ಆರ್‌ಬಿಐ ಏಕೀಕೃತ ಸಾರ್ವಜನಿಕ ತನಿಖಾಧಿಕಾರಿ (ಓಂಬುಡ್ಸ್‌ಮನ್) ಯೋಜನೆ ಕುರಿತು ಪದೇಪದೆ ಕೇಳಲಾಗುವ ಪ್ರಶ್ನೆಗಳು: ಪ್ರಮುಖ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
ಆರ್‌ಬಿ-ಐಒಎಸ್ ಯೋಜನೆ ಅಡಿ, ದೂರು ನಿರ್ವಹಣಾ ವ್ಯವಸ್ಥೆಯ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಲಾಗುತ್ತದೆ. ಈ ದೂರುಗಳನ್ನು ಇ-ಮೇಲ್ ಅಥವಾ ಸಿಆರ್ ಪಿಸಿ, ಆರ್ ಬಿಐ, ಚಂಡೀಗಢ ಈ ವಿಳಾಸಕ್ಕೆ ಕಳಿಸಬಹುದು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್ 12ರಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಸಂಯೋಜಿತ ಓಂಬುಡ್ಸ್‌ಮನ್ (ಸಾರ್ವಜನಿಕ ತನಿಖಾಧಿಕಾರಿ) ಯೋಜನೆಯನ್ನು ಅನಾವರಣಗೊಳಿಸಿದರು. ಈ ಯೋಜನೆಯು ಬ್ಯಾಂಕ್, ಬ್ಯಾಂಕಿಂಗ್ ಯೇತರ ಹಣಕಾಸು ಸಂಸ್ಥೆಗಳ ಗ್ರಾಹಕರು ಮತ್ತು ಪಾವತಿ ವ್ಯವಸ್ಥೆ ಆಪರೇಟರ್‌ಗಳ ಕುಂದುಕೊರತೆ ನಿವಾರಣಾ ವ್ಯವಸ್ಥೆಯನ್ನು ಬಲಪಡಿಸಲಿದೆ.
ಈ ನೂತನ ಯೋಜನೆ ಹಿಂದಿನ ವ್ಯವಸ್ಥೆಗಿಂತ ಹೇಗೆ ಭಿನ್ನ? ಇದರ ಗುಣಲಕ್ಷಣಗಳೇನು? ಯೋಜನೆ ಕುರಿತು ಪದೇಪದೆ ಕೇಳಲಾಗುವ ಪ್ರಮುಖ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಒದಗಿಸಲಾಗಿದೆ.
ಮೂರು ಪ್ರಮುಖ ಓಂಬುಡ್ಸ್‌ಮನ್ ಯೋಜನೆಗಳನ್ನು ಏಕೆ ಸಂಯೋಜಿಸಲಾಗಿದೆ? ಪ್ರಮುಖ ಬದಲಾವಣೆಗಳು ಏನು?

ನಾನಾ ಕಾಲಘಟ್ಟದಲ್ಲಿ ಬರುತ್ತಿದ್ದ ವಿವಿಧ ಬಗೆಯ ದೂರು ದುಮ್ಮಾನಗಳನ್ನು ಆಧರಿಸಿ 3 ಓಂಬುಡ್ಸ್‌ಮನ್ ಯೋಜನೆಗಳನ್ನು ರೂಪಿಸಲಾಗಿತ್ತು. ಆದರೆ ಅವು ಎಲ್ಲ ವರ್ಗದ ಗ್ರಾಹಕರಿಗೆ ಸಮಾನ ಪರಿಹಾರಒದಗಿಸಲು ವಿಫಲವಾಗಿದ್ದವು. ವಿವಿಧ ರೂಪದ ಪರಿಹಾರ ಒಳಗೊಂಡಿದ್ದ ಈ ಯೋಜನೆಗಳು ನೊಂದ ಗ್ರಾಹಕರಿಗೆ ನ್ಯಾಯಯುತ ಪರಿಹಾರ ಒದಗಿಸಲು ವಿಫಲವಾಗಿದ್ದವು.
