ದೇಶದ ಅತೀ ಜನಪ್ರಿಯ ಕ್ರಿಕೆಟರ್ ಆದ ವಿರಾಟ್ ಕೊಹ್ಲಿ ಹಲವಾರು ಜನರೊಂದಿಗೆ ಪಾರ್ಟ್‌ನರ್‌ಶಿಪ್‌ನಲ್ಲಿ ಉದ್ಯಮಗಳನ್ನು ಆರಂಭ ಮಾಡಿದ್ದಾರೆ. ಹೂಡಿಕೆ ವಿಚಾರಕ್ಕೆ ಬಂದಾಗ ವಿರಾಟ್ ಕೊಹ್ಲಿ ಹಲವಾರು ವ್ಯಾಪಾರ, ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರೆ. ಎಂಪಿಎಲ್, ಸ್ಪೋರ್ಟ್ಸ್ ಕಾನ್ವೊ, ಯುನಿವರ್ಸಲ್ ಸ್ಪೋರ್ಟ್ಸ್‌ಬಿಜ್ ಸೇರಿದಂತೆ ಹಲವಾರು ಸ್ಟಾರ್ಟ್‌ಅಪ್‌ಗಳಲ್ಲಿ ವಿರಾಟ್ ಕೊಹ್ಲಿ ಹೂಡಿಕೆ ಮಾಡಿದ್ದಾರೆ.
ಇನ್ನು ಒನ್8, Wrogn ಮತ್ತು ಸ್ಟೆಪಥ್ಲಾನ್ ಎಂಬ ಕ್ಲೋಥಿಂಗ್ ಬ್ರ್ಯಾಂಡ್‌ಗಳನ್ನು ಹೊಂದಿದ್ದಾರೆ. ಒನ್8 ಕಮ್ಯೂನ್ ಮತ್ತು ನ್ಯೂವಾ ಎಂಬ ರೆಸ್ಟೋರೆಂಟ್‌ಗಳನ್ನು ಹೊಂದಿದ್ದಾರೆ. ಎಫ್‌ಸಿ ಗೋವಾ ಫುಟ್‌ಬಾಲ್ ಕ್ಲಬ್ ಹಾಗೂ ಟೆನ್ನಿಲ್ ಮತ್ತು ಪ್ರೋ-ವ್ರೆಸ್ಲಿಂಗ್ ತಂಡವನ್ನು ಹೊಂದಿದ್ದಾರೆ. ಆದರೆ ವಿರಾಟ್ ಕೊಹ್ಲಿಯ ಬ್ಯುಜಿನೆಸ್ ಪಾರ್ಟ್‌ನರ್ ಆದ, ವಿರಾಟ್ ಕೊಹ್ಲಿ ಮಾತ್ರವಲ್ಲದೆ ಇನ್ನೂ ಹಲವಾರು ಮಂದಿಯೊಂದಿಗೆ ಬ್ಯುಜಿನೆಸ್ ಪಾರ್ಟ್‌ನರ್‌ಶಿಪ್ ಮಾಡಿಕೊಂಡಿರುವ ಅಂಜನಾ ರೆಡ್ಡಿ ಬಗ್ಗೆ ನಾವಿಲ್ಲಿ ವಿವರಿಸಿದ್ದೇವೆ ಮುಂದೆ ಓದಿ.....

ಯಾರಿದು ಅಂಜನಾ ರೆಡ್ಡಿ?
