ಬೆಂಗಳೂರು ಮೂಲದ ಸ್ಟಾರ್ಟಪ್ ದುಕಾನ್ ತನ್ನ ಶೇ. 90ರಷ್ಟು ಗ್ರಾಹಕ ಬೆಂಬಲ ವಿಭಾಗದ ತಂಡವನ್ನು ಕೆಲಸದಿಂದ ತೆಗೆದು ಹಾಕಿದೆ. ಅವರ ಜಾಗಕ್ಕೆ ಕೃತಕ ಬುದ್ಧಿಮತೆ (ಎಐ) ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಈ ನಿರ್ಧಾರವನ್ನು ದುಕಾನ್ ಸ್ಥಾಪಕ ಹಾಗೂ ಸಿಇಒ ಸುಮಿತ್ ಶಾ ಅವರು ಟ್ವಿಟ್ಟರ್‌ನಲ್ಲಿ ಘೋಷಣೆ ಮಾಡಿದ್ದಾರೆ.
ಈ ನಿರ್ಧಾರದ ಬಗ್ಗೆ ತಿಳಿಸಿರುವ ಸುಮಿತ್ ಶಾ ಅವರು, ಲಾಭದಾಯಕತೆಗೆ ಆದ್ಯತೆ ನೀಡಲಾಗಿದ್ದು, ಇದರಿಂದ ಗ್ರಾಹಕ ಸಪೋರ್ಟ್‌ಗೆ ಸಂಬಂಧಿಸಿದ ವೆಚ್ಚವು ಶೇಕಡ 85 ರಷ್ಟು ಕಡಿಮೆಯಾಗಿದೆ. ಅಲ್ಲದೆ ರೆಸಲ್ಯೂಷನ್ ಸಮಯವು ಎರಡು ಗಂಟೆಗಳಿಂದ ಮೂರು ನಿಮಿಷಗಳಿಗೆ ಕಡಿಮೆಯಾಗಿದೆ. ಶಾ ಅವರ ಈ ನಿರ್ಧಾರಕ್ಕೆ ಟೀಕೆ ವ್ಯಕ್ತವಾಗಿದೆ. ಈ ನಡುವೆ ಕಂಪನಿಯು ಬಹು ಜವಾಬ್ದಾರಿಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ ಎಂದು ಶಾ ಹೇಳಿದ್ದಾರೆ.

ಸುಮಿತ್ ಶಾ ಬಗ್ಗೆ ಮಾಹಿತಿ ತಿಳಿಯಿರಿ
ಶಾ ಅವರು ದುಕಾನ್‌ನ ಸಹ-ಸಂಸ್ಥಾಪಕ ಹಾಗೂ ಸಿಇಒ ಆಗಿದ್ದಾರೆ. ಇದು ಡಿಐವೈ ಪ್ಲಾಟ್‌ಫಾರ್ಮ್ ಆಗಿದೆ. ಇದು ಯಾವುದೇ ಅನುಭವ ಹೊಂದಿರದ ವ್ಯಾಪಾರಿಗಳು ಹಾಗೂ ಚಿಲ್ಲರೆ ವ್ಯಾಪಾರಿಗಳಿಗೆ ಇ-ಕಾಮರ್ಸ್ ಸ್ಟೋರ್‌ಗಳನ್ನು ತೆರೆಯಲು ನೆರವಾಗುತ್ತದೆ. ಸುಮಿತ್ ಶಾ ಅವರು 2020ರಲ್ಲಿ ಸುಭಾಷ್ ಚೌಧರಿ ಅವರ ಜತೆ ಸೇರಿ ಡುಕಾನ್ ಅನ್ನು ಸ್ಥಾಪಿಸಿದ್ದಾರೆ. ಚೌಧರಿ ಅವರು ಕಂಪನಿಯ ಸಹ ಸ್ಥಾಪಕ ಹಾಗೂ ಸಿಟಿಒ ಆಗಿದ್ದಾರೆ.
ದುಕಾನ್ ಅನ್ನು ಪ್ರಾರಂಭಿಸುವ ಮೊದಲು ಸುಮಿತ್ ಶಾ ಅವರು Rankz.io ಹಾಗೂ Risemetric ಅನ್ನು ಕ್ರಮವಾಗಿ 2018 ಮತ್ತು 2014ರಲ್ಲಿ ಸ್ಥಾಪಿಸಿದ್ದರು. ಸುಮಿತ್ ಶಾ ಅವರು ಉದ್ಯಮಿ ಹಾಗೂ ಪ್ರಾಡೆಕ್ಟ್ ಡಿಸೈನರ್ ಆಗಿದ್ದಾರೆ. ಸುಮಿತ್ ಶಾ ಅವರು ಮುಂಬೈ ಮೂಲದವರು. ಅಷ್ಟೇಅಲ್ಲ, ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದುಕೊಂಡಿದ್ದಾರೆ. ಪ್ರಮುಖ ಕೆಲವೊಂದು ಕೋರ್ಸ್‌ಗಳನ್ನು ಆನ್‌ಲೈನ್ ಮೂಲಕ ಕಲಿತುಕೊಂಡ ನಂತರ ಅವರು ಮ್ಯಾಕ್‌ಡೊನಾಲ್ಡ್, ಕ್ರೆಡ್ ಸೇರಿದಂತೆ ಹಲವು ಕಾರ್ಪೊರೇಟ್ ಕಂಪನಿಗಳಲ್ಲಿ ಕೆಲಸ ನಿರ್ವಹಿಸಿದ್ದರು.