ಹಾಗಾಗಿ, ಈ 3 ಯೋಜನೆಗಳನ್ನು ಸಂಯೋಜಿಸಿ, ಒಂದೇ ಯೋಜನೆ ರೂಪಿಸುವುದು ಅತ್ಯಗತ್ಯ ಎಂಬ ಗ್ರಹಿಕೆಯ ಹಿನ್ನೆಲೆಯಲ್ಲಿ, ಯೋಜನೆಯ ಕಾರ್ಯವಿಧಾನಗಳನ್ನು ಸರಳೀಕರಿಸಲಾಗಿದೆ. ದೂರುಗಳ ಸೇವಾ ಕೊರತೆಯನ್ನು ನೀಗಿಸಲಾಗಿದೆ. ದೂರುಗಳ ಸ್ವೀಕಾರ, ಕಾರ್ಯವಿಧಾನ ದಕ್ಷತೆ ಹೆಚ್ಚಿಸಲಾಗಿದೆ.
ಇದರ ಜತೆಗೆ, 'ಒಂದು ರಾಷ್ಟ್ರ, ಒಂದು ಓಂಬುಡ್ಸ್‌ಮನ್' ಪರಿಕಲ್ಪನೆಯ ಅಡಿ, ಪ್ರತಿ ಓಂಬುಡ್ಸ್‌ಮನ್ ಕಚೇರಿಗೆ ವಿಶೇಷ ಅಧಿಕಾರ ವ್ಯಾಪ್ತಿ ನೀಡಲಾಗಿದೆ. ಅಲ್ಲದೆ, ಕೆಲವು ವರ್ಗಗಳ ದೂರುಗಳನ್ನು ಪರಿಹರಿಸಲು ಸಹಾಯಕವಾಗುವಂತೆ ಓಂಬುಡ್ಸ್‌ಮನ್ ಕಚೇರಿಗೆ ಹೆಚ್ಚಿನ ತನಿಖಾ ವ್ಯಾಪ್ತಿ ನೀಡಲು, ಉಪ-ಒಂಬುಡ್ಸ್‌ಮನ್ ನೇಮಕಕ್ಕೆ ಅವಕಾಶ ಕಲ್ಪಿಸಲಾಗಿದೆ. ಚಂಡೀಗಢದ ಆರ್ ಬಿಐ ಕಚೇರಿಯಲ್ಲಿ ಕೇಂದ್ರೀಕೃತ ರಸೀದಿ ಮತ್ತು ಸಂಸ್ಕರಣಾ ಕೇಂದ್ರ (ಸಿಆರ್‌ಪಿಸಿ) ಸ್ಥಾಪಿಸಲಾಗಿದೆ. ಜತೆಗೆ, ದೂರುದಾರರು ತಮ್ಮ ದೂರುಗಳನ್ನು ಸಲ್ಲಿಸಲು, ಆ ದೂರುಗಳ ಪರಿಹಾರ ಕಾರ್ಯವಿಧಾನದ ಮಾಹಿತಿಯನ್ನು ಪಡೆಯಲು ಸಂಪರ್ಕ ಕೇಂದ್ರಗಳಲ್ಲಿ ಟೋಲ್-ಫ್ರೀ ಸಂಖ್ಯೆ ಆರಂಭಿಸಲಾಗಿದೆ.

ಹೊಸ ಯೋಜನೆಯಿಂದ ಸಿಗುವ ಪ್ರಯೋಜನಗಳು ಏನು?
