Richard Lobo: ಬೈಜೂಸ್‌ನಲ್ಲಿ ಪ್ರಮುಖ ಹುದ್ದೆಗೆ ಸೇರಿದ ರಿಚರ್ಡ್‌ ಲೋಬೋ ಯಾರು?

ಐಟಿ ಕಂಪನಿಯಾದ ಇನ್ಫೋಸಿಸ್‌ನ ಮಾಜಿ ಹಿರಿಯ ಎಕ್ಸಿಕ್ಯೂಟೀವ್‌ ರಿಚರ್ಡ್‌ ಲೋಬೊ ಅವರು ಬೈಜೂಸ್‌ ಎಜ್ಯುಟೆಕ್‌ನ ಮಾನವ ಸಂಪನ್ಮೂಲ ವಿಭಾಗವನ್ನು ಸೇರಿಕೊಂಡಿದ್ದಾರೆ. ಲೋಬೊ ಅವರು ಇನ್ಫೋಸಿಸ್‌ನಲ್ಲಿ 23 ವರ್ಷಗಳ ಸುಧೀರ್ಘ ವೃತ್ತಿ ಬದುಕಿನಲ್ಲಿ ನಾನಾ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ಇತ್ತೀಚೆಗೆ ಅವರು ಅಲ್ಲಿ ಅದರ ಕಾರ್ಯ ನಿರ್ವಾಹಕ ಉಪಾಧ್ಯಕ್ಷ ಹಾಗೂ ಮಾನವ ಸಂಪನ್ಮೂಲ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಎಜ್ಯುಟೆಕ್‌ ಸಂಸ್ಥೆಯು ಹೇಳಿಕೆಯಲ್ಲಿ ತಿಳಿಸಿದೆ.

 ಬೈಜೂಸ್‌ನ ಪ್ರಮುಖ ಹುದ್ದೆಗೆ ಸೇರಿದ ರಿಚರ್ಡ್‌ ಯಾರು?

"ನಾನು ಈ ಪ್ರಮುಖ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಉತ್ಸುಕನಾಗಿದ್ದೇನೆ ಹಾಗೂ ಬೈಜೂಸ್‌ ತಂಡದೊಂದಿಗೆ ಸೇರಿಕೊಂಡು ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಪ್ರಯುತ್ನ ಮಾಡಲಾಗುವುದು," ಎಂದು ಲೋಬೊ ಹೇಳಿದ್ದಾರೆ.

ಲೋಬೊ ಅವರು 2000ದಲ್ಲಿ ಇನ್ಫೋಸಿಸ್‌ ಸೇರಿಕೊಂಡಿದ್ದರು. ಈ ಕಂಪನಿಯು 2023 ಆಗಸ್ಟ್ 14 ರ ಹೊತ್ತಿಗೆ 5,77,000 ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ. ಸೋಮವಾರದಂದು ಕಂಪನಿಯ ಷೇರು ಬೆಲೆ 1,392.95 ರೂಪಾಯಿ ಆಗಿತ್ತು.

ಲೋಬೊ ಅವರು 2015 ರಿಂದ 2023 ರವರೆಗೆ ಇನ್ಫೋಸಿಸ್‌ನಲ್ಲಿ ಮಾನವ ಸಂಪನ್ಮೂಲ ಕಾರ್ಯದ ನೇತೃತ್ವ ವಹಿಸಿದ್ದರು. ಇನ್ಫೋಸಿಸ್‌ನಲ್ಲಿ ಅವರ ಕೊನೆಯ ದಿನ 2023ರ ಆಗಸ್ಟ್ 31 ಆಗಿದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.

