ಐಎಎಸ್ ಅಧಿಕಾರಿಯಾಗುವ ಕನಸು ಹೊತ್ತು ಸಿವಿಲ್ ಸರ್ವೀಸಸ್ ಪರೀಕ್ಷೆ ಯುಪಿಎಸ್‌ಸಿ ನಲ್ಲಿ ತೇರ್ಗಡೆಯಾಗಬೇಕೆಂಬ ಮಹದಾಸೆ ಅನೇಕರದ್ದು. ವಿಶ್ವದ ಅತ್ಯಂತ ಕಠಿಣವಾದ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಆಕಾಂಕ್ಷಿಗಳು ನಿರಂತರ ತಯಾರಿಯಲ್ಲಿ ತೊಡಗುತ್ತಾರೆ. ಇವರೆಲ್ಲಾರ ಅಂತಿಮ ಗುರಿ ಐಎಎಸ್ ಅಧಿಕಾರಿಯಾಗುವುದು. ಆದರೆ ಇವತ್ತಿನ ಲೇಖನದ ವಿಶೇಷ ವ್ಯಕ್ತಿ ಐಎಎಸ್ ಅಧಿಕಾರಿಯಾಗುವುದನ್ನು ಅಂತಿಮ ಗುರಿಯಾಗಿಸದೇ ಅದನ್ನು ದಾಟಿ ಮುಂದೆ ಸಾಗಿ ಮತ್ತಷ್ಟು ಸಾಧನೆ ಮಾಡಿದ್ದಾರೆ.
ಎಜ್ಯು- ಟೆಕ್ (ed-tech) ಪ್ಲಾಟ್‌ಫಾರ್ಮ್ 'ಅನಾಕಾಡೆಮಿ' ಸ್ಥಾಪಕನಾಗಿ ಈಗ ಜನಪ್ರಿಯವಾಗಿರುವ ರೋಮನ್ ಸೈನಿ, ಹಿಂದೊಮ್ಮೆಐಎಎಸ್ ಅಧಿಕಾರಿಯಾಗಿ ಭಾರತ ಸರ್ಕಾರಕ್ಕೆ ಸೇವೆ ಸಲ್ಲಿಸಿದ್ದರು. ದೇಶದಲ್ಲೇ ಕುಶಾಗ್ರಬುದ್ದಿಮತ್ತೆಯುಳ್ಳ ವ್ಯಕ್ತಿಗಳಲ್ಲಿ ರೋಮನ್ ಸೈನಿ ಕೂಡಾ ಒರ್ವರಾಗಿದ್ದಾರೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಸೈನಿಯವರಿಗೆ ಕೇವಲ 16 ವರ್ಷವಿದ್ದಾಗ ಅವರು ಪ್ರತಿಷ್ಠಿತ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಪ್ರವೇಶ ಪರೀಕ್ಷೆಯನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದರು.

ನಂತರ ವೈದ್ಯಕೀಯ ಕಾಲೇಜಿನಲ್ಲಿ ತಮಗಾಗಿ ಸೀಟು ಕಾಯ್ದಿರಿಸಿಕೊಂಡು MBBS ಅನ್ನು ಪೂರ್ಣಗೊಳಿಸಿದರು. ಇದಾದ ಬಳಿಕ ಸೈನಿ AIIMS ನಲ್ಲಿರುವ ನ್ಯಾಷನಲ್ ಡ್ರಗ್ ಡಿಪೆಂಡೆನ್ಸಿ ಟ್ರೀಟ್ಮೆಂಟ್ ಸೆಂಟರ್ ನಲ್ಲಿ (NDDTC) 6 ತಿಂಗಳ ಕಾಲ ಸೇವೆ ಸಲ್ಲಿಸಿದರು. ಇದಾದ ಬಳಿಕ ರೋಮನ್ ಸೈನಿ ಮತ್ತೊಂದು ಸವಾಲನ್ನು ಸ್ವೀಕರಿಸಿ ತಮ್ಮ 22 ನೇ ವಯಸ್ಸಿನಲ್ಲಿ UPSC CSE ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಿ ಮಧ್ಯಪ್ರದೇಶದಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದರು.
ಇಲ್ಲಿಗೆ ಸುಮ್ಮನಿರದ ರೋಮನ್ ಸೈನಿ ಹೊಸದನ್ನೇನಾದರೂ ಮಾಡಬೇಕೆಂದು ನಿರ್ಧರಿಸಿ ಸ್ನೇಹಿತ ಗೌರವ್ ಮುಂಜಾಲ್ ಅವರೊಂದಿಗೆ ಸೇರಿಕೊಂಡು ಜನಪ್ರಿಯ ಆನ್‌ಲೈನ್ ಶಿಕ್ಷಣ ವೇದಿಕೆಯಾದ ಅನಾಕಾಡೆಮಿಯನ್ನು ಸ್ಥಾಪಿಸಿದರು. ವಿದ್ಯಾರ್ಥಿಗಳು ಲಕ್ಷಗಟ್ಟಲೆ ಹಣ ಸುರಿದು ಯುಪಿಎಸ್‌ಸಿ ಕೋಚಿಂಗ್ ಪಡೆಯುವ ಅಗತ್ಯ ಬರಬಾರದೆಂದು ಅದಕ್ಕಾಗಿ ಅನಾಕಾಡೆಮಿ ಎಂಬ ವೇದಿಕೆಯನ್ನು ಹುಟ್ಟುಹಾಕಿದರು.
