ಭಾರತೀಯ ರೈಲ್ವೆಯು ಹಲವಾರು ಪ್ರವಾಸ ಪ್ಯಾಕೇಜ್ ಅನ್ನು ಆರಂಭಿಸುತ್ತಿದೆ. ಈಗ ರೈಲ್ವೆಯು ಏಪ್ರಿಲ್ 7ರಿಂದ ರಾಮಾಯಾಣ ಯಾತ್ರಾ (ರಾಮಾಯಣ ಯಾತ್ರೆ) ಆರಂಭ ಮತ್ತೆ ಆರಂಭ ಮಾಡಲಿದೆ. ನವದೆಹಲಿಯಿಂದ ಈ ಯಾತ್ರೆ ಆರಂಭವಾಗಲಿದ್ದು, ಭಗವಂತ ರಾಮನ ಜೀವನದಲ್ಲಿ ಬರುವ ಸ್ಥಳಗಳಾದ ಅಯೋಧ್ಯೆ, ಪ್ರಯಾಗ್‌ರಾಜ್, ವಾರಾಣಾಸಿ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಪ್ರವಾಸ ಇರಲಿದೆ. ಭಾರತ್ ಗೌರವ್ ಡಿಲಕ್ಸ್ ಎಸಿ ಟೂರಿಸ್ಟ್ ರೈಲಿನಲ್ಲಿ ಈ ಪ್ರವಾಸ ಇರಲಿದೆ. ಈವೆರೆಗೆ ಒಟ್ಟು 26 ಭಾರತ್ ಗೌರವ್ ರೈಲುಗಳನ್ನು ಆರಂಭಿಸಲಾಗಿದೆ.
ಈ ಬಗ್ಗೆ ಭಾರತೀಯ ರೈಲ್ವೆಯು ಪತ್ರಿಕಾ ಹೇಳಿಕೆ ನೀಡಿದೆ. "ರೈಲಿನಲ್ಲಿ ಪ್ರಯಾಣ ಮಾಡುವ ಪ್ರವಾಸಿಗರಿಗೆ ಅಯೋಧ್ಯೆಯಲ್ಲಿ ನಿಲ್ದಾಣ ನೀಡಲಾಗುತ್ತದೆ. ಅಲ್ಲಿ ರಾಮಜನ್ಮಭೂಮಿ ದೇವಾಲಯ, ಹನುಮಾನ್ ದೇವಾಲಯಕ್ಕೆ ಭೇಟಿ ನೀಡಬಹುದು. ಸರಾಯು ಆರತಿ ನೋಡಬಹುದು. ನಂದಿಗ್ರಾಮ, ಸೀತಾಮರ್ಹಿ, ಜನಕಪುರ, ಬಕ್ಸರ್, ವಾರಾಣಾಜಿ, ಪ್ರಯಾಗ್‌ರಾಜ್, ಚಿತ್ರಕೂಟ, ನಾಸಿಕ್, ಹಂಪಿ, ರಾಮೇಶ್ವರ, ಭದ್ರಚಲಂ, ನಾಗಪುರ ಮೊದಲಾದ ಪ್ರದೇಶಗಳಿಗೆ 18 ದಿನದ ಪ್ರವಾಸ ಇದಾಗಿದೆ," ಎಂದು ಭಾರತೀಯ ರೈಲ್ವೆ ಮಾಹಿತಿ ನೀಡಿದೆ.
ಈ ಯಾತ್ರೆಯ ಬಗ್ಗೆ ಮಾಹಿತಿ
* ರೈಲಿನಲ್ಲಿ ಸಿಸಿಟಿವಿ ಕ್ಯಾಮೆರಾ, ಪ್ರತಿ ಕೋಚ್‌ಗೂ ಓರ್ವ ಸೆಕ್ಯೂರಿಟಿ ಗಾರ್ಡ್‌ಗಳು ಇರಲಿದ್ದಾರೆ.
* ಪ್ರವಾಸಿಗರು ದೆಹಲಿ, ಗಾಜಿಯಾಬಾದ್, ಆಲಿಗಢ, ತುಂಡ್ಲಾ, ಇತಾವ್, ಕಾನ್ಪುರ, ಲಕ್ನೋ ರೈಲು ನಿಲ್ದಾಣದಲ್ಲಿ ರೈಲು ಏರಬಹುದು/ಇಳಿಯಬಹುದು.
