ಕಳೆದ 10 ವರ್ಷಗಳಿಂದ ವ್ಯವಹಾರ ನಡೆಸದ ಬ್ಯಾಂಕ್‌ಗಳ ಉಳಿತಾಯ ಅಥವಾ ಚಾಲ್ತಿ ಖಾತೆಗಳಲ್ಲಿರುವ ಬ್ಯಾಲೆನ್ಸ್ ಮೊತ್ತ ಅಥವಾ ಮೆಚ್ಯುರಿಟಿಗೊಂಡು 10 ವರ್ಷಗಳಿಂದ ಕ್ಲೈಮ್ ಮಾಡದ ಟರ್ಮ್ಡ್ ಡೆಪಾಸಿಟಿಗಳನ್ನು ಕ್ಲೈಮ್ ಮಾಡದ ಡೆಪಾಸಿಟ್ ಎಂದು ಕರೆಯಲಾಗುತ್ತದೆ.
ಹಾಗಾದರೆ ಈ ಕ್ಲೈಮ್ ಮಾಡದ ಹಣವನ್ನು ಎಸ್‌ಬಿಐ ಗ್ರಾಹಕರು ಕ್ಲೈಮ್ ಮಾಡುವುದು ಹೇಗೆ?. ಅದಕ್ಕಾಗಿ ಪಾಲಿಸಬೇಕಾದ ವಿಧಾನ, ಇತರೆ ವಿವರ ಇಲ್ಲಿದೆ, ಮುಂದೆ ಓದಿ...

ಅನ್‌ಕ್ಲೈಮ್ಡ್ ಡೆಪಾಸಿಟ್ ಅನ್ನು ಕ್ಲೈಮ್ ಮಾಡುವುದು ಹೇಗೆ?
ಆರ್‌ಬಿಐ ಮಾರ್ಗಸೂಚಿ ಪ್ರಕಾರ, ಬ್ಯಾಂಕ್‌ಗಳು ತಮ್ಮ ವೆಬ್‌ಸೈಟ್‌ಗಳಲ್ಲಿ ಕ್ಲೈಮ್ ಆಗಿರದ ಖಾತೆಗಳ ವಿವರಗಳನ್ನು ನೀಡಬೇಕು. ಈ ವೆಬ್‌ಸೈಟ್‌ನಲ್ಲಿ ಅನ್‌ಕ್ಲೈಮ್ಡ್ ಖಾತೆಗಳನ್ನು ಗುರುತಿಸಿದ ಬಳಿಕ ಗ್ರಾಹಕರು ಆಯಾ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಿ ಕ್ಲೈಮ್ ಫಾರಂಗಳನ್ನು ಸಲ್ಲಿಸಬೇಕು. ಆ ಮೂಲಕ ಕ್ಲೈಮ್ ಹಣವನ್ನು ಪಡೆದುಕೊಳ್ಳುವುದಕ್ಕೆ ಕೆವೈಸಿ ದಾಖಲೆಗಳನ್ನು ಸಲ್ಲಿಸಬೇಕು.
ಎಸ್‌ಬಿಐ ಗ್ರಾಹಕರು ಅನ್‌ಕ್ಲೈಮ್ಡ್ ಹಣವನ್ನು ಕ್ಲೈಮ್ ಮಾಡುವುದು ಹೇಗೆ?
ಗ್ರಾಹಕರು ಎಸ್‌ಬಿಐ ಬ್ಯಾಂಕ್ ಶಾಖೆಗೆ ಕೆವೈಸಿ ದಾಖಲೆಗಳೊಂದಿಗೆ ಭೇಟಿ ನೀಡಬೇಕು, ಒಂದುವೇಳೆ, ಈ ಸಂದರ್ಭದಲ್ಲಿ ಗ್ರಾಹಕರು ತಮ್ಮ ಖಾತೆಯನ್ನು ಮತ್ತೆ ಸಕ್ರಿಯಗೊಳಿಸಿ ಅದನ್ನು ಮುಂದುವರಿಸಲು ಬಯಸಿದರೆ, ಆಗ ಬ್ಯಾಂಕ್‌ಗಳು ಕೆವೈಸಿ ದಾಖಲೆಗಳನ್ನು ಪಡೆದುಕೊಂಡು ಆಕ್ಟಿವೇಟ್ ಮಾಡಬೇಕು.
ಇನ್ನು ಆ ಖಾತೆಯನ್ನು ಸಂಪೂರ್ಣ ಬಂದ್ ಮಾಡುವುದಕ್ಕೆ ಬಯಸಿದರೂ ಆಗ ಬ್ಯಾಂಕ್ ಆ ಪ್ರಕಾರ ಕೋರಿಕೆಯನ್ನು ಸ್ವೀಕರಿಸಿ ಆ ಪ್ರಕ್ರಿಯೆ ಮುಂದುವರಿಸಬೇಕು.
ಎಸ್‌ಬಿಐ ಗ್ರಾಹಕರಿಗೆ ಕ್ಲೈಮ್‌ಗಾಗಿ ಕಾರ್ಯವಿಧಾನ
ಗ್ರಾಹಕರಿಂದ ವೈಯಕ್ತಿಕ ಕ್ಲೈಮ್: ನಿಗದಿತ ನಮೂನೆಯಲ್ಲಿ ಗ್ರಾಹಕರು ಕೋರಿಕೆ ಪತ್ರದೊಂದಿಗೆ ಗ್ರಾಹಕರು ಎಸ್‌ಬಿಐ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಸರಿಯಾದ ಗುರುತು ದಾಖಲೆ, ವಿಳಾಸ ಹಾಗೂ ಭಾವಚಿತ್ರವನ್ನು ಸಲ್ಲಿಸಬೇಕು. ಬ್ಯಾಂಕ್‌ಗಳನ್ನು ಆ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ನಿಗದಿತ ಖಾತೆಗಳನ್ನು ಮರು ಚಾಲನೆಗೊಳಿಸಿ ವ್ಯವಹಾರ ನಡೆಸುವುದಕ್ಕೆ ಅವಕಾಶ ನೀಡಲಾಗುತ್ತದೆ.
ಉತ್ತರಾಧಿಕಾರಿ ಅಥವಾ ನಾಮಿನಿಯಿಂದ ಕ್ಲೈ ಮಾಡುವುದು ಹೇಗೆ?
ಒಂದುವೇಳೆ ಖಾತೆದಾರರು ಇಲ್ಲದಿದ್ದರೆ, ಉತ್ತರಾಧಿಕಾರಿ ಅಥವಾ ನಾಮಿನಿಗಳು ಎಸ್‌ಬಿಐ ಶಾಖೆಗಳಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಅರ್ಜಿದಾರರು ಬ್ಯಾಂಕ್‌ನಲ್ಲಿ ಜಾರಿಯಲ್ಲಿರುವ ಕ್ಲೈಮ್ ಹಾಗೂ ಹಣ ಮರುಪಾವತಿ ವಿಧಾನವನ್ನು ಅನುಸರಿಸಬೇಕು.
ವೈಕ್ತಿಗತವಲ್ಲದ ಕ್ಲೈ ಮಾಡುವುದು ಹೇಗೆ?
ಗ್ರಾಹಕರು ಕ್ಲೈಮ್ ಫಾರಂ ಅನ್ನು ಬ್ಯಾಂಕ್‌ನ ಕೋರಿಕೆಯಂತೆ ಕಂಪನಿ/ಸಂಸ್ಥೆಯ ಲೆಟರ್‌ಹೆಡ್‌ನಲ್ಲಿ ಅಧಿಕೃತವಾದ ಸಹಿಯೊಂದಿಗೆ ಸೂಕ್ತ ವಿಳಾಸ, ಗುರುತಿನ ದಾಖಲೆಗಳೊಂದಿಗೆ ಸಲ್ಲಿಸಬೇಕು.
ಕ್ಲೈಮ್ ಮಾಡದ ಡೆಪಾಸಿಟ್‌ಗಳ ಹೆಚ್ಚಳಕ್ಕೆ ಆರ್‌ಬಿಐ ಕಾರಣಗಳನ್ನು ಪಟ್ಟಿ ಮಾಡುತ್ತದೆ. ಡೆಪಾಸಿಟ್‌ದಾರರು ಇನ್ನು ಮುಂದೆ ಕಾರ್ಯ ನಿರ್ವಹಿಸಲು ಉದ್ದೇಶಿಸದ ಉಳಿತಾಯ/ಚಾಲ್ತಿ ಖಾತೆಗಳನ್ನು ಮುಚ್ಚದಿರುವುದು ಅಥವಾ ಪ್ರಬುದ್ಧ ಎಫ್‌ಡಿಗಳಿಗಾಗಿ ಬ್ಯಾಂಕ್‌ಗಳಲ್ಲಿ ರಿಡೆಂಪ್ಶನ್ ಕ್ಲೈಮ್‌ಗಳನ್ನು ಸಲ್ಲಿಸದ ಕಾರಣ ಅನ್‌ಕ್ಲೈಮ್ಡ್ ಠೇವಣಿಗಳ ಪ್ರಮಾಣ ಹೆಚ್ಚಾಗುತ್ತಿದೆ.
ಅಲ್ಲದೆ ಮೃತ ಡೆಪಾಸಿಟ್‌ದಾರರಿಗೆ ಸೇರಿದ ಖಾತೆಗಳ ಸಂಖ್ಯೆಯೂ ಜಾಸ್ತಿಯಿದ್ದು, ಅಲ್ಲಿ ನಾಮಿನಿ/ ಉತ್ತರಾಧಿಕಾರಿಗಳು ಕಾನೂನಾತ್ಮಕವಾಗಿ ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ಕ್ಲೈಮ್ ಮಾಡುವುದಕ್ಕೆ ಬರದಿರುವುದು ಕೂಡ ಪ್ರಮುಖ ಕಾರಣ.
2023ರ ಆಗಸ್ಟ್ 17ರಂದು ಆರ್‌ಬಿಐ ಕೇಂದ್ರೀಕೃತ ವೆಬ್‌ಸೈಟ್ ಯುಡಿಜಿಎಎಂ ಅನ್ನು ಪ್ರಾರಂಭಿಸಿದ್ದು, ಅಲ್ಲಿ ಗ್ರಾಹಕರು ತಮ್ಮ ಅನ್‌ಕ್ಲೈಮ್ಡ್ ಹಲವು ಬ್ಯಾಂಕ್‌ಗಳ ಖಾತೆಗಳ ವಿವರಗಳಲ್ಲಿ ಒಂದೇ ಜಾಗದಲ್ಲಿ ಪಡೆದುಕೊಳ್ಳಬಹುದು.
ಯುಡಿಜಿಎಎಂ ಪೋರ್ಟಲ್‌ನಲ್ಲಿ 30 ಬ್ಯಾಂಕ್‌ಗಳ ಪಟ್ಟಿ
ಯುಡಿಜಿಎಎಂ ಗೇಟ್‌ವೇನಲ್ಲಿ ಸದ್ಯಕ್ಕೆ ಒಟ್ಟು 30 ಬ್ಯಾಂಕ್‌ಗಳ ಖಾತೆದಾರರ ಅನ್‌ಕ್ಲೈಮ್ಡ್ ಡೆಪಾಸಿಟ್ ಮಾಹಿತಿಯನ್ನು ಗ್ರಾಹಕರು ಹುಡುಕಬಹುದು.
ಈ 30 ಬ್ಯಾಂಕ್‌ಗಳ ಪಟ್ಟಿಯಲ್ಲಿ ಎಸ್‌ಬಿಐ, ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ತಾಷನಲ್ ಬ್ಯಾಂಕ್, ವಿದೇಶಿ ಬ್ಯಾಂಕ್‌ಗಳಾದ ಸಿಟಿಬ್ಯಾಂಕ್, ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಹಾಗೂ ಎಚ್‌ಎಸ್‌ಬಿಸಿ ಬ್ಯಾಂಕ್‌ಗಳು ಸೇರಿವೆ. ಅಲ್ಲದೆ, ಎಚ್‌ಡಿಎಫ್‌ಸಿ, ಐಸಿಐಸಿಐ ಹಾಗೂ ಆಕ್ಸಿಸ್ ಬ್ಯಾಂಕ್‌ಗಳು ಕೂಡ ಈ ಪಟ್ಟಿಯಲ್ಲಿವೆ.


Click it and Unblock the Notifications