ಅಲಖ್ ಪಾಂಡೆ ಅವರೊಬ್ಬರು ಭೌತಶಾಸ್ತ್ರ ಪ್ರಾಧ್ಯಾಪಕರು. ಆದರೆ ಅವರು ಯೂಟ್ಯೂಬ್ ಚಾನೆಲ್ ಪ್ರಾರಂಭಿಸುವ ಮೂಲಕ ಮಿಲಿಯನೇರ್ ಆಗಿದ್ದಾರೆ. ಯೂಟ್ಯೂಬ್ ಅಧ್ಯಾಪಕನಾಗಲು ಹೊರಟಿದ್ದು, ಅವರ ಬದುಕಿಗೆ ದೊಡ್ಡ ತಿರುವನ್ನೇ ನೀಡಿದೆ. ಈಗ ಅವರು 61 ಯೂಟ್ಯೂಬ್ ಚಾನೆಲ್ ಅನ್ನು ಹೊಂದಿದ್ದು, 31 ಮಿಲಿಯನ್‌ಗೂ ಹೆಚ್ಚು ಚಂದಾದಾರರನ್ನು ಹೊಂದಿದೆ.
ಪಾಂಡೆ ಅವರು ತಮ್ಮ ಆರಂಭಿಕ ಫಂಡ್ ಸಂಗ್ರಹದೊಂದಿಗೆ 1.1 ಬಿಲಿಯನ್ ಡಾಲರ್ (9000 ಕೋಟಿ ರೂಪಾಯಿ) ಅನ್ನು ಆಸ್ತಿ ಮೌಲ್ಯ ಹೊಂದಿದ್ದಾರೆ. ಅವರ ಕಂಪನಿಯು ಪ್ರಾರಂಭದಿಂದಲೂ ಲಾಭವನ್ನು ಗಳಿಸುತ್ತಿದೆ. ಅದು 2021, 2022 ಮತ್ತು 2023ರಲ್ಲಿ ಅವರ ಲಾಭವು ಕ್ರಮವಾಗಿ 9.4 ಕೋಟಿ ರೂಪಾಯಿ, 133.7 ಕೋಟಿ ರೂಪಾಯಿ ಮತ್ತು 108 ಕೋಟಿ ರೂಪಾಯಿ ಆಗಿದೆ.

ಅಲಖ್ ಪಾಂಡೆ ಅವರು ನೋಯ್ಡಾದ ಸೆಕ್ಟರ್ 62 ರಲ್ಲಿ ತಮ್ಮ ಕಚೇರಿಯನ್ನು ಹೊಂದಿದ್ದಾರೆ. ಅವರ ಕಂಪನಿಯು ಭಾರತದಲ್ಲಿನ ಏಕೈಕ ಲಾಭದಾಯಕ ಎಜ್ಯು- ಟೆಕ್ ಕಂಪನಿಯಾಗಿದೆ. ಅವರ ಪ್ರತಿಸ್ಪರ್ಧಿಗಳು ಸಾವಿರಾರು ಮಂದಿಯನ್ನು ವಜಾಗೊಳಿಸಿದಾಗಲೂ ಅವರ ಕಂಪನಿಗಳು ಮಾತ್ರ ಯಾವುದೇ ಉದ್ಯೋಗಿಯನ್ನು ವಜಾಗೊಳಿಸಿರಲಿಲ್ಲ.
ಅಲಖ್ ಪಾಂಡೆ ಅವರು ಜೀವನದಲ್ಲಿ ಸಾಕಷ್ಟು ಸಂಕಷ್ಟ ಹಾಗೂ ಬಡತನವನ್ನು ಅನುಭವಿಸಿದ್ದರು. ಕುಟಂಬದವರ ಬಳಿಯೂ ಹಣವಿರಲಿಲ್ಲ. ಅಲಖ್ ಅವರು ಕೂಡ ತಮ್ಮ ಬಳಿಯಿದ್ದ ಹಣವನ್ನು ಬಹಳ ಯೋಚನೆ ಮಾಡಿಯೇ ಖರ್ಚು ಮಾಡುತ್ತಿದ್ದರು. ಮಿತ ವ್ಯಯದ ಜೀವನವು ಅವರನ್ನು ಉದ್ಯಮಿಯಾಗಿಯೂ ಯಶಸ್ವಿಯಾಗುವುದಕ್ಕೆ ಗೈಡ್ ಮಾಡುತ್ತಿದೆ.
