ನವದೆಹಲಿ, ಜುಲೈ 10: ಭಾರತದಲ್ಲಿ ಹಲವಾರು ಬಿಲಿಯನೇರ್ ಸಂಪತ್ತು ಹೊಂದಿರುವ ಕಂಪೆನಿಗಳಿವೆ. ಇಲ್ಲಿ ಯಾವ ಕಂಪನಿಯು ದೊಡ್ಡದು ಎಂಬುದನ್ನು ಲೆಕ್ಕಹಾಕುವ ಮತ್ತು ಶ್ರೇಣೀಕರಿಸುವ ಪ್ರಮುಖ ಅಂಶವೆಂದರೆ ಮಾರುಕಟ್ಟೆ ಕ್ಯಾಪ್ (ಮೌಲ್ಯ). ಇದು ಕಂಪನಿಯ ಷೇರುಗಳ ಎಲ್ಲಾ ಬಾಕಿ ಉಳಿದಿರುವ ಷೇರುಗಳ ಒಟ್ಟು ಮಾರುಕಟ್ಟೆ ಮೌಲ್ಯವನ್ನು ಸೂಚಿಸುತ್ತದೆ.
ಮಾರುಕಟ್ಟೆ ಬಂಡವಾಳೀಕರಣ ಎಂದು ಉಲ್ಲೇಖಿಸಿ ಪ್ರಸ್ತುತ ಷೇರು ಬೆಲೆಯಿಂದ ಕಂಪನಿಯ ಬಾಕಿ ಉಳಿದಿರುವ ಷೇರುಗಳ ಒಟ್ಟು ಸಂಖ್ಯೆಯನ್ನು ಗುಣಿಸುವ ಮೂಲಕ ಇದನ್ನು ಲೆಕ್ಕಹಾಕಲಾಗುತ್ತದೆ. ಈ ಹಿನ್ನೆಲೆಯಲ್ಲಿ ಅತಿ ಹೆಚ್ಚು ಮೌಲ್ಯ ಹೊಂದಿರುವ ಭಾರತೀಯ ಕಂಪನಿಗಳ ಪಟ್ಟಿ ಇಲ್ಲಿದೆ.

1. ರಿಲಯನ್ಸ್ ಇಂಡಸ್ಟ್ರೀಸ್:
ಬಿಲಿಯನೇರ್ ಮುಖೇಶ್ ಅಂಬಾನಿ ಭಾರತೀಯ ಉದ್ಯಮಿ. ಅವರು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಬಹುರಾಷ್ಟ್ರೀಯ ಕಂಪೆನಿ ರಿಲಯನ್ಸ್ ಮುಂಬೈನಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ. ಇದು ಪ್ರಮುಖವಾಗಿ ಪೆಟ್ರೋಕೆಮಿಕಲ್, ಜವಳಿ, ದೂರಸಂಪರ್ಕ ಮತ್ತು ಚಿಲ್ಲರೆ ವಲಯದಲ್ಲಿ ವಿವಿಧ ವ್ಯವಹಾರಗಳನ್ನು ಹೊಂದಿದೆ.
ವರದಿಗಳ ಪ್ರಕಾರ ರಿಲಯನ್ಸ್ ಕಂಪನಿಯ ಮಾರುಕಟ್ಟೆ ಮೌಲ್ಯ 17.83 ಟ್ರಿಲಿಯನ್ ಆಗಿದೆ. 2023 ರ ಹಣಕಾಸು ವರ್ಷದಲ್ಲಿ ಕಂಪನಿಯ ಏಕೀಕೃತ ಆದಾಯವು ಕೇವಲ 98,000 ಕೋಟಿಗಳಷ್ಟಿತ್ತು, ಇದು ಹಿಂದಿನ ಆರ್ಥಿಕ ವರ್ಷಕ್ಕಿಂತ 20% ಕ್ಕಿಂತ ಹೆಚ್ಚಿನ ಹೆಚ್ಚಳವಾಗಿರುವುದನ್ನು ಕಾಣಬಹುದು. ಅಂಬಾನಿ ಅವರ ನಿವ್ವಳ ಮೌಲ್ಯ 9,370 ಕೋಟಿ USD ಆಗಿದೆ.

2 ಟಾಟಾ ಕನ್ಸಲ್ಟೆನ್ಸಿ ಸರ್ವೀಸ್:
12.17 ಟ್ರಿಲಿಯನ್ ಮಾರುಕಟ್ಟೆ ಮೌಲ್ಯದೊಂದಿಗೆ TCS ಭಾರತದ ಎರಡನೇ ದೊಡ್ಡ ಕಂಪೆನಿಯೆನಿಸಿದೆ. ಸದ್ಯ ನಟರಾಜನ್ ಚಂದ್ರಶೇಖರನ್ ಟಾಟಾ ಸನ್ಸ್ ಅಧ್ಯಕ್ಷರಾಗಿದ್ದಾರೆ. ಅವರು ರತನ್ ಟಾಟಾ ಅವರ ಆಪ್ತರು ಹೌದು. ಮುಂಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಟಿಸಿಎಸ್ ಮಾಹಿತಿ ತಂತ್ರಜ್ಞಾನ (ಐಟಿ) ಸೇವೆಗಳು, ವ್ಯವಹಾರ ಪರಿಹಾರಗಳು ಮತ್ತು ಸಲಹಾ ಸಂಸ್ಥೆಯಾಗಿದೆ.
2021-2022ರಲ್ಲಿ ಟಾಟಾ ಗ್ರೂಪ್ ಅಧ್ಯಕ್ಷರು 109 ಕೋಟಿ ರೂ.ಗಳ ಪ್ಯಾಕೇಜ್ ಪಡೆಡಿದ್ದಾರೆ. ಇದರೊಂದಿಗೆ ಅವರು ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ವ್ಯಾಪಾರ ಕಾರ್ಯನಿರ್ವಾಹಕ ಎಂದು ಕರೆಯಲ್ಪಟ್ಟಿದ್ದಾರೆ. ರಿಲಯನ್ಸ್ ಈಗ ಟಾಟಾಗಿಂತ ಹೆಚ್ಚಿನ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ. ಆದರೂ ಟಾಟಾ ವ್ಯಾಪಕವಾದ ಕಾರ್ಯಾಚರಣೆಗಳನ್ನು ಮತ್ತು ಹೆಚ್ಚು ಮಹತ್ವದ ಜಾಗತಿಕ ಹೆಜ್ಜೆಗುರುತನ್ನು ಹೊಂದಿದೆ.

