ಭಾರತದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ವಿಶ್ವದ ಶ್ರೀಮಂತ ಕ್ರಿಕೆಟರ್‌ಗಳ ಪೈಕಿ ಒಬ್ಬರಾಗಿದ್ದು, ವ್ಯಾಪಾರ ಕೇತ್ರದಲ್ಲಿ ಸಾಕಷ್ಟು ಹೂಡಿಕೆಗಳನ್ನು ಹೊಂದಿದ್ದಾರೆ. ಅದರಲ್ಲಿ ಚಿಸೆಲ್ ಫಿಟ್ನೆಸ್ ಎಂಬ ಜಿಮ್ ಕೂಡ ಸೇರಿದೆ. ಚಿಸೆಲ್ ಯಶಸ್ವಿಯಾಗಲು ವಿರಾಟ್ ಕೊಹ್ಲಿ ಅವರು ಸತ್ಯ ಸಿನ್ಹಾ ಎಂಬ ಮಹಿಳಾ ಜಿಮ್ ತರಬೇತುದಾರರೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡಿದ್ದಾರೆ. ಸ್ವತಃ ಫಿಟ್ನೆಸ್ ಫ್ರೀಕ್ ಆಗಿರುವ ವಿರಾಟ್ ಕೊಹ್ಲಿ ಅವರು ಫಿಟ್ನೆಸ್ ಉದ್ಯಮದಲ್ಲಿ ಎರಡು ದಶಕಗಳ ಅನುಭವ ಹೊಂದಿರುವ ಸತ್ಯ ಸಿನ್ಹಾ ಅವರೊಂದಿಗೆ ಪಾಲುದಾರಿಕೆ ಮಾಡಿಕೊಂಡಿದ್ದಾರೆ.
ಸತ್ಯ ಸಿನ್ಹಾ ಅವರು ಕೇವಲ ಫಿಟ್ನೆಸ್ ತರಬೇತುದಾರರು ಮಾತ್ರವಲ್ಲ, ಜತೆಗೆ ಅವರು ದೇಶದ ಅತ್ಯಂತ ಪ್ರಬಲ ನವ ಅನ್ವೇಷಣೆಯ ಮಹಿಳಾ ಉದ್ಯಮಿಯಾಗಿದ್ದಾರೆ. ವಿರಾಟ್ ಕೊಹ್ಲಿ ಅವರು ಸತ್ಯ ಸಿನ್ಹಾ ಅವರ ಜತೆ ಸೇರಿ 90 ಕೋಟಿ ರೂಪಾಯಿ ಹೂಡಿಕೆ ಮಾಡಲು ನಿರ್ಧರಿಸಿದ ಬಳಿಕ ಅವರ ಫಿಟ್‌ನೆಸ್ ಕುರಿತ ಆಸಕ್ತಿ ಹಾಗೂ ತುಡಿತ ಮತ್ತೊಂದು ಹಂತಕ್ಕೆ ಬೆಳೆಯಿತು. ಪ್ರಸ್ತುತ ಈ ಕಂಪನಿಯು ಬೆಂಗಳೂರಿನಲ್ಲಿ ಇದ್ದು, ದೇಶದಾದ್ಯಂತ 100 ಕಡೆ ಜಿಮ್ ಪ್ರಾರಂಭಿಸುವ ಗುರಿ ಹೊಂದಲಾಗಿದೆ.

