ಓಸ್ವಾಲ್ ಗ್ರೂಪ್ ಗ್ಲೋಬಲ್ ಕುಟುಂಬದ ಕುಡಿ, ಇಂಡೋ-ಸ್ವಿಸ್ ಬಿಲಿಯನೇರ್ ದಂಪತಿ, ಪಂಕಜ್ ಮತ್ತು ರಾಧಿಕಾ ಓಸ್ವಾಲ್, ಪುತ್ರಿಯಾಗಿರುವ ವಸುಂಧರಾ ಓಸ್ವಾಲ್ ಬ್ಯುಸಿನೆಸ್ ಕ್ಷೇತ್ರದಲ್ಲಿ ಮುಂಬರುವ ನಾಯಕಿಯಾಗಲಿದ್ದಾರೆ. 1999 ರಲ್ಲಿ ಜನಿಸಿದ ವಸುಂಧರಾ ಓಸ್ವಾಲ್ 'ಆಕ್ಸಿಸ್ ಮಿನರಲ್ಸ್' ನ ಡೈರೆಕ್ಟರ್ ಜನರಲ್ ಆಗಿದ್ದಾರೆ. ಓಸ್ವಾಲ್ ಅವರು ವಿಶ್ವದ ಅತ್ಯಂತ ದುಬಾರಿ ಎಣಿಸಿಕೊಂಡಿರುವ ಮನೆಯಲ್ಲಿ ವಾಸಿಸುತ್ತಿದ್ದಾರೆ.
ವಸುಂಧರಾ ಪಿಆರ್‌ಒ ಇಂಡಸ್ಟ್ರೀಸ್‌ನಲ್ಲಿ ಕಾರ್ಬನ್ ಡೈಆಕ್ಸೈಡ್ ಕ್ಯಾಪ್ಚರ್ ಘಟಕವನ್ನು ಸ್ಥಾಪಿಸಿರುವುದು ಮಾತ್ರವಲ್ಲದೇ ಬೆವರೇಜ್ ಕಂಪನಿಗಳಿಗೆ ಮರುಬಳಕೆಯ ನೀರು ಒದಗಿಸುತ್ತಾರೆ.
ವಸುಂಧರಾ ಅವರು ಕಂಪನಿಯ ಯೋಜನೆಗಳನ್ನು ವಿಸ್ತರಿಸಿದ್ದು ಮಾತ್ರವಲ್ಲದೇ ಮುನ್ನಡೆಸಿದ್ದಾರೆ. ಅಲ್ಲದೆ ಕಂಪನಿಯ ಸಾಲವನ್ನು ಕಡಿಮೆ ಮಾಡಲು ಸಹಾಯ ಮಾಡಿ ಹೊಸ ಸಮರ್ಥನೀಯ ಯೋಜನೆಗಳನ್ನು ಪ್ರಾರಂಭಿಸಿದ್ದಾರೆ ಎಂದು ವರದಿಯೊಂದು ಹೇಳಿದೆ.
ವಸುಂಧರಾ ಓಸ್ವಾಲ್ ಸ್ವಿಟ್ಜರ್ಲೆಂಡ್ ವಿಶ್ವವಿದ್ಯಾಲಯದಿಂದ ಹಣಕಾಸು ವಿಷಯದಲ್ಲಿ ಪದವಿ ಪಡೆದಿದ್ದು ಬಳಿಕ ಅವರು ಸುಮಾರು ಅರ್ಧ ತಿಂಗಳು ಕನ್‌ಸ್ಟ್ರಕ್ಷನ್ ಸೈಟ್ ಮತ್ತು ಇತರ ಯೋಜನೆಗಳಲ್ಲಿ ಕಳೆಯುತ್ತಾರೆ. ಕಂಪನಿಯಲ್ಲಿ ಅವರ ಪಾತ್ರವು ಹೂಡಿಕೆ ಸಂಸ್ಥೆ, ಹಣಕಾಸು ನಿರ್ವಹಣೆ ಮತ್ತು ಸರ್ಕಾರಿ ಸಂಪರ್ಕವನ್ನು ಒಳಗೊಂಡಿರುತ್ತದೆ.
