ಗ್ರಾಹಕರಿಗೆ ತ್ವರಿತವಾಗಿ ಕಾಫಿ ಹಾಗೂ ಫುಡ್ ಅನ್ನು ಪೂರೈಕೆ ಮಾಡುವ ಬೆಂಗಳೂರು ಮೂಲದ ಬ್ರಾಂಡ್ ಥರ್ಡ್ ವೇವ್ ಕಾಪಿ ಮಳಿಗೆ 2016 ರಲ್ಲಿ ಲಾಂಚ್ ಆಗಿತ್ತು. ಪ್ರಸ್ತುತ ಈ ಕಂಪನಿಯು ಪ್ರತಿಷ್ಠಿತ ಟಾಟಾದ ಸ್ಟಾರ್‌ಬಕ್ಸ್‌ಗೆ ಪೈಪೋಟಿ ನೀಡುವ ಹಂತಕ್ಕೆ ಬೆಳೆದಿದೆ. ಭಾರತದಲ್ಲಿ ಸ್ಥಳೀಯವಾಗಿ ದೊರೆಯುವ ಕಾಫಿಯನ್ನು ಹೆಚ್ಚು ಜನಪ್ರಿಯಗೊಳಿಸುವುದು ಈ ಬ್ರಾಂಡ್‌ನ ವ್ಯಾಪಾರ ತಂತ್ರವಾಗಿದೆ.
ಥರ್ಡ್ ವೇವ್ ಕಾಫಿ ಬ್ರಾಂಡ್‌ನ್ನು ಸುಶಾಂತ್ ಗೋಯಲ್ ಅವರು ಆಯುಷ್ ಬತ್ವಾಲ್ ಅನುರುದ್ಧ್ ಶರ್ಮಾ ಜತೆ ಸೇರಿಕೊಂಡು ಸ್ಥಾಪನೆ ಮಾಡಿದ್ದಾರೆ. ಈ ಮೂವರಲ್ಲಿ ಯಾರಿಗೂ ಚೈನ್ ಆಫ್ ಕಾಫಿ ಮಳಿಗೆಯನ್ನು ನಡೆಸಿದ್ದ ಅನುಭವ ಇರಲಿಲ್ಲ. ಆದರೆ, ಇಂಥಹ ಒಂದು ಬ್ರಾಂಡ್ ಹುಟ್ಟು ಹಾಕಿ ಅದನ್ನು ಈ ಹಂತಕ್ಕೆ ಬೆಳೆಸಬೇಕೆಂಬ ಛಲ ಹಾಗೂ ತುಡಿತ ಇತ್ತು.

ಇವರ ನಿರಂತರ ಪರಿಶ್ರಮದಿಂದಾಗಿ ಈ ಬ್ರಾಂಡ್ ಸದ್ಯ ಎತ್ತರಕ್ಕೆ ಬೆಳೆದು ನಿಂತಿದೆ. ಒಂದು ವಾರದ ಹಿಂದೆಯಷ್ಟೇ ಥರ್ಡ್ ವೇವ್ ಕಾಫಿ ಸೀರಿಸ್ ಸಿ ಫಂಡಿಂಗ್‌ನಡಿ ಕ್ರೀಜಿಸ್ ಮೂಲಕ 35 ಮಿಲಿಯನ್ ಡಾಲರ್ ಫಂಡ್‌ರೈಸ್ ಮಾಡಿದೆ. ಕಂಪನಿಯು ಪ್ರಸ್ತುತ 100 ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದ್ದು, ಆ ಪೈಕಿ ಅರ್ಧದಷ್ಟು ಮಳಿಗೆ ಬೆಂಗಳೂರಿನಲ್ಲೇ ಇವೆ.
ಕಂಪನಿಯು ಸುಮಾರು 150 ಮಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿದೆ. ಥರ್ಢ್ ವೇವ್ ಕಾಫಿಯು ಮುಂಬೈ, ದೆಹಲಿ, ಗುರ್ಗಾಂವ್, ಪುಣೆ, ಹೈದರಾಬಾದ್, ನೋಯ್ಡಾ, ಕೂನೂರ್ ಹಾಗೂ ಚಂಡೀಗಢದಲ್ಲಿ ಕೂಡ ಅಸ್ತಿತ್ವವನ್ನು ಹೊಂದಿದೆ.
