ಭಾರತದಲ್ಲಿ ಹುಟ್ಟಿ ಬೆಳೆದ ಯುಎಸ್ ರಾಜಕಾರಣಿ ಶ್ರೀ ಥಾಣೇದಾರ್ ಅವರು ಭಾರತದಲ್ಲಿ ಹಲವರು ಕನಸು ಕಾಣುತ್ತಿರುವ 'ಅಮೆರಿಕನ್ ಡ್ರೀಮ್' ಗೆ ಒಂದು ಪ್ರಮುಖ ಉದಾಹರಣೆಯಾಗಿದ್ದಾರೆ. ಯಾಕೆಂದರೆ ಪ್ರತಿ ವರ್ಷ ಯುಎಸ್ಎ ಹಾರುತ್ತಿರುವ ಸಾವಿರಾರು ಭಾರತೀಯರಿಗೆ ತಮ್ಮ ಜೀವನ ಮಟ್ಟ ಏರಿಸಲು ಶ್ರೀ ಥಾಣೇದಾರ್ ಬದುಕು ಸ್ಫೂರ್ತಿದಾಯಕವಾಗಿದೆ. ಕರ್ನಾಟಕದ ಸಣ್ಣ ಪಟ್ಟಣವಾದ ಬೆಳಗಾವಿಯ ಬಡ ಕುಟುಂಬವೊಂದರಲ್ಲಿ ಜನಿಸಿದ ಥಾಣೇದಾರ್ ಅವರು ಎಳೆವಯಸ್ಸಿನಲ್ಲಿಯೇ ಅನೇಕ ಕಷ್ಟಗಳನ್ನು ಎದುರಿಸಬೇಕಾಗಿ ಬಂತು.
ಸರ್ಕಾರಿ ನೌಕರರಾಗಿದ್ದ ಅವರ ತಂದೆ 55 ನೇ ವಯಸ್ಸಿನಲ್ಲಿ ನಿವೃತ್ತರಾದ ನಂತರ ಥಾಣೇದಾರ್ ಅವರ ಒಡಹುಟ್ಟಿದವರು ಬೆಳಗಾವಿಯಲ್ಲಿ ಬಹಳಷ್ಟು ಕಷ್ಟದ ಸಂದರ್ಭಗಳನ್ನು ಎದುರಿಸಬೇಕಾಗಿ ಬಂತು. ಕೇವಲ 14 ವರ್ಷದವರಿರುವಾಗಲೇ ಥಾಣೇದಾರ್ ತಮ್ಮ ಕುಟುಂಬವನ್ನು ಪೋಷಣೆಗಾಗಿ ಕೈಗೆ ಸಿಕ್ಕ ಸಿಕ್ಕ ಕೆಲಸಗಳನ್ನು ಮಾಡುತ್ತಿದ್ದರು. ಕಷ್ಟಗಳನ್ನು ಎದುರಿಸಲು ಶಿಕ್ಷಣವೊಂದೇ ದಾರಿ ಎಂದು ಅರಿವಿದ್ದ ಅವರು ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಬಿಎಸ್ ಪದವಿ ಪಡೆದರು.

18 ನೇ ವಯಸ್ಸಿನಲ್ಲಿ ರಸಾಯನಶಾಸ್ತ್ರದಲ್ಲಿ ಪದವಿ ಪಡೆದ ಇವರು, ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಾ ಬಾಂಬೆ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ ಅವರು ಪಿಎಚ್‌ಡಿಗಾಗಿ ಯುಎಸ್‌ಗೆ ಹೋಗುವ ಮೊದಲು ಭಾಭಾ ಅಣು ಸಂಶೋಧನಾ ಕೇಂದ್ರದಲ್ಲಿ (BARC) ವಿಜ್ಞಾನಿಯಾಗಿ ಕೆಲಸ ಮಾಡಿದರು. 1979 ರಲ್ಲಿ ಅಮೆರಿಕಕ್ಕೆ ತೆರಳಿ ಅಕ್ರಾನ್ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಪ್ರಾರಂಭಿಸಿ 1982 ರಲ್ಲಿ ಪಿಎಚ್‌ಡಿ ಪದವಿ ಪಡೆದುಕೊಂಡರು. 1988 ರಿಂದ ಅಮೆರಿಕ ಪ್ರಜೆಯಾದರು.
ಥಾನೇದಾರ್ 1984ರಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇದಾದ ಬಳಿಕ 1991 ರಲ್ಲಿ $ 75,000 ಸಾಲ ಪಡೆದುಕೊಂಡು ತಮ್ಮ ಮೊದಲ ಕಂಪನಿಯನ್ನು ಖರೀದಿಸಿದರು. ನಂತರ ನಿಧಾನವಾಗಿ ಹಲವಾರು ಕಂಪನಿಗಳ ಸ್ವಾಧೀನತೆಗಳೊಂದಿಗೆ ಸ್ವಂತ ಉದ್ಯಮ ಸಾಮ್ರಾಜ್ಯವನ್ನು ಕಟ್ಟಿದರು. ಥಾಣೇದಾರ್ ಅವರ ಸಂಸ್ಥೆಗಳಲ್ಲಿ ಒಂದಾದ ಅಜೋಫಾರ್ಮಾ ಕೇವಲ 5 ವರ್ಷಗಳಲ್ಲಿ $1 ಮಿಲಿಯನ್‌ನಿಂದ $55 ಮಿಲಿಯನ್‌ಗೆ ತಲುಪಿತ್ತು.
ಇಷ್ಟೆಲ್ಲಾ ಬೆಳವಣಿಗೆ ಕಂಡರೂ, ಆರ್ಥಿಕ ಹಿಂಜರಿತವು ಅಮೇರಿಕಾವನ್ನು ಹಿಂಡಿಹಿಪ್ಪೆ ಮಾಡಿದಂತೆ ಇದರ ಪರಿಣಾಮವನ್ನು ಥಾಣೇದಾರ್ ಅವರ ಸಂಸ್ಥೆಗೂ ತಟ್ಟಿ ಕಂಪನಿ ಆರ್ಥಿಕ ಬಿಕ್ಕಟ್ಟು ಎದುರಿಸಬೇಕಾಯಿತು. 2010 ರಲ್ಲಿ ಉದ್ಯಮವನ್ನು ತ್ಯಜಿಸಿದರು. ಆದ್ರೆ ಮತ್ತೆ Avomeen ಅನ್ನು ಪ್ರಾರಂಭಿಸುವ ಮೂಲಕ ಪುನರಾಗಮನವನ್ನು ಮಾಡಿದರು.
ಹೀಗಾಗಿ ಉದ್ಯಮಿಯಾಗಿ ಅವರ ನಿವೃತ್ತಿ ತುಂಬಾ ಸಂಕ್ಷಿಪ್ತ ಸಮಯವಾಗಿತ್ತು ಅಂದರೆ ತಪ್ಪಾಗಲಾರದು. ಪ್ರಸ್ತುತ ಅವರ ಕಂಪನಿಯು ವೇಗವಾಗಿ ಬೆಳೆಯುತ್ತಿರುವ ಸಂಸ್ಥೆಗಳಲ್ಲಿ ಒಂದಾಗಿದೆ. ಥಾಣೇದಾರ್ 2018 ರಲ್ಲಿ ಮಿಚಿಗನ್ ಗವರ್ನರ್ ಆಗಲು ರಾಜಕೀಯ ಪ್ರವೇಶಿಸಿದ್ದು ಆ ಚುನಾವಣೆಯಲ್ಲಿ ಗೆಲುವು ಕಾಣಲಿಲ್ಲ. ಆದರೆ ಮತ್ತೆ 2021 ರಲ್ಲಿ, ಡೆಮಾಕ್ರಟಿಕ್ ಪಕ್ಷದಲ್ಲಿ ಸ್ಪರ್ಧಿಸಿ ಮಿಚಿಗನ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಆಗಿ ಆಯ್ಕೆಯಾದರು.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications