ಪ್ರಸ್ತುತ ನಮಗೆ ಹೂಡಿಕೆ ಮಾಡಲು ಹಲವಾರು ಆಯ್ಕೆಗಳು ಇದೆ. ಆದರೆ ಹೂಡಿಕೆ ಯೋಜನೆಗಳಲ್ಲಿ ಅಪಾಯ ತಪ್ಪಿದಲ್ಲ. ನಮಗೆ ಯಾವುದೇ ಅಪಾಯವಿಲ್ಲದೆ ಉತ್ತಮ ರಿಟರ್ನ್ ಪಡೆಯಬೇಕು ಎಂದಾದರೆ ಅಂತಹ ಹೂಡಿಕೆ ಆಯ್ಕೆಗಳು ಕೂಡಾ ಇದೆ. ಅದರಲ್ಲಿ ಅಂಚೆ ಕಚೇರಿ ಯೋಜನೆಗಳು ಕೂಡಾ ಒಂದಾಗಿದೆ.
ಭಾರತದಲ್ಲಿ ಹೂಡಿಕೆ ಯೋಜನೆಗಳು ಬೇರೆ ಬೇರೆ ರೀತಿಯಲ್ಲಿದೆ. ಎಫ್‌ಡಿ, ಆರ್‌ಡಿ, ಉಳಿತಾಯ ಯೋಜನೆ ಹೀಗೆ ಹಲವಾರು ವಿಧಾನಗಳಲ್ಲಿ ಹೂಡಿಕೆ ಯೋಜನೆಗಳು ಇದೆ. ಆದರೆ ನಾವು ಮಾಸಿಕವಾಗಿ ಹೂಡಿಕೆ ಮಾಡಲು ಬಯಸಿದರೆ ಅದಕ್ಕೆ ಉತ್ತಮ ಆಯ್ಕೆ ಆರ್‌ಡಿಯಾಗಿದೆ. ನಾವು ಮಾಸಿಕವಾಗಿ ಹೂಡಿಕೆ ಮಾಡಿ, ಕೊನೆಯಲ್ಲಿ ಬಡ್ಡಿದರದ ಜೊತೆಗೆ ಅಧಿಕ ಮೊತ್ತವನ್ನು ಪಡೆಯಲು ಸಾಧ್ಯವಾಗಲಿದೆ.
ಮಾಸಿಕವಾಗಿ ಕೊಂಚ ಹಣವನ್ನು ಹೂಡಿಕೆ ಮಾಡಿ ಕೊನೆಯದಾಗಿ ಅಧಿಕ ಮೊತ್ತವನ್ನು ಪಡೆಯಲು ಬಯಸುವವರಿಗೆ ಈ ರಿಕ್ಯೂರಿಂಗ್ ಡೆಪಾಸಿಟ್ (ಆರ್‌ಡಿ) ಅಥವಾ ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲ್ಯಾನ್ ಉತ್ತಮ ಆಯ್ಕೆಯಾಗಿದೆ. ಇನ್ನು ನೀವು ಅಂಚೆ ಕಚೇರಿಯಲ್ಲಿ ಮಾಸಿಕವಾಗಿ 5 ಸಾವಿರ ರೂಪಾಯಿ ಆರ್‌ಡಿ ಹೂಡಿಕೆ ಮಾಡಿದರೆ ಎಷ್ಟು ಮೊತ್ತ ಪಡೆಯಲು ಸಾಧ್ಯ ಎಂಬ ಬಗ್ಗೆ ನಾವಿಲ್ಲಿ ವಿವರಣೆ ನೀಡಿದ್ದೇವೆ.

ಮ್ಯೂಚುವಲ್ ಫಂಡ್/ ಆರ್‌ಡಿ
ಮ್ಯೂಚುವಲ್ ಫಂಡ್ ಹಾಗೂ ಆರ್‌ಡಿಯನ್ನು ನೋಡಿದಾಗ ನಮಗೆ ಮ್ಯೂಚುವಲ್ ಫಂಡ್‌ನಲ್ಲಿ ಅಧಿಕ ರಿಸ್ಕ್ ಇದೆ. ಆದರೆ ನಾವು ದೀರ್ಘಾವಧಿ ಹೂಡಿಕೆ ಮಾಡುವುದಾದರೆ ಆರ್‌ಡಿಯೇ ಉತ್ತಮವಾಗಿದೆ. ಹಾಗೆಯೇ ಸುರಕ್ಷಿತವಾಗಿದೆ. ಯಾವುದೇ ಅಪಾಯವೂ ಕೂಡಾ ಇಲ್ಲ. ಆರ್‌ಡಿಯನ್ನು ನಾವು 500 ರೂಪಾಯಿ ಹೂಡಿಕೆ ಮಾಡುವ ಮೂಲಕವೂ ಆರಂಭ ಮಾಡಬಹುದು. ಆದರೆ ಅಧಿಕ ರಿಟರ್ನ್ ನಮಗೆ ಲಭ್ಯವಾಗಲಿದೆ.
