ದುಬಾರಿ ಕಾರು ಕೊಳ್ಳುವುದು ಹಾಗೂ ತಮ್ಮ ವಾಹನಗಳ ಸಂಗ್ರಹದಲ್ಲಿ ಇಂತಹದ್ದೇ ಐಷಾರಾಮಿ ಕಾರುಗಳು ಇರಬೇಕು ಎನ್ನುವುದು ಸೂಪರ್‌ಕಾರ್ ಪ್ರೇಮಿಗಳ ಬಯಕೆಯಾಗಿರುತ್ತದೆ. ಇವರು ಆಧುನಿಕ, ದುಬಾರಿ ಹಾಗೂ ಐಷಾರಾಮಿ ಕಾರು ಸಂಗ್ರಹವನ್ನು ನಿರ್ವಹಿಸಲೆಂದೇ ಮಿಲಿಯನ್‌ಗಟ್ಟಲೆ ಡಾಲರ್‌ಗಳನ್ನು ಇದಕ್ಕಾಗಿ ಖರ್ಚು ಮಾಡುತ್ತಾರೆ. ಇಂತವರಲ್ಲಿ ಒಬ್ಬರು ಮಯೂರ್ ಶ್ರೀ.
ಭಾರತೀಯ ಮೂಲದವರಾಗಿರುವ, ಸೂಪರ್‌ಕಾರ್ ಕ್ರೇಜ್ ಹೊಂದಿರುವ ಮಯೂರ್ ಅವರ ಬಳಿ ರೋಲ್ಸ್ ರಾಯ್ಸ್, ಪೋರ್ಷೆ, ರೇಂಜ್ ರೋವರ್ ಮತ್ತು ಇತರ ಬ್ರ್ಯಾಂಡ್‌ನ ವಾಹನಗಳ ಒಡೆಯರಾಗಿದ್ದಾರೆ. ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಾಗಿರುವ ಮಯೂರ್ ಶ್ರೀ ಅವರ ಬಳಿ ಬುಗಾಟ್ಟಿ ಚಿರೋನ್ ಎಂಬ ಸೂಪರ್ ಕಾರ್ ಇದ್ದು, ಇದರ ಬೆಲೆ ಕೇಳಿದ್ರೆ ನೀವು ಬೆರಗಾಗೋದು ಖಂಡಿತಾ.

ಹೌದು ಇವರ ಬಳಿ ಇರುವ ಸೂಪರ್ ಕಾರ್ ಬುಗಾಟಿ ಚಿರೋನ್ ಬೆಲೆ ಬರೋಬ್ಬರಿ 21 ಕೋಟಿ ರೂಪಾಯಿ . ವರದಿಯ ಪ್ರಕಾರ, ಬುಗಾಟ್ಟಿ ಆಟೋಮೊಬೈಲ್‌ನ ಬೆಲೆ ಪ್ರಾರಂಭವಾಗೋದೇ 11-12 ಕೋಟಿ ರೂಪಾಯಿಗಳಿಂದ.! ಇನ್ನು ಬುಗಾಟಿ ಮಾಲೀಕರಾದವರೂ ಹೆಚ್ಚಿನವರು 10-12 ಕೋಟಿ ರೂಪಾಯಿ ಮೌಲ್ಯದ ಕಾರುಗಳಷ್ಟೇ ಹೊಂದಿದ್ದಾರೆ.
ಮಯೂರ್ ಶ್ರೀ ಯಾರು?
ಪ್ರಪಂಚದಲ್ಲಿ ಕೇವಲ 100 ಜನರು ಪೈಕಿ ಮಾತ್ರ ಬುಗಾಟ್ಟಿ ಚಿರೋನ್ ಇದ್ದು ಅವರಲ್ಲಿ ಮಯೂರ್ ಶ್ರೀ ಕೂಡ ಒಬ್ಬರಾಗಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಮಯೂರ್ ಶ್ರೀ ಅವರ ಗ್ಯಾರೇಜ್‌ನಲ್ಲಿ ಚಿರೋನ್ ಸೇರಿದಂತೆ ಕಾರುಗಳ ಅದ್ಭುತ ಸಂಗ್ರಹವೇ ಅವರಲ್ಲಿದೆ. ಅವರು ಅಮೆರಿಕಕ್ಕೆ ತೆರಳುವ ಮೊದಲು ಆಫ್ರಿಕಾದಲ್ಲಿ ನೆಲೆಸಿದ್ದರು. ಅಲ್ಲಿ ಅವರು ಸಾಕಷ್ಟು ವ್ಯವಹಾರಗಳನ್ನು ಹೊಂದಿದ್ದಾರೆ.
ನವಭಾರತ್ ಟೈಮ್ಸ್ ಪ್ರಕಾರ ಬುಗಾಟ್ಟಿ ಚಿರೋನ್ 8.0-ಲೀಟರ್ ಕ್ವಾಡ್-ಟರ್ಬೋಚಾರ್ಜ್ಡ್ W16 ಎಂಜಿನ್ ಹೊಂದಿರುವ ಅತ್ಯಂತ ಶಕ್ತಿಶಾಲಿ ಸೂಪರ್ ಕಾರ್ ಆಗಿದ್ದು, ಇದು 1479 ಗರಿಷ್ಠ ಅಶ್ವಶಕ್ತಿ ಮತ್ತು 1600 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಹೊರಹಾಕುತ್ತದೆ. ಬುಗಾಟ್ಟಿ ಚಿರೋನ್ ಕೇವಲ 2.3 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 100 ಕಿಲೋಮೀಟರ್ ವೇಗವನ್ನು ಪಡೆದುಕೊಳ್ಳಬಹುದು ಹಾಗೂ ಗರಿಷ್ಠ ಕಾರಿನ ವೇಗ ಗಂಟೆಗೆ 420 ಕಿಲೋಮೀಟರ್ ಹೊಂದಿದೆ.
ನವಭಾರತ್ ಟೈಮ್ಸ್ ವರದಿ ಮಾಡಿರುವ ಪ್ರಕಾರ ಮಯೂರ್ ಶ್ರೀ ಅವರು 21 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಬುಗಾಟ್ಟಿ ಚಿರಾನ್ ನ ಒಡೆಯಲಾಗಿರುವ ಏಕೈಕ ಭಾರತೀಯರಾಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಮಯೂರ್ ಶ್ರೀ ಅವರು ಈ ಲಕ್ಷುರಿ ಸೂಪರ್ ಕಾರನ್ನು ಅವರ ತಂದೆಗೆ ಉಡುಗೊರೆಯಾಗಿ ನೀಡಲು ಖರೀದಿಸಿದ್ದಾರೆ. ಅವರು ಸಂಗ್ರಹದಲ್ಲಿ ರೋಲ್ಸ್ ರಾಯ್ಸ್, ಲಂಬೋರ್ಘಿನಿ, ಆಸ್ಟನ್ ಮಾರ್ಟಿನ್, ಪೋರ್ಷೆ ಮತ್ತು ಮೆಕ್ಲಾರೆನ್‌ನಂತಹ ಪ್ರಪಂಚದಾದ್ಯಂತದ ಇರುವ ಪ್ರಮುಖ ಐಷಾರಾಮಿ ವಾಹನಗಳ ಒಡೆಯರಾಗಿದ್ದಾರೆ.


Click it and Unblock the Notifications