For Quick Alerts
ALLOW NOTIFICATIONS  
For Daily Alerts

PPF Account for Minors : ಅಪ್ರಾಪ್ತರಿಗೂ ಪಿಪಿಎಫ್: ಅರ್ಹತೆ, ದಾಖಲೆ, ಇತರೆ ಮಾಹಿತಿ

|

ಸರ್ಕಾರ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಪಿಪಿಎಫ್ ಅನ್ನು ಆರಂಭ ಮಾಡಿದೆ. ಇದು ಪಿಎಫ್‌ನಂತೆಯೇ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಯಾರು ಬೇಕಾದರೂ ಖಾತೆಯನ್ನು ತೆರೆಯಲು ಸಾಧ್ಯವಾಗುತ್ತದೆ. ಇದರಲ್ಲಿ ನಾವುಸಣ್ಣ ಅವಧಿಯ ಹಾಗೂ ದೀರ್ಘಾವಧಿಯ ಹೂಡಿಕೆ ಆಯ್ಕೆ ಮಾಡಿಕೊಳ್ಳಬಹುದು. ಆದರೆ ನಿಮ್ಮ ಮನೆಯಲ್ಲಿರುವ ಅಪ್ರಾಪ್ತರಿಗೂ ಈ ಖಾತೆಯನ್ನು ತೆರೆಯಲು ಸಾಧ್ಯವಿದೆ ಎಂದು ನಿಮಗೆ ತಿಳಿದಿದೆಯೇ?

 

ಮುಖ್ಯವಾಗಿ ಪಿಪಿಎಫ್ ತೆರಿಗೆ ಉಳಿತಾಯ ಯೋಜನೆಯಾಗಿದೆ. ನಾವು ಪಡೆಯುವ ಬಡ್ಡಿದರದ ಮೇಲೆಯೂ ಹಾಗೂ ಮೆಚ್ಯೂರಿಟಿ ವೇಳೆ ಪಡೆಯುವ ಮೊತ್ತದ ಮೇಲೆಯೂ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ. ನಿಯಮದ ಪ್ರಕಾರ ಪ್ರತಿ ಅರ್ಹ ನಾಗರಿಕರು ಕೂಡಾ ಪಿಪಿಎಫ್ ಖಾತೆಯನ್ನು ತೆರೆಯಬಹುದು.

ಇನ್ನು ಅಪ್ರಾಪ್ತರಿಗೂ ಕೂಡಾ ಪಿಪಿಎಫ್ ಖಾತೆಯನ್ನು ತೆರೆಯಬಹುದು ಎಂಬುವುದು ನಿಮಗೆ ಗೊತ್ತಾ? ಹೌದು ಅಪ್ರಾಪ್ತರಿಗೂ ಪಿಪಿಎಫ್ ಖಾತೆಯನ್ನು ತೆರೆಯಬಹುದು. ಕಾನೂನು ಪ್ರಕಾರವಾಗಿ ಮಕ್ಕಳ ಪೋಷಕರು ಯಾರಾಗಿರುತ್ತಾರೋ ಅವರು ಅಪ್ರಾಪ್ತರ ಭವಿಷ್ಯಕ್ಕಾಗಿ ಪಿಪಿಎಫ್ ಖಾತೆಯನ್ನು ತೆರೆಯಬಹುದು. ಮಗುವಿನ ಶಿಕ್ಷಣ ಹಾಗೂ ವಿವಾಹಕ್ಕಾಗಿ ಹಣವನ್ನು ಉಳಿತಾಯ ಮಾಡಬಹುದು. ಹಾಗಾದರೆ ಅಪ್ರಾಪ್ತರಿಗೆ ಪಿಪಿಎಫ್ ಖಾತೆಯನ್ನು ಹೇಗೆ ತೆರೆಯುವುದು, ಯಾವೆಲ್ಲ ದಾಖಲೆ ಬೇಕು, ಏನು ಅರ್ಹತಾ ಮಾನದಂಡ ಎಂಬ ಬಗ್ಗೆ ಇಲ್ಲಿದೆ ಮಾಹಿತಿ...

