ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ದೇಶದ ಅತ್ಯಂತ ಶ್ರೀಮಂತ ರಾಜಕಾರಣಿಗಳ ಪೈಕಿ ಒಬ್ಬರು. ರಾಜಮನೆಯನ ಕುಟುಂಬದಿಂದ ಬಂದಿರುವ ಅವರ ಮಗ ಮಹಾನಾರ್ಯಮನ್ ಸಿಂಧಿಯಾ ಅವರು ತಮ್ಮ ಕುಟುಂಬದ ಅಪಾರ ಸಂಪತ್ತಿನ ಹೊರತಾಗಿಯೂ ಸ್ವಂತವಾಗಿ ಹೆಸರನ್ನು ಮಾಡುವುದಕ್ಕೆ ಪಟ್ಟುಬಿಡದೆ ಪರಿಶ್ರಮಪಡುತ್ತಿದ್ದಾರೆ. ಈಗ ಕೋಟಿಗಟ್ಟಲೆ ಮೌಲ್ಯದ ತಮ್ಮದೇ ಆದ ಸ್ಟಾರ್ಟಪ್ ಅನ್ನು ಸ್ಥಾಪಿಸಿದ್ದಾರೆ.
ಜ್ಯೋತಿರಾದಿತ್ಯ ಸಿಂಧಿಯಾ ಅವರ ಪುತ್ರ ಹಾಗೂ ಗ್ವಾಲಿಯರ್‌ನ ರಾಜಮನೆತನದ ವಂಶಸ್ಥರಾದ ಮಹಾನಾರ್ಯಮನ್ ಸಿಂಧಿಯಾ ಅವರು ತಮ್ಮ ಸ್ವಂತ ವ್ಯವಹಾರವನ್ನು ಸ್ಥಾಪಿಸಿದ್ದಾರೆ. ಕೇವಲ 11 ಲಕ್ಷ ರೂಪಾಯಿ ಮೌಲ್ಯದ ಕಂಪನಿಯು ಈಗ ಐದು ಕೋಟಿ ರೂಪಾಯಿ ಮೌಲ್ಯದ ಕಂಪನಿಯಾಗಿ ಬೆಳೆದಿದೆ.

ಸಿಂಧಿಯಾ ಸಾಮ್ರಾಜ್ಯದ ಉತ್ತರಾಧಿಕಾರಿಯಾಗಿರುವ ಮಹಾನಾರ್ಯಮನ್ ಅವರು ತಮ್ಮ ಕುಟುಂಬ ರಾಜಕಾರಣ ಹಾಗೂ ರಾಜಮನೆತನದ ಪರಂಪರೆಯಿಂದ ಸಂಪೂರ್ಣ ಹೊರಗುಳಿಯುವುದಕ್ಕೆ ನಿರ್ಧರಿಸಿದ್ದು, ತನ್ನದೇ ಆದ ಉದ್ಯಮವನ್ನು ಪ್ರಾರಂಭಿಸುವ ಮೂಲಕ ಉದ್ಯಮಿಯಾಗಿ ತನ್ನನ್ನು ತಾನು ಗುರುತಿಸಿಕೊಳ್ಳುವುದಕ್ಕೆ ನಿರ್ಧರಿಸಿದ್ದಾರೆ. ಇದು ಮಂಡಿಯಿಂದ ಗ್ರಾಹಕರಿಗೆ ಗುಣಮಟ್ಟದ ತರಕಾರಿಗಳನ್ನು ಪೂರೈಸುವ ಸ್ಟಾರ್ಟಪ್ ಕಂಪನಿಯಾಗಿದೆ.
ಮಹಾನಾರ್ಯಮನ್ ಸಿಂಧಿಯಾ ಅವರ ಮೈಮಂಡಿ ಕಂಪನಿಯು ಕಳೆದ ಎರಡು ವರ್ಷಗಳಿಂದ ಚಾಲನೆಯಲ್ಲಿದೆ. ಕೇವಲ 11 ಲಕ್ಷ ರೂಪಾಯಿಗಳ ನಿಧಿಯಲ್ಲಿ ತರಕಾರಿ ಕಂಪನಿಯನ್ನು ಸ್ಥಾಪಿಸಲಾಯಿತು. ನಂತರ ಅದು ಒಂದು ವರ್ಷದ ನಂತರ 60 ಲಕ್ಷಕ್ಕೆ ಬೆಳೆಯಿತು. 2022 ರ ಅಕ್ಟೋಬರ್‌ನಲ್ಲಿ ಇದು 4.1 ಕೋಟಿ ರೂಪಾಯಿ ಹಣವನ್ನು ಪಡೆದುಕೊಂಡಿದ್ದು, ಕಂಪನಿಯ ಮೌಲ್ಯವು 5 ಕೋಟಿ ರೂಪಾಯಿಗೆ ಏರಿದೆ.
