ವಾದಿಲಾಲ್ ಗಾಂಧಿ ಐಸ್‌ಕ್ರೀಂ ಭಾರತದಲ್ಲಿ ಮನೆಮಾತಾಗಿದ್ದು, ದೇಶದಲ್ಲೇ ಅತ್ಯಂತ ದೊಡ್ಡ ಐಸ್‌ಕ್ರೀಂ ಕಂಪನಿಯಾಗಿದೆ. ಜತೆಗೆ ಸಾವಿರಾರು ಕೋಟಿ ರೂಪಾಯಿಗಳ ಆಸ್ತಿ ಮೌಲ್ಯವನ್ನು ಹೊಂದಿದೆ. ಆದರೆ ಈ ಜನಪ್ರಿಯ ಐಸ್‌ಕ್ರೀಂ ಬ್ರಾಂಡ್ 1907ರಲ್ಲಿ ಸಣ್ಣ ಗಲ್ಲಿಯ ಸೋಡಾ ಶಾಪ್‌ನಲ್ಲಿ ಹುಟ್ಟಿಕೊಂಡಿತ್ತು ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ. ವಾದಿಲಾಲ್ ಐಸ್‌ಕ್ರೀಂ ಬ್ರಾಂಡ್ ವಾದಿಲಾಲ್ ಗಾಂಧಿ ಅವರ ಸ್ಥಾಪನೆಯೊಂದಿಗೆ ಪ್ರಾರಂಭವಾಗಿದೆ.
ವಾದಿಲಾಲ್ ಗಾಂಧಿ ಅವರು ಸ್ವಾತಂತ್ರ್ಯ ಪೂರ್ವದಲ್ಲೇ ಅಂದರೆ 1907ರಲ್ಲಿ ಸಣ್ಣ ಸೋಡಾ ಅಂಗಡಿಯಲ್ಲಿ ಪ್ರಾರಂಭಿಸಿದ್ದರು. ಮಧ್ಯಮ ಕುಟುಂಬದಿಂದ ಬಂದ ವಾದಿಲಾಲ್ ಗಾಂಧಿ ಅವರು ಅಹಮದಾಬಾದ್‌ನಲ್ಲಿ ಚಿಕ್ಕ ಸೋಡಾ ಅಂಗಡಿ ಇಟ್ಟುಕೊಂಡಿದ್ದರು. ಅನಿರೀಕ್ಷಿತವಾಗಿ ವಾದಿಲಾಲ್ ಗಾಂಧಿ ಅವರ ಸೋಡಾ ಶಾಪ್ ಗುಜರಾತ್‌ನಾದ್ಯಂತ ಜನಪ್ರಿಯತೆ ಪಡೆಯಲಾರಂಭಿಸಿತು.

ರಾಜ್ಯದೆಲ್ಲೆಡೆ ಸೋಡಾ ಜತೆ ಐಸ್‌ಕ್ರೀಂ ಸೇರಿಸಿ ಮಾರಾಟ
ಆ ಮೂಲಕ ರಾಜ್ಯದೆಲ್ಲೆಡೆ ಸೋಡಾ ಜತೆ ಐಸ್‌ಕ್ರೀಂ ಸೇರಿಸಿ ಮಾರಾಟ ಮಾಡುತ್ತಿದ್ದರು. 1926ರಲ್ಲಿ ವಾದಿಲಾಲ್ ಗಾಂಧಿ ತನ್ನ ಮೊದಲ ಐಸ್‌ಕ್ರೀಂ ಔಟ್‌ಲೆಟ್ ಅನ್ನು ಪ್ರಾರಂಭಿಸಿತ್ತು. ನಂತರದಲ್ಲಿ ಈ ಐಸ್‌ಕ್ರೀಂ ಬಿಸಿನೆಸ್ ಅನ್ನು ವಾದಿಲಾಲ್ ಗಾಂಧಿ ಅವರು ತಮ್ಮ ಪುತ್ರ ರಾಂಚೋಡ್ ಲಾಲ್ ಗಾಂಧಿ ಅವರಿಗೆ ಹಸ್ತಾಂತರಿಸಲಾಯಿತು. ಅವರು ತಮ್ಮ ಕುಟುಂಬ ವ್ಯಾಪಾರವನ್ನು ಮತ್ತಷ್ಟು ವಿಸ್ತರಿಸುವುದಕ್ಕೆ ಸ್ವಾತಂತ್ರ್ಯ ಪೂರ್ವದಲ್ಲೇ ಜರ್ಮನಿಯಿಂದ ಐಸ್‌ಕ್ರೀಂ ಮೆಷಿನ್ ಅನ್ನು ಆಮದು ಮಾಡಿಕೊಂಡಿದ್ದರು.
ಮುಂದೆ ತಮ್ಮ ವ್ಯಾಪಾರ ಸಾಮ್ರಾಜ್ಯದ ಜವಾಬ್ದಾರಿಯನ್ನು ರಾಂಚೋಡ್ ಲಾಲ್ ಅವರ ಇಬ್ಬರು ಪುತ್ರರಾದ ರಾಮಚಂದ್ರ ಹಾಗೂ ಲಕ್ಷ್ಮಣ ಗಾಂಧಿ ಅವರಿಗೆ ಹಸ್ತಾಂತರಿಸಲಾಯಿತು. 1970ರ ವೇಳೆಗೆ ವಾದಿಲಾಲ್ ಐಸ್‌ಕ್ರೀಂ ಅಹಮದಾಬಾದ್‌ನಲ್ಲಿ 10 ಔಟ್‌ಲೆಟ್ ಅನ್ನು ಹೊಂದಿತ್ತು. ಹೀಗೆ ಹತ್ತಾರು ವರ್ಷಗಳಿಂದ ಸೋಡಾ ಶಾಪ್ ಆಗಿದ್ದ ವಾದಿಲಾಲ್ ಗಾಂಧಿ ಅವರ ಈ ವ್ಯಾಪಾರ-ವಹಿವಾಟು ಪ್ರಮುಖವಾಗಿ ಐಸ್‌ಕ್ರೀಂ ಉದ್ಯಮದತ್ತ ಹೆಚ್ಚು ಗಮನಹರಿಸಲಾರಂಭಿಸಿತು.
1933 ಕೋಟಿ ರೂಪಾಯಿಗಳ ಮಾರ್ಕೆಟ್ ಕ್ಯಾಪ್
ಇಕನಾಮಿಕ್ಸ್ ಟೈಮ್ಸ್ ವರದಿ ಪ್ರಕಾರ, ಈಗ ವಾದ್‌ಲಾಲ್ ಐಸ್‌ಕ್ರೀಂ 1933 ಕೋಟಿ ರೂಪಾಯಿಗಳ ಮಾರ್ಕೆಟ್ ಕ್ಯಾಪ್ ಅನ್ನು ಹೊಂದಿದೆ. ಭಾರತದಲ್ಲಿ ಪ್ರಮುಖ ಐಸ್‌ಕ್ರೀಂ ಬ್ರಾಂಡ್ ಹೊರತಾಗಿ ವಾದಿಲಾಲ್ ಫುಡ್ ಪ್ರೊಸೆಸಿಂಗ್ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿದ್ದು, ಪ್ರಿ-ಕುಕ್‌ಡ್ ಕರೀಸ್, ಬ್ರೆಡ್ ಹಾಗೂ ಇತರೆ ಸಸ್ಯಾಹಾರಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.
ಕಲ್ಪಿತ್ ಗಾಂಧಿ ಅವರು ವಾದಿಲಾಲ್ ಕುಟುಂಬದ 5ನೇ ತಲೆಮಾರಾಗಿದ್ದು, ಈಗ ವಾದಿಲಾಲ್ ಗಾಂಧಿ ಅವರು ವಾದಿಲಾಲ್ ಐಸ್‌ಕ್ರೀಂ ಹಾಗೂ ಫುಡ್ ಪ್ರೊಸೆಸಿಂಗ್ ಕಂಪನಿಯ ಚೀಫ್ ಫೈನಾನ್ಸ್ ಆಫೀಸರ್ ಆಗಿದ್ದಾರೆ. ಅಷ್ಟೇ ಅಲ್ಲ ವಾದಿಲಾಲ್ ಗಾಂಧಿ ಈಗ ಅಮೆರಿಕಾದಲ್ಲಿಯೂ ಅತಿಹೆಚ್ಚು ಮಾರಾಟವಾಗುವ ಭಾರತೀಯ ಮೂಲದ ಐಸ್‌ಕ್ರೀಂ ಬ್ರಾಂಡ್ ಆಗಿದೆ.
ಪಾನ್ ಅಂಗಡಿ ತೆರೆದ ಸಹೋದರರಿಗೆ ಈಗ 300 ಕೋಟಿ ಆದಾಯ!
ಪಾನ್ ಅಂಗಡಿ ತೆರೆದ ಸಹೋದರರು ಈಗ 300 ಕೋಟಿ ಆದಾಯ ಗಳಿಸುತ್ತಿದ್ದಾರೆ. 1987ರಲ್ಲಿ ಚವಂದ್ ಗ್ರಾಮದ ನಾಲ್ಕು ಸಹೋದರರು ಜೀವನದಲ್ಲಿ ಏನಾದರೂ ಯಶಸ್ಸಿನ ಮೂಲಕ ಹಣ ಸಂಪಾದನೆ ಮಾಡಬೇಕು ಎಂಬ ಉದ್ದೇಶದಿಂದ ಗುಜರಾತ್‌ನ ಅಮ್ರೇಲಿಗೆ ತೆರಳಿದರು. ಹೊಸ ನಗರದಲ್ಲಿ, ನಾಲ್ವರು ಸಹೋದರರಾದ ದಿನೇಶ್, ಜಗದೀಶ್, ಭೂಪತ್ ಮತ್ತು ಸಂಜೀವ್ ಮನೆಯಿಂದ ಹೊರಟು ತಂದೆ ಕೊಟ್ಟ ಹಣದಿಂದ ಪಾನ್ ಅಂಗಡಿಯನ್ನು ತೆರೆದರು. ಅವರ ತಂದೆ ಹಳ್ಳಿಯಲ್ಲಿ ಕೃಷಿಕರಾಗಿದ್ದರು.
ಹಿರಿಯ ಸಹೋದರ ದಿನೇಶ್ ಸಲಹೆ ಮೇರೆಗೆ ಸಿಟಿ ಬಸ್ ನಿಲ್ದಾಣದ ಬಳಿ ಪಾನ್ ಶಾಪ್ ತೆರೆಯಲಾಗಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಈ ಪುಟ್ಟ ಅಂಗಡಿಯಲ್ಲಿ ತಂಪು ಪಾನೀಯಗಳನ್ನೂ ಮಾರುತ್ತಿದ್ದರು. ಮೂರು ದಶಕಗಳ ನಂತರ, ಅವರು ನೂರಾರು ವಿಧದ ಡೈರಿ ಮತ್ತು ಆಹಾರ ಉತ್ಪನ್ನಗಳನ್ನು ಮಾರಾಟ ಮಾಡುವ 300 ಕೋಟಿ ರೂಪಾಯಿಗಳ ಸಾಮ್ರಾಜ್ಯದ ಅಡಿಪಾಯವನ್ನು ಹಾಕಲು ಆರಂಭ ಮಾಡಿದರು.


Click it and Unblock the Notifications