ಬಾಲಿವುಡ್ ಬಾದ್ ಷಾ, ಕಿಂಗ್ ಖಾನ್ ಶಾರುಖ್ ಖಾನ್ ಅವರ ಜೀವನ ಕಥೆಯು ಯಶಸ್ಸಿನ ಸಾರವಾಗಿದೆ. ಅವರ ಜೀವನ ಕಥನ ಲಕ್ಷಾಂತರ ಜನರಿಗೆ ಪ್ರೇರಕವಾಗಿದೆ. ಸಿನಿಮಾ ಕುಟುಂಬದ ಹಿನ್ನಲೆ ಇಲ್ಲದಿದ್ದ ಖಾನ್, ದೂರದರ್ಶನ ಸಿರಿಯಲ್ ಫೌಜಿಯೊಂದಿಗೆ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿ ಕೊನೆಗೆ ಬಾಲಿವುಡ್‌ನ ಕಿಂಗ್ ಆಗಿ ತಾರಾಪಟ್ಟಕ್ಕೆ ಏರಿದರು.
ಮೂರು ದಶಕಗಳ ಕಾಲದ ಅವರ ಸುದೀರ್ಘ ವೃತ್ತಿಜೀವನದಲ್ಲಿ, ಶಾರುಖ್ ಖಾನ್ ಅವರು ತಮ್ಮ ಅದ್ಬುತ ಅಭಿನಯ, ಆಕರ್ಷಕ ನೋಟ ಮತ್ತು ಹಾಸ್ಯದಿಂದ ಅವರ ಅಭಿಮಾನಿಗಳನ್ನು ರಂಜಿಸಿದ್ದಾರೆ. ಅವರು 6,300 ಕೋಟಿ ರೂಪಾಯಿಗೂ ಹೆಚ್ಚು ನಿವ್ವಳ ಮೌಲ್ಯಹೊಂದಿದ್ದು, ನಟನೆಯ ಹೊರತಾಗಿ, ಅವರು ಪ್ರತಿ ವರ್ಷವೂ ತಮ್ಮ ನಿವ್ವಳ ಮೌಲ್ಯವನ್ನು ಹೆಚ್ಚಾಗುವಂತ ಅನೇಕ ಉದ್ದಿಮೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಖಾನ್ ಅವರಂತೆಯೇ, ಅವರ ನೆರೆಹೊರೆ ನಿವಾಸಿ ಕೂಡಾ ಓರ್ವ ಬಿಲಿಯನೇರ್ ಆಗಿದ್ದು ಅವರೇ ಮುಂಬೈನ ಪ್ರಸಿದ್ಧ ರಿಯಲ್ ಎಸ್ಟೇಟ್ ಉದ್ಯಮಿ ಸುಭಾಷ್ ರುನ್ವಾಲ್. ಅವರು 1964 ರಲ್ಲಿ ಮಹಾರಾಷ್ಟ್ರದ ಸಣ್ಣ ಪಟ್ಟಣವಾದ ಧುಲಿಯಾದಿಂದ ಮುಂಬೈಗೆ ಸ್ಥಳಾಂತರಗೊಂಡಾಗ ಅವರ ಕೈಯಲ್ಲಿದ್ದುದೂ ಕೇವಲ 10 ರೂಪಾಯಿ ವೃತ್ತಿ ಜೀವನದ ಆರಂಭದಲ್ಲಿ ಓರ್ವ ಅಕೌಂಟೆಟ್ ಆಗಿದ್ದು, ಹಲವು ಕಷ್ಟಗಳನ್ನು ಎದುರಿಸಿದ ಅವರು ಜೀವನದಲ್ಲಿ ಮೇಲೆರುವ ಕನಸು ಕಂಡಿದ್ದರು.
ನಂತರ ಅವರು ಸಿಎ ಆಗಿ 1967 ರಲ್ಲಿ ಅಮೇರಿಕಾದಲ್ಲಿ Ernst & Ernst ಉದ್ಯೋಗವನ್ನು ಗಿಟ್ಟಿಸಿಕೊಂಡರು. ಇದು ಯುಎಸ್‌ನಲ್ಲಿ ಹೆಚ್ಚಿನ ವೇತನ ಬರುವ ಉದ್ಯೋಗವಾಗಿತ್ತು. ಆದರೆ ಅವರಿಗೆ ಅಲ್ಲಿನ ಜೀವನಶೈಲಿ ರೀತಿ ಇಷ್ಟವಾಗದ ಕಾರಣ ಅವರು ಶೀಘ್ರದಲ್ಲೇ ಭಾರತಕ್ಕೆ ಹಿಂತಿರುಗಿದರು. ಇಲ್ಲಿ ರಾಸಾಯನಿಕ ಕಂಪನಿಯೊಂದಿಗೆ ವೃತ್ತಿ ಮಾಡುತ್ತಿದ್ದಾಗ ಅಂದರೆ 1978 ರಲ್ಲಿ ಅವರು ರಿಯಲ್ ಎಸ್ಟೇಟ್‌ನಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದರು.