Anish Kapoor: 257 ಕೋಟಿ ರೂ. ಕಲಾಕೃತಿ ಮಾರಾಟ ಮಾಡಿ ಭಾರತದ ಅತಿಹೆಚ್ಚು ಸಂಭಾವನೆ ಪಡೆಯುತ್ತಿರುವ ಆರ್ಟಿಸ್ಟ್ ಅನೀಶ್ ಕಪೂರ್
ಕೃಷಿ ವಲಯದಲ್ಲಿ ಒಂದು ಬದಲಾವಣೆ ಮಾಡಲು ಪ್ರಯತ್ನಿಸುತ್ತಿರುವ 27 ವರ್ಷದ ಸಿಂಧಿಯಾ 25 ವರ್ಷದ ಸೂರ್ಯಾಂಶ್ ರಾಣಾ ಜತೆಗೂಡಿ ತಾಜಾ ತರಕಾರಿಗಳು ಸಂಗ್ರಹಣೆ ಮತ್ತು ಮಾರಾಟದಲ್ಲಿನ ತ್ಯಾಜ್ಯವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಮೈಮಂಡಿಯನ್ನು ಸ್ಥಾಪಿಸಿದ್ದಾರೆ. ಆ ಮೂಲಕ ಉತ್ಪನ್ನಗಳನ್ನು ನ್ಯಾಯಯುತ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ಟಿಒವೈ ವರದಿಗಳ ಪ್ರಕಾರ, ಜ್ಯೋತಿರಾದಿತ್ಯ ಸಿಂಧಿಯಾ ಅವರ ಮಗ ತನ್ನ ಗುರುತನ್ನು ಮರೆಮಾಚಲು ಮುಖವನ್ನು ಮುಚ್ಚಿಕೊಂಡು ಮಂಡಿಗಳಿಗೆ ಹೋಗುತ್ತಿದ್ದರು. ಆ ಮೂಲಕ ಉತ್ತಮ ಗುಣಮಟ್ಟದ ತಾಜಾ ತರಕಾರಿಗಳನ್ನು ಖರೀದಿಸಿ ಅವುಗಳನ್ನು ಸ್ಥಳೀಯ ವಿತರಣಾ ಪಾಲುದಾರರಾಗಿರುವ ತರಕಾರಿ ಕಾರ್ಟ್ ತಳ್ಳುವವರು ಹಾಗೂ ಬೀದಿ ವ್ಯಾಪಾರಿಗಳಿಗೆ ಸರಬರಾಜು ಮಾಡುತ್ತಿದ್ದಾರೆ.
ಅವರ ಉದ್ಯಮಶೀಲತೆಯ ದೃಷ್ಟಿ ಮೂಲಕ ಮಹಾನಾರ್ಯಮನ್ ಸಿಧಿಯಾ ಅವರು ಗ್ವಾಲಿಯರ್‌ನಾದ್ಯಂತ ತಾಜಾ ಕಡಿಮೆ ದರದ ತರಕಾರಿಗಳು ಹಾಗೂ ದಿನಸಿಗಳನ್ನು ಪೂರೈಸುವ ಗುರಿಯನ್ನು ಹೊಂದಿದ್ದಾರೆ. ಜತೆಗೆ ಮಧ್ಯಪ್ರದೇಶದಲ್ಲಿರುವ ತಮ್ಮ ಕುಟುಂಬದ ಅಪಾರವಾದ ಸಂಪತ್ತನ್ನು ಅವಲಂಬಿಸಬಾರದು ಎಂಬ ಆಶಯವನ್ನು ಕೂಡ ಅವರು ಹೊಂದಿದ್ದಾರೆ.


Click it and Unblock the Notifications