ಹೊಸ ಯೋಜನೆಯ ಅತಿಮುಖ್ಯ ಪ್ರಯೋಜನವೆಂದರೆ ಸರಳೀಕೃತ ದೂರು ದಾಖಲು ವ್ಯವಸ್ಥೆ (ಸಿಂಗಲ್ ಪಾಯಿಂಟ್ ರೆಫರೆನ್ಸ್-ಏಕಗವಾಕ್ಷಿ). ಚಂಡೀಗಢದ ಆರ್‌ಬಿಐ ಕಚೇರಿಯಲ್ಲಿ ಸ್ಥಾಪಿಸಿರುವ ದೂರು ನಿರ್ವಹಣಾ ವ್ಯವಸ್ಥೆ ಮತ್ತು ಸಿಆರ್‌ಪಿಸಿಯಲ್ಲಿ ಗ್ರಾಹಕರು ದೂರು ಸಲ್ಲಿಸಬಹುದು, ದಾಖಲೆಗಳನ್ನು ಸಲ್ಲಿಸಬಹುದು, ದೂರಿನ ಸ್ಥಿತಿಗತಿಯನ್ನು ಪತ್ತೆ ಮಾಡಬಹುದು ಹಾಗೂ ಸಂಬಂಧಿತ ಮಾಹಿತಿ ಪಡೆಯಬಹುದು. RB-IOS ಯೋಜನೆಯು ಹೆಚ್ಚಿನ ವ್ಯಾಪ್ತಿ ಒಳಗೊಂಡಿದೆ. ಒಟ್ಟು 11,352 ಸಂಸ್ಥೆಗಳು ಈ ಯೋಜನೆಯ ವ್ಯಾಪ್ತಿಗೆ ಒಳಪಡುತ್ತವೆ. ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳು, ಶೆಡ್ಯೂಲ್ಡ್ ನಗರ ಸಹಕಾರಿ ಬ್ಯಾಂಕ್ ಗಳು, 50 ಕೋಟಿ ರೂ.ಗಿಂತ ಹೆಚ್ಚಿನ ಠೇವಣಿ ಹೊಂದಿರುವ ನಗರ ಸಹಕಾರಿ ಬ್ಯಾಂಕ್‌ಗಳು, ಠೇವಣಿ ಸ್ವೀಕರಿಸುವ ಎಲ್ಲ ಬ್ಯಾಂಕಿಂಗ್‌ಯೇತರ ಹಣಕಾಸು ಸಂಸ್ಥೆಗಳು, 100 ಕೋಟಿ ರೂ.ಗಿಂತ ಹೆಚ್ಚಿನ ಠೇವಣಿ ಹೊಂದಿರುವ ಎನ್‌ಬಿಎಫ್‌ಸಿಗಳು ಈ ಯೋಜನೆಯ ವ್ಯಾಪ್ತಿಗೆ ಬರುತ್ತವೆ. ಸೇವಾ ಕೊರತೆ ಇರುವ ಎಲ್ಲಾ ದೂರುಗಳನ್ನು ಈ ಯೋಜನೆಯಲ್ಲಿ ಸ್ವೀಕರಿಸಲಾಗುತ್ತದೆ.
ಓಂಬುಡ್ಸ್‌ಮನ್ ಯೋಜನೆಗಳ ಸಂಯೋಜನೆ ದೂರುದಾರರಿಗೆ ಹೇಗೆ ಸಹಾಯಕ?
ಹಿಂದಿನ ಯೋಜನೆಯಲ್ಲಿ ಗ್ರಾಹಕರು ತಮ್ಮ ದೂರುಗಳನ್ನು ಸಮರ್ಪಕ ಯೋಜನೆ ಅಡಿ ಮತ್ತು ಸಮರ್ಪಕ ಓಂಬುಡ್ಸ್‌ಮನ್ ಕಚೇರಿಗೆ ಸಲ್ಲಿಸಬೇಕಾಗಿತ್ತು. ದೂರು ಸಲ್ಲಿಸುವ ಸಂಸ್ಥೆಯ ಶಾಖೆ, ಓಂಬುಡ್ಸ್‌ಮನ್ ಪ್ರಾದೇಶಿಕ ಕಚೇರಿ ಇತ್ಯಾದಿ ವಿಷಯಗಳು ಸಮರ್ಪಕವಾಗಿರದಿದ್ದರೆ, ದೂರುಗಳನ್ನು ತಿರಸ್ಕರಿಸಲಾಗುತ್ತಿತ್ತು. ವಿಫಲವಾದರೆ ದೂರನ್ನು ತಿರಸ್ಕರಿಸಲಾಗುತ್ತದೆ. ಆದರೆ ಈಗ ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸಿ, ಎಲ್ಲಾ ರೀತಿಯ ದೂರುಗಳಿಗೆ ಏಕಗವಾಕ್ಷಿ ಸೌಲಭ್ಯ ಕಲ್ಪಿಸಲಾಗಿದೆ. ವಿಶೇಷವಾಗಿ, ಎಲ್ಲಾ ದೂರುದಾರರಿಗೆ ಒಂದೇ ರೀತಿಯ ಪರಿಹಾರದ ಮಿತಿ ನಿಗದಿಪಡಿಸಲಾಗಿದೆ. ಇದು ಹಿಂದಿನದಕ್ಕಿಂತ ಭಿನ್ನವಾಗಿದೆ.
ದೂರು ಸ್ವೀಕೃತಿಯ ಆರ್‌ಬಿ - ಐಒಎಸ್ ಕೇಂದ್ರೀಕೃತ ವ್ಯವಸ್ಥೆ ಏಕೆ?
ಗ್ರಾಹಕರು ದೂರುಗಳನ್ನು ಸಲ್ಲಿಸಲು, ದಾಖಲೆಗಳನ್ನು ಸಲ್ಲಿಸಲು ಮತ್ತು ಸಂಬಂಧಿತ ಮಾಹಿತಿಯನ್ನು ಪಡೆಯಲು ಒಂದು ವಿಳಾಸ, ಒಂದು ಇಮೇಲ್, ಒಂದು ಪೋರ್ಟಲ್ ಮತ್ತು ಒಂದು ಸಂಪರ್ಕ ಸಂಖ್ಯೆಯನ್ನು ಹೊಂದುವ ಮೂಲಕ ಇಡೀ ಪ್ರಕ್ರಿಯೆಯ ದಕ್ಷತೆ ಹೆಚ್ಚಿಸುವುದೇ ಕೇಂದ್ರೀಕೃತ ವ್ಯವಸ್ಥೆಯ ಮೂಲ ಪರಿಕಲ್ಪನೆಯಾಗಿದೆ. ಓಂಬುಡ್ಸ್‌ಮನ್ ಸಿಬ್ಬಂದಿಯನ್ನು ಮುಕ್ತಗೊಳಿಸಿ, ದೂರುದಾರರ ಖುದ್ದು ಹಾಜರಿ ಮತ್ತು ಸಮಯ ಪೋಲಾಗುವುದನ್ನು ಈ ವ್ಯವಸ್ಥೆ ತಪ್ಪಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಸಿಂಗಲ್ ಪಾಯಿಂಟ್ ರೆಫರೆನ್ಸ್ ಅನ್ನು ಸುಗಮಗೊಳಿಸುತ್ತದೆ.

ದೂರುಗಳ ಸ್ವೀಕೃತಿಯ ಕೇಂದ್ರೀಕೃತ ವ್ಯವಸ್ಥೆ ಹೇಗೆ ಕಾರ್ಯ ನಿರ್ವಹಿಸುತ್ತದೆ?
ಆರ್‌ಬಿ-ಐಒಎಸ್ ಯೋಜನೆ ಅಡಿ, https://cms.rbi.org.in ಪೋರ್ಟಲ್ ಹಾಗೂ ಇ-ಮೇಲ್ [email protected] ಮೂಲಕ ದೂರುಗಳನ್ನು ಸ್ವೀಕರಿಸಲಾಗುತ್ತದೆ. ಸಿಆರ್ ಪಿಸಿಯಲ್ಲಿ ಸ್ವೀಕರಿಸಲಾಗುವ ಇ-ಮೇಲ್ ಮತ್ತು ಭೌತಿಕ ದೂರುಗಳನ್ನು ಸಿಎಂಎಸ್‌ನಲ್ಲಿ ನೋಂದಾಯಿಸಲಾಗುತ್ತದೆ. ನಂತರ ದೂರುದೂರರ ಮನೆ ವಿಳಾಸ ಆಧರಿಸಿ, ಓಂಬುಡ್ಸ್‌ಮನ್ ಅಧಿಕಾರಿಗಳಿಗೆ ಅವುಗಳನ್ನು ಕಳಿಸಲಾಗುತ್ತದೆ. ನಂತರ ದೂರಿನ ಸಮಗ್ರ ವಿವರಗಳನ್ನು ಸಿಎಂಎಸ್ ಪೋರ್ಟಲ್ ಮೂಲಕ ಕಳಿಸಲಾಗುತ್ತದೆ.
