ಐಟಿ, ಫಾರ್ಮಾ, ಹೀಗೆ ಯಾವುದೇ ಉದ್ಯಮವಿರಲಿ, ಭಾರತೀಯರು ವಿಶ್ವದ ಅನೇಕ ಉನ್ನತ ಸಂಸ್ಥೆಗಳನ್ನು ಮುನ್ನಡೆಸುತ್ತಿದ್ದಾರೆ. ಸತ್ಯ ನಾಡೆಲ್ಲಾ, ಲೀನಾ ನಾಯರ್, ಜಯಶ್ರೀ ಉಳ್ಳಾಲ್ ಹೀಗೆ ಅನೇಕ ಭಾರತೀಯ ಮೂಲದ ಬಿಸಿನೆಸ್ ಐಕಾನ್‌ಗಳು ಯಶಸ್ವಿಯಾಗಿ ವ್ಯಾಪಾರಗಳು ಮತ್ತು ಕಂಪನಿಗಳನ್ನು ಮುನ್ನಡೆಸುತ್ತಿದ್ದಾರೆ.
ಇದೇ ರೀತಿ ಮತ್ತೋರ್ವ ಭಾರತೀಯ ಮೂಲದ ಮಹಿಳೆ ರೇವತಿ ಅದ್ವೈತಿ ಕಂಪನಿಯೊಂದರ ಚುಕ್ಕಾಣಿ ಹಿಡಿದು ಯಶಸ್ವಿಯಾಗಿ ಮುಂದಕ್ಕೆ ಕೊಂಡೊಯ್ಯುತ್ತಿದ್ದಾರೆ. STEM ನ ಮಹಿಳೆಯರ ಧ್ವನಿಯಾಗಿದ್ದ ರೇವತಿ ಅದ್ವೈತಿ ಫ್ಲೆಕ್ಸ್‌ನ ಸಿಇಒ (ಹಿಂದೆ ಫ್ಲೆಕ್ಸ್‌ಟ್ರಾನಿಕ್ಸ್) ಆಗಿದ್ದಾರೆ. 2019 ರಲ್ಲಿ ಫ್ಲೆಕ್ಸ್‌ಗೆ ಸೇರುವ ಮೊದಲು ಅದ್ವೈತಿ ಈಟನ್ ಮತ್ತು ಹನಿವೆಲ್ ಸಂಸ್ಥೆಯಲ್ಲಿ ಹಲವಾರು ಉನ್ನತ ಹುದ್ದೆಯನ್ನು ನಿಭಾಯಿಸಿದ್ದರು.

ರೇವತಿ ಅದ್ವೈತಿ ಯಾರು?
ರೇವತಿ ಅದ್ವೈತಿ ಭಾರತೀಯ ಮೂಲದ ಅಮೇರಿಕನ್ ಉದ್ಯಮ ಸಂಸ್ಥೆಯ ಕಾರ್ಯನಿರ್ವಾಹಕರಾಗಿದ್ದಾರೆ. ಅದ್ವೈತಿ ಅವರು ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್‌ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಹಾಗೂ 2005 ರಲ್ಲಿ ಥಂಡರ್ ಬರ್ಡ್ ಸ್ಕೂಲ್ ಆಫ್ ಗ್ಲೋಬಲ್ ಮ್ಯಾನೇಜ್‌ಮೆಂಟ್‌ನಿಂದ ಎಂಬಿಎ ಪದವಿ ಪಡೆದಿದ್ದಾರೆ.
ಅದ್ವೈತಿ ಅವರು ಒಕ್ಲಹೋಮಾದ ಶಾವ್ನಿಯಲ್ಲಿರುವ ಈಟನ್‌ನ ಶಾಪ್ ಒಂದರ ಫ್ಲೋರ್ ಸೂಪರ್ವೈಸರ್ ಆಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. 2002ರಲ್ಲಿ ಹನಿವೆಲ್ ಸೇರಿದ ನಂತರಲ್ಲಿ ಪ್ರೊಡಕ್ಷನ್ ಮತ್ತು ಲಾಜಿಸ್ಟಿಕ್ಸ್ ಗೆ ಸಂಬಂಧಪಟ್ಟಂತೆ ವಿವಿಧ ಹುದ್ದೆಗಳಲ್ಲಿ ಆರು ವರ್ಷಗಳ ಕಾಲ ಕೆಲಸ ಮಾಡಿದರು.
