ಬಾಬಾ ರಾಮ್‌ದೇವ್ ಹಾಗೂ ಆಚಾರ್ಯ ಬಾಲಕೃಷ್ಣ ಅವರು 2006ರಲ್ಲಿ ತಮ್ಮ ಕಂಪನಿಯನ್ನು ಪ್ರಾರಂಭಿಸಿದಾಗ ಬೇರೆಯವರಿಂದ ವೈಯಕ್ತಿಕ ಸಾಲವನ್ನು ಪಡೆದುಕೊಂಡಿದ್ದರು. ಆ ಸಮಯದಲ್ಲಿ ಅವರು ಬ್ಯಾಂಕ್ ಖಾತೆಯನ್ನು ಕೂಡ ಹೊಂದಿರಲಿಲ್ಲ. ಹೀಗಾಗಿ, ಆಚಾರ್ಯ ಬಾಲಕೃಷ್ಣ ಹಾಗೂ ರಾಮ್‌ದೇವ್ ಅವರು ತಮ್ಮ ಅನುಯಾಯಿಗಳಾದ ಸುನೀತಾ ಮತ್ತು ಸರ್ವಾನ್ ಸ್ಯಾಮ್ ಪೊದ್ದಾರ್ ಅವರಿಂದ ಸಾಲವನ್ನು ಪಡೆದುಕೊಂಡಿದ್ದರು.
2011ರ ವರದಿ ಪ್ರಕಾರ, ಸರ್ವಾನ್ ಸ್ಯಾಮ್ ಪೊದ್ದಾರ್ ಹಾಗೂ ಅವರ ಪತ್ನಿ ಸುನೀತಾ ಸ್ಕಾಟ್ಲೆಂಡ್‌ನ ನಿವಾಸಿಗಳು. ಈ ದಂಪತಿಯು ಲಿಟಲ್ ಕುಂಬ್ರೇ ಎಂಬ ದ್ವೀಪವನ್ನು ಎರಡು ಮಿಲಿಯನ್ ಪೌಂಡ್ ಕೊಟ್ಟು ಖರೀದಿಸಿದ್ದರು. ಬಳಿಕ 2009ರಲ್ಲಿ ಅದನ್ನು ಬಾಬಾ ರಾಮ್‌ದೇವ್ ಅವರಿಗೆ ಉಡುಗೊರೆಯಾಗಿ ನೀಡಿದ್ದರು.

2011ರಲ್ಲಿ ಅವರಿಬ್ಬರು ಕಂಪನಿಯಲ್ಲಿ ತಲಾ 12.46 ಲಕ್ಷ ಷೇರುಗಳನ್ನು ಹೊಂದಿದ್ದರು. ಅಂದರೆ 2011ರಲ್ಲಿ ಕಂಪನಿಯಲ್ಲಿ ಶೇ.7.2ರಷ್ಟು ಪಾಲನ್ನು ಹೊಂದಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಸುನೀತಾ ಪೊದ್ದಾರ್ ಅವರು ಆಚಾರ್ಯ ಬಾಲಕೃಷ್ಣ ಅವರ ಬಳಿಕ ಪತಂಜಲಿ ಆಯುರ್ವೇದದಲ್ಲಿ ಎರಡನೇ ಅತಿದೊಡ್ಡ ಪಾಲುದಾರರಾಗಿದ್ದರು. ಅಂದರೆ ಕಂಪನಿಯಲ್ಲಿ ಶೇ. 92ರಷ್ಟು ಷೇರುಗಳನ್ನು ಕೂಡ ಅವರೇ ಹೊಂದಿದ್ದರು.