ಸಂಪರ್ಕ ಕೇಂದ್ರಗಳ ಸ್ಥಾಪನೆ ಏಕೆ? ಅವುಗಳ ಪಾತ್ರವೇನು?
ಸಹಾಯ ಮತ್ತು ಮಾರ್ಗದರ್ಶನ ಕೋರುವ ಮನವಿತಿಗಳು ಸೇರಿದಂತೆ, ಎಲ್ಲಾ ದೂರು-ಸಂಬಂಧಿತ ಪ್ರಶ್ನೆಗಳು ಮತ್ತು ಮಾಹಿತಿಯನ್ನು ಒಂದೆಡೆ ತರುವುದು ಸಂಪರ್ಕ ಕೇಂದ್ರಗಳ ಸ್ಥಾಪನೆ. ಮೂಲ ಕಲ್ಪನೆಯಾಗಿದೆ. ಆ ಮೂಲಕ ದೂರುಗಳ ತೀರ್ಪಿನ ಮೇಲೆ ಗಮನ ಹರಿಸಲು ಸಿಬ್ಬಂದಿಗೆ ಅನುವು ಮಾಡಿಕೊಡುತ್ತದೆ.
ಆರ್‌ಬಿಐ ಸಿಬ್ಬಂದಿ ನಿರ್ವಹಿಸುವ ಟೋಲ್-ಫ್ರೀ ಸಂಖ್ಯೆ - 14448 ಹೊಂದಿರುವ ಸಂಪರ್ಕ ಕೇಂದ್ರವು ಸಿಆರ್‌ಪಿಸಿಯ ಭಾಗವಾಗಿರುತ್ತದೆ. ಇದು ಗ್ರಾಹಕರಿಗೆ ದೂರುಗಳನ್ನು ಸಲ್ಲಿಸಲು ಮತ್ತು ಅವರ ದೂರುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುತ್ತದೆ. ಆರ್‌ಬಿಐ ಕುಂದುಕೊರತೆ ಪರಿಹಾರ ಕಾರ್ಯವಿಧಾನವನ್ನು ಒದಗಿಸಲು ಕಾರ್ಯನಿರ್ವಹಿಸುತ್ತದೆ. ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಜತೆಗೆ, ಗುಜರಾತಿ, ಕನ್ನಡ, ಒರಿಯಾ, ಮಲಯಾಳಂ, ಮರಾಠಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಇದು ಸೇವೆ ನೀಡುತ್ತದೆ.
ಆರ್‌ಬಿ-ಐಒಎಸ್ ವ್ಯವಸ್ಥೆ ದೂರುಗಳಿಗೆ ತ್ವರಿತ ಪರಿಹಾರ ಸೇವೆ ಒದಗಿಸುತ್ತಿದೆಯೇ?
ದೂರು ಪ್ರಕರಣಗಳ ಸಂಕೀರ್ಣತೆ ಆಧಾರದಲ್ಲಿ ಪರಿಹಾರ ಒದಗಿಸಲಾಗುತ್ತದೆ. ಅಲ್ಲದೆ, ಓಂಬುಡ್ಸ್ ಮನ್ ಕಚೇರಿಗೆ ಸಕಾಲದಲ್ಲಿ ದೂರು ದಾಖಲೆಗಳ ಸಲ್ಲಿಕೆ, ದೂರುಗಳ ಗಾತ್ರ ಇತ್ಯಾದಿ ಅಂಶಗಳನ್ನು ಆಧರಿಸಿರುತ್ತದೆ.
