ನಮ್ಮ ನೆರೆ ದೇಶವಾದ ಪಾಕಿಸ್ತಾನದಲ್ಲಿ ಪ್ರಸ್ತುತ ಆರ್ಥಿಕ ಬಿಕ್ಕಟ್ಟು ಇದೆ, ತೀವ್ರ ಹಣದುಬ್ಬರ ಕಾಣಿಸಿಕೊಂಡಿದೆ. ನಮಗೆಲ್ಲರಿಗೂ ತಿಳಿದಿರುವಂತೆ ಪಾಕಿಸ್ತಾನದಲ್ಲಿ ಮುಸ್ಲಿಮರ ಸಂಖ್ಯೆ ಅಧಿಕವಾಗಿದೆ. ಕೆಲವೇ ಕೆಲವು ಹಿಂದೂ ಕುಟುಂಬಗಳು ಪಾಕಿಸ್ತಾನದಲ್ಲಿದೆ. ಕಡಿಮೆ ಸಂಖ್ಯೆಯಲ್ಲಿ ಹಿಂದೂಗಳಿದ್ದರೂ ಕೂಡಾ ಇಲ್ಲಿನ ಶ್ರೀಮಂತರ ಪಟ್ಟಿಯಲ್ಲಿ ಹಿಂದೂಗಳು ಕಂಡುಬರುತ್ತಾರೆ.
ಪಾಕಿಸ್ತಾನದಲ್ಲಿರುವ ಶ್ರೀಮಂತ ಹಿಂದೂ ಮಹಿಳೆಯರ ಪೈಕಿ ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡಿರುವ ರೀಟಾ ಈಶ್ವರ್ ಒಬ್ಬರಾಗಿದ್ದಾರೆ. ರೀಟಾ ಈಶ್ವರ್ ಪಾಕಿಸ್ತಾನದ ಎರಡನೇ ಅತೀ ಶ್ರೀಮಂತ ಮಹಿಳೆಯರಾಗಿದ್ದಾರೆ. ಹಾಗೆಯೇ ರೀಟಾ ಈಶ್ವರ್ ಈ ಇಸ್ಲಾಮಿಕ್ ದೇಶದಲ್ಲಿರುವ ಮಹಿಳಾ ರಾಜಕಾರಣಿಯಾಗಿದ್ದಾರೆ. ರೀಟಾ ಈಶ್ವರ್ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

ರೀಟಾ ಈಶ್ವರ್ ಬಗ್ಗೆ ತಿಳಿಯಿರಿ
ರೀಟಾ ಈಶ್ವರ್ ಪಾಕಿಸ್ತಾನದಲ್ಲಿ ಪ್ರಬಲ ರಾಜಕೀಯ ವ್ಯಕ್ತಿಯಾಗಿದ್ದು, ದೇಶದ ಅಲ್ಪಸಂಖ್ಯಾತ ಸಮುದಾಯದವರಾಗಿದ್ದರೂ ದೇಶದ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ. ಪಾಕಿಸ್ತಾನದ ಎರಡನೇ ಶ್ರೀಮಂತ ಹಿಂದೂ ಮಹಿಳೆಯಾಗಿರುವ ರೀಟಾ ಈಶ್ವರ್ 2013 ರಿಂದ 2018 ರವರೆಗೆ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯ (ಸಂಸತ್ತಿನ ಕೆಳಮನೆ) ಸದಸ್ಯರಾಗಿದ್ದರು.
ರೀಟಾ ಈಶ್ವರ್ ಪ್ರಸ್ತುತ ಪಾಕಿಸ್ತಾನ್ ಮುಸ್ಲಿಂ ಲೀಗ್ (ಎಫ್) ರಾಜಕೀಯ ಪಕ್ಷದ ಸದಸ್ಯರಾಗಿದ್ದಾರೆ ಮತ್ತು ಜನರಿಗೆ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಪಾಕಿಸ್ತಾನದ ಅತ್ಯಂತ ಶ್ರೀಮಂತ ಹಿಂದೂ ಮಹಿಳೆಯಾಗುವುದರ ಹೊರತಾಗಿ, ರೀಟಾ ಈಶ್ವರ್ ನಿವ್ವಳ ಮೌಲ್ಯದ ಲೆಕ್ಕಾಚಾರದಲ್ಲಿ ನೋಡಿದಾಗ ಶ್ರೀಮಂತ ಪಾಕಿಸ್ತಾನಿ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ. ಈಶ್ವರ್ ಪಾಕಿಸ್ತಾನದ ಸಿಂಧ್ ಪ್ರಾಂತ್ಯದವರಾಗಿದ್ದು, ಪ್ರಸ್ತುತ 42 ವರ್ಷ ವಯಸ್ಸಿನವರಾಗಿದ್ದಾರೆ.