ಆದರೆ, ಪ್ರಸ್ತುತ ಅವರು ಕಂಪನಿಯಲ್ಲಿ ಪಾಲನ್ನು ಹೊಂದಿದ್ದಾರೆಯೇ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ರಾಮ್‌ದೇವ್ ಅವರ ಯೋಗ ತರಗತಿಗಳಲ್ಲಿ ಪಾಲ್ಗೊಂಡ ಬಳಿಕ ಸುನೀತಾ ಅವರು ಸಾಕಷ್ಟು ದೇಹದ ತೂಕವನ್ನು ಕಡಿಮೆಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಅದಕ್ಕಾಗಿಯೇ ತಮ್ಮ ಪತಿಯನ್ನು ರಾಮ್‌ದೇವ್‌ಗೆ ದ್ವೀಪವನ್ನು ದಾನ ಮಾಡಿಸಲು ಒಪ್ಪಿಸಿದ್ದರು.
ಇನ್ನು ಸುನೀತಾ ಅವರು ಯುಕೆಯಲ್ಲಿ ಪತಂಜಲಿ ಪೀಠ ಟ್ರಸ್ಟ್‌ನ ಟ್ರಸ್ಟಿಯಾಗಿದ್ದರು. ಸರ್ವಾನ್ ಅವರು ಬಿಹಾರದ ಬೆಟ್ಟಿಯಾದಲ್ಲಿ ಜನಿಸಿದ್ದರು. ಪೊದ್ದಾರ್ಸ್ ದಂಪತಿಯ ಬಗ್ಗೆ 2011ರಲ್ಲಿ ಮಾಧ್ಯಮದಲ್ಲಿ ಲೇಖನಗಳು ಪ್ರಕಟಗೊಂಡಿದ್ದವು. ಸುನೀತಾ ಪೊದ್ದಾರ್ ಅವರು ಯುಕೆಯಲ್ಲಿ ಬಾಬಾ ರಾಮ್‌ದೇವ್ ಅವರ ಸಂಪರ್ಕ ವ್ಯಕ್ತಿಯೂ ಆಗಿದ್ದರು. ಸುನೀತಾ ಅವರು ಗ್ಲಾಸ್‌ಗೋದ ಶ್ರೀಮಂತ ಮಹಿಳೆಯರಲ್ಲಿ ಒಬ್ಬರಾಗಿದ್ದರು. ಜತೆಗೆ ಸುನೀತಾ ಅವರು ಯೋಗ ತರಗತಿಗಳನ್ನು ಕೂಡ ನೀಡುತ್ತಾರೆ.
ಬಾಬಾ ರಾಮ್‌ದೇವ್, ಅವರ ಯೋಗ ತರಗತಿಗಳ ಡಿವಿಡಿಯನ್ನು ಒಮ್ಮೆ ಪಡೆದುಕೊಂಡಿದ್ದರು. ರಾಮ್‌ದೇವ್ ಗ್ಲಾಸ್ಗೋಗೆ ಬಂದಾಗ ಆಕೆಯನ್ನು ಭೇಟಿಯಾಗಿದ್ದರು. ಆಕೆ ಮುಂಬೈನಲ್ಲಿ ಹುಟ್ಟಿದ್ದು, ಕಾಠ್ಮಂಡುವಿನಲ್ಲಿ ಬೆಳೆದಿದ್ದಾರೆ. ಸ್ಯಾಮ್ ಪೊದ್ದಾರ್ ಅವರ ತಂದೆ ಗ್ಲಾಸ್ಗೋದಲ್ಲಿ ವೈದ್ಯರಾಗಿದ್ದರು. ಸ್ಯಾಮ್ ಕೇವಲ ನಾಲ್ಕು ವರ್ಷವಿದ್ದಾಗ ವಿದೇಶಕ್ಕೆ ತೆರಳಿದ್ದರು. ಸ್ಯಾಮ್ ಜತೆ ಮದುವೆಯಾದ ನಂತರ ಗ್ಲಾಸ್ಗೋಗೆ ಬಂದಾಗ ಸುನೀತಾ ಅವರಿಗೆ 18 ವರ್ಷ ವಯಸ್ಸಾಗಿತ್ತು. ಸ್ಯಾಮ್ ಅವರು ಎಂಜಿನಿಯರ್ ಪದವೀಧರರು.
