ಅನೀಶಾ ಗಾಂಧಿ ತಿವಾರಿ ಅವರು ಭಾರತದ ಐದನೇ ಶ್ರೀಮಂತ ಮಹಿಳೆಯಾಗಿರುವ ಲೀನಾ ತಿವಾರಿ ಅವರ ಪುತ್ರಿ. ಅನೀಶಾ ಅವರು ಅಮೇರಿಕಾದ ಬ್ರೌನ್ ವಿಶ್ವವಿದ್ಯಾಲಯ, ಪ್ರಾವಿಡೆನ್ಸ್ ನ ಹಾನರ್ಸ್ ನೊಂದಿಗೆ ಬಯೋಕೆಮಿಸ್ಟ್ರಿ ಮತ್ತು ಮೊಲ್ಕ್ಯುಲರ ಬಯೋಲಜಿಯಲ್ಲಿ ಪದವಿಯನ್ನು ಪಡೆದಿದ್ದಾರೆ.
ಜೊತೆಗೆ ಜಾಗತಿಕವಾಗಿ ಗುರುತಿಸಲ್ಪಟ್ಟ ಅಮೇರಿಕಾದ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT), ಕೇಂಬ್ರಿಡ್ಜ್ ನಲ್ಲಿ ಆಣ್ವಿಕ ಜೀವಶಾಸ್ತ್ರ (Molecular Biology) ದಲ್ಲಿ ಪಿಎಚ್‌ಡಿ ಕೂಡಾ ಮಾಡಿದ್ದಾರೆ. ಆಗಸ್ಟ್ 2022 ರಲ್ಲಿ ಯುಎಸ್‌ವಿನ ಬೋರ್ಡ್‌ಗೆ ನಿರ್ದೇಶಕರಲ್ಲಿ ಒಬ್ಬರಾಗಿ ಅನೀಶಾ ನೇಮಕಗೊಂಡಿದ್ದಾರೆ. ಅನೀಶಾ ಮತ್ತು ಅವರ ತಾಯಿ ಲೀನಾ ತಿವಾರಿ ಕಡಿಮೆ ಪ್ರೊಫೈಲ್ ಅನ್ನು ಇಟ್ಟುಕೊಂಡಿದ್ದು ಹೆಚ್ಚು ಪ್ರಚಾರ ಬಯಸದವರಾಗಿದ್ದಾರೆ.

ಲೀನಾ ತಿವಾರಿ ಯಾರು?
ಲೀನಾ ತಿವಾರಿ ಅವರು ಖಾಸಗಿಯಾಗಿ ನಡೆಸುವ ಯುಎಸ್‌ವಿ ಇಂಡಿಯಾದ ಅಧ್ಯಕ್ಷರಾಗಿ ಇಡೀ ಕಂಪನಿಯ ಜವಬ್ದಾರಿ ಹೊತ್ತು ನಿಭಾಯಿಸುತ್ತಿದ್ದಾರೆ. ಲೀನಾ ಅವರ ಪ್ರಸ್ತುತ ನಿವ್ವಳ ಮೌಲ್ಯ 39,860 ರೂಪಾಯಿ ಆಗಿದ್ದು, ಇದು ಅವರನ್ನು ಶ್ರೀಮಂತ ಮಹಿಳಾ ಉದ್ಯಮಿಗಳಲ್ಲಿ ಒಬ್ಬರನ್ನಾಗಿ ಮಾಡಿದೆ. ಬಯೋಕಾನ್‌ನ ಕಿರಣ್ ಮಜುಂದಾರ್-ಶಾ, ನೈಕಾ ಸಂಸ್ಥೆಯ ಫಲ್ಗುಣಿ ನಾಯರ್ ಮತ್ತು ಇತರರ ಮಹಿಳಾ ಉದ್ಯಮಿಗಳು ಲೀನಾ ಅವರ ನಂತರ ಸಾಲಿನಲ್ಲಿ ನಿಲ್ಲುತ್ತಾರೆ.
ಲೀನಾ ಬೃಹತ್ ಫಾರ್ಮಾ ಕಂಪನಿಯನ್ನು ಮುನ್ನಡೆಸುತ್ತಿದ್ದು, ಇದನ್ನು 1961 ರಲ್ಲಿ, ಆಕೆಯ ದಿವಂಗತ ತಂದೆ ವಿಠಲ್ ಗಾಂಧಿ ಅವರು ರೆವ್ಲಾನ್ ಜೊತೆಗೆ ಸ್ಥಾಪಿಸಿದರು. ಇಂದು, ಅವರ ಫಾರ್ಮಾ ಕಂಪನಿಯು ಹೃದಯರಕ್ತನಾಳದ ಮತ್ತು ಮಧುಮೇಹ ಔಷಧಿಗಳ ವಿಭಾಗದಲ್ಲಿ ಭಾರತದ ಅಗ್ರ ಐದು ಸಂಸ್ಥೆಗಳಲ್ಲಿ ಒಂದಾಗಿದೆ.
ತಂದೆಯ ನಂತರ ಉದ್ಯಮವನ್ನು ಯಶಸ್ಸಿನ ಕಡೆಗೆ ಕೊಂಡೊಯ್ಯುತ್ತಿರುವ 65 ವರ್ಷ ವಯಸ್ಸಿನ ಉದ್ಯಮಿ ಲೀನಾ ತಿವಾರಿ ಮುಂಬೈ ವಿಶ್ವವಿದ್ಯಾನಿಲಯದಿಂದ ಬಿಕಾಂ ಮುಗಿಸಿದ್ದು, ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮಾಡಿದ್ದಾರೆ.
ಲೀನಾ ಅವರು ಮಾನವೀಯ ಕಾರ್ಯಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದು, ಹಿಂದುಳಿದ ಮಹಿಳೆಯರಿಗೆ ಶಿಕ್ಷಣಕ್ಕಾಗಿ ಹೆಚ್ಚಿನ ಬೆಂಬಲವನ್ನು ನೀಡುತ್ತಾರೆ. ಯಶಸ್ವಿಯಾಗಿ ಉದ್ಯಮ ಮತ್ತು ಸಾಮಾಜಿಕ ಕಾರ್ಯವನ್ನು ನಿರ್ವಹಿಸುವುದರ ಜೊತೆಗೆ, ಲೀನಾ ತಿವಾರಿ ತಮ್ಮ ಬಿಡುವಿನ ವೇಳೆಯಲ್ಲಿ ಟ್ರಾವೆಲಿಂಗ್ ಮಾಡುವುದು ಅವರ ಹವ್ಯಾಸವಾಗಿದೆ.


Click it and Unblock the Notifications