ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ ಏನಾದರೂ ತಪ್ಪಾದರೆ ಅದರ ವಿರುದ್ಧ ದೂರು ದಾಖಲಿಸಬೇಕೇ, ಆದರೆ ಹೇಗೆ? ಭಾರತದಲ್ಲಿ ನೀವು ಮ್ಯೂಚುವಲ್ ಫಂಡ್ ವಿರುದ್ಧ ದೂರು ದಾಖಲು ಮಾಡಬೇಕೆಂದಿದ್ದರೆ, ಅದಕ್ಕೂ ಕೆಲವೊಂದು ಪ್ರಕ್ರಿಯೆಗಳು ಇದೆ. ಹೌದು, ನೀವು ಸೆಕ್ಯೂರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾಕ್ಕೆ (ಸೆಬಿ) ನೀವು ಮ್ಯೂಚುವಲ್ ಫಂಡ್ ವಿರುದ್ಧ ದೂರು ನೀಡಬಹುದು ಅಥವಾ ಮ್ಯೂಚುವಲ್ ಫಂಡ್ ಕಂಪನಿಯಲ್ಲಿಯೇ ನೀವು ದೂರು ದಾಖಲಿಸಬಹುದು.
ಕೆಲವು ಸಂದರ್ಭಗಳಲ್ಲಿ ನೀವು ಸೆಬಿಯಲ್ಲಿ ಮ್ಯೂಚುವಲ್ ಫಂಡ್ ಸಂಸ್ಥೆ ವಿರುದ್ಧ ದೂರನ್ನು ದಾಖಲು ಮಾಡಬಹುದು. ಇಂತಹ ಸಂದರ್ಭದಲ್ಲಿ ನೀವು ಮೊದಲು ಸಂಸ್ಥೆಗೆ ಮಾಹಿತಿ ನೀಡಬೇಕಾಗುತ್ತದೆ. ಸಂಸ್ಥೆಯ ಪ್ರತಿಕ್ರಿಯೆಯಿಂದ ನಿಮಗೆ ತೃಪ್ತಿಯಾಗದಿರಬಹುದು. ಸಂಸ್ಥೆಯ ಪ್ರತಿಕ್ರಿಯೆಯಿಂದ ನೀವು ಸಂತುಷ್ಟರಾಗದಿದ್ದರೆ, ನೀವು ಬೇರೆ ಕಡೆ ದೂರು ನೀಡಬಹುದು. ಅಂತಹ ಸಂದರ್ಭದಲ್ಲಿ ನೀವು ಯಾರಲ್ಲಿ ದೂರು ನೀಡಬೇಕು ಎಂಬುವುದನ್ನು ತಿಳಿದಿರಬೇಕಾಗುತ್ತದೆ.

ಸೆಬಿಗೆ ನೀವು ದೂರು ನೀಡಬಹುದಾಗಿದೆ. ಮ್ಯೂಚುವಲ್ ಫಂಡ್ ಸಂಬಂಧಿತ ವಿಚಾರದಲ್ಲಿ ಮಧ್ಯಸ್ಥರ ವಿರುದ್ಧವೂ ಸೆಬಿ ದೂರನ್ನು ಪಡೆಯುತ್ತದೆ. ಸೆಬಿ ರಿಡ್ರೆಸ್ ಸಿಸ್ಟಮ್‌ಗೆ ದೂರು ನೀಡುತ್ತದೆ. ರಿಡ್ರೆಸ್ ಸಿಸ್ಟಮ್ (ಸ್ಕೋರ್ಸ್) ಆನ್‌ಲೈನ್‌ನಲ್ಲಿ ನಿಮಗೆ ದೂರು ದಾಖಲು ಮಾಡಲು ಸಹಾಯ ಮಾಡುತ್ತದೆ. ಸ್ಕೋರ್ಸ್ ಆನ್‌ಲೈನ್ ಪ್ಲಾಟ್‌ಫಾರ್ಮ್ ಆಗಿದೆ. ಲೀಸ್ಟೆಡ್ ಕಂಪನಿಗಳ ವಿರುದ್ಧ ಸೆಬಿ ಪಡೆಯುವ ದೂರುಗಳನ್ನು ಸ್ಕೋರ್ ಮೂಲಕ ನಿರ್ವಹಣೆ ಮಾಡಲಾಗುತ್ತದೆ.
ಸ್ಕೋರ್‌ನ ಫೀಚರ್‌ಗಳು ಏನು?
1. ಹೂಡಿಕೆದಾರರ ದೂರನ್ನು ನಿರ್ವಹಣೆ ಮಾಡುವ ಕೇಂದ್ರ ಡೇಟಾಬೇಸ್
2. ಸಂಬಂಧಪಟ್ಟ ಪಟ್ಟಿಮಾಡಿದ ಕಂಪನಿ ಅಥವಾ ಸೆಬಿ ನೋಂದಾಯಿತ ಮಧ್ಯವರ್ತಿಗೆ ಆನ್‌ಲೈನ್ ದೂರುಗಳು
3. ಸಂಬಂಧಪಟ್ಟ ಪಟ್ಟಿಮಾಡಿದ ಕಂಪನಿ ಅಥವಾ ಸೆಬಿ ನೋಂದಾಯಿತ ಮಧ್ಯವರ್ತಿಯಿಂದ ಕ್ರಮ ತೆಗೆದುಕೊಂಡ ವರದಿಗಳ (ATRs) ಆನ್‌ಲೈನ್ ಅಪ್‌ಲೋಡ್
4. ದೂರಿನ ಮೇಲೆ ತೆಗೆದುಕೊಂಡ ಕ್ರಮಗಳು ಮತ್ತು ಅದರ ಪ್ರಸ್ತುತ ಸ್ಥಿತಿಯ ಹೂಡಿಕೆದಾರರಿಂದ ಆನ್‌ಲೈನ್ ಪರಿಶೀಲನೆ
ಹೇಗೆ ದೂರು ದಾಖಲು ಮಾಡುವುದು?