ದೂರುದಾರರಿಗೆ ಮತ್ತು ನಿಯಂತ್ರಕ ಸಂಸ್ಥೆಗಳಿಗೆ ಸಿಆರ್‌ಪಿಸಿ ಮತ್ತು ಸಿಎಂಎಸ್ ವ್ಯವಸ್ಥೆಯು ಜರೂರಾಗಿ ನೋಟಿಫಿಕೇಷನ್‌ಗಳನ್ನು ರವಾನಿಸುತ್ತವೆ. ಇವು ಏಕಗವಾಕ್ಷಿ ಸೇವಾ ವ್ಯವಸ್ಥೆಯಾಗಿ ಕಾರ್ಯ ನಿರ್ವಹಿಸುತ್ತವೆ. ಇದರಿಂದ ಅನಗತ್ಯ ವಿಳಂಬ ನಿವಾರಣೆಯಾಗಿ ಮತ್ತು ತ್ವರಿತ ಪರಿಹಾರ ಸಾಧ್ಯವಾಗುತ್ತದೆ.
ಕೆಲವೊಮ್ಮೆ ನಿಯಂತ್ರಕ ಸಂಸ್ಥಎಗಳು ಸಮಯಕ್ಕೆ ಸರಿಯಾಗಿ ಬ್ಯಾಂಕಿಂಗ್ ಓಂಬುಡ್ಸ್‌ಮನ್‌ಗಳಿಗೆ ಮಾಹಿತಿ ಒದಗಿಸುವುದಿಲ್ಲ, ಇದರಿಂದ ದೂರುಗಳ ಪರಿಹಾರ ವಿಳಂಬವಾಗುತ್ತದೆ. ಹೊಸ ಯೋಜನೆಯಿಂದ ಈ ಸಮಸ್ಯೆ ಪರಿಹರಿಸಲಾಗುತ್ತದೆಯೇ?
ಹೊಸ ಯೋಜನೆಯು ನಿಯಂತ್ರಕ ಸಂಸ್ಥೆಗಳಿಗೆ ಮಾಹಿತಿ ಅಥವಾ ದಾಖಲೆಗಳನ್ನು ಒದಗಿಸಲು 15-ದಿನಗಳ ಕಾಲಾವಧಿ ನೀಡುತ್ತದೆ. ಅಷ್ಟರೊಳಗೆ ಅವರು ಪ್ರತ್ಯುತ್ತರ ಅಥವಾ ದಾಖಲೆಗಳನ್ನು ಒದಗಿಸದಿದ್ದರೆ, ಅವರು ಮೇಲ್ಮನವಿ ಸಲ್ಲಿಸುವ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಅವರ ವಿರುದ್ಧ ಓಂಬುಡ್ಸ್‌ಮನ್ ತೀರ್ಪು ನೀಡುತ್ತಾರೆ.
ಮೇಲ್ಮನವಿ ಸಲ್ಲಿಸಬಹುದಾದ ಪ್ರಕರಣವನ್ನು ಮುಕ್ತಾಯಗೊಳಿಸುವಾಗ ಓಂಬುಡ್ಸ್‌ಮನ್ ದೂರುದಾರರ ವಿರುದ್ಧ ತೀರ್ಪು ನೀಡಿದರೆ, ಅವನು ಅಥವಾ ಅವಳು ಮೇಲ್ಮನವಿಯನ್ನು ಎಲ್ಲಿ ಸಲ್ಲಿಸಬಹುದು?
ಅಂತಹ ಸಂದರ್ಭಗಳಲ್ಲಿ ಮೇಲ್ಮನವಿಯನ್ನು ಅದೇ CMS ಪೋರ್ಟಲ್ cms.rbi.org.in ನಲ್ಲಿ ಸಲ್ಲಿಸಬಹುದು. ಅಂತಹ ಮೇಲ್ಮನವಿ ಪ್ರಕರಣಗಳನ್ನು ಸಕ್ಷಮ ಪ್ರಾಧಿಕಾರವು ಪ್ರತ್ಯೇಕವಾಗಿ ನಿರ್ವಹಿಸುತ್ತದೆ.