ನಾವು ಐದು ವರ್ಷಗಳ ಕಾಲ ಹೂಡಿಕೆಯನ್ನು ಮಾಡಿದರೆ ಸುಮಾರು ಶೇಕಡ 5.8ರಷ್ಟು ರಿಟರ್ನ್ ಪಡೆಯಲು ಸಾಧ್ಯವಾಗಲಿದೆ. ಎಸ್‌ಐಪಿಗಳಲ್ಲಿ ಶೇಕಡ 12ರಷ್ಟು ರಿಟರ್ನ್ ಪಡೆಯಬಹುದು. ಹಾಗೆಯೇ ಶೇಕಡ 15, 18 ಅದಕ್ಕಿಂತಲೂ ಅಧಿಮ ರಿಟರ್ನ್ ಅನ್ನು ಪಡೆಯಬಹುದು. ಆದರೆ ಎಲ್ಲವೂ ನಮ್ಮ ಅದೃಷ್ಟದ ಮೇಲೆ ನಿಂತಿದೆ. ಅದೃಷ್ಟಕ್ಕೆ ಬಲೆ ಹಾಕಿ ನಷ್ಟ ಹೊಂದುವ ಬದಲು ಆರ್‌ಡಿಯಲ್ಲೇ ಹೂಡಿಕೆ ಮಾಡುವುದು ಉತ್ತಮವಲ್ಲವೇ?
ಪೋಸ್ಟ್ ಆಫೀಸ್ ಆರ್‌ಡಿ
ನೀವು ಅಂಚೆ ಕಚೇರಿ ಆರ್‌ಡಿಯಲ್ಲಿ ಪ್ರತಿ ತಿಂಗಳು 5 ಸಾವಿರ ರೂಪಾಯಿಯಂತೆ 5 ವರ್ಷಗಳ ಕಾಲ ಹೂಡಿಕೆಯನ್ನು ಮಾಡಿದರೆ. ನೀವು ಅಧಿಕ ರಿಟರ್ನ್ 48,740 ರೂಪಾಯಿ ಆಗಲಿದೆ. ಆದ್ದರಿಂದಾಗಿ ನೀವು 3,48,740 ಅನ್ನು ಪಡೆಯಲು ಸಾಧ್ಯವಾಗಲಿದೆ. ಅಂದರೆ ನೀವು 3,00,000 ರೂಪಾಯಿ ಹೂಡಿಕೆ ಮಾಡಿದರೆ, 48,740 ರೂಪಾಯಿ ಅಧಿಕ ಲಭ್ಯವಾಗಲಿದೆ.
ಎಸ್‌ಐಪಿಯಲ್ಲಿಯಾದರೆ ನೀವು ಶೇಕಡ 12ರಷ್ಟು ರಿಟರ್ನ್ ಅನ್ನು ಪಡೆಯಲು ಸಾಧ್ಯವಾಗಲಿದೆ. ನಿಮ್ಮ ಹೂಡಿಕೆ ಮೇಲೆ ಒಟ್ಟಾಗಿ 1,12,432 ರೂಪಾಯಿ ರಿಟರ್ನ್ ಲಭ್ಯವಾಗಲಿದೆ. ಅಂದರೆ ನೀವು ಐದು ವರ್ಷದ ಬಳಿಕ 4,12,432 ರೂಪಾಯಿ ಪಡೆಯಲಿದ್ದೀರಿ. ಹಾಗೆಯೇ ಅದಕ್ಕೂ ಅಧಿಕ ರಿಟರ್ನ್ ಲಭ್ಯವಾಗುವ ಎಸ್‌ಐಪಿಗಳು ಕೂಡಾ ಇದೆ.


Click it and Unblock the Notifications