ಇಂಜಿನಿಯರ್ ಆಗಿ ಈಗ ಉದ್ಯಮಿಯಗಿ ಬದಲಾಗಿರುವ ಗೌರವ್ ಮುಂಜಾಲ್ ಅವರ ಯೂಟ್ಯೂಬ್ ಚಾನೆಲ್ ಈ ವಾಣಿಜ್ಯ ಸಾಮ್ರಾಜ್ಯಕ್ಕೆ ಅಡಿಪಾಯವಾಗಿ ಕಾರ್ಯನಿರ್ವಹಿಸಿತು. ಆದರೆ ಅನಾಕಾಡೆಮಿಯನ್ನು ಇಂದು ರೂ 26000 ಕೋಟಿ ಮೌಲ್ಯದ ಕಂಪನಿಯನ್ನಾಗಿ ಪರಿವರ್ತಿಸಿದ ಕೀರ್ತಿಗೆ ಡಾಕ್ಟರ್ ಮತ್ತು ಮಾಜಿ ಐಎಎಸ್ ಅಧಿಕಾರಿ ರೋಮನ್ ಸೈನಿ ಪಾತ್ರರಾದರು.
ಐಎಎಸ್ ಕನಸು ತೊರೆದು 40,000 ಕೋಟಿ ಸಂಪತ್ತಿನ ಒಡೆಯನಾದ ವಿದಿತ್!
ದೇಶದಲ್ಲಿ ಸ್ಟಾರ್ಟ್‌ಅಪ್ ಸಂಸ್ಕೃತಿ ಬಹಳ ವೇಗವಾಗಿ ಬೆಳೆಯುತ್ತಿದ್ದು, ಹಲವು ಯುವ ಉದ್ಯಮಿಗಳು ಈ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು ಹಾಗೂ ಪ್ರಗತಿಯನ್ನು ಸಾಧಿಸುತ್ತಿದ್ದಾರೆ. ನಮ್ಮ ದೇಶದಿಂದ ಮಾತ್ರವಲ್ಲ ವಿದೇಶದಿಂದಲೂ ಧನಸಹಾಯವನ್ನು ಪಡೆಯುತ್ತಿರುವ ಅನೇಕ ಯುವ ಭಾರತೀಯ ಉದ್ಯಮಿಗಳಿದ್ದಾರೆ. ವಿದಿತ್ ಆತ್ರೆ ಹಾಗೂ ಸಂಜೀವ್ ಬರ್ನ್ವಾಲ್ ಅವರಂಥಹ ಯುವ ಉದ್ಯಮಿಗಳು ಕೂಡ ಈ ಸಾಲಿಗೆ ಸೇರಿದ್ದಾರೆ.
ವಿದಿತ್ ಅವರ ತಂದೆಗೆ ತಮ್ಮ ಮಗನನ್ನು ಐಎಎಸ್ ಪಾಸ್ ಮಾಡಿಸಿ ಅಧಿಕಾರಿಯನ್ನಾಗಿ ಮಾಡಬೇಕೆಂದು ಆಸೆಪಟ್ಟಿದ್ದರು. ಅದಕ್ಕಾಗಿ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಕೂಡ ನಡೆಸುವುದಕ್ಕೆ ಯೋಚಿಸಿದ್ದರು. ಆದರೆ ಐಐಟಿ ಓದು ಮುಗಿಸಿದ ಬಳಿಕ ಆತ್ರೆ ಅವರು ಸರ್ಕಾರಿ ಉದ್ಯೋಗಕ್ಕೆ ಸೇರುವ ತಮ್ಮ ನಿರ್ಧಾರವನ್ನು ಬದಲಿಸಿಕೊಂಡರು.
ಆ ಮೂಲಕ ತಮ್ಮದೇ ಐಡಿಯಾದೊಂದಿಗೆ ವಿನೂತನ ಉದ್ಯಮ ಅಥವಾ ವ್ಯಾಪಾರವನ್ನು ಪ್ರಾರಂಭಿಸುವುದಕ್ಕೆ ಯೋಚಿಸಲಾರಂಭಿಸಿದ್ದರು. ಅದರ ಪರಿಣಾಮವಾಗಿ ಮೀಶೋ ಹುಟ್ಟಿಕೊಂಡಿದೆ. ಮೀಶೋ ಬಹಳ ವಿಭಿನ್ನ ಮಾದರಿಯಲ್ಲಿ ಕೆಲಸ ಮಾಡುತ್ತದೆ. ಇದರಲ್ಲಿ ಮಾರಾಟಗಾರರು ಆಪ್‌ನಲ್ಲಿ ಮಾರುಕಟ್ಟೆ ತಾಣವನ್ನು ತಯಾರಿಸುವುದಕ್ಕೆ ಅವಕಾಶವನ್ನು ಪಡೆಯುತ್ತಾರೆ.


Click it and Unblock the Notifications