ಅಂಜನಾ ರೆಡ್ಡಿ ಯುನೈಟೆಡ್ ಸ್ಟೇಟ್ಸ್‌ನ ಪರ್ಡ್ಯೂ ವಿಶ್ವವಿದ್ಯಾಲಯದಿಂದ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಅದಾದ ಬಳಿಕ ಅಂಜನಾ ರೆಡ್ಡಿ ಇಲಿನಾಯ್ಸ್ ವಿಶ್ವವಿದ್ಯಾಲಯದಿಂದ ಹಣಕಾಸು ವಿಷಯದಲ್ಲಿ ಮಾಸ್ಟರ್ ಆಫ್ ಸೈನ್ಸ್ ಮಾಡಿದರು. ಅಂಜನಾ ರೆಡ್ಡಿ 2011 ರಲ್ಲಿ ಭಾರತಕ್ಕೆ ಮರಳಿ, ವ್ಯಾಪಾರ ಲೋಕಕ್ಕೆ ಎಂಟ್ರಿ ನೀಡುವ ನಿರ್ಧಾರ ಮಾಡಿದ್ದಾರೆ. ಬ್ರಾಂಡೆಡ್ ಕ್ರೀಡಾ ಸ್ಮರಣಿಕೆಗಳ ವ್ಯಾಪಾರವನ್ನು ಪ್ರವೇಶಿಸಿದರು.
ಅಂಜನಾ ರೆಡ್ಡಿ ಆಕ್ಸೆಲ್ ಎಂಬ ಕಂಪನಿಯ ಭೇಟಿಯಾಗಿದ್ದಾರೆ. ಈ ಕಂಪನಿಯು ಸೆಲೆಬ್ರೆಟಿಗಳಿಂದ ಹೂಡಿಕೆ ಪಡೆಯುವಂತೆ ತಿಳಿಸಿತು. ಈ ಸಂದರ್ಭದಲ್ಲಿ ಅಂಜನಾ ರೆಡ್ಡಿ ಕ್ರಿಕೆಟ್ ಲೋಕದ ದಿಗ್ಗಜ ಸಚಿನ್ ತೆಂಡೂಲ್ಕರ್‌ರನ್ನು ಭೇಟಿಯಾಗಿದ್ದು, ಅವರು ಯುನಿವರ್ಸಲ್ ಸ್ಪೋರ್ಟ್ಸ್ಬಿಜ್ ಪ್ರೈವೇಟ್ ಲಿಮಿಟೆಡ್ (USPL) ಎಂಬ ತನ್ನ ಕಂಪನಿಯಲ್ಲಿ ಹೂಡಿಕೆ ಮಾಡಲು ಒಪ್ಪಿಕೊಂಡರು. ಅದಾದ ಬಳಿಕ ಅಂಜನಾ ರೆಡ್ಡಿ ಕಲೆಕ್ಟಾಬಿಲಿಯಾ ಎಂಬ ವ್ಯಾಪಾರ ಉದ್ಯಮವನ್ನು ಆರಂಭ ಮಾಡಿದ್ದಾರೆ.
ಆದರೆ ಅದು ಹೆಚ್ಚು ಉತ್ತಮವಾಗಿ ಕಾರ್ಯನಿರ್ವಹಣೆ ಮಾಡಿಲ್ಲ. ಅಂಜನಾ ರೆಡ್ಡಿ ಇನ್ನೊಂದು ವ್ಯಾಪಾರವನ್ನು ಆರಂಭ ಮಾಡಿದ್ದಾರೆ. ಅದು ಉಡುಪುಗಳ ವ್ಯಾಪಾರ ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್ ಶರ್ಟ್‌ಗಳನ್ನು ಮಾರಾಟ ಮಾಡುವ ಕ್ರಮ ಇಂಟರ್ನೆಟ್‌ನಲ್ಲಿ ನಿಜವಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸಿದ ನಂತರ ಅಂಜನಾ ರೆಡ್ಡಿ ವ್ಯವಹಾರ ಕ್ಷೇತ್ರವನ್ನು ಪ್ರವೇಶ ಮಾಡುವ ನಿರ್ಧಾರ ಮಾಡಿದ್ದಾರೆ.
ಈ ವ್ಯಾಪಾರ ಆರಂಭವಾದ ಬಳಿಕ ಬ್ರ್ಯಾಂಡ್‌ಗಳೊಂದಿಗೆ ಸೆಲೆಬ್ರಿಟಿಗಳನ್ನು ಸೇರ್ಪಡೆ ಮಾಡಿಕೊಳ್ಳುವುಉದ ಅವರ ತಂತ್ರವಾಗಿತ್ತು. ಅದಾದ ಬಳಿಕ ಅಂಜನಾ ರೆಡ್ಡಿ Wrogn, ಇಮರಾ, ಮಿಸ್ ಟೇಕನ್ ಮೊದಲಾದ ಬ್ರ್ಯಾಂಡ್‌ಗಳನ್ನು ಪ್ರಾರಂಭಿಸಿದರು. ಕೃತಿ ಸನನ್ ಮತ್ತು ಆದಿತ್ಯ ರಾಯ್ ಕಪೂರ್ ಬೆಂಬಲದೊಂದಿಗೆ ಸಿಂಗಲ್ ಎಂಬ ಬ್ರ್ಯಾಂಡ್ ಅನ್ನು ಆರಂಭ ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್ ಮಾತ್ರವಲ್ಲದೆ ಸಂಸ್ಥೆಗೆ ವಿರಾಟ್ ಕೊಹ್ಲಿ ಕೂಡಾ ಹೂಡಿಕೆ ಮಾಡಿದ್ದಾರೆ, ಹಾಗೆಯೇ ಈ ಬ್ರ್ಯಾಂಡ್‌ನ ಅಂಬಾಸಿಡರ್ ಆಗಿದ್ದಾರೆ.
ಈ ಎಲ್ಲಾ ಬ್ರ್ಯಾಂಡ್‌ಗಳನ್ನು ಆರಂಭದಲ್ಲಿ ಇಂಟರ್ನೆಟ್‌ನಲ್ಲಿ ಶಾಪರ್ಸ್ ಸ್ಟಾಪ್ ಮತ್ತು ಮಿಂತ್ರಾದಲ್ಲಿ ಲೀಸ್ಟ್ ಮಾಡಲಾಗಿತ್ತು. ಅದಾದ ಬಳಿಕ ನಂತರ ಪ್ಯಾಂಟಲೂನ್ಸ್ ರಿಟೇಲ್ ಮತ್ತು ಫ್ಯೂಚರ್ ಗ್ರೂಪ್‌ನಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು. ರಿಟೇಲ್ ವ್ಯಾಪಾರದ ಬಗ್ಗೆ ಯಾವುದೇ ಪರಿಣಿತಿ ಇಲ್ಲದೇ ಅಂಜನಾ ರೆಡ್ಡಿ ಈ ವ್ಯಾಪಾರ ಆರಂಭಿಸಿದ್ದಾರೆ. ಕೇವಲ ಎರಡು ಚಾನಲ್‌ಗಳಲ್ಲಿ ಮಾರಾಟ ಮಾಡಲು ಆರಂಭಿಸಿದ್ದಾರೆ.
ವರದಿಗಳ ಪ್ರಕಾರ, ಅಂಜನಾ ರೆಡ್ಡಿಯ ಸಂಸ್ಥೆಯು ಒಟ್ಟು 81.5 ಮಿಲಿಯನ್ ಡಾಲರ್ ಹಣವನ್ನು ಪಡೆದುಕೊಂಡಿದೆ. 2021 ರಲ್ಲಿ, ಅಂಜನಾ ರೆಡ್ಡಿ 5.23 ಮಿಲಿಯನ್ ಡಾಲರ್ ಗಳಿಸಿದರು. 2018 ರಲ್ಲಿ, ಕಂಪನಿಯು 1200 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯವನ್ನು ಪಡೆದುಕೊಂಡಿದೆ. 2022 ರಲ್ಲಿ ಆಕೆಯ ನಿವ್ವಳ ಮೌಲ್ಯ ಸುಮಾರು 300 ಕೋಟಿ ರೂಪಾಯಿ ಆಗಿದೆ.


Click it and Unblock the Notifications