ಅನುಷ್ಕಾ ಶರ್ಮಾ ಅವರು ಹಲವಾರು ವ್ಯವಹಾರಗಳಲ್ಲಿ ಹೂಡಿಕೆಯನ್ನು ಹೊಂದಿದ್ದು, ಆ ಮೂಲಕ ತಮ್ಮ ನಿವ್ವಳ ಆಸ್ತಿ ಮೌಲ್ಯ ಹೆಚ್ಚಿಸಿಕೊಂಡಿದ್ದಾರೆ. ಆರೋಗ್ಯಕರ ಜೀವನ ಶೈಲಿಯ ವಿಚಾರವಾಗಿ ಹೆಚ್ಚಾಗಿ ಜಾಹೀರಾತು ನೀಡುತ್ತಾ ಬಂದಿರುವ ಅನುಷ್ಕಾ ಶರ್ಮಾ ಅವರು ಈಜು ಚಾಂಪಿಯನ್ ಮೇಘನಾ ನಾರಾಯಣ್ ಅವರೊಂದಿಗೆ ಸೇರಿಕೊಂಡು ಆಹಾರ ಬ್ರಾಂಡ್ ಅನ್ನು ಸ್ಥಾಪಿಸಿದ್ದಾರೆ.
ಅಂತಾರಾಷ್ಟ್ರೀಯ ಈಜು ಚಾಂಪಿಯನ್ ಆಗಿರುವ ಮೇಘನಾ ನಾರಾಯಣ್ ಅವರು ಈಗ ತಮ್ಮದೇ ಆದ ಸ್ನ್ಯಾಕ್ ಫುಡ್ ಕಂಪನಿ ವಾಲ್ಸಮ್ ಫುಡ್ಸ್ (ಸ್ಲರ್ಪ್ ಫಾರ್ಮ್ಸ್ ಮತ್ತು ಮಿಲ್ಲಿ) ಅನ್ನು ಸ್ಥಾಪಿಸಿದ್ದಾರೆ. ಇದರಲ್ಲಿ ಅನುಷ್ಕಾ ಶರ್ಮಾ ಅವರು ಪ್ರಮುಖ ಹೂಡಿಕೆದಾರರಾಗಿದ್ದಾರೆ. ಜತೆಗೆ ಶರ್ಮಾ ಅವರು ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿಯೂ ಬದಲಾಗಿದ್ದು, ಈಗ 100 ಕೋಟಿ ಆದಾಯ ಗಳಿಸುತ್ತಿದೆ.

ಮೇಘನಾ ನಾರಾಯಣ್ ಅವರು ಅಂತಾರಾಷ್ಟ್ರೀಯ ಈಜು ಚಾಂಪಿಯನ್ ಆಗಿದ್ದು, ಅವರು ನೂರಾರು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಅಲ್ಲದೆ ಎಂಟು ವರ್ಷಗಳ ಕಾಲ ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರು ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು, ಮಾಜಿ ರಾಷ್ಟ್ರೀಯ ಈಜು ಚಾಂಪಿಯನ್ ಕೂಡ ಆಗಿದ್ದಾರೆ.
ಮದುವೆಯಾಗಿ ತಾಯಿಯಾದ ಬಳಿಕ ಮೇಘನಾ ನಾರಾಯಣ್ ಅವರು ತಮ್ಮ ಮಕ್ಕಳಿಗೆ ಆರೋಗ್ಯಕರ ತಿಂಡಿಗಳನ್ನು ಪರಿಚಯಿಸುವುದಕ್ಕೆ ಉದ್ಯೋಗಿಯಾಗಿರುವ ಶೌರವಿ ಮಲಿಕ್ ಅವರ ಜತೆ ಸೇರಿಕೊಂಡು ಮಕ್ಕಳಿಗಾಗಿ ಸಾವಯವ ತಿಂಡಿಗಳನ್ನು ಮಾರಾಟ ಮಾಡುವ ಕಂಪನಿಯಾದ ವಾಲ್ಸಮ್ ಫುಡ್ ಅನ್ನು ಸ್ಥಾಪಿಸಿದರು.
ಮಕ್ಕಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಸಸ್ಯಾಹಾರಿ, ಸಾವಯವ ಮತ್ತು ಆರೋಗ್ಯಕರ ಉಪಹಾರ & ತಿಂಡಿ ಆಯ್ಕೆಗಳ ಮಾರ್ಕೆಟಿಂಗ್ ಮೂಲಕ ಬೃಹತ್ ವ್ಯಾಪಾರ ಸಾಮ್ರಾಜ್ಯವನ್ನು ನಿರ್ಮಿಸಿದ್ದ ಮೇಘನಾ ನಾರಾಯಣ್ ಮತ್ತು ಶೌರವಿ ಅವರು ಅನುಷ್ಕಾ ಶರ್ಮಾ ಅವರ ಕಣ್ಣಿಗೆ ಬಿದ್ದರು.
ಅನುಷ್ಕಾ ಶರ್ಮಾ ವಾಲ್ಸಮ್ ಫುಡ್ಸ್‌ನಲ್ಲಿ ಅತಿದೊಡ್ಡ ಹೂಡಿಕೆದಾರರಾಗಿದ್ದು, ಮೇಘನಾ ಅವರ ಕನಸಿನ ಯೋಜನೆಯನ್ನು ರಿಯಾಲಿಟಿ ಆಗಿ ಪರಿವರ್ತಿಸಿದ್ದಾರೆ. ಅಷ್ಟೆಅಲ್ಲ ಮಾಜಿ ಈಜು ಚಾಂಪಿಯನ್‌ನ ಕಂಪನಿಯನ್ನು 5 ಕೋಟಿ ರೂಪಾಯು ಆದಾಯದಿಂದ 100 ಕೋಟಿ ರೂಪಾಯಿ ಆದಾಯಕ್ಕೆ ಕೊಂಡೊಯ್ದರು.
ಬಿಸಿನೆಸ್ ಟ್ಯುಡೆಗೆ ನೀಡಿದ ಸಂದರ್ಶನದಲ್ಲಿ ಮೇಘನಾ ನಾರಾಯಣ್ ಅವರು, ತಮ್ಮ ಕಂಪನಿಯು 2025 ರ ವೇಳೆಗೆ 500 ಕೋಟಿ ರೂಪಾಯಿಗಿಂತ ಹೆಚ್ಚಿನ ಆದಾಯವನ್ನು ಗಳಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. ಈ ನಡುವೆ ಅವರ ಆಹಾರ ಬ್ರಾಂಡ್ ವಾಲ್ಸಮ್ ಫುಡ್ಸ್ ಇ-ಕಾಮರ್ಸ್ ಆಗಿರುವ ಅಮೆಜಾನ್‌ನೊಂದಿಗೂ ಕೈಜೋಡಿಸಿದೆ.
ಅನುಷ್ಕಾ ಶರ್ಮಾ ಅವರ ಜತೆಗಿನ ಪಾಲುದಾರಿಕೆಯ ಹೊರತಾಗಿಯೂ 2021ರ ಅಮೆಜಾನ್ ಗ್ಲೋಬಲ್ ಸ್ಟಾರ್ಟಪ್ ಅಕ್ಸೆಲೇಟರ್ ಕಾರ್ಯಕ್ರಮದಲ್ಲಿ Slurrp ಫಾರ್ಮ್ ಟಾಪ್ 3ಯಲ್ಲಿ ಸ್ಥಾನ ಪಡೆದ ನಂತರ ವಾಲ್ಸಮ್ ಫುಡ್ಸ್ ಅಮೆಜಾನ್ ಜತೆ ಸಹಭಾಗಿತ್ವವನ್ನು ಹೊಂದಿದ್ದು, ನವೋದ್ಯಮಕ್ಕೆ ಪ್ರಮುಖ ಉತ್ತೇಜನ ನೀಡಿದೆ. ಮೇಘನಾ ನಾರಾಯಣ್ ಅವರ ನಿವ್ವಳ ಲಾಭವು ಹೆಚ್ಚಿದ್ದು, ಉದ್ಯಮ ಕ್ಷೇತ್ರದಲ್ಲಿ ಲೀಡರ್ ಆಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.


Click it and Unblock the Notifications