ರೀಟಾ ಈಶ್ವರ್ ಅವರ ನಿವ್ವಳ ಮೌಲ್ಯವು ನಿಖರವಾಗಿ ತಿಳಿದಿಲ್ಲವಾದರೂ ಕೂಡಾ ರೀಟಾ ಈಶ್ವರ್ ವಾರ್ಷಿಕ ಆದಾಯ ಸುಮಾರು 30 ಕೋಟಿ ರೂಪಾಯಿ ಆಗಿದೆ ಎಂದು ಹಲವು ಮಾಧ್ಯಮ ವರದಿಗಳು ಹೇಳಿವೆ. ಈ ಲೆಕ್ಕಾಚಾರದಲ್ಲಿ ನೋಡಿದಾಗ ರೀಟಾ ಈಶ್ವರ್ ಪಾಕಿಸ್ತಾನದ ಶ್ರೀಮಂತ ಹಿಂದೂಗಳಲ್ಲಿ ಒಬ್ಬರಾಗಿದ್ದಾರೆ.
ಪಾಕಿಸ್ತಾನದ ಶ್ರೀಮಂತ ಹಿಂದೂ ಮಹಿಳೆ ಸಂಗೀತಾ
ಪಾಕಿಸ್ತಾನದ ಶ್ರೀಮಂತ ಹಿಂದೂ ಮಹಿಳೆಯು ಜನಪ್ರಿಯ ನಟಿ ಸಂಗೀತಾ ಆಗಿದ್ದಾರೆ. ಸಂಗೀತಾ ಸಾಮಾನ್ಯವಾಗಿ ಪರ್ವೀನ್ ರಿಜ್ವಿ ಎಂದು ಕೂಡಾ ಹೆಸರುವಾಸಿಯಾಗಿದ್ದಾರೆ. ವಿಭಜನೆಗೂ ಮುನ್ನ ಬ್ರಿಟಿಷ್ ಇಂಡಿಯಾದಲ್ಲಿ ಜನಿಸಿದವರು ಸಂಗೀತಾ. ಪಾಕಿಸ್ತಾನದಲ್ಲಿ ಜನಿಸಿದರು ಕೂಡಾ ಹಿಂದೂ ಮಹಿಳೆಯಾಗಿ ನಟಿ ಸಂಗೀತಾ ಜೀವನವನ್ನು ನಡೆಸಿದ್ದಾರೆ.
ಈಗ ದೇಶದ ಶ್ರೀಮಂತ ಹಿಂದೂ ಮಹಿಳೆ ಎಂದು ಸಂಗೀತಾ ಹೆಸರುವಾಸಿಯಾಗಿದ್ದಾರೆ. ಸಂಗೀತಾ/ ಪರ್ವೀನ್ ರಿಜ್ವಿ ಪಾಕಿಸ್ತಾನದ ನಟಿಯಾಗಿದ್ದಾರೆ. ಹಾಗೆಯೇ ಸಂಗೀತಾ ಸಿನಿಮಾ ನಿರ್ದೇಶಕರು ಕೂಡಾ ಆಗಿದ್ದಾರೆ. ಸಂಗೀತಾ ತನ್ನ 21ನೇ ವಯಸ್ಸಿನಲ್ಲಿಯೇ ಪಾಕಿಸ್ತಾನದ ಸಿನಿಮಾ ಇಂಡಸ್ಟ್ರೀಯಲ್ಲಿ ಸಕ್ರಿಯರಾಗಿದ್ದಾರೆ. ಸುಮಾರು 45 ವರ್ಷಗಳ ಹಿಂದೆ ಕೊಹ್-ಎ-ನೂರ್ ಎಂಬ ಚಲನಚಿತ್ರದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಸಂಗೀತಾ ತನ್ನ ಧರ್ಮದ ಕಾರಣದಿಂದಾಗಿ ಸಿನಿಮಾ ಇಂಡಸ್ಟ್ರೀಯಲ್ಲಿ ಪರ್ವೀನ್ ರಿಜ್ವಿ ಎಂಬ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಪಾಕಿಸ್ತಾನದ ದೇಶದ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರು ಸಂಗೀತಾ ಆಗಿದ್ದಾರೆ. ನಿಕಾಹ್, ಮುತ್ತಿ ಭರ್ ಚಾವಲ್, ಯೇ ಅಮಾನ್ ಮತ್ತು ನಾಮ್ ಮೇರಾ ಬದ್ನಾಮ್‌ನಂತಹ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ, ಸಂಗೀತಾ ಪಾಕಿಸ್ತಾನದಲ್ಲಿ ಹಿಂದೂ ಮಹಿಳೆಯಾಗುವುದರ ಜೊತೆಗೆ ಭಾರತದೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದಾರೆ.
ಪಾಕಿಸ್ತಾನಿ ನಟಿ ದಿವಂಗತ ಭಾರತೀಯ ನಟಿ ಜಿಯಾ ಖಾನ್ ಅವರ ಚಿಕ್ಕಮ್ಮ ಆಗಿದ್ದಾರೆ. ನಟಿ ಜಿಯಾ ಖಾನ್ ಅವರು 2013 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಗೀತಾರ ನಿವ್ವಳ ಮೌಲ್ಯ ತಿಳಿದಿಲ್ಲವಾದರೂ, ಸಂಗೀತಾ ಒಂದು ವರ್ಷಕ್ಕೆ 39 ಕೋಟಿ ರೂಪಾಯಿಗಿಂತ ಅಧಿಕ ಗಳಿಸುತ್ತಾರೆ ಎಂದು ಅಂದಾಜು ಮಾಡಲಾಗಿದೆ.


Click it and Unblock the Notifications