ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕ್ಯಾಂಪಸ್ ಪ್ಲೇಸ್‌ಮೆಂಟ್ ಗಳಲ್ಲಿ ದಾಖಲೆಯ ವೇತನದ ಆಫರ್ ಪಡೆದ ವಿದ್ಯಾರ್ಥಿಗಳ ಬಗ್ಗೆ ಓದಿರುತ್ತೀರಿ. ಆದರೆ ಐಐಟಿ, ಐಐಎಂ, ಎನ್‌ಐಟಿ ಓದದ ಬಿಟೆಕ್ ವಿದ್ಯಾರ್ಥಿನಿ ರಾಶಿ ಬಗ್ಗಾ ವರ್ಷಕ್ಕೆ 85 ಲಕ್ಷ ರೂಪಾಯಿ ಉದ್ಯೋಗ ಪ್ಯಾಕೇಜ್ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ರಾಶಿ ಬಗ್ಗಾ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫರ್ಮೇಷನ್ ಟೆಕ್ನಾಲಜಿ ನಯಾ ರಾಯ್‌ಪುರ್‌ನ (ಐಐಐಟಿ- ಎನ್‌ಆರ್) ಬಿಟೆಕ್ ವಿದ್ಯಾರ್ಥಿನಿಯಾಗಿದ್ದಾರೆ. 2023 ರಲ್ಲಿ ಐಐಐಟಿ- ಎನ್‌ಆರ್‌ನ ಯಾವುದೇ ವಿದ್ಯಾರ್ಥಿಗಳೂ ಸಾಧಿಸದ ಅತ್ಯಧಿಕ ಪ್ಯಾಕೇಜ್ ಅನ್ನು ರಾಶಿ ತಮ್ಮದಾಗಿಸಿಕೊಂಡಿದ್ದಾರೆ.

ಕುತೂಹಲಕಾರಿ ಅಂಶವೆಂದರೆ, ರಾಶಿ ಬಗ್ಗಾ ಅದಕ್ಕೂ ಮುನ್ನ ಬಂದಿದ್ದ ಕಂಪನಿಯೊಂದರ ಸಂದರ್ಶನದಲ್ಲಿ ಆಯ್ಕೆಗೊಂಡು ಉತ್ತಮ ಪ್ಯಾಕೇಜ್ ಪಡೆದುಕೊಂಡಿದ್ದರು. ಆದರೆ ರಾಶಿ ಮತ್ತೊಂದು ಉದ್ಯೋಗ ಸಂದರ್ಶನದಲ್ಲಿ ಎದುರಿಸುವ ಆಸಕ್ತಿಯಿಂದ ತೋರಿ ಅಂತಿಮವಾಗಿ ದಾಖಲೆಯ ವೇತನ ಉದ್ಯೋಗದ ಆಫರ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.
ಈ ಹಿಂದೆ ಇಂಟರ್ವ್ಯೂ ಎದುರಿಸಿದ್ದ ಹಿಂದಿನ ಕಂಪನಿ ನೀಡಿದ ಆಫರ್ ನಿಂದ ತೃಪ್ತರಾಗಿದ್ದರು. ಆದರೂ ಮತ್ತೊಂದು ಸಂದರ್ಶನ ಎದುರಿಸಲು ಉತ್ಸಾಹ ತೋರಿದ್ದರು ಎನ್ನುತ್ತಾರೆ ಐಐಐಟಿ-ಎನ್‌ಆರ್ ಮಾಧ್ಯಮ ಸಂಯೋಜಕರು. ವರದಿಗಳ ಪ್ರಕಾರ, ಈ ವರ್ಷ ರಾಶಿ ಬಗ್ಗಾವನ್ನು ಆಯ್ಕೆ ಮಾಡಿದ ಅದೇ ಕಂಪನಿಯು ಕಳೆದ ವರ್ಷ ಐಐಐಟಿ-ಎನ್‌ಆರ್‌ನಿಂದ ಚಿಂಕಿ ಕರ್ದಾ ಎಂಬರನ್ನು ವಾರ್ಷಿಕ 57 ಲಕ್ಷ ರೂಪಾಯಿಗಳ ಪ್ಯಾಕೇಜ್‌ಗೆ ಆಫರ್ ನೀಡಿ ಆಯ್ಕೆ ಮಾಡಿತ್ತು. ಚಿಂಕಿ ಕರ್ದಾಗೆ ನೀಡಿದ ಆಫರ್ ಅವರ ಬ್ಯಾಚ್‌ನಲ್ಲಿ ಅತ್ಯಧಿಕ ಪ್ಯಾಕೇಜ್ ಆಗಿತ್ತು.
ಐಐಐಟಿ- ಎನ್‌ಆರ್‌ನ ಮತ್ತೋರ್ವ ವಿದ್ಯಾರ್ಥಿ ಯೋಗೇಶ್ ಕುಮಾರ್ ಇವರು ಕೂಡಾ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಇಂಜಿನಿಯರ್ ಹುದ್ದೆಗಾಗಿ ವಾರ್ಷಿಕ 56 ಲಕ್ಷ ರೂಪಾಯಿ ಉದ್ಯೋಗ ಆಫರ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಯೋಗೇಶ್ ಕುಮಾರ್ ಬಹುರಾಷ್ಟ್ರೀಯ ಕಂಪನಿಯಿಂದ ಉದ್ಯೋಗದ ಆಫರ್ ಗಿಟ್ಟಿಸಿಕೊಂಡಿದ್ದಾರೆ.
2020 ರಲ್ಲಿ, ಐಐಐಟಿ-ಎನ್‌ಆರ್ ವಿದ್ಯಾರ್ಥಿ, ರವಿ ಕುಶಾಶ್ವ ಅವರು ಬಹುರಾಷ್ಟ್ರೀಯ ಕಂಪನಿಯಿಂದ ವಾರ್ಷಿಕ 1 ಕೋಟಿ ರೂಪಾಯಿಗಳ ಉದ್ಯೋಗದ ಆಫರ್ ಪಡೆದುಕೊಂಡಿದ್ದರೂ COVID-19 ಸಾಂಕ್ರಾಮಿಕ ರೋಗದ ಕಾರಣ ಕಂಪನಿಗೆ ಸೇರ್ಪಡೆಗೊಳ್ಳಲು ಸಾಧ್ಯವಾಗಿರಲಿಲ್ಲ. ಐಐಐಟಿ-ಎನ್‌ಆರ್ ನ ಪ್ಲೇಸ್‌ಮೆಂಟ್ ಕಛೇರಿಯ ಪ್ರಕಾರ, ವಾರ್ಷಿಕವಾಗಿ ಇದ್ದ 13.6 ಲಕ್ಷ ರೂಪಾಯಿ ಸರಾಸರಿ ಸಿಟಿಸಿಯನ್ನು ಈ ವರ್ಷದ ಬ್ಯಾಚ್‌ನಿಂದ 16.5 ಲಕ್ಷ ರೂಪಾಯಿಗೆ ಪರಿಷ್ಕರಿಸಲಾಗಿದೆ.
ಐಐಟಿ, ಐಐಎಂ ವಿದ್ಯಾರ್ಥಿಯಲ್ಲದಿದ್ದರೂ ರೆಕಾರ್ಡ್ ಬ್ರೇಕಿಂಗ್ ಸ್ಯಾಲರಿ ಪಡೆದವರು!
ಐಐಟಿ, ಐಐಎಂ ನಲ್ಲಿ ಓದದೇ ದೊಡ್ಡ ಕಂಪನಿಯಿಂದ ದೊಡ್ಡ ಮೊತ್ತದ ಪ್ಯಾಕೇಜ್ ಪಡೆದು ಸುದ್ದಿಯಾಗಿದ್ದಾರೆ ವಿದ್ಯಾರ್ಥಿ ಅಭಿಜಿತ್ ದ್ವಿವೇದಿ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮಶನ್ ಟೆಕ್ನಾಲಜಿ (ಐಐಐಟಿ) ಲಕ್ನೋ ಶಿಕ್ಷಣ ಸಂಸ್ಥೆಯ ಇತಿಹಾಸದಲ್ಲಿ ರೆಕಾರ್ಡ್ ಬ್ರೇಕಿಂಗ್ ಪ್ಯಾಕೇಜ್ ಪಡೆದು ಅಭಿಜಿತ್ ಸಾಧನೆ ಮಾಡಿ ತೋರಿಸಿದ್ದಾರೆ. ಇ-ಕಾಮರ್ಸ್ ದೈತ್ಯ ಅಮೇರಿಕನ್ ಅಮೆಜಾನ್‌ನಲ್ಲಿ 1.2 ಕೋಟಿ ರೂ.ಗಳ ಬೃಹತ್ ವೇತನ ಪ್ಯಾಕೇಜ್‌ನಲ್ಲಿ ಅಭಿಜಿತ್ ಅವರನ್ನು ನೇಮಿಸಲಾಗಿದೆ.
ಸರ್ಕಾರಿ ಸ್ವಾಮ್ಯದ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ (ಯುವಿಸಿಇ) 22 ವರ್ಷದ ವಿದ್ಯಾರ್ಥಿನಿ ಕೀರ್ತಿ ಎನ್. ಸಿ. ವಾರ್ಷಿಕ 58.3 ಲಕ್ಷ ರೂಪಾಯಿಗಳ ಪ್ಯಾಕೇಜ್‌ನೊಂದಿಗೆ ಉದ್ಯೋಗದ ಆಫರ್ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಸಿಂಗಾಪುರ ಮೂಲದ ಸಂಸ್ಥೆಯೊಂದರಲ್ಲಿ ಉನ್ನತ ಹುದ್ದೆ ಗಳಿಸುವ ಮೂಲಕ ತಮಿಳುನಾಡಿನ ರೈತನ ಪುತ್ರಿ ಇತಿಹಾಸ ಸೃಷ್ಟಿಸಿದ್ದಾರೆ. ತಮಿಳುನಾಡಿನ ಸೇಲಂ ಮೂಲದ 22ರ ಹರೆಯದ ರಮ್ಯಾ ಆರ್ ಅವರನ್ನು ಐಐಎಂ ಸಂಬಲ್‌ಪುರ್‌ನ ಪ್ಲೇಸ್‌ಮೆಂಟ್ ಸೀಸನ್‌ನಲ್ಲಿ ಸಿಂಗಾಪುರ ಮೂಲದ ಸಂಸ್ಥೆ ತೊಲರಾಮ್ ಗ್ರೂಪ್ ಸಂಸ್ಥೆಯು ರೆಕಾರ್ಡ್ ಬ್ರೇಕಿಂಗ್ ಪ್ಯಾಕೇಜ್ ನೀಡಿ ನೇಮಿಸಿಕೊಂಡಿದೆ.


Click it and Unblock the Notifications