ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಭಾರತ ಮಾತ್ರವಲ್ಲದೇ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದು, ಅವರ ನಿವ್ವಳ ಮೌಲ್ಯ ಸುಮಾರು 853269 ಕೋಟಿ ರೂಪಾಯಿಗಿಂತ ಹೆಚ್ಚು ಅಂದು ಅಂದಾಜಿಸಲಾಗಿದೆ. ಕಳೆದೆರಡು ದಶಕಗಳಿಂದ ರಿಲಯನ್ಸ್ ಇಂಡಸ್ಟ್ರೀಸ್ ಎಂಬ ಬೃಹತ್ ಸಂಸ್ಥೆಯನ್ನು ಮುಕೇಶ್ ಅಂಬಾನಿ ಮುನ್ನಡೆಸುತ್ತಿದ್ದು, ಇದರ ಅಂಗಸಂಸ್ಥೆಗಳ ಮೂಲಕ ವಿವಿಧ ಶ್ರೇಣಿಯ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಈ ಸಂಸ್ಥೆಯೂ 17,97,000 ಕೋಟಿ ರೂಪಾಯಿಗಿಂತ ಹೆಚ್ಚಿನ ಮಾರುಕಟ್ಟೆ ಕ್ಯಾಪ್ ಹೊಂದಿರುವ ಭಾರತದ ಅತ್ಯಂತ ಮೌಲ್ಯಯುತ ಸಂಸ್ಥೆಯಾಗಿ ಹೊರಹೊಮ್ಮಿದೆ. ಮುಕೇಶ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷರಾಗಿದ್ದು, ಇದರ ಅಂಗಸಂಸ್ಥೆಗಳನ್ನು ಅವರ ಕುಟುಂಬ ಸದಸ್ಯರಾದ ಇಶಾ ಅಂಬಾನಿ, ಆಕಾಶ್ ಅಂಬಾನಿ, ಅನಂತ್ ಅಂಬಾನಿ, ಆನಂದ್ ಜೈನ್ ಮತ್ತು ಇತರರು ಸೇರಿದಂತೆ ಅವರ ನಿಕಟ ಸಹವರ್ತಿಗಳು ನಿರ್ವಹಿಸುತ್ತಾರೆ.

ಮುಕೇಶ್ ಅಂಬಾನಿಯವರ ಪ್ರಮುಖ ಸಹಾಯಕರೊಬ್ಬರು ರಿಲಯನ್ಸ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯೋಗಿಯಾಗಿದ್ದಾರೆ. ವಿಶೇಷ ಎಂದರೆ ಭಾರತದ ಶ್ರೀಮಂತ ವ್ಯಕ್ತಿಯಾಗಿರುವ ಅಂಬಾನಿಗಿಂತ ಹೆಚ್ಚು ಸಂಬಳವನ್ನು ಪಡೆಯುತ್ತಾರೆ. ಹೌದು ನಾವು ಹೇಳುತ್ತಿರುವುದು ಮುಕೇಶ್ ಅಂಬಾನಿಯವರ ಸಹವರ್ತಿಯಾಗಿರುವ ರಿಲಯನ್ಸ್ ಉದ್ಯೋಗಿ ಹಿತಲ್ ಮೆಸ್ವಾನಿ ಬಗ್ಗೆ. ಹಿತಲ್ ಮೆಸ್ವಾನಿ ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯೋಗಿ ಆಗಿದ್ದಾರೆ.
ಹಿತಲ್ ಮೆಸ್ವಾನಿ ಅವರು ಮುಕೇಶ್ ಅಂಬಾನಿಯ ಮೊದಲ 'ಬಾಸ್' ಆಗಿದ್ದ ರಸಿಕ್ ಭಾಯಿ ಮೆಸ್ವಾನಿಯ ಪುತ್ರರಾಗಿದ್ದಾರೆ. ಹಿತಲ್ ಮೆಸ್ವಾನಿ ರಿಲಯನ್ಸ್ ಇಂಡಸ್ಟ್ರೀಸ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯೋಗಿಯಾಗಿದ್ದು, ಅವರ ಸಹೋದರ ನಿಖಿಲ್ ಮೆಸ್ವಾನಿ ಅವರು ಕೂಡಾ ವಾರ್ಷಿಕವಾಗಿ ತಲಾ 24 ಕೋಟಿ ರೂಪಾಯಿ ಗಳಿಸುತ್ತಾರೆ. ಹಿತಾಲ್ ಮೆಸ್ವಾನಿ 1990 ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಗೆ ಸೇರ್ಪಡೆಗೊಂಡು, 1995 ರಿಂದ ರಿಲಯನ್ಸ್ ಮಂಡಳಿಯಲ್ಲಿದ್ದಾರೆ.
ಅಮೇರಿಕಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ (UPenn) ದ, ಸ್ಕೂಲ್ ಆಫ್ ಇಂಜಿನಿಯರಿಂಗ್ ಮತ್ತು ಅಪ್ಲೈಡ್ ಸೈನ್ಸಸ್‌ನಿಂದ ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಪಡೆದಿರುವ ಅವರು. ವಾರ್ಟನ್ ಬ್ಯುಸಿನೆಸ್ ಸ್ಕೂಲ್‌ನಿಂದ ಅರ್ಥಶಾಸ್ತ್ರದಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಪಡೆದುಕೊಂಡಿದ್ದಾರೆ.
ಪೆಟ್ರೋಕೆಮಿಕಲ್ಸ್‌ನಲ್ಲಿ ರಿಲಯನ್ಸ್ ಸಂಸ್ಥೆ ವಿಶ್ವಕ್ಕೆ ನಾಯಕನಾಗಲು ಸಹಾಯ ಮಾಡಿದ ಕ್ರೆಡಿಟ್ ನಿಖಿಲ್ ಮೆಸ್ವಾನಿ ಅವರಿಗೆ ಸಲ್ಲುತ್ತದೆ. ಹಜಿರಾ ಪೆಟ್ರೋಕೆಮಿಕಲ್ಸ್ ಮತ್ತು ಜಾಮ್‌ನಗರ್ ರಿಫೈನರಿ ಕಾಂಪ್ಲೆಕ್ಸ್‌ಗಳು ಸೇರಿದಂತೆ ರಿಲಯನ್ಸ್‌ನ ಹಲವಾರು ಮೆಗಾ ಪ್ರಾಜೆಕ್ಟ್‌ಗಳ ಯೋಜನೆಗಳ ಯಶಸ್ವಿನ ಹಿಂದೆ ಹಿತಾಲ್ ಮೆಸ್ವಾನಿ ಅವರ ಶ್ರಮವಿದೆ. ಅವರು ಕಂಪನಿಯಾದ್ಯಂತ ವ್ಯಾಪಾರದಲ್ಲಿನ ಅನೇಕ ಪರಿವರ್ತನೆ ತರುವ ಮೂಲಕ ರಿಲಯನ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಒಟ್ಟಾರೆ ಅಭಿವೃದ್ಧಿಗೆ ಕಾರಣಕರ್ತರಾದರು.
ಹಿತಾಲ್ ಮೆಸ್ವಾನಿ ಅವರ ತಂದೆ ರಸಿಕ್ ಲಾಲ್ ಮೆಸ್ವಾನಿ, ಕಂಪನಿಯ ಸಂಸ್ಥಾಪಕ ನಿರ್ದೇಶಕರಲ್ಲಿ ಒಬ್ಬರು. ಮುಕೇಶ್ ಅಂಬಾನಿ ಅವರು ತಮ್ಮ ತಂದೆ ಧೀರೂಭಾಯಿ ಅಂಬಾನಿಯವರ ಉದ್ಯಮ ಜಗತ್ತಿಗೆ ಕಾಲಿರಿಸುವ ಮೂಲಕ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದಾಗ, ಅವರು ರಸಿಕ್ ಲಾಲಾ ಮೆಸ್ವಾನಿ ಅವರ ಮಾರ್ಗದರ್ಶನ ಪಡೆದುಕೊಂಡಿದ್ದರು.
ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥಾಪಕರಾದ ಧೀರೂಭಾಯಿ ಅಂಬಾನಿಯವರ ಸೋದರಳಿಯ ಮತ್ತು ರಿಲಯನ್ಸ್‌ನ ಮೂಲ ನಿರ್ದೇಶಕರಲ್ಲಿ ಒಬ್ಬರಾದ ರಸಿಕಭಾಯ್ ಅವರನ್ನು ಮುಖೇಶ್ ಅವರಿಗೆ ಮಾರ್ಗದರ್ಶನ ಮಾಡಲು ನಿಯೋಜಿಸಲಾಗಿತ್ತು. ಈ ಹಿಂದೆ ನೀಡಿದ್ದಸಂದರ್ಶನವೊಂದರಲ್ಲಿ, ಧೀರೂಭಾಯಿ ಅಂಬಾನಿ ಅವರು ಆಗ ತಾನೆ ಬೆಳೆಯುತ್ತಿರುವ ಪಾಲಿಯೆಸ್ಟರ್ ವಿಭಾಗವನ್ನು ನಿರ್ವಹಿಸುತ್ತಿದ್ದ ರಸಿಕ್‌ಭಾಯ್ ಅವರನ್ನು ಹೇಗೆ ತಮ್ಮ ಮೊದಲ ಮೇಲ್ವಿಚಾರಕರಾಗಿ ನೇಮಿಸಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದರು.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ



Click it and Unblock the Notifications