New Year 2024: ಹೊಸ ವರ್ಷದಲ್ಲಿ ಆಹಾರ ಬೆಲೆ ಏರಿಕೆಯಾಗುತ್ತಾ, ಇಳಿಕೆಯಾಗುತ್ತಾ, ಮಧ್ಯಮ ವರ್ಗದ ಸ್ಥಿತಿಯೇನು?

ಭಾರತದ ರಿಟೇಲ್ ಹಣದುಬ್ಬರವು ಅಕ್ಟೋಬರ್‌ನಲ್ಲಿ ಇಳಿಕೆಯಾಗಿದೆ. ಐದು ತಿಂಗಳ ಕನಿಷ್ಠ ಮಟ್ಟಕ್ಕೆ ತಲುಪಿ ಶೇಕಡ 4.87 ಕ್ಕೆ ತಲುಪಿದೆ. ಅಂದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನ ಸಹಿಷ್ಣುಮಟ್ಟ ಶೇಕಡ 4 ರ ಸಮೀಪದಲ್ಲಿದೆ. ಇದರಿಂದಾಗಿ ತರಕಾರಿ, ಆಹಾರ ಪದಾರ್ಥಗಳ ಬೆಲೆ ಸ್ಥಿರವಾಗಿರುವ ನಿರೀಕ್ಷೆಯಿದೆ.

ಅಕ್ಟೋಬರ್‌ನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ರಿಟೇಲ್ ಹಣದುಬ್ಬರವು ಶೇಕಡ 5.12 ರಷ್ಟಿದ್ದರೆ, ನಗರ ಪ್ರದೇಶಗಳಲ್ಲಿ ಅದು ಶೇಕಡ 4.62 ರಷ್ಟಿದೆ. ಈಗಾಗಲೇ ನಾವು ವರ್ಷದ ಕೊನೆಯ ತಿಂಗಳಲ್ಲಿ ಇದ್ದೇವೆ. ಹೊಸ ವರ್ಷದಲ್ಲಿ ಆಹಾರ ವಸ್ತುಗಳ ಬೆಲೆ ಏರಿಕೆಯಾಗುತ್ತಾ ಅಥವಾ ಇಳಿಕೆಯಾಗುತ್ತಾ?, ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

 ಹೊಸ ವರ್ಷದಲ್ಲಿ ಆಹಾರ ಬೆಲೆ ಏರಿಕೆಯಾಗುತ್ತಾ, ಇಳಿಕೆಯಾಗುತ್ತಾ?

ಆಹಾರದ ಬೆಲೆ ಏರುತ್ತಾ, ಇಳಿಯುತ್ತಾ?

ಹಣದುಬ್ಬರವನ್ನು ನಿಯಂತ್ರಿಸಲು ಆರ್‌ಬಿಐ ಮತ್ತು ಸರ್ಕಾರವು ಸಂಘಟಿತ ಪ್ರಯತ್ನಗಳ ಹೊರತಾಗಿಯೂ, ಎಲ್ಲ ಅಗತ್ಯ ವಸ್ತುಗಳ ದರವು, ಮುಖ್ಯವಾಗಿ ಆಹಾರ ವಸ್ತುಗಳ ದರದ ಮೇಲೆ ಪ್ರಭಾವ ಉಂಟು ಮಾಡಿದೆ. ಶೇಕಡ 4ರಷ್ಟು ರಿಟೇಲ್ ಹಣದುಬ್ಬರಕ್ಕೆ ಇಳಿಯುವ ನಿರೀಕ್ಷೆಯಿದೆ. ಅಕ್ಟೋಬರ್ 2023 ಒಂದು ಮಹತ್ವದ ತಿರುವು ನೀಡಿದೆ.

October WPI Inflation: ಅಕ್ಟೋಬರ್‌ನಲ್ಲಿ ಸತತ 7ನೇ ತಿಂಗಳಿಗೆ ಸಗಟು ಹಣದುಬ್ಬರ ನೆಗೆಟಿವ್, ಎಷ್ಟಿದೆ?
ಸತತ ಎರಡನೇ ತಿಂಗಳಿಗೆ, ಸಿಪಿಐ ಹಣದುಬ್ಬರವು ಆರ್‌ಬಿಐನ ಸಹಿಷ್ಣುಮಟ್ಟ ಶೇಕಡ 4 ರ ಒಳಗಿದೆ. ಆದ್ದರಿಂದಾಗಿ ಆರ್‌ಬಿಐಗೆ ಭರವಸೆಯು ಕೂಡಾ ಇದೆ. 2023 ರ ವರ್ಷವು ಒಂದೆರಡು ವಾರಗಳಲ್ಲಿ ಕೊನೆಗೊಳ್ಳಲಿದೆ. 2024 ರಲ್ಲಿ ಹಣದುಬ್ಬರವು ಆಹಾರ ಬೆಲೆಯ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುವುದು ಈಗ ಕುತೂಹಲವಾಗಿದೆ. ಈ ನಡುವೆ ಆರ್‌ಬಿಐ ಹೊಸ ವರ್ಷದಲ್ಲಿ ಮತ್ತೆ ರೆಪೋ ದರ ಹೆಚ್ಚಿಸುತ್ತದೆಯೇ ಅಥವಾ ಇಳಿಸುತ್ತದೆಯೇ ಎಂದು ನಾವು ಕಾದುನೋಡಬೇಕಾಗಿದೆ.

ಅಕ್ಟೋಬರ್ ರಿಟೇಲ್ ಹಣದುಬ್ಬರವು ಮುಖ್ಯವಾಗಿ ಆಹಾರ ಪದಾರ್ಥಗಳ ಇಳಿಕೆಯಿಂದಾಗಿ ಕುಸಿತ ಕಂಡಿದೆ. ವಿತ್ತೀಯ ನೀತಿ ಸಮಿತಿಯು (ಎಂಪಿಸಿ), ಅದರ ಅಕ್ಟೋಬರ್ ಸಭೆಯಲ್ಲಿ, 2023-24 ರಲ್ಲಿ ಶೇಕಡ 6.7ರಿಂದ ಶೇಕಡ 5.4ಕ್ಕೆ ಇಳಿಸಿದೆ. ಈ ಬಗ್ಗೆ ಅಧಿಕ ಮಾಹಿತಿ ಈ ಕೆಳಗಿದೆ.

2024 ರಲ್ಲಿ ಬೆಲೆ ಏನಾಗಲಿದೆ?

"ಅಧಿಕ ಹಣದುಬ್ಬರದಿಂದಾಗಿ ಮಧ್ಯಮ ವರ್ಗದವರ ಕೊಳ್ಳುವ ಶಕ್ತಿಯು ಈಗಾಗಲೇ ಕಡಿಮೆಯಾಗುತ್ತಿದೆ. ನಾವು ಬಳಕೆಯ ಬಾಸ್ಕೆಟ್ ಅನ್ನು ನೋಡಿದಾಗ ಆಹಾರವು ಎಂದಿಗೂ ಕೂಡಾ ಪ್ರಮುಖವಾಗುತ್ತದೆ. ಹಣದುಬ್ಬರಕ್ಕೆ ಭಾರತದಲ್ಲಿ ಆಹಾರವು ಪ್ರಮುಖ ಕೊಡುಗೆಯನ್ನು ನೀಡುತ್ತದೆ," ಎಂದು ಯೆಸ್ ಬ್ಯಾಂಕ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಇಂದ್ರನಿಲ್ ಪಾನ್ ಹೇಳಿದ್ದಾರೆ.

"ಹಣದುಬ್ಬರವು ಪ್ರಮುಖವಾಗಿ ಮಧ್ಯಮವರ್ಗದ ಜನರಿಗೆ ಪ್ರಭಾವ ಬೀರುತ್ತದೆ. ಆಹಾರ ಹಣದುಬ್ಬರವನ್ನು ನಿಜವಾಗಿಯೂ ಹೆಚ್ಚು ಗಮನಹರಿಸಬೇಕಾದ ಹಣದುಬ್ಬರವಾಗಿದೆ. ಜಾಗತಿಕ ಹವಾಮಾನ ಬದಲಾವಣೆಗಳು, ಎಲ್ ನಿನೋ ಕಾರಣದಿಂದಾದ ಬೆಳೆ ಹಾನಿ ಮೊದಲಾದವುಗಳು ಪ್ರಮುಖ ಸಮಸ್ಯೆಗಳಾಗಿದೆ. ಬೆಲೆಯ ಏರಿಕೆಯ ಸಾಧ್ಯತೆ ಅಧಿಕವಾಗಿದೆ," ಎಂದು ಇಂದ್ರನಿಲ್ ಪಾನ್ ತಿಳಿಸಿದರು.

ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಡಿಬಿಎಸ್ ಬ್ಯಾಂಕ್‌ನ ಹಿರಿಯ ಅರ್ಥಶಾಸ್ತ್ರಜ್ಞರಾದ ರಾಧಿಕಾ ರಾವ್, "ಮುಂದಿನ ತಿಂಗಳುಗಳಲ್ಲಿ ಹಣದುಬ್ಬರವು ಏರಿಕೆಯಾಗುವ ನಿರೀಕ್ಷೆಯಿದೆ. ಕೆಲವು ತರಕಾರಿಗಳ ಬೆಲೆ ತೀಕ್ಷ್ಣವಾಗಿ ಏರಿಕೆಯಾಗಿರುವ ಕಾರಣದಿಂದಾಗಿ ಈ ತ್ರೈಮಾಸಿಕದಲ್ಲಿ ಶೇಕಡ 5ಕ್ಕೆ ತಲುಪುವ ಸಾಧ್ಯತೆಯಿದೆ," ಎಂದು ಹೇಳಿದರು.

ಒಟ್ಟಾರೆಯಾಗಿ ಜಾಗತಿಕ ಹವಾಮಾನ ಬದಲಾವಣೆಗಳು, ಎಲ್ ನಿನೋ ಹಾಗೂ ಇತರೆ ಕಾರಣಗಳಿಂದಾಗಿ ಬೆಲೆಯು ಅಧಿಕವಾಗುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಾರೆ. ಅಂದರೆ ಹೊಸ ವರ್ಷದಲ್ಲಿ ಬೆಲೆ ಏರಿಕೆಯಾದರೆ ಶೀಘ್ರವೇ ರೆಪೋ ದರವು ಕೂಡಾ ಇಳಿಯದು. ಇದು ಸಂಪೂರ್ಣವಾಗಿ ಎಲ್ಲ ಮಧ್ಯಮ ಮತ್ತು ಬಡ ವರ್ಗಕ್ಕೆ ಪ್ರಭಾವ ಬೀರಲಿದೆ.

ಆಹಾರ ದರದ ವ್ಯತ್ಯಾಸ ತಿಳಿದಿರಿ

ಭಾರತದಲ್ಲಿ, ಫಾರ್ಮ್ ಗೇಟ್ ಮತ್ತು ಫುಡ್ ಪ್ಲೇಟ್ ಬೆಲೆಗಳ ನಡುವೆ ದೊಡ್ಡ ವ್ಯತ್ಯಾಸವಿದೆ. ಭಾರತದಲ್ಲಿನ ರೈತರ ಬಜೆಟ್ ಮೇಲೆ ಧನಾತ್ಮಕವಾಗಿ ಪ್ರಭಾವ ಬೀರುವುದಿಲ್ಲ. "ಆಹಾರವು ಬಜೆಟ್‌ನ ಹೆಚ್ಚಿನ ಭಾಗವನ್ನು ಕವರ್ ಮಾಡುತ್ತದೆ. ಮಧ್ಯಮ ವರ್ಗದ ಜನರು ಸಾಮಾನ್ಯವಾಗಿ ತಮ್ಮ ಖರ್ಚುಗಳಲ್ಲಿ ಅನಿವಾರ್ಯವಲ್ಲದ ಖರ್ಚುಗಳನ್ನು ಕಡಿಮೆ ಮಾಡಬೇಕಾಗುತ್ತದೆ. ಬಜೆಟ್ ಮರುಹಂಚಿಕೆ ಮಾಡಬೇಕಾಗುತ್ತದೆ. ಆಹಾರದ ಬಳಕೆಯೂ ಕೂಡಾ ಕಡಿಮೆಯಾಗಲಿದೆ," ಎಂದು ಇಂದ್ರನಿಲ್ ಪಾನ್ ಹೇಳುತ್ತಾರೆ.

ಆಹಾರ ಬೆಲೆ ಅಧಿಕವಾದಂತೆ ಜನರು ತಮ್ಮ ಖರ್ಚಿನಲ್ಲಿ ಅಗತ್ಯವಲ್ಲದ ವಸ್ತುಗಳನ್ನು ಗುರುತಿಸಿ ಅದನ್ನು ಕಡಿಮೆ ಮಾಡುತ್ತಾರೆ. ಇನ್ನು ಹಣದುಬ್ಬರವು ಅಧಿಕವಾದರೆ ಆರ್‌ಬಿಐ ತನ್ನ ರೆಪೋ ದರವನ್ನು ಶೀಘ್ರವೇ ಇಳಿಸುವ ಸಾಧ್ಯತೆ ಇಲ್ಲ. ಇದರಿಂದಾಗಿ ಸಾಲವನ್ನು ಪಡೆದ ಜನರಿಗೆ ಯಾವುದೇ ಪರಿಹಾರ ಲಭ್ಯವಾಗುವ ಸಾಧ್ಯತೆಯಿಲ್ಲ ಎಂದು ಸೂಚಿಸುತ್ತದೆ. ಅಧಿಕ ಹಣದುಬ್ಬರವು ಸಾಮಾನ್ಯವಾಗಿಯೇ ಜನರ ಆದಾಯದ ಮೇಲೆ ಪ್ರಭಾವ ಬೀರುತ್ತದೆ.

ಆರ್‌ಬಿಐನ ಮುಂದಿನ ಸಭೆ

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಎಂಪಿಸಿ ಡಿಸೆಂಬರ್ 6 ರಂದು ತನ್ನ ಮೂರು ದಿನಗಳ ಚರ್ಚೆಯನ್ನು ಪ್ರಾರಂಭಿಸಲಿದೆ. ದಾಸ್ ಆರು ಸದಸ್ಯರ ಎಂಪಿಸಿಯ ನಿರ್ಧಾರವನ್ನು ಡಿಸೆಂಬರ್ 8 ರಂದು ಬೆಳಿಗ್ಗೆ ತಿಳಿಸಲಿದ್ದಾರೆ. ಆರ್‌ಬಿಐ ಕೊನೆಯದಾಗಿ ಫೆಬ್ರವರಿಯಲ್ಲಿ ರೆಪೊ ದರವನ್ನು ಶೇಕಡ 6.5 ಕ್ಕೆ ಏರಿಸಿದೆ. ಅದಾದ ಬಳಿಕ ರೆಪೋ ದರ ಸ್ಥಿರವಾಗಿಯೇ ಉಳಿದಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+