ಖಾಸಗಿ ಸಾಲದಾತ ಇಂಡಸ್‌ಇಂಡ್ ಬ್ಯಾಂಕ್, ಸುಮಂತ್ ಕತ್ಪಾಲಿಯಾ ಅವರನ್ನು ವ್ಯವಸ್ಥಾಪಕ ನಿರ್ದೇಶಕರು(ಎಂಡಿ) ಮತ್ತು ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ)ಯಾಗಿ ಮರುನೇಮಕ ಮಾಡಿದೆ . ಎರಡು ವರ್ಷಗಳ ಅವಧಿಗೆ ಸುಮಂತ್ ಕತ್ಪಾಲಿಯಾ ಅವರನ್ನು ಮರುನೇಮಕ ಮಾಡಿದೆ ಎಂದು ಬ್ಯಾಂಕ್ ತಿಳಿಸಿದೆ.
ಸುಮಂತ್ ಕತ್ಪಾಲಿಯಾ ತಮ್ಮ ವೃತ್ತಿಜೀವನದಲ್ಲಿ 30 ವರ್ಷಗಳ ಅಗಾಧ ಅನುಭವವುಳ್ಳ ಬ್ಯಾಂಕರ್ ಆಗಿದ್ದಾರೆ. ಇವರು ಮಾರ್ಚ್ 2020ರಿಂದ ಇಂಡಸ್‌ಇಂಡ್ ಬ್ಯಾಂಕ್ ನ ಎಂಡಿ ಮತ್ತು ಸಿಇಒ ಆಗಿ ಮುನ್ನಡೆಸುತ್ತಿದ್ದಾರೆ. ಇಂಡಸ್‌ಇಂಡ್ ಬ್ಯಾಂಕ್‌ಗೆ ಸೇರುವ ಮೊದಲು ಅವರು ಸಿಟಿ ಬ್ಯಾಂಕ್, ಬ್ಯಾಂಕ್ ಆಫ್ ಅಮೇರಿಕಾ ಮತ್ತು ABN AMRO ಗಳಲ್ಲಿಯೂ ಕೆಲಸ ಮಾಡಿದ್ದಾರೆ.

ಕತ್ಪಾಲಿಯಾ ಅವರು ತಮ್ಮ ವೃತ್ತಿಜೀವನದಲ್ಲಿ 30 ವರ್ಷಗಳ ಕಾಲ ಹಲವಾರು ನಾಯಕತ್ವದ ಹುದ್ದೆಯಲ್ಲಿ ಯಶಸ್ವಿಯಾಗಿ ಸಂಸ್ಥೆಯನ್ನು ಮುನ್ನಡೆಸಿದ್ದಾರೆ. ಸದ್ಯ ಇಂಡಸ್ ಇಂಡ್ ಬ್ಯಾಂಕ್ ನ ಚುಕ್ಕಾಣಿ ಹಿಡಿದಿದ್ದು, ಇದು ಸೆಪ್ಟೆಂಬರ್ 27 ರ ವೇಳೆ 1,12,000 ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ. ಸೆ 27 ರ ಬುಧವಾರ ಬ್ಯಾಂಕ್‌ನ ಷೇರು ಬೆಲೆ 1,439 ರೂಪಾಯಿ ಆಗಿತ್ತು.
ಬ್ಯಾಂಕಿನ ಪ್ರಮುಖ ಕಾರ್ಯನಿರ್ವಾಹಕ ತಂಡ ಪ್ರಸ್ತುತ ಕತ್ಪಾಲಿಯಾ ಮುನ್ನಡೆಸುತ್ತಿದ್ದು, ಇವರ ನಾಯಕತ್ವದ ಬಳಿಕ ಬ್ಯಾಂಕಿನ ವ್ಯವಹಾರವು ಮಹತ್ವದ ತಿರುವು ಪಡೆಯುವಲ್ಲಿ ಸಫಲತೆ ಕಂಡಿದೆ. ಕತ್ಪಾಲಿಯಾ ಬ್ಯಾಂಕಿನ ಒಟ್ಟಾರೆ ವ್ಯವಹಾರ ತಂತ್ರ ಹಾಗೂ ಅದನ್ನು ಕಾರ್ಯಗತಗೊಳಿಸುವಿಕೆ ಮತ್ತು ಇತರ ವಿಷಯಗಳ ಜೊತೆಗೆ ಹಣಕಾಸು ನಿರ್ವಹಣೆಗೆ ಜವಾಬ್ದಾರರಾಗಿರುತ್ತಾರೆ.
