ನೂರಾರು ಶಾಲೆಗಳು, ಕಾಲೇಜುಗಳು ಹಾಗೂ ಕೋಚಿಂಗ್ ತರಗತಿಗಳನ್ನು ನಡೆಸುತ್ತಿರುವ ಹೈದರಾಬಾದ್ ಮೂಲದ ನಾರಾಯಣ ಸಂಸ್ಥೆಯು ನಸ್ಪಿರಾ ಮ್ಯಾನೇಜ್‌ಮೆಂಟ್ ಸರ್ವೀಸಸ್ ಮೊರ್ಗನ್ ಸ್ಟಾನ್ಲಿ ಅಂಡ್ ಬನಿಯನ್ ಟ್ರೀಯಲ್ಲಿನ ಷೇರುಗಳನ್ನು ಖರೀದಿಸಲು ಯೋಚಿಸುತ್ತಿದೆ. ಈ ಡೀಲ್ ಸುಮಾರು 1400 ಕೋಟಿ ರೂಪಾಯಿ ಮೊತ್ತದ್ದು ಎಂದು ವರದಿಯಾಗಿದೆ.
ಈ ಎರಡು ಕಂಪನಿಗಳು 2018ರಲ್ಲಿ ಸುಮಾರು 75 ಮಿಲಿಯನ್ ಹೂಡಿಕೆ ಮಾಡಿದ್ದು, ಶೇಕಡ 20ರಷ್ಟು ಷೇರುಗಳನ್ನು ಪಡೆದುಕೊಂಡಿದೆ. ಈ ಕಂಪನಿಯನ್ನು ಪಿ ನಾರಾಯಣ ಅವರು ಒಂದು ಕೋಚಿಂಗ್ ಸೆಂಟರ್‌ನೊಂದಿಗೆ ಪ್ರಾರಂಭಿಸಿದ್ದರು. ಈಗ ದೇಶದ 23 ರಾಜ್ಯಗಳಲ್ಲಿ 750 ಶಾಲೆಗಳು, ಕಾಲೇಜುಗಳು ಹಾಗೂ ಕೋಚಿಂಗ್ ಸೆಂಟರ್‌ಗಳನ್ನು ಹೊಂದಿವೆ. ಈ ವಿದ್ಯಾ ಸಂಸ್ಥೆಯು 50000 ಶಿಕ್ಷಕರಿಗೆ ಉದ್ಯೋಗವನ್ನು ಒದಗಿಸಿದೆ. ಹಾಗಾದರೆ ನಾರಾಯಣ ಅವರು ಯಾರು ತಿಳಿಯೋಣ ಮುಂದೆ ಓದಿ...

ನಾರಾಯಣ ಯಾರು ತಿಳಿಯಿರಿ
ನಾರಾಯಣವು ದೇಶದಲ್ಲೇ ಅತಿದೊಡ್ಡ ಟಾಪ್ 10 ಸ್ಕೂಲ್ ನೆಟ್‌ವರ್ಕ್ ಸಂಸ್ಥೆಯಾಗಿದೆ. ಈ ಸಂಸ್ಥೆಯ ಹೆಚ್ಚಿನ ಆದಾಯವು 11 ನೇ ತರಗತಿ ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಿಂದ ಬರುತ್ತದೆ. ಡಾ. ನಾರಾಯಣ ಅವರು ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಮತ್ತು ಚಿನ್ನದ ಪದಕ ವಿಜೇತರಾಗಿದ್ದಾರೆ. ನಂತರ ಎಸ್‌ವಿ ವಿಶ್ವವಿದ್ಯಾಲಯದಿಂದ ಸಂಖ್ಯಾಶಾಸ್ತ್ರದಲ್ಲಿ ಪಿಎಚ್‌ಡಿ ಮಾಡಿದ್ದಾರೆ.
ನಾರಾಯಣ ಅವರು ಗಣಿತದಲ್ಲಿ ಕೋಚಿಂಗ್ ಶಿಕ್ಷಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ನಂತರ ಅವರು ಶಾಲೆಗಳು, ಕಾಲೇಜುಗಳು ಹಾಗೂ ಆಸ್ಪತ್ರೆಗಳನ್ನು ತೆರಯಲು ಪ್ರಾರಂಭಿಸಿದ್ದಾರೆ. ನಾರಾಯಣ ಅವರು ರಾಜಕಾರಣಿ ಕೂಡ ಆಗಿದ್ದು, ಆಂಧ್ರಪ್ರದೇಶದ ಮಾಜಿ ಸಚಿವ ಹಾಗೂ ಟಿಡಿಪಿ ಸದ್ಯರಾಗಿದ್ದಾರೆ.
2019ರ ಚುನಾವಣೆಯಲ್ಲಿ ಅವರು ಹಾಗೂ ಅವರ ಪತ್ನಿಯು 668 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ. ಅವರು ನೀಡಿರುವ ಅಫಿದವಿತ್ ಪ್ರಕಾರ ಅವರ ಆಸ್ತಿ 274.2 ಕೋಟಿ ರೂಪಾಯಿ ಹಾಗೂ ಅವರ ಪತ್ನಿಯು 397 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಅವರು ತಮ್ಮ ವೃತ್ತಿಯನ್ನು ಸಾರ್ವಜನಿಕ ಜೀವನ ಎಂದು ಹೇಳಿಕೊಂಡಿದ್ದಾರೆ. ಅವರ ಚರಾಸ್ತಿ 73.57 ಕೋಟಿ ರೂಪಾಯಿ ಗಳಾಗಿದ್ದರೆ, ಅವರ ಸ್ಥಿರಾಸ್ತಿ ಮೌಲ್ಯ 198 ಕೋಟಿ ರೂಪಾಯಿ ಆಗಿದೆ.
ಶಿಕ್ಷಕರಾಗಿ ಉದ್ಯಮ ಆರಂಭಿಸಿದವರಿವರು
ಶಿಕ್ಷಕರು ಒಂದು ಉದ್ಯಮ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ ಹಲವಾರು ನಿದರ್ಶನಗಳು ನಮ್ಮ ಮುಂದಿದೆ. ಟೀಚರ್ ಆಗಿದ್ದ ನಿಕಿತಾ ಪ್ರಸಾದ್ ಕೇವಲ ಮೂರು ವರ್ಷದಲ್ಲಿ 1093 ಕೋಟಿ ರೂಪಾಯಿ ಮೌಲ್ಯದ ಕಂಪನಿ ಸ್ಥಾಪಿಸಿದ್ದಾರೆ. ಸಿಲ್ವರ್ ಜ್ಯುವೆಲ್ಲರಿ ಬ್ರಾಂಡ್ ಜೀವಾ ಕಂಪನಿಯು ಪ್ರೇಮ್‌ಜಿ ಇನ್‌ವೆಸ್ಟ್ ಫರ್ಮ್‌ನಿಂದ 200 ಕೋಟಿ ರೂಪಾಯಿ ಹೂಡಿಕೆಯನ್ನು ಪಡೆದುಕೊಂಡಿದೆ. ಈ ಕಂಪನಿಯನ್ನು ನಿಕಿತಾ ಪ್ರಸಾದ್ ಹಾಗೂ ಇತರೆ ಇಬ್ಬರು ಸೇರಿಕೊಂಡು ಸ್ಥಾಪಿಸಿದ್ದಾರೆ.
2021- 2022ರ ಹಣಕಾಸು ವರ್ಷದಲ್ಲಿ ನಿಕಿತಾ ಪ್ರಸಾದ್ ಅವರ ಕಂಪನಿಯ ಆದಾಯ 170 ಕೋಟಿ ರೂಪಾಯಿ ಆಗಿದೆ. 2023ನೇ ವರ್ಷದಲ್ಲಿ ಅಂದಾಜು ರನ್ ರೇಟ್ 220 ಕೋಟಿ ರೂಪಾಯಿ ಆಗಿದೆ. ನಿಕಿತಾ ಪ್ರಸಾದ್ ಅವರು ಚೆನ್ನೈನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿಯಿಂದ ಪದವೀಧರರಾಗಿದ್ದಾರೆ. ಅವರು ಕಂಪನಿಯೊಂದರ ಆಭರಣ ಡಿಸೈನ್ ವಿಭಾಗದಲ್ಲಿ ಇಂಟರ್ನ್ ಆಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದರು.


Click it and Unblock the Notifications