ಎಲ್ಲಾ ಅಡತಡೆ ಗಳೊಂದಿಗೆ ಹೋರಾಡಿ, ಸ್ವಯಂ ನಿರ್ಮಿತ ಮಹಿಳೆಯಾಗಿ ಅಸಾಮಾನ್ಯ ಯಶಸ್ಸು ಸಾಧಿಸಿದ ಅತ್ಯಂತ ಸ್ಪೂರ್ತಿದಾಯಕ ಯಶಸ್ಸಿನ ಕಥೆಗಳಲ್ಲಿ ರುಚಿ ಕಲ್ರಾ ಅವರದ್ದು. ಇವರು ತಮ್ಮ ಪತಿ ಆಶಿಶ್ ಮೊಹಾಪಾತ್ರ ಅವರೊಂದಿಗೆ ಜೊತೆಯಾಗಿ ಸೇರಿಕೊಂಡು ಎರಡು ಯುನಿಕಾರ್ನ್ ಸ್ಟಾರ್ಟ್‌ಅಪ್‌ಗಳನ್ನು ಸಹ-ಸ್ಥಾಪಿಸಿದ್ದಾರೆ.
ತಾವು ಸ್ಥಾಪಿಸಿದ ಒಂದು ಸ್ಟಾರ್ಟ್‌ಅಪ್ ಯಶಸ್ವಿಗೆ ಅನೇಕ ಸ್ಥಾಪಕರು ಶ್ರಮಿಸುತ್ತಿರುವಾಗ, ರುಚಿ ಅವರು ಎರಡು ಕಂಪನಿಗಳ ಸಹ-ಸಂಸ್ಥಾಪಕಿ, ಎರಡೂ ಅತ್ಯಂತ ಯಶಸ್ವಿಯಾಗಿ ಮುನ್ನಡೆಸುತ್ತಿರುವುದು ನಿಜಕ್ಕೂ ಅಪರೂಪದ ಸಾಧನೆಯಾಗಿದೆ. ರುಚಿ ಕಲ್ರಾ ಕೂಡ ಐಐಟಿಯನ್ ಆಗಿದ್ದು, ದೆಹಲಿಯ ಐಐಟಿಯಲ್ಲಿ ಬಿ-ಟೆಕ್ ಮುಗಿಸಿದ್ದಾರೆ.

ಇದಾದ ಬಳಿಕ ಅವರು ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್‌ನಿಂದ ಎಂಬಿಎ ಮಾಡಿ ಕಲ್ರಾ ಎಂಟು ವರ್ಷಗಳ ಕಾಲ McKinseyಯ ಪಾಲುದಾರರಾಗಿ ಕೆಲಸ ಮಾಡಿದ್ದಾರೆ. 2015 ರಲ್ಲಿ, ಅವರು ತಮ್ಮ ಪತಿ ಮೊಹಾಪಾತ್ರ ಅವರೊಂದಿಗೆ ಸೇರಿಕೊಂಡು ಆಫ್ ಬ್ಯುಸಿನೆಸ್(OfBusiness) ಅನ್ನು ಸ್ಥಾಪಿಸಿದ್ದು ಇದು ಕಚ್ಚಾವಸ್ತುಗಳು, ಕೈಗಾರಿಕಾ ಸರಬರಾಜು ಇತ್ಯಾದಿಗಳನ್ನು ಪೂರೈಕೆ ಮಾಡುವ ಬ್ಯುಸಿನೆಸ್ ಟು ಬ್ಯುಸಿನೆಸ್ ಫ್ಲಾಟ್ ಫಾರ್ಮ್ ಆಗಿದೆ.
ಇಂದು ಇದು 44,000 ಕೋಟಿ ರೂಪಾಯಿಗಳ ಮೌಲ್ಯದ ಕಂಪನಿಯಾಗಿ ಬೆಳೆದುನಿಂತಿದೆ. ರುಚಿ ಕಲ್ರಾ ಅವರು 2017 ರಲ್ಲಿ ಪ್ರಾರಂಭವಾದ ಮತ್ತೊಂದು ಸ್ಟಾರ್ಟ್‌ಅಪ್ Oxyzo ಫೈನಾನ್ಷಿಯಲ್ ಸರ್ವಿಸಸ್‌ನ CEO ಆಗಿದ್ದಾರೆ. ಇದು $ 1 ಬಿಲಿಯನ್ ಮೌಲ್ಯದಲ್ಲಿ, 1,527.19 ಕೋಟಿ ರೂ. ನಿಧಿ ಸಂಗ್ರಹಿಸಿದೆ. ಈ ಮೂಲಕ ರುಚಿ ಕಲ್ರಾ - ಆಶಿಶ್ ಮೊಹಾಪಾತ್ರ ಎರಡು ಯುನಿಕಾರ್ನ್‌ಗಳನ್ನು ನಿರ್ಮಿಸಿದ ಭಾರತದಲ್ಲಿ ಮೊದಲ ದಂಪತಿಗಳಾದರು.