* ರೈಲು ಮೊದಲು ಅಯೋಧ್ಯೆಯಲ್ಲಿ ನಿಲ್ಲಲಿದೆ. ಅದಾದ ಬಳಿಕ ನಂದಿಗ್ರಾಮದ ಭಾರತ್ ಮಂದಿರ, ಬಿಹಾರದ ಸೀತಾಮರ್ಹಿಯಲ್ಲಿ ನಿಲ್ಲಲಿದೆ. ಸೀತಾಮರ್ಹಿಯಲ್ಲಿ ಸೀತೆಯ ಜನ್ಮಭೂಮಿಗೆ ಭೇಟಿ ನೀಡಬಹುದು. ಬಳಿಕ ನೇಪಾಲದ ಜನಕಪುರದಲ್ಲಿ ರಾಮ ಜಾನಕಿ ದೇವಾಲಯಕ್ಕೆ ಭೇಟಿ ನಿಡುವ ಅವಕಾಶವಿದೆ.
* ಸೀತಾಮರ್ಹಿ ಬಳಿಕ ರೈಲು ಬಕ್ಸರ್, ವಾರಾಣಾಸಿಗೆ ತಲುಪಲಿದೆ. ಇಲ್ಲಿ ಪ್ರವಾಸಿಗರು ಕಾಶಿ ವಿಶ್ವನಾಥ ದೇವಾಲಯ, ಕಾರಿಡಾರ್, ತುಳಸಿ ಮಂದಿರ, ಸಂಕಟ್ ಮೋಚನ್ ಹನುಮಾನ್ ದೇವಾಲಯಕ್ಕೆ ಭೇಟಿ ನೀಡಬಹುದು.
* ಅದಾದ ಬಳಿಕ ರೈಲು ಪ್ರಯಾಗ್‌ರಾಜ್, ಶೃಂಗವೀರಪುರ, ಚಿತ್ರಕೂಟ, ನಾಸಿಕ್, ಹಂಪಿ, ರಾಮೇಶ್ವರಂ, ಭದ್ರಚಲಂ, ನಾಗ್ಪುರಕ್ಕೆ ತೆರಳಿ ಅಲ್ಲಿಂದ ದೆಹಲಿಗೆ ವಾಪಾಸ್ ಬರಲಿದೆ.
* ಉತ್ತಮ ರೆಸ್ಟೋರೆಂಟ್‌ಗಳು, ಆಧುನಿಕ ಅಡುಗೆ ಕೋಣೆ, ಸ್ನಾನದ ವ್ಯವಸ್ಥೆ ಇರುವ ಕೋಚ್‌ಗಳು, ಸೆನ್ಸರ್ ಆಧಾರಿತ ವಾಷ್‌ರೂಮ್ ವ್ಯವಸ್ಥೆ, ಕಾಲಿಗೆ ಮಸಾಬ್ ನೀಡುವ ವ್ಯವಸ್ಥೆ ಇರಲಿದೆ.
ಈ ಯಾತ್ರೆಯ ವೆಚ್ಚವೆಷ್ಟು?
ಐಆರ್‌ಸಿಟಿಸಿ ಟೂರಿಸಂ ವೆಬ್‌ಸೈಟ್‌ನಲ್ಲಿ ಉಲ್ಲೇಖ ಮಾಡಲಾದ ಮಾಹಿತಿ ಪ್ರಕಾರ, 2AC ಕೋಚ್‌ಗೆ ಪ್ರತಿ ವ್ಯಕ್ತಿಗೆ ಪ್ರಯಾಣ ವೆಚ್ಚದ ಪ್ಯಾಕೇಜ್ 1,14,065 ರೂಪಾಯಿ ಆಗಿದೆ. 1 ಎಸಿ ಕ್ಲ್ಯಾಸ್ ಕ್ಯಾಬಿನ್‌ಗೆ 1,46,545 ರೂಪಾಯಿ ಆಗಿದೆ. 1AC ಕ್ಯೂಪ್‌ಗೆ 1,68,950 ರೂಪಾಯಿ ಆಗಿದೆ. ಈ ಮೊತ್ತದಲ್ಲಿಯೇ ಎಸಿ ಹೊಟೇಲ್, ಎಲ್ಲ ಸಸ್ಯಾಹಾರಿ ಆಹಾರ, ಎಸಿ ವಾಹನದಲ್ಲಿ ಪ್ರಯಾಣ ಮತ್ತು ಪ್ರದೇಶ ವೀಕ್ಷಣೆ, ಪ್ರಯಾಣ ವಿಮೆಯು ಸೇರ್ಪಡೆಯಾಗಿರಲಿದೆ.
ಈ ಯಾತ್ರೆಯಲ್ಲಿ ತೆರಳುವ ಪ್ರದೇಶಗಳ ವಿವರ
ಅಯೋಧ್ಯೆ: ರಾಮ ಜನ್ಮಭೂಮಿ ದೇವಾಲಯ, ಹನುಮಾನ್ ಗರ್ಹಿ (ಮಂದಿರ), ಸರಾಯುಘಾಟ್.
ನಂಧಿಗ್ರಾಮ: ಭರತ-ಹನುಮಾನ್ ದೇವಾಲಯ, ಭರತ್ ಕುಂಡ್
ಜನಕಪುರ: ರಾಮ ಜಾನಕಿ ಮಂದಿರ
ಸೀತಾಮರ್ಹಿ: ಸೀತಾಮರ್ಹಿಯಲ್ಲಿನ ಜಾನಕಿ ಮಂದಿರ, ಪನೌರಾ ಧಾಮ
ಬಕ್ಸರ್: ರಾಮ್ ರೇಖ ಘಾಟ್, ರಾಮೇಶ್ವರ ನಾಥ ದೇವಾಲಯ
ವಾರಾಣಾಸಿ: ತುಳಸಿ ಮಾನಸ ದೇವಾಲಯ, ಸಂಕಟ್ ಮೋಚನ್ ದೇವಾಲಯ, ವಿಶ್ವನಾಥ ದೇವಾಲಯ, ಗಂಗಾ ಆರತಿ
ಸೀತಾ ಸಮಹಿತಿ ಸ್ಥಳ, ಸೀತಾಮರ್ಹಿ: ಸೀತಾ ಮಾತಾ ದೇವಾಲಯ
ಪ್ರಯಾಗ್‌ರಾಜ್: ಭಾರಧ್ವಾಜ ಆಶ್ರಮ, ಗಂಗಾ-ಯಮುನಾ ಸಂಗಮ, ಹನುಮಾನ್ ದೇವಾಲಯ
ಶೃಂಗವೀರಪುರ: ಶೃಂಗ ರಿಶಿ ಸಮಾಧಿ, ಶಾಂತ ದೇವಿ ದೇವಾಲಯ, ರಾಮ ಚೌರಾ
ಚಿತ್ರಕೂಟ: ಗುಪ್ತಾ ಗೋಧಾವರಿ, ರಾಮಘಾಟ್, ಸತಿ ಅನುಸೂಯ ದೇವಾಲಯ
ನಾಸಿಕ್: ತ್ರಯಂಬೇಕೇಸ್ವರ ದೇವಾಲಯ, ಪಂಚಾವತಿ, ಸೀತಾಗುಹ, ಕಲಾರಾಮ ದೇವಾಲಯ,
ಹಂಪಿ: ಅಂಜನಾದ್ರಿ ಬೆಟ್ಟ, ವಿರೂಪಾಕ್ಷ ದೇವಾಲಯ, ವಿಠಲ ದೇವಾಲಯ
ರಾಮೇಶ್ವರಂ: ರಾಮನಾಥಸ್ವಾಮಿ ದೇವಾಲಯ, ಧನುಷ್‌ಕೋಡಿ
ಭದ್ರಚಲಂ: ಶ್ರೀ ಸೀತಾರಾಮ ಸ್ವಾಮಿ ದೇವಾಲಯ, ಅಂಜನಿ ಸ್ವಾಮಿ ದೇವಾಯಲ
ದೆಹಲಿಯ ಸಫ್‌ದರ್‌ಜಂಗ್, ಗಾಜಿಯಾಬಾದ್, ಆಲಿಗಢ, ತುಂಡ್ಲಾ, ಇತಾವ್, ಕಾನ್ಪುರ, ಲಕ್ನೋದಲ್ಲಿ ರೈಲು ಏರಲು ಅವಕಾಶ. ವಿರಾಂಗಣ ಲಕ್ಷ್ಮೀ ಬಾಯಿ, ಗ್ವಾಲಿಯರ್, ಆಗ್ರಾ, ಮಥುರಾದಲ್ಲಿ ರೈಲು ಇಳಿಯುವ ಅವಕಾಶ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications