ಪರ್ಲ್ ಕಪೂರ್ ಅವರು ಝೈಬರ್ 365 ಎನ್ನುವ ವೆಬ್3 ಸೈಬರ್ ಸೆಕ್ಯೂರಿಟಿ ಸ್ಟಾರ್ಟಪ್‌ನ ಸ್ಥಾಪಕರು ಹಾಗೂ ಸಿಇಒ ಆಗಿದ್ದಾರೆ. ಈ ಕಂಪನಿಯು 2023ರಲ್ಲಿ ಸ್ಥಾಪನೆಯಾಗಿದ್ದು, ಕೇವಲ ಮೂರು ತಿಂಗಳಲ್ಲಿ ಯುನಿಕಾರ್ನ್ ಆಗಿದೆ. ಇತ್ತೀಚೆಗೆ ಈ ಕಂಪನಿಯು 1.2 ಬಿಲಿಯನ್ (9840 ಕೋಟಿ ರೂಪಾಯಿ) ಫಂಡ್ ಅನ್ನು 100 ಮಿಲಿಯನ್ ಡಾಲರ್ ಮೌಲ್ಯದಲ್ಲಿ SRAM ಮತ್ತು MRAM ಗ್ರೂಪ್‌ನಿಂದ ಸಂಗ್ರಹಿಸಿದೆ.
Zyber 365 ಕಂಪನಿಯನ್ನು ಕಪೂರ್ ಹಾಗೂ ನೈತಿಕ ಹ್ಯಾಕರ್ ಸನ್ನಿ ವಘೇಲಾ(ಸಿಪಿಒ) ಅವರು 2023ರ ಮೇ ನಲ್ಲಿ ಸ್ಥಾಪಿಸಿದ್ದರು. ಕಪೂರ್ ಅವರು ವೆಬ್3 OS ನ ಸೃಷ್ಟಿಕರ್ತರಾಗಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ಅವರು ಸಂಸ್ಥೆಯ ದೈನಂದಿನ ಕಾರ್ಯಚಟುವಟಿಕೆಗಳ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಾರೆ. ಪರ್ಲ್ ಕಪೂರ್ ಅವರು ಕ್ವೀನ್ ಮೇರಿ ಯೂನಿವರ್ಸಿಟಿ ಆಫ್ ಲಂಡನ್‌ನಿಂದ ಎಂಎಸ್‌ಸಿ ಇನ್ವೆಸ್ಟ್‌ಮೆಂಟ್ ಬ್ಯಾಂಕಿಂಗ್(ಸಿಎಫ್‌ಎ ಪಾಥ್‌ವೇ)ನಲ್ಲಿ ಪದವಿ ಪಡೆದಿದ್ದಾರೆ.

Zyber 365 ಅನ್ನು ಪ್ರಾರಂಬಿಸುವ ಮೊದಲು ಕಪೂರ್ ಎಎಂಪಿಎಂ ಸ್ಟೋರ್‌ನಲ್ಲಿ ಸುಮಾರು ಎರಡು ವರ್ಷಗಳ ಕಾಲ ಹಣಕಾಸು ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ. ಅವರು ಸುಮಾರು ಒಂದೂವರೆ ವರ್ಷಗಳ ಕಾಲ ಆಂಟಿಯರ್ ಸಲ್ಯೂಷನ್ಸ್‌ನಲ್ಲಿ ವ್ಯಾಪಾರ ಸಲಹೆಗಾರರಾಗಿಯೂ ಕೆಲಸ ಮಾಡಿದ್ದಾರೆ. ಅದಾದ ಬಳಿಕ 2022ರ ಫೆಬ್ರವರಿಯಲ್ಲಿ ಪೇ ಟೆಕ್ನಾಲಜೀಸ್ ಪ್ರೈವೆಟ್ ಲಿಮಿಟೆಡ್ ಅನ್ನು ಸ್ಥಾಪಿಸಿದ್ದರು.
ಝೈಬರ್ 365 ಭಾರತದಲ್ಲಿ ಕಾರ್ಯಾಚರಣೆಯ ನೆಲೆಯನ್ನು ಹೊಂದಿದ್ದರೂ ಲಂಡನ್‌ನಲ್ಲಿ ಪ್ರಧಾನ ಕಚೇರಿ ಇದೆ. ಆ ಮೂಲಕ ಭಾರತವನ್ನು ತಮ್ಮ ಕಾರ್ಯಾಚರಣೆಯ ಕೇಂದ್ರವನ್ನಾಗಿ ಮಾಡಲು ಚಿಂತನೆ ನಡೆಸಿದ್ದಾರೆ. ಝೈಬರ್ 365 ವಿಕೇಂದ್ರೀಕೃತ ಹಾಗೂ ಸೈಬರ್ ಸೆಕ್ಯೂರ್ ಆಗಿರುವ ಆಪರೇಟಿಂಗ್ ಸಿಸ್ಟಮ್ ಅನ್ನು ನೀಡುತ್ತದೆ.
ಕಪೂರ್ ಅವರು ತಮ್ಮ ವ್ಯಾಪಾರದ ಬೆಳವಣಿಗೆ, ಬಿಸಿನೆಸ್ ಮೌಲ್ಯ ಹಾಗೂ ತಂಡ ರಚನೆಯತ್ತ ಗಮನಹರಿಸುತ್ತಿದ್ದಾರೆ. ಎಐ, ಸೈಬರ್ ಸೆಕ್ಯೂರಿಟಿ ಹಾಗೂ ಬ್ಲಾಕ್‌ಚೈನ್‌ನಂಥ ತಂತ್ರಜ್ಞಾನ ಆವಿಷ್ಕಾರವು ತಮ್ಮ ಉದ್ಯಮ ಬೆಳವಣಿಗೆ ಸಾಕಷ್ಟು ವಿಪುಲ ಅವಕಾಶವನ್ನು ತೆರೆದಿಡಬಹುದು ಎನ್ನುವ ವಿಶ್ವಾಸದಲ್ಲಿದ್ದಾರೆ.
100 ಮಿಲಿಯನ್ ಅಮೆರಿಕನ್ ಡಾಲರ್ ಫಂಡ್ ಸಂಗ್ರಹವು ವೆಬ್3, ಎಐ ಪ್ರಾಡೆಕ್ಟ್ಸ್‌ಅಭಿವೃದ್ಧಿಪಡಿಸುವುದಕ್ಕೆ ನಮ್ಮ ಉತ್ಪನ್ನಗಳನ್ನು ಸಕಲ ರೀತಿಯಿಂದ ಸುಸಜ್ಜಿತಗೊಳಿಸುವುದಕ್ಕೆ ಅನುಕೂಲವಾಗಿದೆ. ಈ ಹೂಡಿಕೆಯು ನಮ್ಮ ಕಂಪನಿಯ ಬೆಳವಣಿಗೆಗೆ ಮಾತ್ರವಲ್ಲ ವೆಬ್ 3 ಇಕೊಸಿಸ್ಟಮ್‌ನ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎನ್ನುತ್ತಾರೆ ಝೈಬರ್ 365 ಸಹ ಸಂಸ್ಥಾಪಕ ವಘೇಲಾ.


Click it and Unblock the Notifications