ಇಂದು ಸುಭಾಷ್ ರುನ್ವಾಲ್ ಅವರು ರುನ್ವಾಲ್ ಗ್ರೂಪ್‌ನ ಅಧ್ಯಕ್ಷರಾಗಿದ್ದು, ಮುಂಬೈನ ಸಮುದ್ರ ತೀರದ ಮುಂಭಾಗದ ಮನೆಯಲ್ಲಿ ಶಾರುಖ್ ಖಾನ್ ಅವರ ಬಾಂದ್ರಾದ ಮನ್ನತ್ ಪಕ್ಕದಲ್ಲಿ ವಾಸಿಸುತ್ತಿದ್ದಾರೆ.
ಸುಭಾಷ್ ರುನ್ವಾಲ್ ಅವರು ಇಂದು ಮುಂಬೈನ ಉನ್ನತ ರಿಯಲ್ ಎಸ್ಟೇಟ್ ಉದ್ಯಮಿ ಎಂದು ಪರಿಗಣಿಸಲ್ಪಟ್ಟಿದ್ದು, ಅವರ ಮೊತ್ತ ಮೊದಲ ಯೋಜನೆ ಥಾಣೆಯ 10,000 ಚದರ ಅಡಿಯ ಹೌಸಿಂಗ್ ಸೊಸೈಟಿಯಾಗಿದೆ. ಇದಾದ ಬಳಿಕ ರುನ್ವಾಲ್ ಗ್ರೂಪ್ ತನ್ನ ಮೊದಲ ಪ್ರಮುಖ ಯೋಜನೆಯಾದ ರುನ್ವಾಲ್ ನಗರದಲ್ಲಿ 16 ಟವರ್‌ಗಳ ಸಮೂಹವನ್ನು ನಿರ್ಮಿಸಿತು.
ರಿಯಲ್ ಎಸ್ಟೇಟ್‌ನಲ್ಲಿ ಯಶಸ್ಸು ಕಂಡ ರುನ್ವಾಲ್ ಸಂಸ್ಥೆ ತನ್ನ ವ್ಯವಹಾರವನ್ನು ವೈವಿಧ್ಯಗೊಳಿಸಲು ಬಯಸಿ ಸ್ಟೀಲ್ ಮತ್ತು ಫಾರ್ಮಾ ಉದ್ಯಮಗಳಲ್ಲಿ ತನ್ನನ್ನು ತೊಡಗಿಸಿಕೊಂಡಿತು. ಆದರೆ ರಿಯಲ್ ಎಸ್ಟೇಟ್ ಸಿಕ್ಕ ಯಶಸ್ಸನ್ನು ಅಲ್ಲಿ ಸಿಗಲಿಲ್ಲ. ಹೀಗಾಗಿ ರುನ್ವಾಲ್ ಮುಂಬೈನಲ್ಲಿ ಮಧ್ಯಮ ವರ್ಗದ ಜನರಿಗೆ ಕೈಗೆಟುಕುವ ಮನೆಗಳನ್ನು ನಿರ್ಮಿಸುವತ್ತ ತಮ್ಮ ಗಮನವನ್ನು ಕೇಂದ್ರಿಕರಿಸಿತು.
ಮುಂದೆ ಸುಭಾಷ್ ಅವರ ಪುತ್ರರು ಕುಟುಂಬದ ವ್ಯವಹಾರಕ್ಕೆ ಎಂಟ್ರಿ ಕೊಟ್ಟರು. ಈ ವೇಳೆ ರುನ್ವಾಲ್ ಗ್ರೂಪ್ ಮಾಲ್‌ಗಳನ್ನು ನಿರ್ಮಿಸಲು ಮುಂದಾಯಿತು. ಮುಲುಂಡ್ ಪ್ರದೇಶದಲ್ಲಿ ಆರ್ ಮಾಲ್ ನಿರ್ಮಿಸಿದ ನಂತರ, ಘಾಟ್‌ಕೋಪರ್‌ನಲ್ಲಿ 1.2 ಮಿಲಿಯನ್ ಚದರ ಅಡಿ ವಿಸ್ತೀರ್ಣದಲ್ಲಿ ಬೃಹತ್ ಆರ್-ಸಿಟಿ ಮಾಲ್ ನಿರ್ಮಾಣ ಮಾಡಿತು.
ಫೋರ್ಬ್ಸ್ ಪ್ರಕಾರ ಸುಭಾಸ್ ಅವರ ಸಂಪತ್ತು 1.4 ಬಿಲಿಯನ್ ಡಾಲರ್ (ಅಂದಾಜು 11,560 ಕೋಟಿ ರೂಪಾಯಿ) ಆಗಿದೆ. ಶಾರುಖ್ ಖಾನ್ ಅವರ ಹೊರತಾಗಿ,ರನ್ವಾಲ್ ಅವರು ಬಾಲಿವುಡ್ ತಾರೆಯರಾದ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಯೂ ಅವರ ನೆರೆಹೊರೆಯವರಾಗಿದ್ದಾರೆ. ಅವರು ಮನ್ನತ್ ಪಕ್ಕದಲ್ಲಿರುವ ರೆಸಿಡೆನ್ಸಿಯಲ್ ಟವರ್ ನಲ್ಲಿ 2022 ರಲ್ಲಿ 119 ಕೋಟಿ ರೂಪಾಯಿಗೆ ಕ್ವಾಡ್ರುಪ್ಲೆಕ್ಸ್ ಖರೀದಿಸಿದ್ದರು.
More From GoodReturns

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications