ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಭಾರತ ಮಾತ್ರವಲ್ಲದೇ ವಿಶ್ವದ ಶ್ರೀಮಂತರಲ್ಲಿ ಒಬ್ಬರಾಗಿದ್ದಾರೆ. ಮುಕೇಶ್ ಅಂಬಾನಿ ತಮ್ಮ ಕುಟುಂಬದೊಂದಿಗೆ 15,000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಂಟಿಲಿಯಾ ಎಂಬ ವಿಶ್ವದ ಅತ್ಯಂತ ದುಬಾರಿ ನಿವಾಸದಲ್ಲಿ ವಾಸಿಸುತ್ತಿದ್ದಾರೆ. ಮುಕೇಶ್ ಅಂಬಾನಿ, ನೀತಾ ಅಂಬಾನಿ, ಅನಂತ್ ಅಂಬಾನಿ, ಆಕಾಶ್ ಅಂಬಾನಿ, ಶ್ಲೋಕಾ ಮೆಹ್ತಾ ಹಾಗೂ ಅವರ ಇಬ್ಬರು ಮಕ್ಕಳು ಇದೇ ಲಕ್ಸುರಿ ಟವರ್ ನಲ್ಲಿ ನೆಲೆಸಿದ್ದಾರೆ.
ಮುಕೇಶ್ ಅಂಬಾನಿ ಕುಟುಂಬ ಸಾಕಷ್ಟು ಜನಪ್ರಿಯರಾಗಿದ್ದು, ಇವರೆಲ್ಲರೂ ಒಂದಲ್ಲಾ ಒಂದು ವಿಷಯಕ್ಕೆ ಅಗ್ಗಾಗ್ಗೆ ಸುದ್ದಿಯ ಭಾಗವಾಗಿದ್ದರೂ, ಮುಕೇಶ್ ಅಂಬಾನಿ ಅವರ ಕುಟುಂಬದ ಸದಸ್ಯರ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಯಾಕೆಂದರೆ ಅಂಬಾನಿ ಕುಟುಂಬಕ್ಕೆ ಸಂಬಂಧಿಸಿದ ಹೆಚ್ಚಿನ ಸದಸ್ಯರು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಕ್ರಿಯವಾಗದೇ ಇರುವುದು ಕೂಡಾ ಇದಕ್ಕೆ ಒಂದು ಕಾರಣವಾಗಿದೆ.

ಮುಕೇಶ್ ಅಂಬಾನಿ ಅವರ 'ಸೊಸೆ' ಶ್ಲೋಕಾ ಮೆಹ್ತಾ ಅವರ ಸಹೋದರಿ ಅವರ ಇತರ ರಿಚ್ ರಿಲೇಟಿವ್ಸ್ ಗಳಿಂತ ಸ್ವಲ್ಪ ಭಿನ್ನ ಎಂದೇ ಹೇಳಬಹುದು. ಶ್ಲೋಕಾ ಮೆಹ್ತಾ ಅವರ ಸಹೋದರಿ ದಿಯಾ ಮೆಹ್ತಾ ಫ್ಯಾಶನ್ ಸಲಹೆಗಾರರಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಅಕ್ಟೀವ್ ಆಗಿರುವ ಅವರು ಇನ್‌ಸ್ಟಾಗ್ರಾಂನಲ್ಲಿ ದೊಡ್ಡ ಸಂಖ್ಯೆಯ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.
ಬ್ಯುಸಿನೆಸ್ ಮ್ಯಾಗ್ನೇಟ್ ರಸೆಲ್ ಮೆಹ್ತಾ ಅವರ ಪುತ್ರಿಯಾಗಿರುವ ದಿಯಾ ಮೆಹ್ತಾ ಮುಕೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಅವರ ಬಾಲ್ಯ ಸ್ನೇಹಿತೆಯಾಗಿದ್ದಾರೆ. ದಿಯಾ ಮೆಹ್ತಾ ಇತ್ತೀಚಿನ ವರ್ಷಗಳಲ್ಲಿ ಸ್ಟೈಲ್ ಐಕಾನ್ ಆಗಿ ಹೊರಹೊಮ್ಮಿದ್ದಾರೆ. ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಿಂದ ಶಾಲಾ ಶಿಕ್ಷಣವನ್ನುಪಡೆದಿದ್ದು ಬಳಿಕ, ದಿಯಾ ಮೆಹ್ತಾ ಫ್ಯಾಷನ್ ಕಮ್ಯುನಿಕೇಷನ್ ಅಧ್ಯಯನಕ್ಕಾಗಿ ಲಂಡನ್ ಗೆ ತೆರಳಿದರು.
ದಿಯಾ ಮೆಹ್ತಾ ಫ್ಯಾಶನ್ ಕನ್ಸಲ್ಟೆಂಟ್ ಆಗಿ ಫೇಮಸ್ ಆಗಿದ್ದರೂ, ಅವರು ತಮ್ಮ ಫ್ಯಾಮಿಲ್ ಬ್ಯುಸಿನೆಸ್ ಕೂಡಾ ನಿಭಾಯಿಸುತ್ತಾರೆ. ದಿಯಾ ತಂದೆ ರಸೆಲ್ ಮೆಹ್ತಾ ಅವರು ವಜ್ರ ತಯಾರಕ ರೋಸಿ ಬ್ಲೂನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ರಸೆಲ್ ಅವರ ನಿವ್ವಳ ಮೌಲ್ಯ 1800 ಕೋಟಿ ರೂಪಾಯಿ ಇರಬಹುದೆಂದು ಅಂದಾಜಿಸಲಾಗಿದೆ.
ದಿಯಾ ಮೆಹ್ತಾ ವಿವಾಹಿತರಾಗಿದ್ದು, 2017 ರ ಏಪ್ರಿಲ್ ನಲ್ಲಿ ಆಯುಷ್ ಜಟಿಯಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. ಇನ್ನುಆಯುಷ್ ಜಟಿಯಾ ಯಾರೆಂದು ತಿಳಿದಿಲ್ಲದಿದ್ದರೆ, ಅವರು ಹಾರ್ಡ್‌ಕ್ಯಾಸಲ್ ರೆಸ್ಟೋರೆಂಟ್‌ಗಳ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.
ಹಾರ್ಡ್‌ಕ್ಯಾಸಲ್ ಭಾರತದ ಪಶ್ಚಿಮ ಭಾಗ ಮತ್ತು ದಕ್ಷಿಣದಲ್ಲಿ ಮೆಕ್‌ಡೊನಾಲ್ಡ್ಸ್ ಫ್ರ್ಯಾಂಚೈಸ್ ಅನ್ನು ಹೊಂದಿರುವ ಸಂಸ್ಥೆಯಾಗಿದೆ. ದಿಯಾ ಒಂದು ಹೆಣ್ಣು ಮತ್ತು ಗಂಡು ಮಗುವಿಗೆ ತಾಯಿಯಾಗಿದ್ದು ಅವರು ಪ್ರಸ್ತುತ ಇನ್ ಸ್ಟಾಗ್ರಾಂನಲ್ಲಿ 140000 ಕ್ಕೂ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.


Click it and Unblock the Notifications