Sanjeev Juneja: ಹೇರ್ ಆಯಿಲ್ ಮಾರಾಟ ಮಾಡಿ 1651 ಕೋಟಿ ರೂ. ಗಳಿಸಿದ ಸಂಜೀವ್ ಜುನೇಜಾ!

ಕೆಲವರು ಸಿರಿವಂತಿಕೆಯಲ್ಲಿ , ಹುಟ್ಟಿದ್ರೆ ಇನ್ನು ಕೆಲವರು ತಮ್ಮ ಪರಿಶ್ರಮ, ಬುದ್ದಿವಂತಿಕೆಯಿಂದ ಸಿರಿವಂತರಾಗುತ್ತಾರೆ. ಇಂತಹ ವ್ಯಕ್ತಿಗಳಲ್ಲಿ ಸಂಜೀವ್ ಜುನೇಜಾ ಕೂಡಾ ಒಬ್ಬರು. ಇವರು ಹಲವು ವರ್ಷಗಳಲ್ಲಿ ಅನೇಕ ಪ್ರಖ್ಯಾತ ಆಯುರ್ವೇದ ಬ್ರ್ಯಾಂಡ್‌ಗಳನ್ನು ನಿರ್ಮಿಸಿದವರು.! ಸಂಜೀವ್ ಜುನೇಜಾ ಅವರು ಜನಸಾಮಾನ್ಯರಿಗೆ ಚಿರಪರಿಚಿತರಾಗದಿದ್ದರೂ, ಅವರು ನಿರ್ಮಿಸಿದ ಬ್ರ್ಯಾಂಡ್‌ಗಳು ಮಾತ್ರ ಜನಮಾನಸದಲ್ಲಿ ನೆಲೆಯೂರಿದೆ.

ಸಾಲ ಪಡೆದು ಆರಂಭಿಸಿದ ಉದ್ಯಮದ ವಹಿವಾಟು ಇಂದು ಶತಕೋಟಿ!: 46 ವರ್ಷದ ಸಂಜೀವ್ ತನ್ನ ತಾಯಿಯಿಂದ 2000 ರೂಪಾಯಿ ಸಾಲ ಪಡೆದು ಕಂಪನಿ ಆರಂಭಿಸಿದ್ದರು. ಇದು ಇಂದು ವಿಶ್ವದ ಅತಿದೊಡ್ಡ ಆಯುರ್ವೇದ ಸಂಸ್ಥೆಗಳಲ್ಲಿ ಒಂದಾಗಿದೆ. ಇದರ ವಹಿವಾಟು ನೂರಾರು ಕೋಟಿಗೆ ತಲುಪಿದೆ ಮಾತ್ರವಲ್ಲದೆ ಅವರು ಹಲವಾರು ಸೂಪರ್ ಹಿಟ್ ಬ್ರ್ಯಾಂಡ್ ಗಳನ್ನು ನಿರ್ಮಿಸಿದ್ದಾರೆ.

 ಹೇರ್ ಆಯಿಲ್ ಮಾರಾಟ ಮಾಡಿ 1651 ಕೋಟಿ ರೂ. ಗಳಿಸಿದ ಸಂಜೀವ್ ಜುನೇಜಾ!

ಸಂಜೀವ್ ಅವರ ತಂದೆ ಅಂಬಾಲಾದಲ್ಲಿ ಆಯುರ್ವೇದ ವೈದ್ಯರಾಗಿದ್ದು ಪುಟ್ಟ ಕ್ಲಿನಿಕ್ ಒಂದನ್ನು ಮುನ್ನಡೆಸುತ್ತಿದ್ದರು. ಹೀಗಾಗಿ ಸಹಜವಾಗಿಯೇ ಸಂಜೀವ್ ತಮ್ಮ ತಂದೆಯಿಂದ ಆಯುರ್ವೇದದ ಸೂಕ್ಷ್ಮತೆಗಳನ್ನು ಕಲಿತರು. 1999 ರಲ್ಲಿ, ಅವರ ತಂದೆಯ ಮರಣದ ನಂತರ, ತಂದೆಯ ಪರಂಪರೆಯನ್ನುಮುಂದುವರಿಸಲು ನಿರ್ಧರಿಸಿದರು. ಹೀಗಾಗಿ 2003 ರಲ್ಲಿ ರಾಯಲ್ ಕ್ಯಾಪ್ಸುಲ್ ನೊಂದಿಗೆ ತಮ್ಮ ಕಂಪನಿಯನ್ನು ಪ್ರಾರಂಭಿಸಿದರು.

ಇದರಿಂದ ಬಂದತಹ ಲಾಭದ ಹಣವನ್ನು ಮತ್ತೆ ತಮ್ಮ ವ್ಯವಹಾರದಲ್ಲಿ ಮರುಹೂಡಿಕೆ ಮಾಡಿದರು. 2008 ರಲ್ಲಿ, ಅವರು ತಮಗಾಗಿ ಹೇರ್-ಕೇರ್ ಫಾರ್ಮುಲಾ ಒಂದನ್ನು ತಯಾರಿಸಿದರು. ಅದು ಉತ್ತಮ ಪರಿಣಾಮ ಬೀರಲಾರಂಭಿಸಿದ್ದರಿಂದ, ಅವರು ಅದನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದರು. ಇದು ಮುಂದಿನ ದಿನಗಳಲ್ಲಿ ಬೃಹತ್ ಬ್ರ್ಯಾಂಡ್ ಆಗಿ ಹೊರಹೊಮ್ಮಿತು. ಈ ಉತ್ಪನ್ನದ ಹೆಸರೇ "ಕೇಶ್ ಕಿಂಗ್ ". ಹೌದು ಸಂಜೀವ್ ಅವರ ಹೆಸರು ಕೇಳದಿದ್ದರು ಕೇಶ್ ಕಿಂಗ್ ಹೇರ್ ಆಯಿಲ್ ಬಗ್ಗೆ ತಿಳಿಯದವರು ಅಪರೂಪ ಎನ್ನಬಹುದು.