 ಪಿಪಿಎಫ್ ಖಾತೆ ಎಂದರೇನು?

ಪಿಪಿಎಫ್ ಖಾತೆ ಎಂದರೇನು?

ಪಿಪಿಎಫ್ ಎಂದೂ ಕರೆಯಲ್ಪಡುವ ಸಾರ್ವಜನಿಕ ಭವಿಷ್ಯ ನಿಧಿಯು ದೀರ್ಘಾವಧಿಯ ಖಾತರಿಯ ಆದಾಯ ಉಳಿತಾಯ ಯೋಜನೆಯಾಗಿದೆ. ಇದು ಭಾರತ ಸರ್ಕಾರದ ಯೋಜನೆಯಾಗಿದೆ. ಇದರಲ್ಲಿ ತೆರಿಗೆ ಪ್ರಯೋಜನದ ಜೊತೆಗೆ ಖಾತರಿಯ ಆದಾಯವು ಕೂಡಾ ಲಭ್ಯವಾಗುತ್ತದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ, ಇದು ತೆರಿಗೆ ಉಳಿಸುವ ಸಾಧನಗಳಲ್ಲಿ ಒಂದಾಗಿದೆ. ನಿರ್ದಿಷ್ಟ ಕಾರಣಗಳಿಲ್ಲದೆ ಪಿಪಿಎಫ್ ಖಾತೆಯನ್ನು ಅಕಾಲಿಕವಾಗಿ ಮುಚ್ಚಲು ಸಾಧ್ಯವಿಲ್ಲ. ಪಿಪಿಎಫ್ ಅವಧಿಯು 15 ವರ್ಷಗಳಾಗಿದೆ. ಐದು ವರ್ಷಗಳ ನಂತರ, ಚಂದಾದಾರರು ಅಥವಾ ಠೇವಣಿದಾರರು ಕೊಂಚ ಹಣವನ್ನು ಹಿಂದಕ್ಕೆ ಪಡೆಯಬಹುದು. ಶೇಕಡ 50ರಷ್ಟು ಹಣವನ್ನು ಹಿಂದಕ್ಕೆ ಪಡೆಯಲು ಅವಕಾಶವಿದೆ. 15 ವರ್ಷಗಳ ಬಳಿಕ ಅವಧಿ ವಿಸ್ತರಣೆ ಮಾಡುವ ಅವಕಾಶವಿದೆ. ಕೇಂದ್ರ ಸರ್ಕಾರವು ಪಿಪಿಎಫ್ ಹೂಡಿಕೆಗಳಿಗೆ ಖಾತರಿ ನೀಡುವುದರಿಂದ, ಅವು ಸುರಕ್ಷಿತವೆಂದು ಭಾವಿಸಲಾಗಿದೆ.

 ಅಪ್ರಾಪ್ತರಲ್ಲಿ ಇರಬೇಕಾದ ಅರ್ಹತೆ?
 

ಅಪ್ರಾಪ್ತರಲ್ಲಿ ಇರಬೇಕಾದ ಅರ್ಹತೆ?

