ಇತ್ತೀಚಿನ ವರ್ಷಗಳಲ್ಲಿ ಯೂಟ್ಯೂಬರ್ ಆಗಿರುವುದು ಕೂಡಾ ಒಂದು ವೃತ್ತಿಯಾಗಿದೆ. ಯಾಕೆಂದರೆ ಯೂಟ್ಯೂಬ್‌ನಲ್ಲಿ ಹೊಸ ಹೊಸ ಕಂಟೆಂಟ್ ಇರುವ ವಿಡಿಯೋ ಆಪ್ ಲೋಡ್ ಮಾಡುತ್ತಾ ತಮ್ಮದೇ ಆಗಿರುವ ಪಾಲೋವರ್ಸ್‌ಗಳನ್ನು ಹೊಂದಿ ಅದರಿಂದಲೇ ಆದಾಯ ಸಂಪಾದಿಸುತ್ತಿದ್ದಾರೆ.
ತಮ್ಮ ಪ್ರಯಾಣವನ್ನು ಸಣ್ಣ ಸೆಟಪ್‌ನೊಂದಿಗೆ ಆರಂಭಿಸಿ ಜಗತ್ತಿನೊಂದಿಗೆ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುವ ಲಕ್ಷಾಂತರ ಯೂಟ್ಯೂಬರ್‌ಗಳು ಪ್ರಪಂಚದಾದ್ಯಂತ ಇದ್ದಾರೆ. ಅನೇಕರು ವ್ಲಾಗ್, ಪ್ರವಾಸ, ಟೆಕ್ನಾಲಜಿ ಹೀಗೆ ಅನೇಕ ವಿಚಾರಗಳನ್ನು ಇಟ್ಟುಕೊಂಡು ವಿಡಿಯೋ ತಯಾರಿಸಿದರೆ ಇನ್ನು ಕೆಲವರು, ಅಡುಗೆಯ ವಿಚಾರವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

ಹೀಗೆ ಅಡುಗೆ ಮಾಡುವ ವೀಡಿಯೋಗಳನ್ನು ರೆಕಾರ್ಡ್ ಮಾಡಿ ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿಅಪ್ಲೋಡ್ ಮಾಡಿ ಒಬ್ಬ ಮಹಿಳೆ ಇವತ್ತು ಶ್ರೀಮಂತ ಮಹಿಳೆಯಾಗಿದ್ದಾರೆ. ಅವರೇ ಯೂಟ್ಯೂಬ್ ಬಾಣಸಿಗ ನಿಶಾ ಮಧುಲಿಕಾ. ಇವರಿಗೆ ಯೂಟ್ಯೂಬ್‌ನಲ್ಲಿ ಸುಮಾರು 14 ಮಿಲಿಯನ್‌ಗಿಂತಲೂ ಹೆಚ್ಚು ಸಬ್‌ಸ್ಕ್ರೈವರ್ಸ್ ಇದ್ದು, ನಿಶಾ ಮಧುಲಿಕಾ ಅವರು ತಮ್ಮ ಆಹಾರ ತಯಾರಿಕೆಯ ಜ್ಞಾನ ಮತ್ತು ವಿಭಿನ್ನ ಪಾಕವಿಧಾನದ ವೀಡಿಯೊಗಳಿಂದ ಜನಪ್ರಿಯರಾಗಿದ್ದಾರೆ.
ಮಾತ್ರವಲ್ಲದೇ ಭಾರತೀಯ ಯೂಟ್ಯೂಬ್ ಕಂಟೆಂಟ್ ಪ್ರೊವೈಡರ್‌ಗಳ ವಿಶಾಲ ಕ್ಷೇತ್ರದಲ್ಲಿ ನಿಶಾ ಮಧುಲಿಕಾ ಅವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಪ್ರಾರಂಭದಲ್ಲಿ ಬೋಧನೆಯ ಮೂಲಕ ಹಿಂದುಳಿದ ಮಕ್ಕಳಿಗೆ ಜ್ಞಾನವನ್ನು ನೀಡಲು ಮೀಸಲಾಗಿದ್ದ ನಿಶಾ ಅವರ ವೀಡಿಯೋಗಳು, ಇದೇ ವೇಳೆ ಪಾಕಶಾಲೆಯಲ್ಲಿ ಅವರಿಗಿದ್ದ ಉತ್ಸಾಹವನ್ನು ಹೇಳುವಂತಹ ಆಹಾರದ ಬ್ಲಾಗ್ ಅನ್ನು ಶುರು ಮಾಡಿದರು.