ಬೆಳೆಯುತ್ತಿದ್ದಂತೆ ಪ್ರತಿ ಪೈಸೆಯೂ ಅವರ ಪಾಲಿಗೆ ಡಾಲರ್ ಆಗಿದೆ. ಅವರು ಹಣವನ್ನು ವ್ಯಯಿಸುವುದರಿಂದ ಬೆಳವಣಿಗೆ ಸಾಧಿಸುವುದಲ್ಲ ಎನ್ನುವುದು ಅವರ ನಂಬಿಕೆಯಾಗಿರುವುದಾಗಿ ಫೋರ್ಬ್ಸ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಟೀಚಿಂಗ್ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಎಂಜಿನಿಯರಿಂಗ್ ಕಾಲೇಜು ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟಿದ್ದರು. ಶಾಲಾ ದಿನಗಳಿಂದಲೂ ಟ್ಯೂಷನ್ ಟೀಚರ್ ಆಗಿದ್ದರು. ಅವರು ತಮ್ಮ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದ ನಂತರ ಹಣ ಬರಲು ಪ್ರಾರಂಭವಾಗಿತ್ತು. ನಂತರದಲ್ಲಿ ಆದಾಯವು ತಿಂಗಳಿಗೆ 40000 ರೂಪಾಯಿ ಬರಲಾರಂಭಿಸಿದ್ದು, ನಂತರದಲ್ಲಿ ಅದು 2 ಲಕ್ಷ ರೂಪಾಯಿ ಆಗಿತ್ತು.
ಆದರೆ ಅವರ ಜೀವನ ಶೈಲಿ ಮಾತ್ರ ಹಾಗೆಯೇ ಇತ್ತು. ಈ ನಡುವೆ ಅವರ ಕುಟುಂಬವು ಪ್ರಯಾಗ್‌ರಾಜ್‌ನಲ್ಲಿ ದುಬಾರಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಅವರ ಕಂಪನಿಯು ಯುನಿಕಾರ್ನ್ ಆದ ನಂತರ ಎಲ್ಲವೂ ಬದಲಾವಣೆ ಕಂಡಿತ್ತು. ಕಳೆದ ವರ್ಷ ಅವರು 4400 ಕೋಟಿ ರೂ. ಆಸ್ತಿ ಮೌಲ್ಯದೊಂದಿಗೆ ಪ್ರಯಾಗ್‌ರಾಜ್‌ನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.
ಕಂಪನಿಯು 2024ಕ್ಕೆ 2500 ಕೋಟಿ ರೂಪಾಯಿ ಆದಾಯ ದಾಖಲಿಸುವ ನಿರೀಕ್ಷೆಯಿದೆ. ಹಳೇಯ ಟ್ಯೂಷನ್ ಶಿಕ್ಷಕರ ಸಂಸ್ಥೆಯು ಹಲವು ಕಂಪನಿಗಳನ್ನು ಖರೀದಿಸಿದೆ. ಅವರು ಕೇರಳ ಮೂಲದ Xylem ಎಜ್ಯು-ಟೆಕ್ ಕಂಪನಿಯ ಶೇ.50 ರಷ್ಟು ಷೇರುಗಳನ್ನು ಖರೀದಿಸಿದೆ. ಅವರು Free Co, ಓನ್ಲಿ ಐಎಎಸ್ ಹಾಗೂ Bothra Classes ಸಂಸ್ಥೆಯಲ್ಲಿಯೂ ಹೂಡಿಕೆ ಮಾಡಿದ್ದಾರೆ. ಈ ವರ್ಷದಲ್ಲಿ ಅವರು ಪತ್ರಕರ್ತೆ ಶಿವಾನಿ ದುಬೆ ಅವರನ್ನು ವಿವಾಹವಾಗಿದ್ದಾರೆ.


Click it and Unblock the Notifications