ಸಿಲ್ವರ್ ಜ್ಯುವೆಲ್ಲರಿ ಬ್ರಾಂಡ್ ಜೀವಾ ಕಂಪನಿಯು ಪ್ರೇಮ್‌ಜಿ ಇನ್‌ವೆಸ್ಟ್ ಫರ್ಮ್‌ನಿಂದ 200 ಕೋಟಿ ರೂಪಾಯಿ ಹೂಡಿಕೆಯನ್ನು ಪಡೆದುಕೊಂಡಿದೆ. ಈ ಕಂಪನಿಯನ್ನು ನಿಕಿತಾ ಪ್ರಸಾದ್ ಹಾಗೂ ಇತರೆ ಇಬ್ಬರು ಸೇರಿಕೊಂಡು ಸ್ಥಾಪಿಸಿದ್ದಾರೆ. ಈ ಕಂಪನಿಯು ಸಿಲ್ವರ್ ಜ್ಯುವೆಲ್ಲರಿ ಕ್ಷೇತ್ರಕ್ಕೆ ಸಂಬಂಧಿಸಿದ್ದು. ಈ ಕಂಪನಿಯು 2019ರಲ್ಲಿ ಸ್ಥಾಪನೆಯಾಗಿದೆ. ಭಾರತದಾದ್ಯಂತ ಈ ಕಂಪನಿಯು 50 ಸ್ಟೋರ್‌ಗಳನ್ನು ಹೊಂದಿವೆ.
ಇಶೇಂದ್ರ ಅಗರ್‌ವಾಲ್ ಅವರು ಈ ಕಂಪನಿಯು ಸಿಇಒ ಆಗಿದ್ದಾರೆ. ಸಚಿನ್ ಶೆಟ್ಟಿ ಅವರು ಮೂರನೇ ಸಹ ಸ್ಥಾಪಕರಾಗಿದ್ದಾರೆ. ಗಿವಾ ಕಂಪನಿಯು ಸೆಕೆಂಡರಿ ಸೇಲ್ಸ್‌ನಿಂದ 70 ಕೋಟಿ ರೂಪಾಯಿ ಪಡೆದುಕೊಂಡಿದೆ.
ಯುವರ್ ಸ್ಟೋರಿ ಪ್ರಕಾರ, ಗಿವಾ ಸಂಸ್ಥೆಯ ಅಂದಾಜು ಆಸ್ತಿ ಮೌಲ್ಯವು 250 ಮಿಲಿಯನ್ ಡಾಲರ್ (2054 ಕೋಟಿ ರೂಪಾಯಿ) ಆಗಿದೆ. ಕಳೆದ ವರ್ಷ ಕಂಪನಿಯ ಮೌಲ್ಯವು 133 ಮಿಲಿಯನ್ ಡಾಲರ್ (1093 ಕೋಟಿ ರೂಪಾಯಿ) ಆಗಿತ್ತು.

2021-2022ರ ಹಣಕಾಸು ವರ್ಷದಲ್ಲಿ ನಿಕಿತಾ ಪ್ರಸಾದ್ ಅವರ ಕಂಪನಿಯ ಆದಾಯ 170 ಕೋಟಿ ರೂಪಾಯಿ ಆಗಿದೆ. 2023ನೇ ವರ್ಷದಲ್ಲಿ ಅಂದಾಜು ರನ್ ರೇಟ್ 220 ಕೋಟಿ ರೂಪಾಯಿ ಆಗಿದೆ. ನಿಕಿತಾ ಪ್ರಸಾದ್ ಅವರು ಚೆನ್ನೈನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿಯಿಂದ ಪದವೀಧರರಾಗಿದ್ದಾರೆ. ಅವರು ಕಂಪನಿಯೊಂದರ ಆಭರಣ ಡಿಸೈನ್ ವಿಭಾಗದಲ್ಲಿ ಇಂಟರ್ನ್ ಆಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದರು.
ಪ್ಲೇ ಸ್ಕೂಲ್‌ವೊಂದರಲ್ಲಿ ಶಿಕ್ಷಕಿಯಾಗಿಯೂ ಕೆಲಸ ಮಾಡುತ್ತಿದ್ದರು. ಈ ನಡುವೆ ಅವರು ವೋಗ್ ಕ್ರಾಫ್ಟ್ ಮತ್ತು ಡಿಸೈನ್ ಪ್ರೈವೆಟ್ ಲಿಮಿಟೆಡ್, ಪಲ್ಲವಿ ಫೋಲಿ ಬೊಟಿಕ್ ಜ್ಯುವೆಲ್ಲರಿನಂಥಹ ಕಂಪನಿಗಳಲ್ಲಿ ಡಿಸೈನ್ ಇಂಟರ್ನ್ ಕೂಡ ಆಗಿದ್ದರು. ಪ್ರೇಮ್‌ಜಿ ಇನ್‌ವೆಸ್ಟ್ ಬಿಲಿಯನೇರ್ ಅಜೀಂ ಪ್ರೇಮ್‌ಜಿ ಅವರ ಕುಟುಂಬದ ಸಂಸ್ಥೆ ಆಗಿದೆ. ಅವರು ವಿಪ್ರೋ ಲಿಮಿಟೆಡ್‌ನ ಅಧ್ಯಕ್ಷರಾಗಿದ್ದಾರೆ. ಅವರ ಒಟ್ಟು ಆಸ್ತಿ ಮೌಲ್ಯವು 9.2 ಬಿಲಿಯನ್ ಡಾಲರ್ (75,626 ಕೋಟಿ ರೂಪಾಯಿ) ಆಗಿದೆ.