ಮನೆಮನೆಗೆ ಹೋಗಿ ಕೇಶ್ ಕಿಂಗ್ ಉತ್ಪನ್ನ ಮಾರಾಟ

ಕೇಶ್ ಕಿಂಗ್ ಉತ್ಪನ್ನಗಳನ್ನು ಅವರು ಮನೆಮನೆಗೆ ಹೋಗಿ ಮಾರಾಟ ಮಾಡಿದರು. ಇದಾದ ಬಳಿಕ ಸ್ಥಳೀಯ ಪತ್ರಿಕೆ, ಚಾನೆಲ್‌ಗಳಲ್ಲಿ ಉತ್ಪನ್ನದ ಜಾಹಿರಾತು ನೀಡಿದರು. ಸಂಸ್ಥೆಯು 300 ಕೋಟಿ ರೂಪಾಯಿಗಳ ವ್ಯವಹಾರ ದಾಖಲಿಸಿದ ಬಳಿಕ ಜೂಹಿ ಚಾವ್ಲಾ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆದರು. ಇಷ್ಟು ಮಾತ್ರವಲ್ಲದೇ 2015 ರಲ್ಲಿ ಇಮಾಮಿ ಸಂಸ್ಥೆಯನ್ನು 1651 ಕೋಟಿ ರೂಪಾಯಿಗೆ ಖರೀದಿಸಿದರು. ಇದಾದ ಬಳಿಕ "ಪೆಟ್ ಸಫಾ" ಎಂಬ ಮತ್ತೊಂದು ಉತ್ಪನ್ನವನ್ನು ತಯಾರಿಸಿದರು. ರಾಜು ಶ್ರೀವಾಸ್ತವ ಇದರ ಬ್ರಾಂಡ್ ಅಂಬಾಸಿಡರ್ ಆಗಿದ್ದರು.

ಜಾವೇದ್ ಅಖ್ತರ್ ಅವರ ಬ್ರಾಂಡ್ ಅಂಬಾಸಿಡರ್ ಆಗಿರುವ "ಡಾಕ್ಟರ್ ಆರ್ಥೋ" ಅ ಜೊತೆಗೆ ಸೌಂದರ್ಯವರ್ಧಕ "ರೂಪ್ ಮಂತ್ರ" ಹುಟ್ಟುಹಾಕಿದರು. ಈ ಎಲ್ಲಾ ಬ್ರ್ಯಾಂಡ್‌ಗಳು ಸೂಪರ್ ಹಿಟ್ ಆಗಿವೆ. ಸಂಜೀವ್ ಜುನೇಜಾ ಅವರು ಚಂಡೀಗಢ ಮೂಲದವರಾಗಿದ್ದು, ಒಂದು ಕೋಣೆಯ ಕಚೇರಿಯೊಂದಿಗೆ ತಮ್ಮ ವ್ಯವಹಾರವನ್ನು ಶುರು ಮಾಡಿದವರು ಇಂದು ದೊಡ್ಡ ಕಂಪನಿಯ ಮಾಲೀಕರಾಗಿದ್ದಾರೆ. ಅಲ್ಲದೆ ಸಂಜೀವ್ ಜುನೇಜಾ ಅವರು ಮೊಟಿವೇಷನಲ್ ಸ್ಪೀಕರ್ ಆಗಿದ್ದಾರೆ.

ಕಡಿಮೆ ವರ್ಷದಲ್ಲಿಯೇ ಸಂಸ್ಥೆಯನ್ನು ಕಟ್ಟಿ ಬೆಳೆಸಿದವರು!

ಹಲವಾರು ಮಂದಿ ಕಡಿಮೆ ಸಮಯದಲ್ಲಿಯೇ ಒಂದು ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿರುವ ಮಿಸ್ಬಾ ಅಶ್ರಫ್‌ ಕಾಲೇಜು ಅರ್ಧಕ್ಕೆ ಬಿಟ್ಟು 12 ತಿಂಗಳಲ್ಲಿ 2463 ಕೋಟಿ ರೂ. ಕಂಪನಿ ಕಟ್ಟಿದ್ದಾರೆ. 2 ವರ್ಷದಲ್ಲಿ 83,000 ಕೋಟಿ ರೂ. ಮೌಲ್ಯದ ಕಂಪನಿ ಕಟ್ಟಿ ಬೆಳೆಸಿದ ಖ್ಯಾತಿಯು 35 ಹರೆಯದ ನಿಕಿಲ್ ವಿಶ್ವನಾಥನ್‌ಗೆ ಸಲ್ಲುತ್ತದೆ. ಕೇವಲ 6 ತಿಂಗಳಲ್ಲಿ 9,900 ಕೋಟಿ ರೂಪಾಯಿ ಮೌಲ್ಯದ ಕಂಪನಿ ಕಟ್ಟಿದ ಖ್ಯಾತಿಯು ಅನಂತ್‌ ನಾರಾಯಣರಿಗೆ ಸಲ್ಲುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+