* ಭಾರತದ ನಿವಾಸಿಗಳು ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಖಾತೆಯನ್ನು ತೆರೆಯಬಹುದು ಮತ್ತು ತೆರಿಗೆ-ಮುಕ್ತ ಆದಾಯವನ್ನು ಪಡೆಯಬಹುದು.
* ಪಾಲಕರು ಮಾತ್ರ ಪಿಪಿಎಫ್ ಖಾತೆಯನ್ನು ತೆರೆಯಬಹುದು.
* ನಿಜವಾದ ಅಥವಾ ಕಾನೂನುಬದ್ಧ ಪಾಲಕರು ಅಪ್ರಾಪ್ತರ ಪರವಾಗಿ ಪಿಪಿಎಫ್ ಖಾತೆಯನ್ನು ನಿರ್ವಹಿಸಬೇಕು.
* ಪೋಷಕರ ಮರಣದ ನಂತರ ಮಗುವಿನ ಕಾನೂನು ಪಾಲಕರಾಗಿ ನಾಮಿನಿ ಮಾಡದಿದ್ದರೆ ಅಪ್ರಾಪ್ತ ಮಗುವಿನ ಅಜ್ಜಿ ಅಜ್ಜ ಪಿಪಿಎಫ್ ಖಾತೆಯನ್ನು ನಿರ್ವಹಿಸಲು ಸಾಧ್ಯವಿಲ್ಲ.
* ಪಿಪಿಎಫ್ ಖಾತೆ ತೆರೆಯುವ ಪ್ರಕ್ರಿಯೆಗೆ ನಾಮಿನಿಯ ನೋಂದಣಿ ಅಗತ್ಯವಿದೆ.
* ಅಪ್ರಾಪ್ತರ ಖಾತೆಗೆ ವಾರ್ಷಿಕವಾಗಿ ಕನಿಷ್ಠ ರೂ. 500 ಮತ್ತು ಗರಿಷ್ಠ 1.5 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು. (ಗಮನಿಸಿ: ಅಪ್ರಾಪ್ತರ ಖಾತೆ ಮತ್ತು ಅವರ ಸ್ವಂತ ಖಾತೆ ಎರಡಕ್ಕೂ ಒಬ್ಬ ವ್ಯಕ್ತಿಯು ನೀಡಬಹುದಾದ ಗರಿಷ್ಠ ವಾರ್ಷಿಕ ಕೊಡುಗೆ ರೂ. 1.50 ಲಕ್ಷ ರೂಪಾಯಿ ಆಗಿದೆ)

 

 

 ಅಗತ್ಯ ದಾಖಲೆಗಳು ಯಾವುದು?

ಅಗತ್ಯ ದಾಖಲೆಗಳು ಯಾವುದು?

* ಅಪ್ರಾಪ್ತ ವಯಸ್ಕರ ಪೋಷಕರು ಅಥವಾ ಕಾನೂನು ಪಾಲಕರ ಮಾಹಿಯಿ ಅಪ್ರಾಪ್ತರ ಪಿಪಿಎಫ್ ಖಾತೆಗೆ ಅಗತ್ಯ
* ಖಾತೆ ತೆರೆಯಲು ಅಗತ್ಯವಿರುವ ಗಾರ್ಡಿಯನ್ ಕೆವೈಸಿ ದಾಖಲೆಗಳು ಅಗತ್ಯ. ಛಾಯಾಚಿತ್ರವೂ ಕೂಡಾ ಇರಬೇಕಾಗುತ್ತದೆ.
* ಅಪ್ರಾಪ್ತ ಮಗುವಿನ ವಯಸ್ಸಿನ ಪರಿಶೀಲನೆ (ಆಧಾರ್ ಕಾರ್ಡ್ ಅಥವಾ ಜನನ ಪ್ರಮಾಣಪತ್ರ).
* ಕನಿಷ್ಠ 500 ರೂಪಾಯಿಯ ಚೆಕ್ ಅನ್ನು ಪಿಪಿಎಫ್ ಖಾತೆ ಕೊಡುಗೆಯಾಗಿ ನೀಡಬೇಕು