ಕಡಿಮೆ ವರ್ಷದಲ್ಲಿ ಕಂಪನಿ ಸ್ಥಾಪನೆ ಮಾಡಿದವರು!
ಹೀಗೆ ಕಡಿಮೆ ವರ್ಷದಲ್ಲಿ ಒಂದು ಸಂಸ್ಥೆಯನ್ನು ನಿರ್ಮಾಣ ಮಾಡಿದ ಹಲವಾರು ಮಂದಿಯ ಉದಾಹರಣೆ ನಮ್ಮ ಮುಂದಿದೆ. ವಿದಿತ್ ಆತ್ರೆ ಸ್ಟಾರ್ಟ್‌ಅಪ್ ಪ್ರಾರಂಭಿಸಿದ ಆರು ವರ್ಷದಲ್ಲಿ 40,000 ಕೋಟಿ ರೂಪಾಯಿಯ ಸಂಪತ್ತಿನ ಒಡೆಯನಾಗಿದ್ದಾರೆ. ಇನ್ನು 35 ಹರೆಯದ ನಿಕಿಲ್ ವಿಶ್ವನಾಥನ್ 2 ವರ್ಷದಲ್ಲಿ 83,000 ಕೋಟಿ ರೂಪಾಯಿ ಮೌಲ್ಯದ ಕಂಪನಿ ಕಟ್ಟಿ ಬೆಳೆಸಿದ್ದಾರೆ. ಇನ್ನು ಬಿಕಾಂ ಪದವೀಧರ ಸಾಗರ್ ಗುಪ್ತಾ 4 ವರ್ಷಗಳಲ್ಲಿ 600 ಕೋಟಿ ರೂಪಾಯಿ ಮೌಲ್ಯದ ಸಂಶ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ನರೇನ್ ಕಾರ್ತಿಕೇಯನ್ ಕೇವಲ 2 ವರ್ಷದಲ್ಲಿ 178 ಕೋಟಿ ರೂಪಾಯಿಯ ಕಂಪನಿಯನ್ನು ಕಟ್ಟಿ ಬೆಳೆಸಿದ್ದಾರೆ.
ಭಾರತೀಯ ಮೂಲದ ಅಮೆರಿಕನ್ ಎಂಟ್ರೆಪ್ರೆನಿಯರ್ ಆಗಿರುವ ನಿಕಿಲ್ ವಿಶ್ವನಾಥನ್ ವಿಶ್ವದ ಪ್ರಮುಖ ವೆಬ್3 ಡೆವಲಪರ್ ಪ್ಲಾಟ್‌ಫಾರ್ಮ್ ಆಲ್ಕೆಮಿಯ ಸಹ-ಸಂಸ್ಥಾಪಕ ಮತ್ತು ಸಿಇಒ ಆಗಿದ್ದಾರೆ. ನಿಕಿಲ್ ವಿಶ್ವನಾಥನ್ ಅವರು ಜೋಸೆಫ್ ಲಾವ್ ಜೊತೆ ಸೇರಿ ಆಲ್ಕೆಮಿಯನ್ನು ಹುಟ್ಟುಹಾಕಿದ್ದಾರೆ. 2020 ರಲ್ಲಿ ಇವರಿಬ್ಬರು ಪಂಥವೊಂದನ್ನು ಕಟ್ಟಿ ಅದರಲ್ಲಿ ಯಶಸ್ವಿಯಾಗಲು ನಿರ್ಧರಿಸಿದರು.
ಅದರಂತೆಯೇ ಎರಡು ವರ್ಷಕ್ಕಿಂತಲೂ ಕಮ್ಮಿ ಸಮಯದಲ್ಲಿ, ಅವರ ಕಂಪನಿಯು 10.2 ಬಿಲಿಯನ್ ಡಾಲರ್ (83,000 ರೂಪಾಯಿಗಿಂತ ಹೆಚ್ಚು) ಮೌಲ್ಯವನ್ನು ತಲುಪುವಲ್ಲಿ ಯಶಸ್ವಿಯಾಯಿತು. ಈ ಸಾಫ್ಟ್‌ವೇರ್ ಸಂಸ್ಥೆಯು ಇದುವರೆಗಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕಂಪನಿಗಳಲ್ಲಿ ಒಂದಾಗಿದೆ. ನಿಕಿಲ್ ವಿಶ್ವನಾಥನ್ ಅವರು ಅಮೇರಿಕಾದ ಪ್ರತಿಷ್ಠಿತ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿದಾರೆ.


Click it and Unblock the Notifications