ಭಾರತೀಯರಿಗೆ ಮಾತ್ರವಲ್ಲದೇ ಜಾಗತಿಕವಾಗಿಯೂ ಅಂಬಾನಿ ಕುಟುಂಬವು ಅವರ ಉದ್ಯಮ ಮತ್ತು ಅವರಲ್ಲಿರುವ ಸಂಪತ್ತಿನಿಂದಲೇ ಪರಿಚಿತರಾಗಿದ್ದಾರೆ. ಈ ಕುಟುಂಬದ ಹೊಸ ಸದಸ್ಯೆಯಾಗಲಿರುವ ರಾಧಿಕಾ ಮರ್ಚೆಂಟ್ ಅವರ ಕುಟುಂಬದ ಹಿನ್ನೆಲೆಯ ಬಗ್ಗೆ ಕೆಲವೇ ಜನಕ್ಕೆ ತಿಳಿದಿದೆ.
ಅಂದ ಹಾಗೆ ರಾಧಿಕಾ ಅವರು ಭಾರತೀಯ ಉದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿಯಾಗಿದ್ದಾರೆ. 58 ವರ್ಷದ ಉದ್ಯಮಿಯಾಗಿರುವ ವೀರೇನ್ ಎನ್ಕೋರ್ ಹೆಲ್ತ್‌ಕೇರ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಆಗಿದ್ದಾರೆ. ವೀರೇನ್ ಮರ್ಚೆಂಟ್ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....

ವೀರೇನ್ ಮರ್ಚೆಂಟ್ ಬಗ್ಗೆ ಮಾಹಿತಿ
ವೀರೇನ್ ಅವರು ಎನ್ಕೋರ್ ಹೆಲ್ತ್‌ಕೇರ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಆಗಿ ಸೇವೆ ಸಲ್ಲಿಸುವುದರ ಜೊತೆಗೆ ಎನ್‌ಕೋರ್ ಬ್ಯುಸಿನೆಸ್ ಸೆಂಟರ್ ಪ್ರೈವೇಟ್ ಲಿಮಿಟೆಡ್, ಎನ್‌ಕೋರ್ ಪಾಲಿಫ್ರಾಕ್ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್, ಝೈಜಿ ಫಾರ್ಮಾ ಪ್ರೈವೇಟ್ ಲಿಮಿಟೆಡ್, ಸಾಯಿದರ್ಶನ್ ಬ್ಯುಸಿನೆಸ್ ಸೆಂಟರ್ಸ್ ಪ್ರೈವೇಟ್ ಲಿಮಿಟೆಡ್ ಸೇರಿದಂತೆ ಇತರ ಸಂಸ್ಥೆಗಳ ನಿರ್ದೇಶಕರೂ ಆಗಿದ್ದಾರೆ.
ಇವರೊಬ್ಬ ಖ್ಯಾತ ಬಿಲಿಯನೇರ್ ಕೈಗಾರಿಕೋದ್ಯಮಿಯಾದರೂ, ತಮ್ಮ ವೈಯಕ್ತಿಕ ಮತ್ತು ವ್ಯವಹಾರ ಜೀವನದ ಬಗ್ಗೆ ಹೆಚ್ಚು ಪ್ರಚಾರ ಬಯಸದೇ, ಖಾಸಗಿತನಕ್ಕೆ ಹೆಚ್ಚು ಒತ್ತು ಕೊಡುವ ಕಾರಣ ಸುದ್ದಿಯಿಂದ ದೂರ ಉಳಿಯುತ್ತಾರೆ. ಇವರ ನಿವ್ವಳ ಮೌಲ್ಯ ಸುಮಾರು 755 ಕೋಟಿ ರೂಪಾಯಿ ಆಗಿದೆ.
ಭಾರತದಲ್ಲಿ, ಉದ್ಯಮ ಕುಟುಂಬದಂತೆ ಪ್ರತಿಯೊಬ್ಬ ಸದಸ್ಯನೂ ಉದ್ಯಮಿಯಾಗಿರುವ ಕೆಲವೇ ಕೆಲವು ಕುಟುಂಬಗಳಿವೆ. ಅವುಗಳಲ್ಲಿ ಮರ್ಚೆಂಟ್ ಫ್ಯಾಮಿಲಿ ಕೂಡಾ ಒಂದು ಎಂದು ಹೇಳಬಹುದು. ಯಾಕೆಂದರೆ ವೀರೇನ್ ಮತ್ತು ಶೈಲಾ ಮರ್ಚೆಂಟ್ ದಂಪತಿಗಳ ಪುತ್ರಿಯರಾದ ರಾಧಿಕಾ ಮತ್ತು ಅಂಜಲಿ ಮರ್ಚೆಂಟ್ ಕೂಡ ವ್ಯವಹಾರ ಜಗತ್ತಿನಲ್ಲಿ ತಮ್ಮನ್ನು ತಾವು ಯಶಸ್ವಿಯಾಗಿ ತೊಡಗಿಸಿಕೊಂಡಿದ್ದಾರೆ.
ರಾಧಿಕಾ ಅವರ ಸಹೋದರಿ ಅಂಜಲಿ ಮರ್ಚೆಂಟ್, ಡ್ರೈಫಿಕ್ಸ್ ಅನ್ನು ಸಹ-ಸ್ಥಾಪಿಸಿದ್ದು, ಅವರ ಪೋಷಕರಂತೆ ವ್ಯಾಪಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಅಂದಹಾಗೆ ಬಿಲಿಯನೇರ್ ಮಗಳಾಗಿರುವ ರಾಧಿಕಾ ಮರ್ಚೆಂಟ್ ಶೀಘ್ರದಲ್ಲೆ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರ ಕೈ ಹಿಡಿಯಲಿದ್ದು ಅಂಬಾನಿ ಕುಟುಂಬದ ಕಿರಿಯ ಸೊಸೆಯಾಗಲಿದ್ದಾರೆ.
ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಮತ್ತುಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿ, 2017ರಲ್ಲಿ ಪದವಿ ಪಡೆದ ಅವರು ಪ್ರಸ್ತುತ ಎನ್ಕೋರ್ ಹೆಲ್ತ್‌ಕೇರ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾಗಿದ್ದಾರೆ.


Click it and Unblock the Notifications