1980ರಲ್ಲಿ ತಮ್ಮ ಪರಿಚಯಸ್ಥರ ಹೋಮ್ ಕೇರ್ ಬಿಸಿನೆಸ್‌ನ್ನು ಖರೀದಿಸಿದ್ದರು. 1982ರಲ್ಲಿ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಸುನೀತಾ ಅವರು ಗ್ಯಾಸ್ ಸ್ಟೇಷನ್ ನಡೆಸುತ್ತಿದ್ದರು. ಬಳಿಕ ಅವರು ಕೂಡ ತಮ್ಮ ಗಂಡನ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದು, ಅದು ಯಶಸ್ವಿಯಾಗಿ ಮುನ್ನಡೆಯಿತು. ಸುನೀತಾ ಅವರು ಓಕ್ಮಿನ್‌ಸ್ಟರ್ ಹೆಲ್ತ್‌ಕೇರ್‌ನ CEO ಮತ್ತು ಸಂಸ್ಥಾಪಕರಾಗಿದ್ದಾರೆ. ಜತೆಗೆ ಅವರು ಸ್ಕಾಟ್‌ಲ್ಯಾಂಡ್‌ನಲ್ಲಿ ಪ್ರಮುಖ ಹೋಮ್ ಕೇರ್ ಹಾಗೂ ಪುನರ್ ವಸತಿ ಸೇವೆಗಳ ಪೂರೈಕೆದಾರರಲ್ಲಿ ಒಬ್ಬರಾಗಿ ಜನಪ್ರಿಯತೆ ಪಡೆದುಕೊಂಡಿದ್ದಾರೆ
ಬಾಬಾ ರಾಮ್‌ದೇವ್ ಅವರ ಪತಂಜಲಿ ಫುಡ್ ಮುಂದಿನ ಐದು ವರ್ಷಗಳಲ್ಲಿ 50,000 ಕೋಟಿ ರೂಪಾಯಿಗಳ ವಹಿವಾಟು ನಡೆಸುವ ಗುರಿಯನ್ನು ತಲುಪಲಿದೆ. ಜತೆಗೆ ಕಂಪೆನಿಯು 5,000 ಕೋಟಿ ರೂಪಾಯಿಗಳ ಲಾಭ ಗಳಿಸುವ ಗುರಿಯನ್ನು ಹೊಂದಿದೆ. ಕಂಪನಿಯು ಅದಕ್ಕೆ ಈಗಾಗಲೇ ಆಕ್ರಮಣಕಾರಿಯಾದ ಎಫ್‌ಎಂಸಿಜಿ ಕಾರ್ಯತಂತ್ರವನ್ನು ರೂಪಿಸಿಕೊಂಡಿದೆ.
ಈ ಕಂಪನಿಯ ಹೆಸರು ರುಚಿ ಸೋಯಾ. 2019ರಲ್ಲಿ ಇದನ್ನು ಮರುನಾಮಕರಣ ಮಾಡಲಾಗಿದೆ. ಎಫ್‌ಎಂಸಿಜಿ ವಹಿವಾಟನ್ನು ವಿಸ್ತರಿಸುವ ಮೂಲಕ ತಮ್ಮ ಕನಸು ನನಸುಗೊಳಿಸುವತ್ತ ಯೋಜನೆ ರೂಪಿಸುತ್ತಿರುವುದಾಗಿ ಪತಂಜಲಿ ಗ್ರೂಪ್ ಮುಖ್ಯಸ್ಥ ಬಾಬಾ ರಾಮ್‌ದೇವ್ ಮಾಧ್ಯಮಕ್ಕೆ ತಿಳಿಸಿದ್ದಾರೆ.


Click it and Unblock the Notifications