3. ಇನ್ಫೋಸಿಸ್:
ಕರ್ನಾದವರೇ ಆದ ನಾರಾಯಣ ಮೂರ್ತಿ ಅವರ ಇನ್ಫೋಸಿಸ್ 5.51 ಟ್ರಿಲಿಯನ್ ಮಾರುಕಟ್ಟೆ ಮೌಲ್ಯ ಹೊಂದಿದೆ. ಕಂಪನಿಯು ಮಾರ್ಚ್ 2023 ರಲ್ಲಿ 455.5 ಕೋಟಿಯನ್ನು ಲಾಭ ಗಳಿಸಿದೆ. Infosys ಭಾರತೀಯ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪನಿಯಾಗಿದ್ದು ಅದು ವ್ಯಾಪಾರ ಸಲಹಾ, ಮಾಹಿತಿ ತಂತ್ರಜ್ಞಾನ ಮತ್ತು ಹೊರಗುತ್ತಿಗೆ ಸೇವೆಗಳನ್ನು ಒದಗಿಸುತ್ತದೆ. ಇದು ಟಾಪ್ 5 ಭಾರತೀಯ ಕಂಪನಿಗಳ ಅಡಿಯಲ್ಲಿ ಬರುತ್ತದೆ.
4. ಅದಾನಿ ಗ್ರೂಪ್:
ಗೌತಮ್ ಅದಾನಿ ಅವರ ಸಮೂಹ ಕಂಪನಿಗಳು ನಾಲ್ಕನೇ ಸ್ಥಾನದಲ್ಲಿದೆ. ಇದು ಒಟ್ಟು 11 ಲಕ್ಷ ಕೋಟಿ ಸಮೂಹದ ಮಾರುಕಟ್ಟೆ ಬಂಡವಾಳದಲ್ಲಿ 7.37 ಲಕ್ಷ ಕೋಟಿ ರೂ. ಅದಾನಿ ಗ್ರೂಪ್ 2.3 ಲಕ್ಷ ಕೋಟಿ ಆದಾಯವನ್ನು ಪಡೆಯುತ್ತಿದೆ. ಇತ್ತೀಚಿಗೆ ಬಿಲಿಯನೇರ್ ಗೌತಮ್ ಅದಾನಿ ಅವರ ಗುಂಪಿನಲ್ಲಿರುವ ದೊಡ್ಡ ಕಂಪನಿ, ಅದಾನಿ ಎಂಟರ್‌ಪ್ರೈಸಸ್, ಆನ್‌ಲೈನ್ ರೈಲು ಟಿಕೆಟಿಂಗ್ ವೆಬ್‌ಸೈಟ್, ಟ್ರೈನ್‌ಮ್ಯಾನ್ ಅನ್ನು ನಡೆಸುತ್ತಿರುವ ಸ್ಟಾರ್ಟ್ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್‌ನ ಸುಮಾರು 30% ಅನ್ನು ಸ್ವಾಧೀನಪಡಿಸಿಕೊಂಡಿದೆ.
5. ಹಿಂದೂಸ್ತಾನ್ ಯೂನಿಲಿವರ್:
ಹಿಂದೂಸ್ತಾನ್ ಯೂನಿಲಿವರ್‌ನ ಮಾರುಕಟ್ಟೆ ಮೌಲ್ಯ 6.34 ಟ್ರಿಲಿಯನ್. ಇದು ಮುಂಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಬ್ರಿಟಿಷ್ ಒಡೆತನದ ಭಾರತೀಯ ಗ್ರಾಹಕ ಸರಕುಗಳ ಕಂಪನಿಯಾಗಿದೆ. ಇದರ ಉತ್ಪನ್ನಗಳಲ್ಲಿ ಆಹಾರಗಳು, ಪಾನೀಯಗಳು, ಶುಚಿಗೊಳಿಸುವ ಏಜೆಂಟ್‌ಗಳು, ವೈಯಕ್ತಿಕ ಆರೈಕೆ ಉತ್ಪನ್ನಗಳು, ವಾಟರ್ ಪ್ಯೂರಿಫೈಯರ್‌ಗಳು ಇತ್ಯಾದಿ ಸೇರಿವೆ. ರೋಹಿತ್ ಜಾವಾ ಅವರು ಇತ್ತೀಚೆಗೆ FMCG ಪ್ರಮುಖ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ಬಿಟಿ ಪ್ರಕಾರ ವಾರ್ಷಿಕ 21.43 ಕೋಟಿ ಸಂಭಾವನೆ ಪಡೆಯುತ್ತಿರುವ ಸಾಧ್ಯತೆ ಇದೆ.


Click it and Unblock the Notifications