ಪಾಕಿಸ್ತಾನದಲ್ಲಿ ಬಹುತೇಕ ಜನರು ಮುಸ್ಲಿಂ ಸಮುದಾಯಕ್ಕೆ ಸೇರಿದವರು ಆಗಿದ್ದಾರೆ. ಆದರೂ 1947ರಲ್ಲಿ ದೇಶ ವಿಭಜನೆಯಾದ ಬಳಿಕ ಪಾಕಿಸ್ತಾನದಲ್ಲಿ ಹಲವಾರು ಹಿಂದೂಗಳು ವಾಸಿಸುತ್ತಿದ್ದಾರೆ. ಪಾಕಿಸ್ತಾನ ದೇಶವು ದುರ್ಬಲ ಆರ್ಥಿಕ ಬಿಕ್ಕಟ್ಟಿನ ಮೂಲಕ ಸಾಗುತ್ತಿದೆ. ಈ ನಡುವೆ ಪಾಕಿಸ್ತಾನದ ಕೆಲವು ಶ್ರೀಮಂತರ ಪೈಕಿ ಹಿಂದೂಗಳು ಕೂಡಾ ಇದ್ದಾರೆ ಎಂಬುವುದು ಆಸಕ್ತಿದಾಯಕ ವಿಚಾರ.
ಪಾಕಿಸ್ತಾನದ ದೇಶದ ಶ್ರೀಮಂತ ಹಿಂದೂ ದೀಪಕ್ ಪೆರ್ವಾನಿ ಫ್ಯಾಷನ್ ಡಿಸೈನರ್ ಮತ್ತು ನಟ ಆಗಿದ್ದು, ಮನರಂಜನಾ ಕ್ಷೇತ್ರಕ್ಕೆ ಸೇರಿದವರು ಆಗಿದ್ದಾರೆ. ಹೀಗಿರುವಾಗ ಪಾಕಿಸ್ತಾನದ ಶ್ರೀಮಂತ ಹಿಂದೂ ಮಹಿಳೆ ಕೂಡ ಮನರಂಜನಾ ಉದ್ಯಮಕ್ಕೆ ಸೇರಿದವರು ಆಗಿದ್ದಾರೆ. ಪಾಕಿಸ್ತಾನದ ಶ್ರೀಮಂತ ಹಿಂದೂ ಮಹಿಳೆ ಬಗ್ಗೆ ನಾವಿಲ್ಲಿ ವಿವರಣೆ ನೀಡಿದ್ದೇವೆ ಮುಂದೆ ಓದಿ...

ಪಾಕಿಸ್ತಾನದ ಶ್ರೀಮಂತ ಹಿಂದೂ ಮಹಿಳೆ
ಪಾಕಿಸ್ತಾನದ ಶ್ರೀಮಂತ ಹಿಂದೂ ಮಹಿಳೆಯು ಜನಪ್ರಿಯ ನಟಿ ಸಂಗೀತಾ ಆಗಿದ್ದಾರೆ. ಸಂಗೀತಾ ಸಾಮಾನ್ಯವಾಗಿ ಪರ್ವೀನ್ ರಿಜ್ವಿ ಎಂದು ಕೂಡಾ ಹೆಸರುವಾಸಿಯಾಗಿದ್ದಾರೆ. ವಿಭಜನೆಗೂ ಮುನ್ನ ಬ್ರಿಟಿಷ್ ಇಂಡಿಯಾದಲ್ಲಿ ಜನಿಸಿದವರು ಸಂಗೀತಾ.
ಪಾಕಿಸ್ತಾನದಲ್ಲಿ ಜನಿಸಿದರು ಕೂಡಾ ಹಿಂದೂ ಮಹಿಳೆಯಾಗಿ ನಟಿ ಸಂಗೀತಾ ಜೀವನವನ್ನು ನಡೆಸಿದ್ದಾರೆ. ಈಗ ದೇಶದ ಶ್ರೀಮಂತ ಹಿಂದೂ ಮಹಿಳೆ ಎಂದು ಸಂಗೀತಾ ಹೆಸರುವಾಸಿಯಾಗಿದ್ದಾರೆ. ಸಂಗೀತಾ/ ಪರ್ವೀನ್ ರಿಜ್ವಿ ಪಾಕಿಸ್ತಾನದ ನಟಿಯಾಗಿದ್ದಾರೆ. ಹಾಗೆಯೇ ಸಂಗೀತಾ ಸಿನಿಮಾ ನಿರ್ದೇಶಕರು ಕೂಡಾ ಆಗಿದ್ದಾರೆ.
ಸಂಗೀತಾ ತನ್ನ 21ನೇ ವಯಸ್ಸಿನಲ್ಲಿಯೇ ಪಾಕಿಸ್ತಾನದ ಸಿನಿಮಾ ಇಂಡಸ್ಟ್ರೀಯಲ್ಲಿ ಸಕ್ರಿಯರಾಗಿದ್ದಾರೆ. ಸುಮಾರು 45 ವರ್ಷಗಳ ಹಿಂದೆ ಕೊಹ್-ಎ-ನೂರ್ ಎಂಬ ಚಲನಚಿತ್ರದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಸಂಗೀತಾ ತನ್ನ ಧರ್ಮದ ಕಾರಣದಿಂದಾಗಿ ಸಿನಿಮಾ ಇಂಡಸ್ಟ್ರೀಯಲ್ಲಿ ಪರ್ವೀನ್ ರಿಜ್ವಿ ಎಂಬ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದಾರೆ.
ಪಾಕಿಸ್ತಾನದ ದೇಶದ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರು ಸಂಗೀತಾ ಆಗಿದ್ದಾರೆ. ನಿಕಾಹ್, ಮುತ್ತಿ ಭರ್ ಚಾವಲ್, ಯೇ ಅಮಾನ್ ಮತ್ತು ನಾಮ್ ಮೇರಾ ಬದ್ನಾಮ್‌ನಂತಹ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ, ಸಂಗೀತಾ ಪಾಕಿಸ್ತಾನದಲ್ಲಿ ಹಿಂದೂ ಮಹಿಳೆಯಾಗುವುದರ ಜೊತೆಗೆ ಭಾರತದೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದಾರೆ.
ಪಾಕಿಸ್ತಾನಿ ನಟಿ ದಿವಂಗತ ಭಾರತೀಯ ನಟಿ ಜಿಯಾ ಖಾನ್ ಅವರ ಚಿಕ್ಕಮ್ಮ ಆಗಿದ್ದಾರೆ. ನಟಿ ಜಿಯಾ ಖಾನ್ ಅವರು 2013 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಗೀತಾರ ನಿವ್ವಳ ಮೌಲ್ಯ ತಿಳಿದಿಲ್ಲವಾದರೂ, ಸಂಗೀತಾ ಒಂದು ವರ್ಷಕ್ಕೆ 39 ಕೋಟಿ ರೂಪಾಯಿಗಿಂತ ಅಧಿಕ ಗಳಿಸುತ್ತಾರೆ ಎಂದು ಅಂದಾಜು ಮಾಡಲಾಗಿದೆ.
ಪಾಕಿಸ್ತಾನದ ಶ್ರೀಮಂತ ಹಿಂದೂ ವ್ಯಕ್ತಿ ದೀಪಕ್ ಪೆರ್ವಾನಿ
ದೀಪಕ್ ಪೆರ್ವಾನಿ 1973ರಲ್ಲಿ ಪಾಕಿಸ್ತಾನದ ಮೀರ್‌ಪುರ್ ಖಾಸ್‌ನಲ್ಲಿ ಜನಿಸಿದ್ದಾರೆ. ಹಾಗೆಯೇ ಪಾಕಿಸ್ತಾನದ ಜನಪ್ರಿಯ ಫ್ಯಾಷನ್ ಡಿಸೈನರ್ ಮತ್ತು ನಟರಾಗಿದ್ದಾರೆ. ದೀಪಕ್ ಪೆರ್ವಾನಿ ಪಾಕಿಸ್ತಾನದ ಹಿಂದೂ ಸಿಂಧಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಪಾಕಿಸ್ತಾನದಲ್ಲಿ ಫ್ಯಾಷನ್ ಡಿಸೈನಿಂಗ್‌ನಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
2022ರಲ್ಲಿ ಪ್ರಕಟವಾದ ವರದಿ ಪ್ರಕಾರ ದೀಪಕ್ ಪೆರ್ವಾನಿ ನಿವ್ವಳ ಆದಾಯ 71 ಕೋಟಿ ರೂಪಾಯಿ ಆಗಿದೆ. ದೀಪಕ್ ಪೆರ್ವಾನಿ ಪಾಕಿಸ್ತಾನದಲ್ಲಿನ ನಟ ಕೂಡಾ ಹೌದು. ಪಾಕಿಸ್ತಾನದ ಜನಪ್ರಿಯ ಟಿವಿ ಧಾರಾವಾಹಿಗಳಾಗಿ ದೀಪಕ್ ಪೆರ್ವಾನಿ ನಟಿಸಿದ್ದಾರೆ.
ಮೇರೆ ಪಾಸ್ ಪಾಸ್ (ಹಮ್ ಟಿವಿ), ಕಾದೋರಾತ್ (2013ರಲ್ಲಿ ಹಮ್ ಟಿವಿ) ದೀಪಕ್ ಪೆರ್ವಾನಿ ನಟಿಸಿ ಪ್ರಮುಖ ಧಾರಾವಾಹಿಗಳಾಗಿದೆ. ದೀಪಕ್ ಪೆರ್ವಾನಿ ರೊಮ್ಯಾಂಟಿಕ್, ಕಾಮೆಡಿ ಸಿನಿಮಾ ಪಂಜಾಬ್ ನಹಿ ಜೌಂಗಿಯಲ್ಲಿಯೂ (2017) ನಟಿಸಿದ್ದಾರೆ.


Click it and Unblock the Notifications