 ಅಪ್ರಾಪ್ತರಿಗೆ ಪಿಪಿಎಫ್ ಖಾತೆ ತೆರೆಯುವ ಮುನ್ನ ಇದನ್ನು ಓದಿ

ಅಪ್ರಾಪ್ತರಿಗೆ ಪಿಪಿಎಫ್ ಖಾತೆ ತೆರೆಯುವ ಮುನ್ನ ಇದನ್ನು ಓದಿ

  • ಅಪ್ರಾಪ್ತ ವಯಸ್ಕರಾಗಿದ್ದಾಗ ಕನಿಷ್ಠ ಆರಂಭಿಕ ಠೇವಣಿ ರೂಪಾಯಿ 100 ಮಾಡಬಹುದು. ಆದರೂ ವಾರ್ಷಿಕ ಕೊಡುಗೆ ಕನಿಷ್ಠ ರೂ. 500, ಮತ್ತು ಗರಿಷ್ಠ 1.5 ಲಕ್ಷ ರೂಪಾಯಿ ಆಗಿದೆ.
  • ಅಪ್ರಾಪ್ತ ವಯಸ್ಕರ ಪಿಪಿಎಫ್ ಖಾತೆಗೆ ಹಾಕಲಾದ ಹಣವು ಪೋಷಕರು ಅಥವಾ ಪೋಷಕರ ಆದಾಯದಿಂದ ಬಂದರೆ, ಆದಾಯ ತೆರಿಗೆಯ ಸೆಕ್ಷನ್ 80C ಅನ್ವಯಿಸುತ್ತದೆ. ತೆರಿಗೆ ಪ್ರಯೋಜನ ಪಡೆಯಬಹುದು.
  • ಅಪ್ರಾಪ್ತರಿಗೆ 18 ವರ್ಷವಾದ ತಕ್ಷಣ, ಅಪ್ರಾಪ್ತ ವಯಸ್ಕರಿಗೆ ಈ ಖಾತೆ ವರ್ಗಾಯಿಸಲು ಅರ್ಜಿಯನ್ನು ಸಲ್ಲಿಸಬೇಕಾಗಿತ್ತು. ಅರ್ಜಿಯನ್ನು ಅಗತ್ಯ ದಾಖಲೆಗಳು ಮತ್ತು ಠೇವಣಿದಾರರ ಸಹಿಯೊಂದಿಗೆ ಸಲ್ಲಿಸಬೇಕು. ಇನ್ನು ಖಾತೆಯನ್ನು ಪ್ರಾರಂಭಿಸಿದ ಪೋಷಕರು ಈ ಅಪ್ಲಿಕೇಶನ್‌ಗೆ ಸಾಕ್ಷಿ ನೀಡಬೇಕು.
  • ಕೆಲವು ಸಂದರ್ಭಗಳಲ್ಲಿ, ಠೇವಣಿದಾರರು ಅಪ್ರಾಪ್ತರ ಪಿಪಿಎಫ್ ಖಾತೆಯನ್ನು ಮುಚ್ಚುವ ಅರ್ಹತೆಯನ್ನು ಹೊಂದಿದ್ದಾರೆ. ಆದಾಗ್ಯೂ, ಐದು ವರ್ಷಗಳು ಕಳೆದ ನಂತರ ಮಾತ್ರ ಇದು ಸಾಧ್ಯವಾಗುತ್ತದೆ. ಖಾತೆದಾರರ ವೈದ್ಯಕೀಯ ಅಗತ್ಯಗಳಿಗಾಗಿ ಮಾತ್ರ ಹಣವನ್ನು ಹಿಂಪಡೆಯಲು ಅವಕಾಶ ನೀಡಲಾಗುತ್ತದೆ.
  • ಈ ಹಣವನ್ನು ಅಪ್ರಾಪ್ತರ ಉನ್ನತ ಶಿಕ್ಷಣಕ್ಕಾಗಿ ಉಪಯೋಗಿಸಿದರೆ, ಪಿಪಿಎಫ್ ಖಾತೆಯನ್ನು ಅವಧಿಪೂರ್ವವಾಗಿ ಮುಚ್ಚಬಹುದು.

English summary

PPF Account for Minors: Eligibility, Documents Required and How to Apply in Kannada

Public Provident Fund: You Can Open PPF Account For a Minor; know interest rate, maturity, elibility, other Details in kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X