ಇತ್ತೀಚೆಗೆ ಬಿಡುಗಡೆಯಾದ ಹುರುನ್ ವರದಿಯಲ್ಲಿ ಭಾರತದ ಅತ್ಯಾಮೂಲ್ಯವಾದ ಪಟ್ಟಿ ಮಾಡಿದ ಕಂಪನಿಗಳ ಪೈಕಿ ಶಶಾಂಕ್ ಕುಮಾರ್ ಅವರ ರೇಜರ್‌ಪೇ ಹೆಸರು ಕೂಡ ಉಲ್ಲೇಖವಾಗಿದೆ. ರೇಜರ್‌ಪೇ 61,700 ರೂ. ಮೌಲ್ಯದೊಂದಿಗೆ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಈ ಕಂಪನಿಯನ್ನು ಶಶಾಂಕ್ ಕುಮಾರ್ ಹಾಗೂ ಐಐಟಿ ರೂರ್ಕಿ ಸ್ನೇಹಿತ ಹರ್ಷಿತ್ ಮಾಥುರ್ ಸೇರಿಕೊಂಡು ಸ್ಥಾಪಿಸಿದ್ದಾರೆ.
ಕುಮಾರ್ ಅವರು ಸಂಸ್ಥೆಯನ್ನು ಸ್ಥಾಪಿಸಿದ್ದು, ಅದಕ್ಕೆ ಅವರು ಸುಧೀರ್ಘ ಅವಧಿಗೆ ಸಿಟಿಒ ಆಗಿದ್ದು, ಬಳಿಕ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದು, ಮಾಥುರ್ ಅವರು ಸಿಇಒ ಆಗಿದ್ದಾರೆ. ಪಾಟ್ನಾದಲ್ಲಿ ಜನಿಸಿದ ಕುಮಾರ್ ಅವರು ಅಮೆರಿಕದಲ್ಲಿ ಮೈಕ್ರೋಸಾಫ್ಟ್ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದರು. ಅವರು ಅಲ್ಲಿ ಡಾಲರ್‌ನಲ್ಲಿ ಕೈತುಂಬ ಸಂಬಳ ಪಡೆಯುತ್ತಿದ್ದು, ಫೋರ್ಡ್ ಮಸ್ಟಾಂಗ್ ಕಾರಿನಲ್ಲಿ ಓಡಾಡುತ್ತಿದ್ದರು. ಆದರೆ, ಸ್ವಂತ ಉದ್ಯಮವನ್ನು ಪ್ರಾರಂಭಿಸುವಲ್ಲಿ ಅವರಲ್ಲಿ ನಂಬಿಕೆಯನ್ನು ಹೆಚ್ಚಿಸಿತ್ತು.

ಕುಮಾರ್ ಅವರು ಸರ್ಕಾರಿ ಸ್ವಾಮ್ಯದ ಎಸ್‌ಬಿಐ ಬ್ಯಾಂಕ್ ಉದ್ಯೋಗಿಯ ಮಗನಾಗಿ ಜನಿಸಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ಬಿಹಾರದ ಪಾಟ್ನಾದಲ್ಲಿರುವ ಸೇಂಟ್ ಕ್ಸೇವಿಯಾರ್ ಹೈಸ್ಕೂಲ್‌ನಿಂದ ಶಾಲಾ ಶಿಕ್ಷಣವನ್ನು ಮುಗಿಸಿದ್ದು, ಬಳಿಕ ರೂರ್ಕೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿದ್ದಾರೆ.
ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿರುವ ಕುಮಾರ್ ಅವರಿಗೆ ಕ್ಯಾಂಪಸ್ ಸೆಲಕ್ಷನ್ ಮೂಲಕ ಅಮೆರಿಕದಲ್ಲಿ ಮೈಕ್ರೋಸಾಫ್ಟ್ ಕಂಪನಿಯಲ್ಲಿ ಕೆಲಸ ಪಡೆದುಕೊಂಡಿದ್ದರು. ಕೇವಲ ಎರಡು ವರ್ಷದಲ್ಲಿ ಭಾರತದ ಸಣ್ಣ ಉದ್ಯಮದವರು ಹಾಗೂ ಸ್ಟಾರ್ಟಪ್‌ಗಳನ್ನು ಗುರಿಯಾಗಿಸಿಕೊಂಡು ದೇಶದ ಮೊದಲ ಪೇಮೆಂಟ್ ಗೇಟ್‌ವೇಯನ್ನು ಪ್ರಾರಂಭಿಸಿದರು.
ಉದ್ಯೋಗ ತೊರೆದು ಸಂಸ್ಥೆ ಕಟ್ಟಿದವರಿವರು!
ಅಧಿಕ ಪಾವತಿ ಮಾಡುವ ತಮ್ಮ ಸಂಸ್ಥೆಯನ್ನು ತೊರೆದು ತಮ್ಮದೇ ಆದ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಹಲವಾರು ಮಂದಿಯ ಉದಾಹರಣೆ ನಮ್ಮ ಮುಂದಿದೆ. ಮೋಹಿತ್ ಅಹ್ಲುವಾಲಿಯಾ ಹಾಗೂ ಜಗಜ್ಯೋತ್ ಕೌರ್ ಅವರು 2017ರ ಚಳಿಗಾಲದಲ್ಲಿ ಬಾಲಿಗೆ ವಿಹಾರಕ್ಕಾಗಿ ಪ್ರವಾಸ ಹೋಗಿದ್ದರು. ಈ ದಂಪತಿಯು ಅಲ್ಲಿ ಕೇವಲ ಅಧ್ಭುತ ನೆನಪುಗಳನ್ನಷ್ಟೇ ಸೃಷ್ಟಿಸಲಿಲ್ಲ; ಜತೆಗೆ ಬಹುದೊಡ್ಡ ಕನಸು ಹಾಗೂ ಮಹತ್ವಾಕಾಂಕ್ಷೆಯೊಂದಿಗೆ ಮನೆಗೆ ವಾಪಾಸ್ಸಾಗಿದ್ದರು. ಈ ದಂಪತಿಯು ಹೆಚ್ಚಿನ ಸಂಬಳ ಪಡೆಯುತ್ತಿದ್ದ ಉದ್ಯೋಗವನ್ನು ತೊರೆದು ತಮ್ಮ ಸ್ವಂತ ಉದ್ದಿಮೆಯನ್ನು ಪ್ರಾರಂಭಿಸಿದ್ದರು.
ಚಂಡೀಘಡ ಮೂಲದ ಈ ದಂಪತಿಯು 2019ರಲ್ಲಿ ರಾಮೇ ಎಂಬ ಹೆಸರಿನ ಗೃಹ ಮತ್ತು ಲೈಫ್‌ಸ್ಟೈಲ್ ಬಿಸಿನೆಸ್ ಅನ್ನು ಪ್ರಾರಂಭಿಸಿದ್ದರು. ಇದು ಕ್ಯುಷನ್ ಕವರ್, ಟೋಟ್ ಬ್ಯಾಗ್‌ಗಳು, ಕ್ವಿಲ್ಟ್ ಹಾಗೂ ಪೌಚ್‌ಗಳನ್ನು ಒಳಗೊಂಡಂತೆ ತರಬೇತಿ ಪಡೆದ ಕುಶಲಕರ್ಮಿಗಳು ತಯಾರಿಸಿದ ಹ್ಯಾಂಡ್-ಬ್ಲಾಕ್ ಮುದ್ರಿತ ಸರಕುಗಳನ್ನು ಮಾರಾಟ ಮಾಡುತ್ತದೆ. ರಾಮೇ ಬಲಿನೀಸ್ ಮೂಲದ ಪದವಾಗಿದ್ದು, ಇದು ಬಲಿನೀಸ್ ಜನರ ಜೀವನ ಶೈಲಿಯಾಗಿದೆ. ಅಂದರೆ ಕಿಕ್ಕಿರಿದ ಹಾಗೂ ಅಸ್ತವ್ಯಸ್ತವಾಗಿರುವ ಜಗತ್ತಿನಲ್ಲಿ ಬದುಕುತ್ತಿದ್ದರೂ ಸಂತೋಷವನ್ನು ಕಂಡುಕೊಳ್ಳುತ್ತಾರೆ.