ಕತ್ಪಾಲಿಯಾ ಅವರು ದೆಹಲಿ ವಿಶ್ವವಿದ್ಯಾನಿಲಯದ ಹಿಂದೂ ಕಾಲೇಜಿನಲ್ಲಿ ಬಿ ಕಾಮ್ (ಆನರ್ಸ್) ಹಾಗೂ ಚಾರ್ಟರ್ಡ್ ಅಕೌಂಟೆಂಟ್ (CA) ಪದವಿ ಪಡೆದಿದ್ದಾರೆ. 12 ವರ್ಷಗಳ ಹಿಂದೆ ಮ್ಯಾನೇಜ್ಮೆಂಟ್ ಟೀಮ್ ನ ಭಾಗವಾಗಿ ಇಂಡಸ್‌ಇಂಡ್ ಬ್ಯಾಂಕ್‌ಗೆ ಸೇರ್ಪಡೆಗೊಂಡಿದ್ದರು.
ಈ ವೇಳೆ ಅವರು ಟಾಪ್-ಲೆವೆಲ್ ನ ಎಕ್ಸ್ಯುಟಿವ್ ಸಮಿತಿಯ ಕೀ ಮೆಂಬರ್ ಆಗಿದ್ದು, ಹೂಡಿಕೆದಾರರ ಸಂಬಂಧಗಳನ್ನು ನಿರ್ವಹಿಸುವುದು, ಬ್ಯಾಂಕ್-ವ್ಯಾಪಿ ಹಣಕಾಸು ನಿರ್ವಹಣೆ ಮುಂತಾದವುಗಳನ್ನು ನಿರ್ವಹಿಸುತ್ತಿದ್ದರು. ಅವರು ಸಿಟಿಬ್ಯಾಂಕ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದು, ಬಿಸಿನೆಸ್ ಗ್ರೋಥ್ ಅಂಡ್ ಸ್ಟ್ರಾಟೆಜಿ, ಸೇಲ್ಸ್ ಅಂಡ್ ಡಿಸ್ಟ್ರಿಬ್ಯೂಷನ್ ಸೇರಿದಂತೆ ಇತರ ವಿಭಾಗದಲ್ಲಿ ವಿವಿಧ ಹುದ್ದೆ ನಿರ್ವಹಿಸಿದ್ದರು.
ಇಂಡಸ್‌ಇಂಡ್ ಬ್ಯಾಂಕ್‌ಗೆ ಸೇರುವ ಮೊದಲು, ಅವರು ABN AMRO ನೊಂದಿಗೆ ಕೆಲಸ ಮಾಡಿದ್ದು ABN AMRO, ಭಾರತದ ಗ್ರಾಹಕ ಬ್ಯಾಂಕ್ ಮುಖ್ಯಸ್ಥರಾಗಿ ಸೇರಿದಂತೆ ಹಲವಾರು ನಿರ್ಣಾಯಕ ನಾಯಕತ್ವದ ಹುದ್ದೆ ಹೊಂದಿದ್ದರು. ABN AMRO ಮೊದಲು, ಕತ್ಪಾಲಿಯಾ ಬ್ಯಾಂಕ್ ಆಫ್ ಅಮೇರಿಕಾದಲ್ಲಿ ಒಂದು ದಶಕಗಳ ಕಾಲ ಕೆಲಸ ಮಾಡಿದ್ದರು.
"ಇಂಡಸ್‌ಇಂಡ್ ಬ್ಯಾಂಕ್‌ನಲ್ಲಿ ಗ್ರಾಹಕ ಬ್ಯಾಂಕ್ ಮುಖ್ಯಸ್ಥರಾಗಿ ಅವರ ಮೊದಲ ಬಾರಿಗೆ ಅಧಿಕಾರ ವಹಿಸಿಕೊಂಡಿದ್ದಾಗ ಕತ್ಪಾಲಿಯಾ ಅವರು ಇಂಡಿವಿಜುಯಲ್ ಮತ್ತು ಎಸ್‌ಎಂಇ ವಿಭಾಗಗಳ ಅಗತ್ಯಗಳನ್ನು ಪೂರೈಸಲು ಮೊದಲಿನಿಂದಲೂ ಹಲವಾರು ಹೊಸ ವ್ಯವಹಾರಗಳನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ " ಎಂದು ಬ್ಯಾಂಕ್ ಹೇಳಿದೆ.


Click it and Unblock the Notifications