ಭಾರತದಲ್ಲಿ ಅತೀ ಪ್ರಮುಖವಾದ ದಾಖಲೆಗಳಲ್ಲಿ ಪ್ಯಾನ್ ಕಾರ್ಡ್ ಕೂಡಾ ಒಂದಾಗಿದೆ. ಪ್ಯಾನ್ ಕಾರ್ಡ್ ಇಲ್ಲದೆ ಯಾವುದೇ ಹಣಕಾಸು ವಹಿವಾಟನ್ನು ನಡೆಸಲು ಸಾಧ್ಯವಿಲ್ಲ, ಆದ್ದರಿಂದ ಪ್ಯಾನ್ ಅತೀ ಪ್ರಮುಖ ದಾಖಲೆಯಾಗಿದೆ. ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್) ಹತ್ತು ಡಿಜಿಟ್‌ನ ಅಂಕಿ ಸಂಖ್ಯೆಯಾಗಿದೆ. ಆದರೆ ನಿಮ್ಮ ಪ್ಯಾನ್ ಕಾರ್ಡ್ ಅನ್ನು ದುರ್ಬಳಕೆ ಮಾಡಿದರೆ ಏನು ಮಾಡುವುದು?
ಹೌದು, ನಮ್ಮ ಪ್ರಮುಖ ದಾಖಲೆ ಎಂದ ಕೂಡಲೇ ಅದರ ಮೇಲೆ ವಂಚಕರ ಕಣ್ಣು ಬೀಳುವುದು ಸಹಜವಾಗಿದೆ. ಇತ್ತೀಚೆಗೆ ಜನಪ್ರಿಯ ಕ್ರಿಕೆಟಿಗ ಎಂಎಸ್ ಧೋನಿ ಮತ್ತು ನಟರಾದ ಶಿಲ್ಪಾ ಶೆಟ್ಟಿ, ಅಭಿಷೇಕ್ ಬಚ್ಚನ್, ಮಾಧುರಿ ದೀಕ್ಷಿತ್ ಮತ್ತು ಇಮ್ರಾನ್ ಹಶ್ಮಿ ಸೇರಿದಂತೆ ಹಲವಾರು ಸೆಲೆಬ್ರಿಟಿಗಳ ಪ್ಯಾನ್ ಕಾರ್ಡ್ ವಿವರಗಳನ್ನು ದುರುಪಯೋಗ ಮಾಡಲಾಗಿದೆ. ಈ ಸೆಲೆಬ್ರೆಟಿಗಳ ದಾಖಲೆಗಳನ್ನು ಬಳಸಿಕೊಂಡು ಸೈಬರ್ ಕ್ರಿಮಿನಲ್‌ಗಳು ಕ್ರೆಡಿಟ್ ಕಾರ್ಡ್‌ಗಳನ್ನು ಪಡೆದಿದ್ದಾರೆ.

ಪ್ಯಾನ್ ನಂಬರ್ ಎಂದರೇನು?
ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್) ಕಾರ್ಡ್ 10 ಡಿಜಿಟ್‌ನ ವಿಶಿಷ್ಟ ಆಲ್ಫಾನ್ಯೂಮರಿಕ್ ಗುರುತು ಆಗಿದೆ. ಈ ಪ್ಯಾನ್ ಕಾರ್ಡ್ ಅನ್ನು ಭಾರತದಲ್ಲಿ ಆದಾಯ ತೆರಿಗೆ ಇಲಾಖೆಯು ನೀಡುತ್ತದೆ. ತೆರಿಗೆ ಉದ್ದೇಶಗಳಿಗಾಗಿ ಭಾರತದ ವ್ಯಕ್ತಿಗಳು ಮತ್ತು ಘಟಕಗಳಿಗೆ ಪ್ಯಾನ್ ಕಾರ್ಡ್ ವಿಶಿಷ್ಟ ಗುರುತಿನ ಸಂಖ್ಯೆಯಾಗಿ ಕಾರ್ಯನಿರ್ವಹಿಸುತ್ತದೆ.
PAN Card: ಪ್ಯಾನ್ ಕಾರ್ಡ್‌ನಲ್ಲಿ ಹೆಸರು, ಜನನ ದಿನಾಂಕ ಅಪ್‌ಡೇಟ್ ಹೀಗೆ ಮಾಡಿ
ಪ್ಯಾನ್ ಕಾರ್ಡ್ ಅನ್ನು ಲ್ಯಾಮಿನೇಟೆಡ್ ಕಾರ್ಡ್ ರೂಪದಲ್ಲಿ ನೀಡಲಾಗುತ್ತದೆ. ಐಟಿ ಇಲಾಖೆ, ಪ್ಯಾನ್ ಕಾರ್ಡ್‌ಗೆ ಯಾರು ಅರ್ಜಿ ಸಲ್ಲಿಸುತ್ತಾರೆ ಅಥವಾ ಇಲಾಖೆಯು ಅರ್ಜಿಯಿಲ್ಲದೆ ಸಂಖ್ಯೆಯನ್ನು ನಿಗದಿಪಡಿಸುತ್ತದೆ.
ಪ್ಯಾನ್ ಕಾರ್ಡ್ ದುರ್ಬಳಕೆ
ಯಾವುದೇ ಸಂಭಾವ್ಯ ಹಾನಿಯನ್ನು ತಡೆಗಟ್ಟಲು ಮತ್ತು ನಿಮ್ಮ ಆರ್ಥಿಕ ಸ್ಥಿತಿಯನ್ನು ರಕ್ಷಣೆ ಮಾಡಲು ಪ್ಯಾನ್ ಕಾರ್ಡ್ ದುರುಪಯೋಗದ ಬಗ್ಗೆ ಅನುಮಾನ ಬಂದಾಗ ತಕ್ಷಣವೇ ಪರಿಶೀಲನೆ ಮಾಡುವುದು ಅತ್ಯಗತ್ಯವಾಗಿದೆ. ಅದನ್ನು ಪರಿಶೀಲಿಸುವುದು ಹೇಗೆ ಎಂಬ ವಿವರ ಇಲ್ಲಿದೆ ಮುಂದೆ ಓದಿ...
ನಿಮ್ಮ ಹಣಕಾಸಿನ ಸ್ಟೇಟ್‌ಮೆಂಟ್ ಅನ್ನು ಚೆಕ್ ಮಾಡಿ: ನಿಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು, ಕ್ರೆಡಿಟ್ ಕಾರ್ಡ್ ಬಿಲ್‌ಗಳು ಮತ್ತು ಯಾವುದೇ ಅನುಮಾನಾಸ್ಪದ ಅಥವಾ ಅನಧಿಕೃತ ಚಟುವಟಿಕೆ ಇದೆಯೇ ಎಂದು ತಿಳಿಯಲು ಹಣಕಾಸಿನ ವಹಿವಾಟುಗಳನ್ನು ಮೇಲ್ವಿಚಾರಣೆ ಮಾಡಿ. ನಿಮಗೆ ತಿಳಿಯದ ವಹಿವಾಟುಗಳಿದ್ದರೆ ಅದನ್ನು ಪರಿಶೀಲನೆ ಮಾಡಿ.
ಕ್ರೆಡಿಟ್ ರಿಫೊರ್ಟ್ ಪರಿಶೀಲಿಸಿ: ನೀವು ಆದಾಯ ತೆರಿಗೆ ಇಲಾಖೆಯ ಪೋರ್ಟಲ್ ಮೂಲಕ ಪ್ಯಾನ್ ಕಾರ್ಡ್ ಹಿಸ್ಟರಿಯನ್ನು ಚೆಕ್ ಮಾಡಬಹುದು. ಹಾಗೆಯೇ ಆದಾಯ ತೆರಿಗೆ ಇಲಾಖೆಗೆ ನೀವು ಭೇಟಿ ನೀಡುವ ಮೂಲಕವು ಹಿಸ್ಟರಿಯನ್ನು ಚೆಕ್ ಮಾಡಬಹುದು. ಪ್ಯಾನ್ ಕಾರ್ಡ್‌ನ ಯಾವುದೇ ಅನಧಿಕೃತ ಬಳಕೆಯನ್ನು ತಪ್ಪಿಸಲು ನೀವು ಈ ಹಿಸ್ಟರಿಯನ್ನು ಚೆಕ್ ಮಾಡುವುದು ಮುಖ್ಯವಾಗಿದೆ.
ಆದಾಯ ತೆರಿಗೆ ಇಲಾಖೆ ಖಾತೆಯನ್ನು ಚೆಕ್ ಮಾಡಿ: ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನಿಮ್ಮ ಪ್ಯಾನ್ ಕಾರ್ಡ್ ವಿವರಗಳನ್ನು ಬಳಸಿಕೊಂಡು ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ. ನಿಮ್ಮ ತೆರಿಗೆ ಫೈಲಿಂಗ್‌ಗಳನ್ನು ಪರಿಶೀಲಿಸಿ ಮತ್ತು ಯಾವುದೇ ವ್ಯತ್ಯಾಸಗಳು ಅಥವಾ ಅನಧಿಕೃತ ಬದಲಾವಣೆಗಳಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಉದಾಹರಣೆಗೆ, ನೀವು ಫಾರ್ಮ್ 26AS ನಲ್ಲಿ ವಿವರಗಳನ್ನು ಪರಿಶೀಲಿಸಬಹುದು.
ಪ್ಯಾನ್ ಕಾರ್ಡ್ ದುರ್ಬಳಕೆಯನ್ನು ರಿಪೋರ್ಟ್ ಮಾಡಿ
ಹಂತ 1: ನಿಮ್ಮ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
ಹಂತ 2: ಗ್ರಾಹಕ ಆರೈಕೆ ವಿಭಾಗವನ್ನು ಹುಡುಕಿ, ಅದು ಡ್ರಾಪ್-ಡೌನ್ ಮೆನುವನ್ನು ಇರುತ್ತದೆ.
ಹಂತ 3: ಡ್ರಾಪ್-ಡೌನ್ ಮೆನುವಿನಿಂದ 'ದೂರುಗಳು/ ಪ್ರಶ್ನೆಗಳು' (Complaints/ Queries) ತೆರೆಯಿರಿ. ಈಗ ದೂರು ನಮೂನೆ ತೆರೆಯಲಾಗುತ್ತದೆ.
ಹಂತ 4: ದೂರು ನಮೂನೆಯಲ್ಲಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ. ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು 'ಸಲ್ಲಿಸು' (Submit) ಕ್ಲಿಕ್ ಮಾಡಿ.


Click it and Unblock the Notifications