ಎನ್. ಚಂದ್ರಶೇಖರ್ ಅವರು 311 ಬಿಲಿಯನ್ ಡಾಲರ್ ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿದ್ದಾರೆ. ಎನ್. ಚಂದ್ರಶೇಖರ್ ಅವರು ವಿಶ್ವದ ಅತ್ಯಂತ ಅಪ್ರತಿಮ ಉದ್ಯಮ ನಾಯಕರಲ್ಲಿ ಒಬ್ಬರು. 2022- 2023 ರ ಆರ್ಥಿಕ ವರ್ಷದಲ್ಲಿ ಅವರು ಲಾಭದ ಕಮಿಷನ್ ರೂಪದಲ್ಲಿ 100 ಕೋಟಿ ರೂಪಾಯಿಗಳನ್ನು ಸೇರಿದಂತೆ 113 ಕೋಟಿ ರೂಪಾಯಿಗಳನ್ನು ಗಳಿಸಿದ್ದಾರೆ. ಕಳೆದ ಆರ್ಥಿಕ ವರ್ಷದಲ್ಲಿ ಅವರು 109 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ. ಅಂದರೆ, ಕಳೆದ ಎರಡು ವರ್ಷಗಳಲ್ಲಿ ಅವರು 222 ಕೋಟಿ ರೂಪಾಯಿ ಗಳಿಸಿದ್ದಾರೆ.
ಕಂಪನಿಯ ಕಾರ್ಯ ನಿರ್ವಾಹಕ ನಿರ್ದೇಶಕ ಸೌರಭ್ ಅಗರ್‌ವಾಲ್ ಅವರು 27.82 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಕಂಪನಿಯ ವಾರ್ಷಿಕ ವರದಿ ತಿಳಿಸಿದೆ. ಚಂದ್ರಶೇಖರನ್ ಅವರ ಮೂಲ ವೇತನ ವಾರ್ಷಿಕ 5.56 ರೂಪಾಯಿ ಆಗಿದೆ. ಅವರು 2017ರಲ್ಲಿ ಟಾಟಾ ಸನ್ಸ್ ಅಧ್ಯಕ್ಷರಾದರು. ಅವರು ತಮಿಳುನಾಡಿನ ಮೊಹನೂರಿನಲ್ಲಿ ಜನಿಸಿದ್ದಾರೆ. ಅವರದ್ದು ಕೃಷಿ ಕುಟುಂಬ.

ಅವರು ತಮ್ಮ ಶಾಲಾ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲಿ ಮಾಡಿದ್ದಾರೆ. ಅವರು ಕೊಯಂಬತ್ತೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಅಪ್ಲೈಡ್ ಸೈನ್ಸ್‌ನಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ. ಅವರು ತಿರುಚಿನಾಪಳ್ಳಿಯ ರೀಜಿನಲ್ ಎಂಜಿನಿಯರಿಂಗ್ ಕಾಲೇಜಿನಿಂದ ಎಂಸಿಎ ಪದವಿಯನ್ನು ಕೂಡ ಪಡೆದುಕೊಂಡಿದ್ದಾರೆ. ಅವರು ಟಿಸಿಎಸ್‌ಗೆ 1987ರಲ್ಲಿ ಇಂಟರ್ನಿಯಾಗಿ ಸೇರಿಕೊಂಡಿದ್ದರು. 2007ರಲ್ಲಿ ಅವರು ಟಿಸಿಎಸ್‌ನಲ್ಲಿ ಸಿಒಒ ಆಗಿ ನೇಮಕಗೊಂಡಿದ್ದರು. ಬಳಿಕ ಅವರು 2009ರಲ್ಲಿ ಅವರು ಕಂಪನಿಯ ಸಿಇಒ ಆದರು.
ಸಂಬಳ ಶೀಘ್ರವಾಗಿ ಏರಿಕೆ
ಚಂದ್ರಶೇಖರ್ ಅವರ ಸಂಬಳ ಕೂಡ ತ್ವರಿತ ಗತಿಯಲ್ಲಿ ಏರಿಕೆ ಕಂಡಿದೆ. 2019ರಲ್ಲಿ ಅವರು 65 ಕೋಟಿ ರೂಪಾಯಿ ಗಳಿಸಿದ್ದರು. 2021-2022ರಲ್ಲಿ ಅವರ ಪ್ಯಾಕೇಜ್ 109 ಕೋಟಿ ರೂಪಾಯಿ ಆಗಿದೆ. ಮರು ವರ್ಷದಲ್ಲೇ ಅವರು 98 ಕೋಟಿ ರೂಪಾಯಿಗೆ ಫ್ಲ್ಯಾಟ್ ಅನ್ನು ಖರೀದಿಸಿದರು. ಎನ್. ಚಂದ್ರಶೇಖರ್ ಅವರು ಸ್ವತಃ ರೈತರಾಗಿದ್ದಾರೆ. ಆದರೂ ಅವರು ಕೃಷಿಯನ್ನು ಅವಲಂಬಿಸುವುದಕ್ಕೆ ಮುಂದಾಗಲಿಲ್ಲ. ಬದಲಿಗೆ ಬೇರೆಡೆಗೆ ತಮ್ಮ ವೃತ್ತಿ ಭವಿಷ್ಯವನ್ನು ರೂಪಿಸಿಕೊಳ್ಳುವುದಕ್ಕೆ ನಿರ್ಧರಿಸಿದರು.
ಚಂದ್ರಶೇಖರ್ ಅವರಿಗೆ ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಅವರು ಮ್ಯಾರಥಾನ್ ಓಟಗಾರರೂ ಹೌದು. ಅವರು ಮ್ಯಾರಥಾನ್‌ನಲ್ಲಿ ಭಾಗವಹಿಸುವುದಕ್ಕೆ ಅಂತಾರಾಷ್ಟ್ರೀಯವಾಗಿಯೂ ಓಡಾಟವನ್ನು ನಡೆಸುತ್ತಿದ್ದಾರೆ. ಅವರು ಮಧುಮೇಹವನ್ನು ನಿಯಂತ್ರಣದಲ್ಲಿಡುವುಕ್ಕೆ 2008ರಲ್ಲಿ ಮ್ಯಾರಥಾನ್ ಓಟವನ್ನು ಪ್ರಾರಂಭಿಸಿದ್ದರು. ಅವರು ಪ್ರತಿವರ್ಷ ನಾಲ್ಕು ಮ್ಯಾರಥಾನ್‌ನಲ್ಲಿ ಓಡುತ್ತಾರೆ. ಅವರು ರತನ್ ಟಾಟಾ ಅವರಿಗೂ ಬಹಳ ಆಪ್ತರಾಗಿದ್ದಾರೆ. ಅವರ ಕುಟುಂಬವು ಮೋಹನೂರಿನಲ್ಲಿ ವಿಶಾಲವಾದ ಕೃಷಿ ಭೂಮಿಯನ್ನು ಹೊಂದಿದೆ.


Click it and Unblock the Notifications