ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಹಾಗೂ ಅವರ ಪತ್ನಿ, ಚಲನಚಿತ್ರ ನಿರ್ಮಾಪಕಿಯೂ ಆಗಿರುವ ಗೌರಿ ಖಾನ್ ಅವರು ಜತೆಯಾಗಿ ಹಲವಾರು ಉದ್ಯಮ-ವ್ಯವಹಾರಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
ಅದರಲ್ಲಿಯೂ ಅವರ ಪ್ರೊಡಕ್ಷನ್ ಸಂಸ್ಥೆಯಾದ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಹೆಚ್ಚು ಲಾಭದಾಯಕವಾಗಿದೆ. ಈ ಜೋಡಿಯು ದುಬೈನಲ್ಲಿಯೂ ಹೆಚ್ಚು ಮಂದಿಗೆ ಗೊತ್ತಿಲ್ಲದ ಉದ್ಯಮವನ್ನು ನಡೆಸುತ್ತಿದೆ.

2008ರಲ್ಲಿ ಶಾರುಖ್ ಖಾನ್ ಅವರು ಬಿಲಿಯನ್ಸ್ ಮೌಲ್ಯದ ಬಿಸಿನೆಸ್ ವೆಂಚರ್ ಅನ್ನು ದುಬೈನಲ್ಲಿ ಪ್ರಾರಂಭಿಸುವ ಬಗ್ಗೆ ಘೋಷಿಸಿದ್ದರು. ಆ ಮೂಲಕ ಯುನೈಟೆಡ್ ಅರಬ್ ಎಮಿರೇಟ್ಸ್ ಮೂಲದ ರಿಯಲ್ ಎಸ್ಟೇಟ್ ಸಂಸ್ಥಯ ಜತೆಗೆ ಕೈಜೋಡಿಸಿ ಬೀಚ್‌ವೊಂದರ ಮುಂಭಾಗದಲ್ಲಿ ಐಷಾರಾಮಿ ವಸತಿ ಸಂಕೀರ್ಣ ನಿರ್ಮಾಣ ಯೋಜನೆಯನ್ನು ಘೋಷಣೆ ಮಾಡಿದ್ದರು.
Aryan Khan: ವ್ಯಾಪಾರ ಜಗತ್ತಿಗೆ ಶಾರುಖ್ ಖಾನ್ ಪುತ್ರ ಆರ್ಯನ್ ಎಂಟ್ರಿ, ಡಿ'ಯಾವೋಲ್ ಬ್ರ್ಯಾಂಡ್ ಆರಂಭ
2012ರಲ್ಲಿ ಶಾರುಖ್ ಖಾನ್ ಅವರು ಸಿಗ್ನೇಚರ್ ಬೀಚ್‌ಫ್ರಂಟ್ ರೆಸಿಡೆನ್ಶಿಯಲ್ ಪ್ರಾಜೆಕ್ಟ್ ಅನ್ನು ಲಾಂಚ್ ಮಾಡಿದ್ದು, ಆ ಪ್ರದೇಶಕ್ಕೆ ತಮ್ಮದೇ ಎಸ್‌ಆರ್‌ಕೆ ಬುಲೆವಾರ್ಡ್ ಎಂದು ನಾಮಕರಣ ಮಾಡಿದ್ದರು. ಮಧ್ಯ ಪ್ರಾಚ್ಯ ದೇಶಗಳಲ್ಲಿ ತಮ್ಮ ಚಿತ್ರಗಳು ಯಶಸ್ವಿಯಾಗಿರುವುದು ಹಾಗೂ ಅಭಿಮಾನಿಗಳ ಪ್ರೀತಿಯ ದ್ಯೋತಕವಾಗಿ ಈ ಯೋಜನೆಯನ್ನು ಅವರು ದುಬೈನಲ್ಲಿ ಕೈಗೆತ್ತಿಕೊಂಡಿದ್ದರು.
ಎಸ್‌ಆರ್‌ಕೆ ಬುಲೆವಾರ್ಡ್ ದುಬೈಯ ಪ್ರತಿಷ್ಟಿತ ಪ್ರದೇಶವಾದ ರಾಸ್ ಅಲ್ ಖೈಮಾದ ಡಾನಾ ದ್ವೀಪದಲ್ಲಿದೆ. ಬ್ರಾಡ್ ಪಿಟ್, ಬೋರಿಸ್ ಬೆಕರ್ ಮತ್ತು ಟೈಗರ್ ವುಡ್ಸ್ ಹೆಸರಿನ ಡೀಲ್‌ಗಳು ನಡೆದ ಅವಧಿಯಲ್ಲೇ ಶಾರುಖ್ ಖಾನ್ ಅವರ ಸಿಗ್ನೇಚರ್ ಡೀಲ್ ಕೂಡ ಆಗಿತ್ತು.
ಶಾರುಖ್ ಖಾನ್ ಅವರ ಬುಲೆವಾರ್ಡ್ ದುಬೈನ ಐಷಾರಾಮಿ ಮತ್ತು ಉನ್ನತ ಮಟ್ಟದ ಐಷಾರಾಮಿ_ಹೈ ಎಂಡ್ ಕಮ್ಯೂನಿಟಿಯಾಗಿದ್ದು, 10 ವಸತಿ ಕಟ್ಟಡಗಳನ್ನು ಒಳಗೊಂಡಿದೆ. ಶಾರುಖ್ ಖಾನ್ ಅವರ ದುಬೈ ಪ್ರಾಜೆಕ್ಟ್ ವೆಚ್ಚ 2.17 ಮಿಲಿಯನ್ ಅಮೆರಿನ್ ಡಾಲರ್ ಆಗಿದೆ. ಅಂದರೆ, ಸುಮಾರು 18,000 ಕೋಟಿ ರೂಪಾಯಿ ಆಗಿದೆ.


Click it and Unblock the Notifications