ಸಹ ಸಂಸ್ಥಾಪಕ, ಸಿಇಒ ಸುಶಾಂತ್ ಗೋಯಲ್ ಬೆಳೆದು ಬಂದ ದಾರಿ ನೋಡೋಣ
ಸುಶಾಂತ್ ಗೋಯಲ್ ಅವರು ಇಲಿನಾಯ್ಸ್‌ನ ನಾರ್ತ್‌ವೆಸ್ಟರ್ನ್ ಯೂನಿವರ್ಸಿಟಿಯಿಂದ ಕೆಮಿಕಲ್ ಇಂಜಿನಿಯರಿಂಗ್ ಮತ್ತು ಅರ್ಥಶಾಸ್ತ್ರದಲ್ಲಿ ಬ್ಯಾಚುಲರ್ ಪದವಿಯನ್ನು ಪಡೆದುಕೊಂಡಿದ್ದಾರೆ.
ವಿಶ್ವವಿದ್ಯಾಲಯದಲ್ಲಿ ಓದುತ್ತಿರಬೇಕಾದರೆ, ಅವರು ಗ್ಲೋಬಲ್ ಎಂಗೇಜ್‌ಮೆಂಟ್ ಶೃಂಗಸಭೆ, ಕೆಲ್ಲಾಗ್ ಇಂಡಿಯಾ ಬಿಸಿನೆಸ್ ಸಮ್ಮೇಳನ, ವೆಂಚರ್ ಕ್ಯಾಪಿಟಲ್ ಹಾಗೂ ಪ್ರೈವೆಟ್ ಇಕ್ವಿಟಿ ಕ್ಲಬ್ ಸೇರಿದಂತೆ ಕಲಿಕೆಗೆ ಹೊರತಾದ ವಿಷಯಗಳು ಹಾಗೂ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದರು.
ಥರ್ಡ್ ವೇವ್ ಅನ್ನು ಪ್ರಾರಂಭಿಸುವುದಕ್ಕೂ ಮೊದಲು ಸುಶಾಂತ್ ಅವರು ತಮ್ಮದೇ ಆದ ಡೇಟಾ ಅನಾಲಿಟಿಕ್ಸ್ ಸಂಸ್ಥೆಯನ್ನು ನಡೆಸುತ್ತಿದ್ದರು. ಅದಕ್ಕೂ ಮೊದಲು ಸುಶಾಂತ್ ಅವರು ಅಮೆರಿಕದಲ್ಲಿ McKinsey & Co. ಜತೆ ಕೆಲಸ ಮಾಡುತ್ತಿದ್ದರು.
"ಥರ್ಡ್ ವೇವ್ ಅನ್ನು ನಾನು ಪ್ರಾರಂಭಿಸಿದ್ದು ಆಕಸ್ಮಿಕ. ನನಗೆ ಸ್ವಂತವಾಗಿ ಬಿಸಿನೆಸ್ ಮಾಡಬೇಕೆಂಬ ಆಸೆ ಇತ್ತು. ಬಳಿಕ ಕೋರಮಂಗಲದಲ್ಲಿ ಮೊದಲ ಕಾಫಿ ಶಾಪ್ ಅನ್ನು ಪ್ರಾರಂಭಿಸಿದ್ದೆ. ಅದು ಮುಂದೆ ಗ್ರಾಹಕರ ಅಭಿರುಚಿಗೆ ತಕ್ಕಂತೆ ಬೆಳೆಯುತ್ತ ಹೋಗಿದೆ," ಎಂದು ಅವರು ಯುವರ್ ಸ್ಟೋರ್ ಜತೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಸುಶಾಂತ್ ಅವರು ಕ್ಲಸ್ಟ್ರ್ ಎನ್ನುವ ವೆಂಚರ್ ಅನ್ನು ಸ್ಥಾಪಿಸಿದ್ದು, ಅದು 2014 ರಿಂದ 2018 ರವರೆಗೆ ಮುನ್ನಡೆಸಿದರು. ಈ ಅವಧಿಯಲ್ಲಿ ಸುಶಾಂತ್ ಅವರು ಉದ್ಯಮಶೀಲತೆ ಬಗ್ಗೆ ಆಳವಾದ ಅನುಭವವನ್ನು ಪಡೆದುಕೊಂಡರು. ಆ ಮೂಲಕ ತಮ್ಮ ಕನಸನ್ನು ನನಸುಗೊಳಿಸುವ ಉದ್ಯಮಕ್ಕೆ ಬೇಕಾದ ತಂತ್ರಗಾರಿಕೆ ಹಾಗೂ ಕೌಶಲ್ಯತೆಯನ್ನು ಪಡೆದುಕೊಂಡರು.


Click it and Unblock the Notifications