Famous Indian Brands: ಹತ್ತಕ್ಕೂ ಹೆಚ್ಚು ಪ್ರಸಿದ್ಧ ಭಾರತೀಯ ಬ್ರ್ಯಾಂಡ್‌ಗಳ ಹಿಂದಿರುವ ವ್ಯಕ್ತಿ ಇವರೇ ನೋಡಿ!

ಕೆಲವು ಯಶಸ್ವಿ ಉದ್ಯಮಿಗಳಂತೆ ಇವರು ಐಐಟಿ ಅಥವಾ ಐಐಎಂನಂತಹ ಪ್ರತಿಷ್ಠಿತ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರುವುದಿಲ್ಲ. ಆದರೆ ಭದ್ಧತೆ ಮತ್ತು ಗುರಿ ಮುಟ್ಟುವ ಅಚಲವಾದ ನಂಬಿಕೆ ಇಟ್ಟು ಪ್ರಯತ್ನ ಪಟ್ಟರೆ ಯಶಸ್ಸು ತಾನಾಗಿಯೇ ಬರುತ್ತದೆ ಎಂದು ನಂಬಿಕೆ ಇಟ್ಟವರು. ಯಾವುದೇ ಪೂರ್ವ ವ್ಯವಹಾರ ಜ್ಞಾನವಿಲ್ಲದೆ ಬೃಹತ್ ಉದ್ಯಮ ಸಾಮ್ರಾಜ್ಯವನ್ನು ಸೃಷ್ಟಿಸಿ ಬೆಳೆಸಿದ ಗುಜರಾತಿ ಉದ್ಯಮಿ ದರ್ಶನ್ ಪಟೇಲ್ ನಿಜಕ್ಕೂ ಪ್ರಶಂಸೆಗೆ ಅರ್ಹರಾಗಿರುವ ವ್ಯಕ್ತಿಯಾಗಿದ್ದಾರೆ.

ಇಷ್ಟು ಮಾತ್ರ ಅಲ್ಲ ಉದ್ಯಮಿ ದರ್ಶನ್ ಪಟೇಲ್ ಪ್ರತಿಭೆ ಮತ್ತು ಸಾಮರ್ಥ್ಯಗಳಿಂದ ತಮ್ಮ ಸಂಸ್ಥೆಯನ್ನು ಪೈಪೋಟಿಯಲ್ಲಿದ್ದ ಇತರ ಹಲವಾರು ಪ್ರಮುಖ ಸಂಸ್ಥೆಗಳನ್ನು ಮೀರಿ ಬೆಳೆಸಿದವರು. ದರ್ಶನ್ ಪಟೇಲ್ ಯಾವುದೇ ಬ್ಯುಸಿನೆಸ್ - ಸಂಬಂಧಿತ ಅಥವಾ ಎಜುಕೇಶನ್ ಪ್ರೋಗ್ರಾಮ್‌ಗಳಿಗೆ ಹಾಜರಾಗಿ ತರಬೇತಿ ಪಡೆದಿಲ್ಲ, ಜೊತೆಗೆ ಅನುಭವ, ವೇತನಕ್ಕಾಗಿ ಯಾವುದೇ ಉದ್ಯೋಗ ಮಾಡಿರಲಿಲ್ಲ ಎಂಬುವುದು ಇಲ್ಲಿ ಉಲ್ಲೇಖನೀಯ. ಅದರೂ ಯಶಸ್ವಿ ಉದ್ಯಮಿಯಾಗಿ ಬೆಳೆದು ನಿಂತರು.

 ಪ್ರಸಿದ್ಧ ಭಾರತೀಯ ಬ್ರ್ಯಾಂಡ್‌ಗಳ ಹಿಂದಿರುವ ವ್ಯಕ್ತಿ ಇವರೇ ನೋಡಿ!

ದರ್ಶನ್ ಪಟೇಲ್ ಯಾರು?

ದರ್ಶನ್ ಪಟೇಲ್ ಅವರ ಮೂಲ ಪಶ್ಚಿಮ ಒಡಿಶಾ. ಗುಜರಾತ್‌ನ ಅಹಮದಾಬಾದ್‌ನಲ್ಲಿ ಜನಿಸಿದ ದರ್ಶನ್ ಅವರು ಬೆಳೆದಿದ್ದು ಸಂಬಲ್‌ಪುರದಲ್ಲಿ. ದರ್ಶನ್ ಪಟೇಲ್ ಮತ್ತು ಅವರ ಸಹೋದರರಾದ ಗಿರೀಶ್ ಮತ್ತು ದೇವೇಂದ್ರ ಅವರು ಪಾರಸ್ ಗ್ರೂಪ್ ಅನ್ನು ಸ್ಥಾಪಿಸಲು ಸಹಾಯ ಮಾಡಿದರು. ಪರಾಸ್ ಫಾರ್ಮಾ ಮತ್ತು ವಿನಿ ಕಾಸ್ಮೆಟಿಕ್ಸ್ ಸಂಸ್ಥಾಪಕ ದರ್ಶನ್ ಪಟೇಲ್ ನೈಜ ಗುಜರಾತಿ ಉದ್ಯಮಿಯಾಗಿದ್ದಾರೆ.

ಈ ಗುಜರಾತಿ ಉದ್ಯಮಿಯ ಸಮರ್ಪಣೆ ಮತ್ತು ಪ್ರಯತ್ನ ಮುಂದೆ, ಅದಾಗಲೇ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿದ್ದವರು ಸೋಲನ್ನು ಒಪ್ಪಿಕೊಂಡರು. ಇವರು 2010 ರಲ್ಲಿ ಫಾಗ್ ಡಿಯೋಡರೆಂಟ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದರು. ಆದರೆ ಅದರ ಮಾರಾಟಕ್ಕೆ ಸಾಕಷ್ಟು ಸವಾಲು ತೊಂದರೆಗಳಿದ್ದವು.

ಆದರೆ 53 ವರ್ಷದ ಉದ್ಯಮಿಯಾಗಿದ್ದ ದರ್ಶನ್ ಪಟೇಲ್ ಸೋಲನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. "ಫಾಗ್ " ಮಾರಾಟ ಮಾಡಿಯೇ ಸಿದ್ದ ಎಂಬ ಧೃಡ ಮನಸ್ಸು ಮಾಡಿದ ಅವರು ಗ್ರಾಹಕರ ನಾಡಿಮಿಡಿತವನ್ನು ಅರ್ಥ ಮಾಡಿಕೊಳ್ಳುವಲ್ಲಿ ಪರಿಣಿತರಾಗಿದ್ದರು. ಮೂವ್ (Move), ಇಚ್ ಗಾರ್ಡ್ (Itch Guard) ಮತ್ತು ಕ್ರ್ಯಾಕ್ (Crack) ಸೇರಿದಂತೆ ಅವರು ಮಾರುಕಟ್ಟೆಗೆ ಪರಿಚಯಿಸಿದ ಹೊಸ ಹೊಸ ಉತ್ವನ್ನಗಳ ಮೂಲಕ ಸರಿಸುಮಾರು 25 ವರ್ಷಗಳಲ್ಲಿ ಪ್ಯಾರಾಸ್ ಫಾರ್ಮಾವನ್ನು ದೊಡ್ಡ ಸಂಸ್ಥೆಯಾಗಿ ಪರಿವರ್ತಿಸಿದರು.

ತಮ್ಮ ಗ್ರಾಹಕರಿಗೆ ಯಾವುದು ಅಗತ್ಯ ಎಂದು ತಿಳಿದ ದರ್ಶನ್ ಪಟೇಲ್ ಅವರಿಗೆ ನೇರವಾಗಿ ಪ್ರಾಯೋಗಿಕ ಉತ್ಪನ್ನಗಳನ್ನು ಪರಿಚಯಿಸುತ್ತಿದ್ದರು. ಗ್ರಾಹಕರ ನಂಬಿಕೆಯನ್ನು ನಜೂಕು ಮಾತುಗಳಿಂದ ಅಥವಾ ಸುಳ್ಳು ಜಾಹೀರಾತುಗಳಿಂದ ಸಂಪಾದಿಸಲಾಗುವುದಿಲ್ಲ ಎಂದು ಅವರು ಅರ್ಥಮಾಡಿಕೊಂಡಿದ್ದರು.

ಒಮ್ಮೆ ದರ್ಶನ್ ಪಟೇಲ್ ಅವರು ಮುಂಬೈನ ಚರ್ಚ್‌ಗೇಟ್ ನಿಲ್ದಾಣದಲ್ಲಿದ್ದಾಗ ಅಲ್ಲಿ ಹೆಚ್ಚಿನ ಮಹಿಳೆಯರ ಹಿಮ್ಮಡಿಗಳಲ್ಲಿ ಬಿರುಕು, ಒಡೆದ ಹಿಮ್ಮಡಿ ಇರುವುದನ್ನು ಗಮನಿಸಿದರು. ಇದನ್ನು ನೋಡಿದ ಅವರಿಗೆ ಒಡೆದ ಹಿಮ್ಮಡಿಗಳನ್ನು ಸರಿಪಡಿಸುವ ಉತ್ಪನ್ನದ ಕಲ್ಪನೆಗಳು ಅವರ ತಲೆಯಲ್ಲಿ ರೂಪುಗೊಳ್ಳಲು ಪ್ರಾರಂಭವಾಗಿತ್ತು.

ಉದ್ಯಮಿ ದರ್ಶನ್ ಪಟೇಲ್ ಅವರು ಬೋರ್ಡ್ ರೂಂನಲ್ಲಿ ಕುಳಿತು ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟವರು. ಅವರ ಸಂಸ್ಥೆ ವಿನಿ ಕಾಸ್ಮೆಟಿಕ್ಸ್ ಈಗ 1.2 ಶತಕೋಟಿ ಡಾಲರ್‌ಗಿಂತ ಹೆಚ್ಚು ಮೌಲ್ಯದ್ದಾಗಿದ್ದು, ಆದರೆ ಅದನ್ನು 2010 ರಲ್ಲಿ 3260 ಕೋಟಿ ರೂಪಾಯಿಗಳಿಗೆ ಪ್ಯಾರಾಸ್ ಫಾರ್ಮಾಸ್ಯುಟಿಕಲ್ಸ್‌ಗೆ ಮಾರಾಟ ಮಾಡಿದರು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+