ಅಂದರೆ ಆಗ 54 ವರ್ಷ ವಯಸ್ಸಿನವರಾಗಿದ್ದ ನಿಶಾ ಮಧುಲಿಕಾ 2007 ರಲ್ಲಿ ತಮ್ಮದೇ ಆದ ವೆಬ್‌ಸೈಟ್ ಅನ್ನು ಪ್ರಾರಂಭಿಸಿದರು. 2011 ರ ಮಧ್ಯದಲ್ಲಿ, ಅವರು ತಮ್ಮ ಯೂಟ್ಯೂಬ್ ಚಾನಲ್ ಅನ್ನು ಪ್ರಾರಂಭಿಸಿದರು. ಸುಲಭವಾಗಿ ದೊರಕುವ ಪದಾರ್ಥಗಳನ್ನು ಬಳಸಿ ಭಕ್ಷ್ಯಗಳನ್ನು ರಚಿಸಲು ಅವಳು ಹೆಸರುವಾಸಿಯಾಗಿದ್ದು ಇಲ್ಲಿಯವರೆಗೆ, ಅವರು ತಮ್ಮ ಚಾನಲ್‌ಗೆ 2200 ಕ್ಕೂ ಹೆಚ್ಚು ವೀಡಿಯೊಗಳನ್ನು ಅಪ್‌ಲೋಡ್ ಮಾಡಿದ್ದಾರೆ.
ಇಂದು ನಿಶಾ ಇಂಟರ್ನೆಟ್‌ನಲ್ಲಿ ಲೋಕದಲ್ಲಿ ಅತ್ಯಂತ ಪ್ರಸಿದ್ಧ ಆಹಾರ ತಯಾರಕರಾಗಿದ್ದಾರೆ. ನಿಶಾ ಮಧುಲಿಕಾ ಅವರ ಈ ಅದ್ಬುತ ಪ್ರಯಾಣದಿಂದ ಇಂದು ಅವರು ಸುಮಾರು 29 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯಕ್ಕೆ ಬೆಳೆದುನಿಂತಿದ್ದಾರೆ. ಅವರ ಈ ಸಾಧನೆಯೂ ಅವರಲ್ಲಿದ್ದಉದ್ಯಮಶೀಲತೆಯ ಶಕ್ತಿಗೆ ಮತ್ತು ಡಿಜಿಟಲ್ ಯುಗದ ಅಪಾರ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.
ನಿಜಕ್ಕೂ ಈ ಸ್ಟೋರಿ ಅಂತರ್ಜಾಲದ ಕ್ರಾಂತಿಕಾರಿ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ. ಇಂಟರ್ ನೆಟ್ ಜಗತ್ತಿನಲ್ಲಿ ಸೃಜನಶೀಲತೆ, ಉತ್ಸಾಹ ಮತ್ತು ಸ್ಥಿರತೆ ಇದ್ದರೆ ಅದು ಸಾಮಾನ್ಯ ಜೀವನವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ಇಂಟರ್ನೆಟ್ ನಿರಂತರವಾಗಿ ತನ್ನ ಆಟದ ನಿಯಮಗಳನ್ನು ಆಗ್ಗಾಗೆ ಬದಲಾಯಿಸುತ್ತದೆ.
ಹೀಗಾಗಿ ನಿಯಮಗಳಿಗೆ ಅನುಸಾರವಾಗಿ ಕಠಿಣ ಪರಿಶ್ರಮ ಪಟ್ಟು ಸೃಜನಶೀಲತೆಯೊಂದಿಗೆ ಸಾಗಿದರೆ ತಮ್ಮ ಉತ್ಸಾಹವನ್ನು ಯಶಸ್ವಿ ಡಿಜಿಟಲ್ ವ್ಯವಹಾರವಾಗಿ ಬದಲಾಯಿಸಬಹುದು ಎಂಬುವುದು ನಿಶಾ ಅವರ ಸ್ಟೋರಿ ಸ್ಫೂರ್ತಿ ನೀಡುತ್ತದೆ. ಪ್ರಸ್ತುತ, ಐದು ವೃತ್ತಿಪರರ ತಂಡವು ನಿಶಾ ಅವರ ಆನ್‌ಲೈನ್ ಕೆಲಸವನ್ನು ನೋಡಿಕೊಳ್ಳುತ್ತಿದೆ.


Click it and Unblock the Notifications