ವಿಡಿಯೋ ಹಂಚಿಕೆ ಪ್ಲಾಟ್‌ಫಾರ್ಮ್ ಆದ ವಿಮಿಯೋದ ಮಾಜಿ ಧೀರ್ಘಾವಧಿಯ ಮುಖ್ಯಸ್ಥೆ ಅಂಜಲಿ ಸುದ್ ಅವರನ್ನು ಅದರ ಸ್ಟ್ರೀಮಿಂಗ್ ಸೇವೆಯಾದ ಟ್ಯೂಬಿಯ ಮುಖ್ಯ ಕಾರ್ಯನಿರ್ವಾಹಕರನ್ನಾಗಿ ಹೆಸರಿಸಲಾಗಿದೆ. ಅವರು ಟ್ಯೂಬಿ ಮೀಡಿಯಾ ಗ್ರೂಪ್‌ನ ಸಿಇಒ ಪಾಲ್ ಚೀಸ್‌ಬರೋಗೆ ರಿಪೋರ್ಟ್ ಮಾಡಲಿದ್ದಾರೆ. ಸ್ಟ್ರೀಮಿಂಗ್ ಸೇವೆ ನೀಡುವುದರ ಜತೆಗೆ ಫಾಕ್ಸ್ ನ್ಯೂಸ್, ಸ್ಪೋರ್ಟ್ಸ್ ಹಾಗೂ ಮನರಂಜನೆಯ ಡಿಜಿಟಲ್ ಪ್ಲಾಟ್‌ಫಾರಂನ್ನು ನಿರ್ವಹಿಸುವುದಕ್ಕೆ ಫಾಕ್ಸ್ ಸಂಸ್ಥೆಯು ಪುನರ್ ರಚನೆಯ ಮಾಡುವ ಕಳೆದ ಏಪ್ರಿಲ್‌ನಲ್ಲಿ ಟ್ಯೂಬಿ ಮೀಡಿಯಾ ಗ್ರೂಪ್ ಅನ್ನು ರಚಿಸಿತ್ತು.
ಆಗ ಫಾಕ್ಸ್, ಮಸೌದಿ ಅಧಿಕಾರದಿಂದ ಕೆಳಗಿಳಿಯುವುದನ್ನು ಘೋಷಿಸಿತ್ತು. ಆ ಮೂಲಕ ಹೊಸದಾಗಿ ರಚಿಸಲಾದ ಘಟಕವನ್ನು ಮುನ್ನಡೆಸುವುದಕ್ಕೆ ಚೀಸ್‌ಬರೋ ಅವರನ್ನು ನೇಮಕಗೊಳಿಸಲಾಯಿತು ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆಗ ಫಾಕ್ಸ್ ಟ್ಯೂಬಿಯನ್ನು $440 ಮಿಲಿಯನ್‌ಗೆ 2020ರಲ್ಲಿ ಖರೀದಿಸಿತ್ತು.

ಅಂಜಲಿ ಸುದ್ ಯಾರು?
ವಿಮಿಯೋಗೆ ಸೇರುವ ಮೊದಲು ಅಂಜಲಿ ಸುದ್ ಅವರು ಟೈಮ್ ವಾರ್ಮರ್ ಹಾಗೂ ಅಮೆಜಾನ್ ಡಾಟ್ ಕಾಮ್‌ನಲ್ಲಿ ಹಣಕಾಸು, ಮಾಧ್ಯಮ ಹಾಗೂ ಇ-ಕಾಮರ್ಸ್ ವಿಭಾಗದಲ್ಲಿ ಕೆಲಸ ಮಾಡಿದ್ದರು.
ಅಂಜಲಿ ಸುದ್ ಅವರು ಸೆಪ್ಟಂಬರ್ 1ರಂದು ಸ್ಟ್ರೀಮಿಂಗ್ ಸರ್ವೀಸ್‌ನ ಸಿಇಒ ಆಗಿ ಅಧಿಕಾರಿ ವಹಿಸಿಕೊಳ್ಳುವ ಮೂಲಕ ಟ್ಯೂಬಿಯ ಸ್ಥಾಪಕ ಹಾಗೂ ಮುಖ್ಯ ನಿರ್ವಾಹಕರಾಗಿರುವ ಫರ್ಹಾದ್ ಮಸೌದಿ ಅವರ ಉತ್ತರಾಧಿಕಾರಿಯಾಗಲಿದ್ದಾರೆ.
ಸ್ಕ್ರೀಮಿಂಗ್ ಪ್ಲಾಟ್‌ಫಾರಂನಲ್ಲಿ ಸುಮಾರು ಒಂಬತ್ತು ವರ್ಷಗಳ ಸೇವೆಯ ನಂತರ ಸುದ್ ಅವರು ಇತ್ತೀಚೆಗೆ ವಿಮಿಯೋನ ಸಿಇಒ ಸ್ಥಾನದಿಂದ ಕೆಳಗಿಳಿದಿದ್ದಾರೆ. ಅಂಜಲಿ ಸುದ್ ಅವರು 2011ರಿಂದ 2014ರವರೆಗೆ ಅಂದರೆ ಮೂರು ವರ್ಷಗಳ ಕಾಲ ಅಮೆಜಾನ್‌ನಲ್ಲಿ ಕೆಲಸ ಮಾಡಿದ್ದಾರೆ. ಅಂಜಲಿ ಸುದ್ ಅವರು ಮಿಚಿಗನ್‌ನ ಡೆಟ್ರಾಯಿಟ್‌ನಲ್ಲಿ ಪಂಜಾಬಿ ಹಿಂದೂ ವಲಸಿಗ ಕುಟುಂಬದಲ್ಲಿ ಜನಿಸಿದ್ದಾರೆ.
ಅಂಜಲಿ ಸುದ್ ಅವರು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಿಂದ ಮಾಸ್ಟರ್ಸ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ (ಎಂಬಿಎ) ಪದವಿ ಪಡೆದುಕೊಂಡಿದ್ದಾರೆ. ಅಂಜಲಿ ಸುದ್ ಅವರನ್ನು 2022ರ ಸೆಪ್ಟೆಂಬರ್‌ನಲ್ಲಿ ಫಾರ್ಚೂನ್ ಇಂಡಿಯಾವು ಅತ್ಯಂತ ಶಕ್ತಿಶಾಲಿ ಮಹಿಳೆ ಎಂದು ಗುರುತಿಸಿದೆ. ಅಲ್ಲದೆ 2023ರ ಮಾರ್ಚ್‌ನಲ್ಲಿ ಆಸ್ಪೆನ್ ಇನ್‌ಸ್ಟಿಟ್ಯೂಟ್‌ನಲ್ಲಿ ಹೆನ್ರಿ ಕ್ರೌನ್ ಫೆಲ್ಲೋ ಎನ್ನುವ ಗೌರವನ್ನು ಕೂಡ ನೀಡಲಾಗಿದೆ.


Click it and Unblock the Notifications