ಇತ್ತೀಚೆಗೆ, ಪಂಕಜ್ ಓಸ್ವಾಲ್ ಮತ್ತು ರಾಧಿಕಾ ಓಸ್ವಾಲ್ ಸ್ವಿಟ್ಜರ್ಲೆಂಡ್‌ನಲ್ಲಿ 200 ಮಿಲಿಯನ್ ಮೌಲ್ಯದ ವಿಲ್ಲಾವನ್ನು ಖರೀದಿಸಿ ಸುದ್ದಿಯಾಗಿದ್ದರು. ಅವರ ವಿಲ್ಲಾ ವರಿ ಹೆಸರಿನ ಐಷಾರಾಮಿ ಮನೆ ಜಿಂಗಿನ್ಸ್‌ನಲ್ಲಿದೆ. ಬೃಹತ್ ಮನೆಯ ವಿಸ್ತೀರ್ಣ 4.3 ಲಕ್ಷ ಚದರ ಅಡಿ ವಿಸ್ತೀರ್ಣವುಳ್ಳ ಈ ಮನೆ ನಗರದಿಂದ ಹೊರವಲಯದಲ್ಲಿದೆ. ಸ್ವಿಸ್‌ನ ಗಿಂಗಿನ್ಸ್‌ನಲ್ಲಿ ಇರುವ ಈ ಭವ್ಯ ಬಂಗಲೆ ಲೇಕ್ಸೈಡ್ ಸಿಟಿ ಜಿನೀವಾದಿಂದ ಕೇವಲ 15 ನಿಮಿಷ ದೂರವಿದೆ. ಈ ಹಿಂದೆ ಈ ಮನೆಯು ಗ್ರೀಕ್ ಶಿಪ್ಪಿಂಗ್ ಮ್ಯಾಗ್ನೇಟ್ ಅರಿಸ್ಟಾಟಲ್ ಒನಾಸಿಸ್ ಅವರ ಮಗಳು ಕ್ರಿಸ್ಟಿನಾ ಒನಾಸಿಸ್ ಅವರ ಒಡೆತನದಲ್ಲಿತ್ತು.
ಪಂಕಜ್ ಓಸ್ವಾಲ್ ಓಸ್ವಾಲ್ ಆಗ್ರೋ ಮಿಲ್ಸ್ ಸಂಸ್ಥಾಪಕ ಅಭಯ್ ಕುಮಾರ್ ಓಸ್ವಾಲ್ ಅವರ ಪುತ್ರರಾಗಿದ್ದಾರೆ. ಅವರ ಕಂಪನಿಯು ಪೆಟ್ರೋಕೆಮಿಕಲ್ಸ್, ರಿಯಲ್ ಎಸ್ಟೇಟ್, ರಸಗೊಬ್ಬರಗಳು ಮತ್ತು ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿದೆ. ಪಂಕಜ್ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಧ್ಯಯನ ಮಾಡಿದ್ದು ಪಂಕಜ್ ಓಸ್ವಾಲ್ ಅವರಿಗೆ ವಸುಂಧರಾ ಮತ್ತು ರಿದಿ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ರಿದಿ ಲಂಡನ್‌ನಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಓದುತ್ತಿದ್ದು ಇವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ.
"ಭಾರತೀಯರಾಗಿ ಆದರೆ ವಿದೇಶದಲ್ಲಿ ವಾಸಿಸುತ್ತಿರುವ ಯಾವಾಗಲೂ ನಮ್ಮ ಸಂಸ್ಕೃತಿ ಬಗ್ಗೆ ಚಿಕ್ಕ ಪುಟ್ಟ ವಿಷಯಗಳನ್ನು ಮಿಸ್ ಮಾಡಿಕೊಳ್ಳುತ್ತೇವೆ. ಅದರಲ್ಲೂ ವಿಶೇಷವಾಗಿ ನಮ್ಮ ಸುತ್ತಮುತ್ತಲಿರುವ ಜನರ ಒಡನಾಟ ಆಹಾರ ಇತ್ಯಾದಿಗಳನ್ನು ಮಿಸ್ ಮಾಡಿಕೊಳ್ಳುತ್ತೇವೆ. ಭಾರತದಿಂದ ದೂರವಿರುವ ನಾವು ನಾವೀದ್ದಲ್ಲಿಯೇ ಪುಟ್ಟ ಭಾರತವನ್ನು ರಚಿಸುವುದು ನನ್ನ ಕುಟುಂಬದ ಕನಸಾಗಿತ್ತು ಮತ್ತು ಇದರಲ್ಲಿ ನನ್ನ ಕುಟುಂಬ ಯಶಸ್ವಿಯಾಗಿರುವುದು ನೋಡಿ ನನಗೆ ಸಂತೋಷವಾಗಿದೆ," ಎಂದು ವಸುಂಧರಾ ಓಸ್ವಾಲ್ ಅವರು ತಮ್ಮ ಮನೆಯ ಬಗ್ಗೆ ಮಾತನಾಡುತ್ತಾ ಮೇ 2023 ರಿಂದ ಇತ್ತೀಚಿನ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.
ವಸುಂಧರಾ ಓಸ್ವಾಲ್ ಅವರ ನಿವ್ವಳ ಸಂಪತ್ತು 3 ಬಿಲಿಯನ್ ಡಾಲರ್ (ಅಂದಾಜು 2,47,000 ಕೋಟಿ ರೂಪಾಯಿ) ಆಗಿದೆ. ಸದ್ಯ ಪಂಕಜ್ ಓಸ್ವಾಲ್ ಮತ್ತು ರಾಧಿಕಾ ಓಸ್ವಾಲ್ ಸ್ವಿಟ್ಜರ್ಲೆಂಡ್‌ನಲ್ಲಿ 200 ಮಿಲಿಯನ್ ಮೌಲ್ಯದ ವಿಲ್ಲಾವನ್ನು ಖರೀದಿಸಿ ಸುದ್ದಿಯಾಗಿದ್ದಾರೆ.
24ನೇ ವಯಸ್ಸಲ್ಲಿ ಸಿಇಒ ಆದ ದೇವಿತಾ ಸರಾಫ್
ಹೀಗೆ ಹಲವಾರು ಮಂದಿ ತಮ್ಮ ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ಉದ್ಯಮವನ್ನು ಸ್ಥಾಪಿಸಿದ್ದಾರೆ. ಭಾರತದ ಖ್ಯಾತ ಮಹಿಳಾ ಉದ್ಯಮಿಗಳಲ್ಲಿ Vu ಗ್ರೂಪ್‌ನ ಚೇರ್ ಪರ್ಸನ್ ಮತ್ತು ಸಿಇಒ ಆಗಿರುವ ದೇವಿತಾ ಸರಾಫ್ ಕೂಡಾ ಓರ್ವರು. ಇವರು ಕೇವಲ 24 ವರ್ಷದವರಾಗಿದ್ದಾಗ ವೃತ್ತಿ ಜೀವನ ಆರಂಭಿಸಿ Vu ಗ್ರೂಪ್ ಹುಟ್ಟುಹಾಕಿದರು. ಇಂದು Vu ಟೆಲಿವಿಷನ್‌ನ ಆದಾಯವು 1000 ಕೋಟಿ ರೂಪಾಯಿಗಳಾಗಿದ್ದು, ಕಂಪನಿಯು ಇದುವರೆಗೆ 3 ಮಿಲಿಯನ್ ಟೆಲಿವಿಷನ್‌ಗಳನ್ನು ಮಾರಾಟ ಮಾಡಿದೆ.


Click it and Unblock the Notifications