ಸತ್ಯ ಸಿನ್ಹಾ ಅವರು ಕೊಹ್ಲಿ ಅವರ 90 ಕೋಟಿ ರೂಪಾಯಿಯೊಂದಿಗೆ ಒಟ್ಟು 200 ಹೂಡಿಕೆ ಮಾಡಿದ್ದಾರೆ. ಇದರೊಂದಿಗೆ ದೊಡ್ಡ ಬಹು ಮಿಲಿಯನ್ ಜಿಮ್ ಚೈನ್ ಅನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದಾರೆ. ಸತ್ಯ ಸಿನ್ಹಾ ಅವರು 2015ರಲ್ಲಿ ಚಿಸೆಲ್ ಅನ್ನು ಸ್ಥಾಪಿಸುವ ಯೋಚನೆ ಮಾಡಿದ್ದರು. ಇದು ಕೊಹ್ಲಿ ಅವರಲ್ಲಿ ಜಿಮ್ ಉದ್ಯಮದ ಬಗ್ಗೆ ಮತ್ತಷ್ಟು ಆಸಕ್ತಿ ಮೂಡಿಸುವ ಮೂಲಕ ಸಿನ್ಹಾ ಅವರೊಂದಿಗೆ 90 ಕೋಟಿ ರೂ. ಹೂಡಿಕೆ ಮಾಡುವ ನಿರ್ಧಾರ ಮಾಡಿದರು. ಇದಲ್ಲದೆ ಸಿನ್ಹಾ ಅವರು ಮೆಡಿಫಿಟ್ ಎಂಬ ಫಿಟ್ನೆಸ್ ಕಂಪನಿಯನ್ನು ನಡೆಸುತ್ತಿದ್ದರು. ಫಿಟ್‌ನೆಸ್ ಮತ್ತು ಹೆಲ್ತ್ ಕಂಪನಿಯನ್ನು ಪತಿ-ಪತ್ನಿ ಜೋಡಿಯಾದ ಡಾ. ಶಾರ್ದೂಲ್ ಸಿನ್ಹಾ ಮತ್ತು ಸತ್ಯ ಸಿನ್ಹಾ ನಡೆಸುತ್ತಿದ್ದರು.
ಈ ಕಂಪನಿಯು 1999ರಲ್ಲಿ ಸ್ಥಾಪನೆಯಾಗಿತ್ತು. 2015ರಲ್ಲಿ ಚಿಸೆಲ್ ಎಂಬ ಹೊಸ ಬ್ರಾಂಡ್ ಅನ್ನು ಪ್ರಾರಂಭಿಸಿದರು. ಸತ್ಯ ಸಿನ್ಹಾ ಪ್ರಸ್ತುತ ಚಿಸೆಲ್ ಫಿಟ್‌ನೆಸ್‌ನ ಸಂಸ್ಥಾಪಕ ಮತ್ತು ನಿರ್ದೇಶಕರ ಸ್ಥಾನವನ್ನು ಹೊಂದಿದ್ದಾರೆ. ಈ ಕಂಪನಿಯಲ್ಲಿ ಕೊಹ್ಲಿ ಅವರು ಅತಿದೊಡ್ಡ ಹೂಡಿಕೆದಾರರಾಗಿದ್ದಾರೆ. ಸತ್ಯ ಹಾಗೂ ಅವರ ಪತಿ ಸೇರಿಕೊಂಡು ಚಿಸೆಲ್ ಕಂಪನಿಯನ್ನು ಐಷಾರಾಮಿ ಜಿಮ್ ಸರಪಳಿಯಾಗಿ ಪರಿವರ್ತಿಸಿದ್ದಾರೆ. ಆ ಮೂಲಕ ಸ್ಪೆಷಲ್ ಡಯಲ್, ಥೆರಪಿಗಳು ಸೇರಿದಂತೆ ವಿಶೇಷವಾದ ವರ್ಕ್‌ಔಟ್ ಹಾಗೂ ವೈಟ್ ಲಾಸ್ ಪ್ರೋಗ್ರಾಮ್‌ಗಳನ್ನು ನೀಡಲಾಗುತ್ತದೆ.