A. ದೂರು ಸಲ್ಲಿಸಲು ಸ್ಕೋರ್‌ಗಳಲ್ಲಿ ನೋಂದಾಯಿಸುವುದು ಕಡ್ಡಾಯವಾಗಿದೆ.
B. ಸ್ಕೋರ್‌ಗಳ ನೋಂದಾಯಿತ ಬಳಕೆದಾರರಾಗಲು, ಹೂಡಿಕೆದಾರರು ಸ್ಕೋರ್ ಪೋರ್ಟಲ್‌ನ ಮುಖಪುಟದಲ್ಲಿರುವ "ಇನ್ವೆಸ್ಟರ್ ಕಾರ್ನರ್" ಅಡಿಯಲ್ಲಿ "Register here" ಕ್ಲಿಕ್ ಮಾಡಬಹುದು.
C. ಸ್ಕೋರ್‌ಗೆ ಲಾಗಿನ್ ಆದ ನಂತರ, ಹೂಡಿಕೆದಾರರು "ಇನ್ವೆಸ್ಟರ್ ಕಾರ್ನರ್" ಅಡಿಯಲ್ಲಿ Complaint Registration ಮೇಲೆ ಕ್ಲಿಕ್ ಮಾಡಬೇಕು.
D. ಹೂಡಿಕೆದಾರರು ದೂರು ವಿವರಗಳನ್ನು ನೀಡಬೇಕು.
E. ಹೂಡಿಕೆದಾರರು ಸರಿಯಾದ ದೂರು ವರ್ಗ, ಘಟಕದ ಹೆಸರು ಮತ್ತು ದೂರಿನ ಬಗ್ಗೆಯನ್ನು ಆಯ್ಕೆ ಮಾಡಬೇಕು.
F. ಹೂಡಿಕೆದಾರರು ದೂರಿನ ವಿವರಗಳನ್ನು ಸಂಕ್ಷಿಪ್ತವಾಗಿ (1000 ಅಕ್ಷರಗಳವರೆಗೆ) ಒದಗಿಸಬೇಕು.
G. ಒಂದು PDF ಡಾಕ್ಯುಮೆಂಟ್ (ದೂರುಗಳ ಪ್ರತಿ 2MB ಗಾತ್ರದವರೆಗೆ) ಸಹ ದೂರಿನ ಜೊತೆಗೆ ಪೋಷಕ ದಾಖಲೆಯಾಗಿ ಲಗತ್ತಿಸಬಹುದು.
ದೂರು ದಾಖಲು ಆದ ಬಳಿಕ ಯುನಿಕ್ ರಿಜಿಸ್ಟೇಷನ್ ನಂಬರ್ ಲಭ್ಯವಾಗಲಿದೆ. ಮುಂದಿನ ದಿನಗಳಲ್ಲಿ ಸ್ಟೇಟಸ್ ನೋಡಲು ಇದು ಮುಖ್ಯವಾಗುತ್ತದೆ. ಇಮೇಲ್ ಮೂಲಕ ದೂರು ದಾಖಲು ಸಂಖ್ಯೆಯೊಂದಿಗೆ ಅಕ್ನಾಲಜ್‌ಮೆಂಟ್ ಪ್ರತಿ ಕೂಡಾ ಲಭ್ಯವಾಗಲಿದೆ. ದೂರು ದಾಖಲು ಆದ ಬಳಿಕ ಟೆಸ್ಟ್ ಮೆಸೇಜ್ ಕೂಡಾ ಹೂಡಿಕೆದಾರರಿಗೆ ಲಭ್ಯವಾಗಲಿದೆ. ದೂರು ದಾಖಲು ಮಾಡಲು ಹೆಸರು, ಪ್ಯಾನ್, ವಿಳಾಸ, ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಮುಖ್ಯವಾಗುತ್ತದೆ.
ಸೆಬಿಯ ಟೋಲ್ ಫ್ರೀ ಸಹಾಯವಾಣಿ ಸೇವಾ ಸಂಖ್ಯೆ 1800 266 7575 ಅಥವಾ 1800 22 7575 ಲಭ್ಯವಾಗಲಿದೆ. ಭಾರತದ ಎಲ್ಲ ನಗರಗಳಲ್ಲಿ ಸಹಾಯವಾಣಿ ಲಭ್ಯವಾಗಲಿದೆ. ಒಟ್ಟು ಎಂಟು ಭಾಷೆಗಳಲ್ಲಿ ಸಹಾಯವಾಣಿ ಲಭ್ಯವಾಗಲಿದೆ. ಇಂಗ್ಲೀಷ್, ಮರಾಠಿ, ಗುಜರಾತಿ, ತಮಿಳು, ಬೆಂಗಾಳಿ, ತೆಲುಗು, ಕನ್ನಡದಲ್ಲಿ ಸಹಾಯವಾಣಿ ಲಭ್ಯವಾಗಲಿದೆ.


Click it and Unblock the Notifications