Oxyzo ಸಂಸ್ಥೆಯೂ, ತಮ್ಮ ಪ್ಲಾಟ್ ಫಾರ್ಮ್ ನಿಂದ ವಸ್ತುಗಳನ್ನು ಖರೀದಿಸುವವರಿಗೆ ಹಣಕಾಸು ನೆರವನ್ನು ಒದಗಿಸುತ್ತದೆ. ಜೊತೆಗೆ ಸಣ್ಣ ಮತ್ತು ಮಧ್ಯಮ ವ್ಯವಹಾರಗಳಿಗೆ ಸಾಲ ನೀಡುತ್ತದೆ. "ಪ್ರತಿ ವಹಿವಾಟಿನಿಂದ ಲಾಭವನ್ನು ಹೊರತೆಗೆಯಿರಿ" ಎನ್ನುವುದು ಕಲ್ರಾ ಅವರ ಸರಳ ವ್ಯಾಪಾರ ತಂತ್ರವಾಗಿದೆ.
2021ರ ಆರ್ಥಿಕ ವರ್ಷದಲ್ಲಿ 197.53 ಕೋಟಿ ರೂ. ಆದಾಯವನ್ನು ಕಂಪನಿಯು ಗಳಿಸಿದೆ. ಮುಂದಿನ ವರ್ಷದಲ್ಲಿ ಅದು 312.97 ಕೋಟಿ ರೂ.ಗೆ ಏರಿದೆ. 2021-2022ರಲ್ಲಿ 60.34 ಕೋಟಿ ರೂ. ಲಾಭ ಗಳಿಸಿದ್ದು , ಕಳೆದ ವರ್ಷ ಅದು 39.94 ಕೋಟಿ ರೂ ಆಗಿತ್ತು. FY-22 ರಲ್ಲಿ OfBusiness ನ ಆದಾಯವು ಸುಮಾರು 7269 ಕೋಟಿ ರೂ.ಗಳಾಗಿದ್ದರೆ ಕಂಪನಿಯ ತೆರಿಗೆಯ ನಂತರದ ಲಾಭವು 125.63 ಕೋಟಿ ರೂ. ಆಗಿದೆ
2016 ರಲ್ಲಿ 73 ಹೂಡಿಕೆದಾರರು ತಮ್ಮ ಐಡಿಯಾವನ್ನು ತಿರಸ್ಕರಿಸಿದ್ದರು ಎಂದು ಕಲ್ರಾ ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು. ಕಂಪನಿಯನ್ನು ನಡೆಸಲು ಅವರಿಗೆ ಒಂದು ಅವಕಾಶ ಬೇಕಿತ್ತು , ಉಳಿದ ತಿರಸ್ಕಾರಗಳೆಲ್ಲಾವೂ ಈಗ ಇತಿಹಾಸವಾಗಿದೆ.
ಇವರ ಎರಡು ಯುನಿಕಾರ್ನ್‌ಗಳು 52,000 ಕೋಟಿ ರೂ ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ. 2022 ರಲ್ಲಿ ಆವರ ನಿವ್ವಳ ಮೌಲ್ಯವು ಸುಮಾರು 2600 ಕೋಟಿ ರೂ.ಗಳಷ್ಟಿತ್ತು. ಇದೇ ಅವರ ಉದ್ಯಮಶೀಲತೆಯ ಯಶಸ್ಸಿಗೆ ಸಾಕ್ಷಿಯಾಗಿದೆ.
2021ರ ಆರ್ಥಿಕ ವರ್ಷದಲ್ಲಿ 197.53 ಕೋಟಿ ರೂ. ಆದಾಯವನ್ನು ಕಂಪನಿಯು ಗಳಿಸಿದೆ. ಮುಂದಿನ ವರ್ಷದಲ್ಲಿ ಅದು 312.97 ಕೋಟಿ ರೂ.ಗೆ ಏರಿದೆ. 2021-2022ರಲ್ಲಿ 60.34 ಕೋಟಿ ರೂ. ಲಾಭ ಗಳಿಸಿದ್ದು , ಕಳೆದ ವರ್ಷ ಅದು 39.94 ಕೋಟಿ ರೂ ಆಗಿತ್ತು.
FY-22 ರಲ್ಲಿ OfBusiness ನ ಆದಾಯವು ಸುಮಾರು 7269 ಕೋಟಿ ರೂ.ಗಳಾಗಿದ್ದರೆ ಕಂಪನಿಯ ತೆರಿಗೆಯ ನಂತರದ ಲಾಭವು 125.63 ಕೋಟಿ ರೂ. ಆಗಿದೆ
2016 ರಲ್ಲಿ 73 ಹೂಡಿಕೆದಾರರು ತಮ್ಮ ಐಡಿಯಾವನ್ನು ತಿರಸ್ಕರಿಸಿದ್ದರು ಎಂದು ಕಲ್ರಾ ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು. ಕಂಪನಿಯನ್ನು ನಡೆಸಲು ಅವರಿಗೆ ಒಂದು ಅವಕಾಶ ಬೇಕಿತ್ತು , ಉಳಿದ ತಿರಸ್ಕಾರಗಳೆಲ್ಲಾವೂ ಈಗ ಇತಿಹಾಸವಾಗಿದೆ.
ಇವರ ಎರಡು ಯುನಿಕಾರ್ನ್‌ಗಳು 52,000 ಕೋಟಿ ರೂ ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ. 2022 ರಲ್ಲಿ ಆವರ ನಿವ್ವಳ ಮೌಲ್ಯವು ಸುಮಾರು 2600 ಕೋಟಿ ರೂ.ಗಳಷ್ಟಿತ್ತು. ಇದೇ ಅವರ ಉದ್ಯಮಶೀಲತೆಯ ಯಶಸ್ಸಿಗೆ ಸಾಕ್ಷಿಯಾಗಿದೆ.


Click it and Unblock the Notifications