ಬಿಸಿನೆಸ್ ಸ್ಟಾಂಡರ್ಡ್‌ಗೆ ನೀಡಿರುವ ಸಂದರ್ಶನದಲ್ಲಿ ಚಿಸೆಲ್ ಬಗ್ಗೆ ಸತ್ಯ ಹೇಳಿರುವ ಪ್ರಕಾರ, "ಫಿಟ್‌ನೆಸ್ ಎಂಬುದು ಎಲ್ಲ ಶರೀರಕ್ಕೆ ಸಂಬಂಧಿಸಿರುವುದು. ವರ್ಕ್‌ಔಟ್ ಮಾಡದೆ ನಿಮ್ಮ ಕ್ಯಾಲರಿಗಳನ್ನು ಟ್ರ್ಯಾಕ್ ಮಾಡಲು ಕೆಲವು ವಾಚ್ ಮಾಡುವುದರಿಂದ ಸಾಧ್ಯವಾಗುವುದಿಲ್ಲ. ಬದಲಿಗೆ ಅದು ಟೆಕ್ನಾಲಜಿ ಜತೆಗಿನ ಸಂಯೋಜನೆಯಾಗಿದ್ದು, ನೀವು ಎಲ್ಲಿಗೆ ಹೋಗುತ್ತೀರೋ ಅಲ್ಲಿನ ಪರಿಸರ ನಿಮ್ಮನ್ನು ವರ್ಕ್‌ಔಟ್ ಮಾಡುವತ್ತ ಪ್ರೇರೇಪಿಸುತ್ತದೆ. ಹೀಗಾಗಿ, ನಮ್ಮದೇ ಜಿಮ್ ಪ್ರೋಗ್ರಾಮ್‌ನೊಂದಿಗೆ ಸಂಯೋಜನೆ ಮಾಡಬಹುದಾದ ನಮ್ಮದೇ ಬ್ರಾಂಡ್‌ನೊಂದಿಗೆ ಹೊರಬರಲು ಯೋಚಿಸುತ್ತಿದ್ದೇವೆ," ಎನ್ನುತ್ತಾರೆ.
ವಿರಾಟ್ ಕೊಹ್ಲಿಯ ಬ್ಯುಜಿನೆಸ್ ಪಾರ್ಟ್‌ನರ್ ಅಂಜನಾ ರೆಡ್ಡಿ
ಅಂಜನಾ ರೆಡ್ಡಿ ಯುನೈಟೆಡ್ ಸ್ಟೇಟ್ಸ್‌ನ ಪರ್ಡ್ಯೂ ವಿಶ್ವವಿದ್ಯಾಲಯದಿಂದ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಅದಾದ ಬಳಿಕ ಅಂಜನಾ ರೆಡ್ಡಿ ಇಲಿನಾಯ್ಸ್ ವಿಶ್ವವಿದ್ಯಾಲಯದಿಂದ ಹಣಕಾಸು ವಿಷಯದಲ್ಲಿ ಮಾಸ್ಟರ್ ಆಫ್ ಸೈನ್ಸ್ ಮಾಡಿದರು. ಅಂಜನಾ ರೆಡ್ಡಿ 2011 ರಲ್ಲಿ ಭಾರತಕ್ಕೆ ಮರಳಿ, ವ್ಯಾಪಾರ ಲೋಕಕ್ಕೆ ಎಂಟ್ರಿ ನೀಡುವ ನಿರ್ಧಾರ ಮಾಡಿದ್ದಾರೆ. ಬ್ರಾಂಡೆಡ್ ಕ್ರೀಡಾ ಸ್ಮರಣಿಕೆಗಳ ವ್ಯಾಪಾರವನ್ನು ಪ್ರವೇಶಿಸಿದರು.
ಅಂಜನಾ ರೆಡ್ಡಿ Wrogn, ಇಮರಾ, ಮಿಸ್ ಟೇಕನ್ ಮೊದಲಾದ ಬ್ರ್ಯಾಂಡ್‌ಗಳನ್ನು ಪ್ರಾರಂಭಿಸಿದರು. ಕೃತಿ ಸನನ್ ಮತ್ತು ಆದಿತ್ಯ ರಾಯ್ ಕಪೂರ್ ಬೆಂಬಲದೊಂದಿಗೆ ಸಿಂಗಲ್ ಎಂಬ ಬ್ರ್ಯಾಂಡ್ ಅನ್ನು ಆರಂಭ ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್ ಮಾತ್ರವಲ್ಲದೆ ಸಂಸ್ಥೆಗೆ ವಿರಾಟ್ ಕೊಹ್ಲಿ ಕೂಡಾ ಹೂಡಿಕೆ ಮಾಡಿದ್ದಾರೆ, ಹಾಗೆಯೇ ಈ ಬ್ರ್ಯಾಂಡ್‌ನ ಅಂಬಾಸಿಡರ್ ಆಗಿದ್ದಾರೆ.


Click it and Unblock the Notifications