ಇನ್ಫೋಸಿಸ್‌ಗೆ ಸೇರುವ ಮೊದಲು, ಅವರು ಗೋದ್ರೇಜ್ ಗ್ರೂಪ್‌ನಲ್ಲಿಯೂ ಕೆಲಸ ಮಾಡಿದ್ದರು. ಅವರು ಗೋದ್ರೇಜ್ ಮತ್ತು ಬಾಯ್ಸ್ ಎಂಎಫ್‌ಜಿಯಲ್ಲಿ ಮಾರಾಟ ಮತ್ತು ಮಾರ್ಕೆಟಿಂಗ್ ವಿಭಾಗದಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕೆಲಸ ಮಾಡಿದ್ದರು. ಅವರು 1996 ರ ಡಿಸೆಂಬರ್‌ನಿಂದ 2000 ದವರೆಗೆ ಅಂದರೆ ಸುಮಾರು ಐದು ವರ್ಷಗಳ ಕಾಲ ಅಲ್ಲಿ ಕೆಲಸ ಮಾಡಿದ್ದಾರೆ.

ಅವರು ಮಣಿಪಾಲ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ(1989-1993)ಯಿಂದ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದುಕೊಂಡಿದ್ದಾರೆ. ಬಳಿಕ ಭುವನೇಶ್ವರದ ಕ್ಸೇವಿಯರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನಿಂದ ಮಾರ್ಕೆಟಿಂಗ್‌ ಅಂಡ್‌ ಫೈನಾನ್ಸ್‌ನಲ್ಲಿ ಪಿಜಿಡಿಎಂ ಪದವಿ ಕೂಡ ಪಡೆದುಕೊಂಡಿದ್ದಾರೆ.

ತಂತ್ರಜ್ಞಾನ ಹಾಗೂ ಕನ್ಸಲ್ಟಿಂಗ್‌ನಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಲ್ಲಿ ಇನ್ಫೋಸಿಸ್‌ನ ಎಚ್‌ಆರ್‌ ವಿಭಾಗಕ್ಕೆ ವಿನೂತನ ತಂತ್ರಜ್ಞಾನ ವ್ಯವಸ್ಥೆಯನ್ನು ಅಳವಡಿಸಿದ ಕೀರ್ತಿ ಲೋಬೊ ಅವರಿಗೆ ಸಲ್ಲುತ್ತದೆ. ರಿಚರ್ಡ್‌ ಅವರು ಪಬ್ಲಿಕೇಷನ್‌ಗಳಿಗೆ ನಿರಂತರ ಲೇಖನಗಳನ್ನು ಬರೆಯುವ ಜತೆಗೆ ಕೈಗಾರಿಕಾ ವಲಯದಲ್ಲಿ ಉತ್ತಮ ಭಾಷಣಕಾರರಾಗಿಯೂ ಗುರುತಿಸಿಕೊಂಡಿದ್ದರು.

ಅವರು ವ್ಯಾಪಾರ ಹಾಗೂ ಮಾನವ ಸಂಪನ್ಮೂಲ ಟ್ರೆಂಡಿಂಗ್‌ ಬಗ್ಗೆ ಶಿಕ್ಷಣ ತಜ್ಞರಿಗೆ ಸಲಹೆ- ಮಾರ್ಗದರ್ಶನವನ್ನು ನೀಡುತ್ತಾರೆ. ಎಚ್‌ಆರ್‌ನಲ್ಲಿನ ಲೋಬೊ ಅವರ ವ್ಯಾಪಕ ಅನುಭವ ಮತ್ತು ನಾಯಕತ್ವವು ನಮ್ಮ ಕಂಪನಿಯ ಕೆಲಸದ ಸಂಸ್ಕೃತಿಯನ್ನು ಮತ್ತಷ್ಟು ಉತ್ಕೃಷ್ಟಗೊಳಿಸಲು ಮತ್ತು ನಮ್ಮ ತಂಡದ ಸದಸ್ಯರ ಸರ್ವತೋಮುಖ ಪ್ರಗತಿಗೆ ಸಹಕಾರಿಯಾಗುತ್ತದೆ ಎಂದು ಬೈಜೂಸ್‌ನ ಸಂಸ್ಥಾಪಕ ಮತ್ತು ಸಿಇಒ ಬೈಜು ರವೀಂದ್ರನ್ ಹೇಳಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+