ಕೆಲವೊಮ್ಮೆ ಒಂದೇ ರೀತಿಯ ಪ್ರಕರಣಗಳಲ್ಲಿ ವಿಭಿನ್ನ ತೀರ್ಪುಗಳು ಬರುವುದನ್ನು ನೋಡುತ್ತೇವೆ. ಹೊಸ ಯೋಜನೆಯು ಇಂತಹ ಪ್ರಮಾದಗಳನ್ನು ಪರಿಹರಿಸುತ್ತದೆ?
ಹಿಂದಿನ ನಿರ್ಧಾರಗಳ ವಿಶ್ಲೇಷಣೆಗಾಗಿ CMS ಡೇಟಾಬೇಸ್ ಅನ್ನು ಬ್ಯಾಕ್ ಎಂಡ್ ನಿಂದ ಬಳಸಲಾಗುತ್ತದೆ. ಇದು ನಿರ್ಧಾರ ತೆಗೆದುಕೊಳ್ಳುವಲ್ಲಿ ಏಕರೂಪತೆ ಮತ್ತು ಸ್ಥಿರತೆ ತರುತ್ತದೆ.
ಓಂಬುಡ್ಸ್‌ಮನ್ ಕಚೇರಿಯಲ್ಲಿ ನಡೆಯುವ ಸಂಧಾನ ಸಭೆಗಳಲ್ಲಿ ದೂರುದಾರರು ಅಥವಾ ನಿಯಂತ್ರಕ ಸಂಸ್ಥೆಗಳು ಭಾಗವಹಿಸಬಹುದೇ?
ಹೌದು, ಆರ್‌ಬಿಐನ ವೀಡಿಯೊ ಕಾನ್ಫರೆನ್ಸಿಂಗ್ ಸೌಲಭ್ಯದ ಮೂಲಕ ವರ್ಚುವಲ್ ಸಂಧಾನ ಸಭೆಗಳಲ್ಲಿ ಪಾಲ್ಗೊಳ್ಳಬಹುದು. ಇದಕ್ಕಾಗಿ ಹತ್ತಿರದ ಆರ್‌ಬಿಐ ಕಚೇರಿಗೆ ಭೇಟಿ ನೀಡಬೇಕಾಗಬಹುದು ಅಥವಾ ಓಂಬುಡ್ಸ್‌ಮನ್ ಕಚೇರಿಯೊಂದಿಗೆ ಸಮಾಲೋಚಿಸಿ ಸಂಬಂಧಿಸಿದ ಬ್ಯಾಂಕ್‌ನ ಯಾವುದೇ ಹತ್ತಿರದ ಶಾಖೆ ಅಥವಾ ವೆಬೆಕ್ಸ್, ಎಂಎಸ್ ಟೀಮ್ಸ್, ಆಡಿಯೊ ಕಾನ್ಫರೆನ್ಸ್ ಇತ್ಯಾದಿ ಮೂಲಕವೂ ಭಾಗವಹಿಸಬಹುದು.
ಆರ್‌ಬಿ-ಐಒಎಸ್ ಅಡಿ ದೂರು ಸಲ್ಲಿಸುವುದು ಹೇಗೆ?
ನಿಯಂತ್ರಕ ಸಂಸ್ಥೆಗಳ ಸೇವಾ ನ್ಯೂನತೆ ವಿರುದ್ಧ ಆರ್‌ಬಿ-ಐಒಎಸ್ ಅಡಿ ದೂರುಗಳನ್ನು ಸಲ್ಲಿಸಬಹುದು. ಆರ್ ಬಿಐನ ಸಿಎಂಎಸ್ ಪೋರ್ಟಲ್ https://cms.rbi.org.in, ಇಮೇಲ್ [email protected] ಅಥವಾ ಭೌತಿಕ ದೂರುಗಳನ್ನು ಕೇಂದ್ರೀಕೃತ ರಸೀದಿ ಮತ್ತು ಸಂಸ್ಕರಣಾ ಕೇಂದ್ರ, 4 ನೇ ಮಹಡಿ, ಭಾರತೀಯ ರಿಸರ್ವ್ ಬ್ಯಾಂಕ್, ಸೆಕ್ಟರ್ 17, ಸೆಂಟ್ರಲ್ ವಿಸ್ಟಾ, ಚಂಡೀಗಢ - 160017 ಹಾಗೂ ಆರ್ ಬಿಐನ 30 ಪ್ರಾದೇಶಿಕ ಕಚೇರಿಗಳಲ್ಲಿ ಸ್ಥಾಪಿಸಲಾದ ಗ್ರಾಹಕ ಶಿಕ್ಷಣ ಮತ್ತು ಸಂರಕ್ಷಣಾ ಕೋಶಗಳಲ್ಲಿ ದೂರು ಸಲ್ಲಿಸಬಹುದು.
ದೂರುಗಳನ್ನು ಯಾವುದೇ ಭಾಷೆಯಲ್ಲಾದರೂ ಸಲ್ಲಿಸಬಹುದೇ?
ಭೌತಿಕ ಮತ್ತು ಇ-ಮೇಲ್ ದೂರುಗಳನ್ನು ಯಾವುದೇ ಭಾಷೆಯಲ್ಲಿ ಒಂಬುಡ್ಸ್‌ಮನ್‌ಗೆ ಸಲ್ಲಿಸಬಹುದು. ಸಿಎಂಎಸ್ ಪೋರ್ಟಲ್‌ನಲ್ಲಿ ದಾಖಲಾಗುವ ದೂರುಗಳನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಸಲ್ಲಿಸಬಹುದು. ಆದಾಗ್ಯೂ, ಯಾವುದೇ ಭಾಷೆಯಲ್ಲಿ CMS ಪೋರ್ಟಲ್‌ನಲ್ಲಿ ಒದಗಿಸಲಾದ ವಿವರಣೆ ಬಾಕ್ಸ್‌ನಲ್ಲಿ ದೂರಿನ ವಾಸ್ತವಾಂಶ, ವಿವರಣೆಯನ್ನು ಟೈಪ್ ಮಾಡಬಹುದು ಅಥವಾ ನಕಲಿಸಬಹುದು ಮತ್ತು ಅಂಟಿಸಬಹುದು.
RB-IOS ವ್ಯಾಪ್ತಿಗೆ ಒಳಗೊಳ್ಳದ ಸಂಸ್ಥೆಗಳ ಬಗ್ಗೆ?
ಆರ್ ಬಿ-ಐಒಎಸ್ ವ್ಯಾಪ್ತಿಗೆ ಒಳಪಡದ 50 ಕೋಟಿ ರೂ.ಗಿಂತ ಕಡಿಮೆ ಠೇವಣಿ ಹೊಂದಿರುವ ನಗರ ಸಹಕಾರಿ ಬ್ಯಾಂಕ್‌ಗಳು, 100 ಕೋಟಿ ರೂ.ಗಿಂತ ಕಡಿಮೆ ಆಸ್ತಿ ಹೊಂದಿರುವ ಎನ್‌ಬಿಎಫ್‌ಸಿಗಳು, ಹೌಸಿಂಗ್ ಫೈನಾನ್ಸ್ ಕಂಪನಿಗಳು, ಕೋರ್ ಇನ್ವೆಸ್ಟ್‌ಮೆಂಟ್ ಕಂಪನಿಗಳ ಗ್ರಾಹಕರ ದೂರುಗಳನ್ನು ಗ್ರಾಹಕ ಶಿಕ್ಷಣ ಮತ್ತು ಸಂರಕ್ಷಣಾ ಕೋಶ(ಸಿಇಪಿಸಿ)ಗಳು ಸ್ವೀಕರಿಸಿ, ಪರಿಹಾರ ಒದಗಿಸುತ್ತವೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications