯ ಅನೇಕರಿಗೆ ಗೊತ್ತಿದ್ದರೂ, ಅವರು ನಡೆದು ಬಂದ ಹಾದಿ ತಿಳಿದಿರುವುದು ವಿರಳ. ರಣವೀರ್ ಬ್ರಾರ್ ಜೀವನ ಪ್ರಯಾಣದ ಕಥೆ ನಿಜಕ್ಕೂ ಸ್ಪೂರ್ತಿದಾಯಕವಾಗಿದೆ. ಧೈರ್ಯ, ಪರಿಶ್ರಮ ಮತ್ತು ಮಹತ್ವಾಕಾಂಕ್ಷೆ ಇದ್ದರೆ ಸಾಧನೆಗೆ ಅಡ್ಡಿಯುಂಟು ಮಾಡುವ ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಗ್ರೇಟ್ ಶೆಫ್ ಎಂಬ ಯಶಸ್ಸಿನ ಮೆಟ್ಟಿಲು ಹತ್ತಬಹುದೆಂದು ತೋರಿಸಿಕೊಟ್ಟಿದ್ದಾರೆ.

ರಣವೀರ್ ಬ್ರಾರ್ ಯಾರು?
ರಣವೀರ್ ಬ್ರಾರ್ ಲಕ್ನೋ ಮೂಲದವರಾಗಿದ್ದು 1978 ರ ಫೆಬ್ರವರಿ 8 ರಂದು ರೆಸ್ಟೋರೆಂಟ್ ಮಾಲೀಕತ್ವದ ಕುಟುಂಬದಲ್ಲಿ ಜನಿಸಿದರು. ತಮ್ಮ ಎಳೆ ವಯಸ್ಸಿನಲ್ಲೇ ಅಡುಗೆ ತಯಾರಿಸುವ ಬಗ್ಗೆ ಆಸಕ್ತಿ ಹೊಂದಿದ್ದು ಆಗ್ಗಾಗ್ಗೆ ತಮ್ಮ ತಾಯಿಗೆ ಅಡುಗೆಮನೆಯಲ್ಲಿ ಸಹಾಯ ಮಾಡುತ್ತಿದ್ದರು. ಪ್ರೌಢಶಾಲೆಯ ನಂತರ, ರಣವೀರ್ ಬ್ರಾರ್ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಸೇರಿಕೊಂಡರೂ, ಕೆಲವೇ ತಿಂಗಳುಗಳಲ್ಲಿ ಕಾಲೇಜು ತೊರೆದು ಪಾಕಶಾಸ್ತ್ರವನ್ನು ವೃತ್ತಿಯನ್ನಾಗಿಸಿಕೊಳ್ಳಬೇಕೆಂಬ ಮಹದಾಸೆಯಿಂದ ಮುಂಬೈಗೆ ಪ್ರಯಾಣ ಬೆಳೆಸಿದರು.
ಶೆಫ್ ಕೆಲಸ ಹುಡುಕುತ್ತಲೇ ಇದ್ದರೂ ಜೀವನ ನಿರ್ವಹಿಸಲು ಬೇರೆ ಬೇರೆ ಕೆಲಸ ಮಾಡಬೇಕಾದ ಅನಿವಾರ್ಯತೆ ಇತ್ತು. ಕೊನೆಗೂ ರಣವೀರ್ ಬ್ರಾರ್ ಪ್ರಯತ್ನಕ್ಕೆ ಫಲ ಸಿಕ್ಕಿತ್ತು, ಅವರು ತಾಜ್ ಮಹಲ್ ಪ್ಯಾಲೇಸ್ ಹೋಟೆಲ್‌ನಲ್ಲಿ ಕಮಿಸ್ ಬಾಣಸಿಗರಾಗಿ ನೇಮಕಗೊಂಡರು. ಅಲ್ಲಿಯೇ ಹಂತ ಹಂತವಾಗಿ ಮೇಲೇರಿದ ಬ್ರಾರ್ ಕೊನೆಗೆ ಮುಖ್ಯ ಬಾಣಸಿಗರಾಗಿಯೂ ಕೆಲಸ ನಿರ್ವಹಿಸಿದ್ದರು.
ಮಾಸ್ಟರ್‌ಶೆಫ್ ಇಂಡಿಯಾ ಕೊನೆಗೊಂಡ ಬಳಿಕ ರಣವೀರ್ ಬ್ರಾರ್ ಅವರು ಸಾಕಷ್ಟು ಹೆಸರುಗಳಿಸಿದ್ದಾರೆ. ಇನ್ನು ರಣವೀರ್ ಬ್ರಾರ್ ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದು ಇದರಲ್ಲಿ ದಿ ಇಂಡಿಯನ್ ಕಿಚನ್ ಕೂಡ ಸೇರಿದೆ. ಸಂಜೀವ್ ಕಪೂರ್ ಕೆ ಕಿಚನ್ ಕಿಲಾಡಿ ಮತ್ತು ರಣವೀರ್ ಬ್ರಾರ್ ಅವರ ಚಖಲೆ ಇಂಡಿಯಾ ನಂತಹ ಕೆಲವು ರಿಯಾಲಿಟಿ ಶೋಗಳನ್ನು ಬ್ರಾರ್ ನಡೆಸಿಕೊಟ್ಟಿದ್ದಾರೆ.
ರಣವೀರ್ ಬ್ರಾರ್ ಆದಾಯವೆಷ್ಟಿದೆ?
ಬಾಣಸಿಗರಾಗಿರುವುದರ ಜೊತೆಗೆ, ರಣವೀರ್ ಬ್ರಾರ್ ದೆಹಲಿ ಮತ್ತು ಮುಂಬೈನಲ್ಲಿ ತಿನಿಸುಗಳ ವ್ಯವಹಾರವನ್ನು ವಿಸ್ತರಿಸಲು ಪ್ರಯತ್ನಿಸುತ್ತಿದ್ದಾರೆ. ರಣವೀರ್ ಬ್ರಾರ್ ಮಾಲೀಕತ್ವದಲ್ಲಿ ಅನೇಕ ಹೊಟೇಲ್‌ಗಳಿವೆ. ರಣವೀರ್ ಬ್ರಾರ್ ಭಾರತದ ಅತ್ಯಂತ ಶ್ರೀಮಂತ ಬಾಣಸಿಗರ ಪೈಕಿ ಒಬ್ಬರಾಗಿದ್ದಾರೆ. ಶೆಫ್ ರಣವೀರ್‌ರ ಅಂದಾಜು ನಿವ್ವಳ ಆದಾಯವು 41 ಕೋಟಿ ರೂಪಾಯಿ. 2023 ರಲ್ಲಿ ರಣವೀರ್ ಬ್ರಾರ್ ಅವರ ತಿಂಗಳ ಆದಾಯ ಬರೋಬ್ಬರಿ 45 ಲಕ್ಷ ಎಂದು ಅಂದಾಜಿಸಲಾಗಿದೆ.


Click it and Unblock the Notifications