ವಿದಿತ್ ಆತ್ರೆ ಹಾಗೂ ಸಂಜೀವ್ ಬರ್ನ್ವಾಲ್ ಅವರಂಥಹ ಯುವ ಉದ್ಯಮಿಗಳು ಕೂಡ ಈ ಸಾಲಿಗೆ ಸೇರಿದ್ದಾರೆ. ವಿದಿತ್ ಆತ್ರೆ ಮತ್ತು ಸಂಜೀವ್ ಬರ್ನ್ವಾಲ್ ಅವರು ಐಐಟಿ ದಿಲ್ಲಿಯ ಹಳೆ ವಿದ್ಯಾರ್ಥಿಗಳಾಗಿದ್ದು, ಇವರಿಬ್ಬರು ಬಹಳ ಜನಪ್ರಿಯತೆ ಪಡೆದುಕೊಂಡಿರುವ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಆಗಿರುವ ಮೀಶೋದ ಸಹ ಸಂಸ್ಥಾಪಕರು. ವಿದಿತ್ ಆತ್ರೆ ಹಾಗೂ ಸಂಜೀವ್ ಬರ್ನ್ವಾಲ್ ಐಐಟಿಯಿಂದ ಉತ್ತೀರ್ಣತೆ ಹೊಂದಿದ ಕೆಲವು ವರ್ಷಗಳ ಬಳಿಕ ಮೀಶೋವನ್ನು ಪ್ರಾರಂಭಿಸಿದ್ದಾರೆ. ಮೀಶೋ ಒಂದು ಹೈಪರ್ ಲೋಕಲ್, ಆನ್ ಡಿಮಾಂಡ್ ಫ್ಯಾಶನ್ ಮಾರ್ಕೆಟ್ ತಾಣವಾಗಿದೆ.
ವಿದಿತ್ ಅವರು ಮೊದಲು ಪ್ರಾರಂಭಿಸಿದ್ದ ಸ್ಟಾರ್ಟಪ್ ಯಶಸ್ಸನ್ನು ಸಾಧಿಸದೆ ವಿಫಲಗೊಂಡಿತ್ತು. ಹೀಗಾಗಿ, ವಿದಿತ್ ಹಾಗೂ ಸಂಜೀವ್ ಅವರು ಅದರ ವೈಫಲ್ಯದಿಂದ ಸಾಕಷ್ಟು ಪಾಠವನ್ನು ಕಲಿತುಕೊಂಡಿದ್ದರು. ಈ ನಡುವೆ, ದೇಶದ ಸಣ್ಣ ಉದ್ಯಮಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿರುವುದನ್ನು ಮನಗಂಡರು. ಆದರೆ, ಇದು ಅವರಿಗೆಲ್ಲ ಹೆಚ್ಚಿನ ಯಶಸ್ಸನ್ನು ನೀಡುತ್ತಿಲ್ಲ ಎಂಬುದನ್ನು ಕೂಡ ಅರ್ಥಮಾಡಿಕೊಂಡಿದ್ದರು. ಈ ಹಿನ್ನಲೆಯಲ್ಲಿ 2015ರಲ್ಲಿ ಸಂಜೀವ್ ಬರ್ನ್ವಾಲ್ ಅವರ ಜತೆ ಸೇರಿಕೊಂಡು ಮೀಶೋವನ್ನು ಹುಟ್ಟು ಹಾಕಿದರು.


Click it and Unblock the Notifications