ಅದ್ವೈತಿ 2008ರಲ್ಲಿ ಮತ್ತೆ ಈಟನ್ ಸಂಸ್ಥೆಗೆ ಹಿಂತಿರುಗಿದ ಅವರು ಈಟನ್‌ನ ಸಿಒಒ ಹುದ್ದೆಗೇರುವ ಮೊದಲು ಎಲೆಕ್ಟ್ರಿಕಲ್ ವ್ಯಾಪಾರ ಘಟಕದೊಳಗಿನ ಹಲವಾರು ವಿಭಾಗಗಳ ನಿರ್ವಹಣೆಯಲ್ಲಿ ಹತ್ತು ವರ್ಷಗಳ ಕಾಲ ಸಹಾಯ ಮಾಡಿದರು. ಮುಂದೆ ನೆಕ್ಸ್ಟ್ ಜನರೇಷನ್ ಟೆಕ್ನಾಲಜಿ, ಉತ್ಪಾದನೆ ಹಾಗೂ ಪೂರೈಕೆ ಚೈನ್ ಕಡೆ ಹೆಚ್ಚಿನ ಗಮನಹರಿಸಿದ ಅವರು 2019ರ ಫೆಬ್ರವರಿಯಲ್ಲಿ ಫ್ಲೆಕ್ಸ್ ಸಿಇಒ ಆಗಿ ನೇಮಕಗೊಂಡರು.
ಫ್ಲೆಕ್ಸ್‌ನ ಪ್ರಮುಖ ಬಿಸಿನೆಸ್ ಆಗಿದ್ದು, ಅದ್ವೈತಿ ಅವರ ನಾಯಕತ್ವದಲ್ಲಿ ಕಂಪನಿಯು ಎಂಡ್ ಟು ಎಂಡ್ ಕ್ಲೈಂಟ್ ವ್ಯಾಲು ಚೈನ್ ಓನರ್‌ಶಿಪ್ ಕಡೆಗೆ ಹೆಚ್ಚಿನ ಗಮನ ಕೊಟ್ಟರು. ರೇವತಿ ಕಂಪನಿಯನ್ನು ಮುನ್ನಡೆಸುವಲ್ಲಿ ತಮ್ಮದೇ ಶೈಲಿಯನ್ನು ಹೊಂದಿದ್ದು, ಯಾವುದೇ ನಿರ್ಧಾರಗಳನ್ನು ತ್ವರಿತವಾಗಿ ತೆಗೆದುಕೊಳ್ಳುತ್ತಾರೆ.
ತಮ್ಮ ಕಾರ್ಪೊರೇಟ್ ಕಾರ್ಯತಂತ್ರವು ವೈವಿಧ್ಯತೆ, ಒಳಗೊಳ್ಳುವಿಕೆ ಹಾಗೂ ಸುಸ್ಥಿರತೆಯನ್ನು ಹೊಂದಿರುತ್ತದೆ ಎನ್ನುತ್ತಾರೆ ರೇವತಿ ಅವರು. ರೇವತಿ ಅವರ ತಾಯಿ ವಿಸಲಂ ಸ್ವಾಮಿ ಗೃಹಿಣಿಯಾಗಿದ್ದು, ತಂದೆ ಎಎನ್‌ಎನ್ ಸ್ವಾಮಿ ಅವರು ಕೆಮಿಕಲ್ ಎಂಜಿನಿಯರ್ ಆಗಿದ್ದಾರೆ. ಚೆನ್ನೈನಲ್ಲಿ ನೆಲೆಸುವ ಮೊದಲು ಅವರ ಕುಟುಂಬವು ಬಿಹಾರ, ಗುಜರಾತ್ ಹಾಗೂ ಅಸ್ಸಾಂನಲ್ಲಿ ವಾಸಿಸಿದ್ದರು.
ರೇವತಿ ಅದ್ವೈತಿ ಅವರು ವಾರ್ಷಿಕ 131 ಕೋಟಿ ರೂಪಾಯಿ ವೇತನ ಪಡೆಯುತ್ತಾ ಇರುವುದಾಗಿ ಫ್ಲೆಕ್ಸ್ ವಾರ್ಷಿಕ ವರದಿ ತಿಳಿಸಿದೆ. ಅದರಂತೆ ರೇವತಿ ಅವರು ಪ್ರತಿ ತಿಂಗಳು 10.9 ಕೋಟಿ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಮಾಧ್ಯಮದ ವರದಿಗಳ ಪ್ರಕಾರ, ರೇವತಿ ಅವರ ಆಸ್ತಿ ಮೌಲ್ಯವು 36 ರಿಂದ 54.5 ಮಿಲಿಯನ್ ಡಾಲರ್ ನಡುವೆ ಇದೆ ಎಂದು ಅಂದಾಜಿಸಲಾಗಿದೆ.


Click it and Unblock the Notifications