ಸುಮಿತ್ ಶಾ ಈ ಹಿಂದೆ ಕಾರ್ಯನಿರ್ವಹಣೆ ಮಾಡಿದ್ದ ಸಂಸ್ಥೆಗಳು
ಸುಮಿತ್ ಶಾ ಅವರು ಹೌಸಿಂಗ್ ಡಾಟ್ ಕಾಮ್ ಹಾಗೂ TinyOwl ಕಂಪನಿಯಲ್ಲಿಯೂ ಡಿಜಿಟಲ್ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದರು. ಆ ನಂತರದಲ್ಲಿ ಸುಮಿತ್ ಅವರು ಗೆಳೆಯ ಸುಭಾಷ್ ಜತೆ ಸೇರಿಕೊಂಡು ರಿಸಿಮೆಟ್ರಿಕ್ ಎನ್ನುವ ತಮ್ಮದೇ ಬಿಸಿನೆಸ್ ಅನ್ನು ಪ್ರಾರಂಭಿಸಿದ್ದರು. ಸುಮಿತ್ ಶಾ ನಾಲ್ಕು ವರ್ಷದ ಬಳಿಕ ಅಂದರೆ 2018ರಲ್ಲಿ Rankz.io ಅನ್ನು ಸ್ಥಾಪಿಸಿದ್ದರು.
ಆದರೆ ಈಗ ಶೇಕಡ 90 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗಳಿಗೆ ಸುಮಿತ್ ಶಾ ಗುರಿಯಾಗಿದ್ದಾರೆ. "ಎಐ ಚಾಟ್‌ಬಾಟ್ ಹಿನ್ನೆಲೆಯಲ್ಲಿ ನಾವು ಶೇ.90 ರಷ್ಟು ನಮ್ಮ ಸಪೋರ್ಟ್ ಟೀಂನವರನ್ನು ಕೆಲಸದಿಂದ ತೆಗೆದು ಹಾಕಿದ್ದೇವೆ. ಇದು ಅತ್ಯಂತ ಕಠಿಣ? ಹೌದು. ಖಂಡಿತವಾಗಿ? ಅನಿವಾರ್ಯ," ಎಂದು ಸುಮಿತ್ ಶಾ ಟ್ವೀಟ್ ಮಾಡಿದ್ದಾರೆ.
ಲಿನಾ, ಎಐ ಅಸಿಸ್ಟೆಂಟ್ ಬಗ್ಗೆ ಅವರು ಬಹಳ ವಿವರವಾಗಿ ಹೇಳಿದ್ದು, ಇದು ಅತ್ಯಂತ ಕಳಪೆ ಸಂವಹನ, ವಿಳಂಬ ಪ್ರತಿಕ್ರಿಯೆಗಳಿಗೆ ಪರಿಹಾರವನ್ನು ಸೂಚಿಸುತ್ತದೆ. ಸುಮಾರು 12 ಟ್ವೀಟ್‌ಗಳ ಬಳಿಕ ಶಾ ಅವರು ಪ್ರತಿಕ್ರಿಯಿಸಿದ್ದು, ಕಂಪನಿಯು ಹಲವು ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿರುವುದಾಗಿ ಹೇಳಿದ್ದಾರೆ.
ವಜಾಗೊಂಡ ಸಿಬ್ಬಂದಿಗೆ ನೀಡಿರುವ ಸಹಾಯದ ಕುರಿತು ಟ್ವಿಟರ್ ಬಳಕೆದಾರರು ಕೇಳಿದಾಗ, ಶಾ ಅವರು ತಮ್ಮ ಲಿಂಕ್ಡ್‌ಇನ್ ಪೋಸ್ಟ್‌ಗಾಗಿ ಗಮನಹರಿಸುವಂತೆ ಹೇಳಿದ್ದು, ಇದು ಕಠಿಣ ನಿರ್ಧಾರ ಎಂದು ಪುನರುಚ್ಚರಿಸಿದ್ದಾರೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications