ಬಾಲ್ಯ ವಿವಾಹದ ಯಾತನೆ ನಡುವೆ 900 ಕೋಟಿ ಕಂಪನಿ ಒಡತಿಯಾದ ಕಲ್ಪನಾ ಸರೋಜ್‌!

ಬೆಂಗಳೂರು, ಜುಲೈ 5: ಕಲ್ಪನಾ ಸರೋಜ್‌ ಅವರು ದೇಶದ ಮುಂಚೂಣಿಯ ಬಿಸಿನೆಸ್‌ ಮಹಿಳೆ ಹಾಗೂ ಉದ್ಯಮಶೀಲರಾಗಿದ್ದಾರೆ. ಜತೆಗೆ ಅವರ ಬದುಕಿನ ಕಥೆಯೂ ಅಷ್ಟೇ ಸ್ಫೂರ್ತಿದಾಯಕವಾಗಿದೆ. ಸ್ಲಮ್‌ಡಾಗ್‌ ಮಿಲಿಯನೇರ್‌ ಸ್ಟೋರಿಯಂತೆ ಕಲ್ಪನಾ ಅವರ ಬಾಳಿನ ಕಥೆಯು ನಿಜಕ್ಕೂ ಅಚ್ಚರಿ ಮೂಡಿಸುವಂತದ್ದು.

ಕಲ್ಪನಾ ಸರೋಜ್‌ ಅವರು ಉದ್ಯಮಶೀಲರಾಗಿದ್ದು, ಟೆಡೆಕ್ಸ್‌ ಸ್ಪೀಕರ್‌ ಕೂಡ ಹೌದು. ಪ್ರಸ್ತುತ ಅವರು ಬಹುಕೋಟಿ ಆದಾಯ ಗಳಿಸುವ ಕಮನಿ ಟ್ಯೂಬ್ಸ್‌ನ ಅಧ್ಯಕ್ಷರಾಗಿದ್ದಾರೆ. ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆ ವರದಿ ಪ್ರಕಾರ, ಕಮನಿ ಟ್ಯೂಬ್ಸ್‌ ಹೆಚ್ಚಿನ ಲಾಭದೊಂದಿಗೆ 100 ಕೋಟಿ ರೂ. ಆದಾಯವನ್ನು ಹೊಂದಿದೆ.

ಬಾಲ್ಯ ವಿವಾಹವಾದರೂ 900 ಕೋಟಿ ಕಂಪೆನಿ ಒಡತಿ ಇವರು

ಕಲ್ಪನಾ ಅವರು ಯಶಸ್ವಿ ಬಿಸಿನೆಸ್‌ ಮಹಿಳೆಯಾಗಿದ್ದರೂ ಅವರು ಆ ಹಂತಕ್ಕೆ ಬೆಳೆಯುವುದಕ್ಕೆ ಜೀವನದ ಹಾದಿಯು ಅಷ್ಟೊಂದು ಸುಲಭವಾಗಿರಲಿಲ್ಲ. ಕಮನಿ ಟ್ಯೂಬ್ಸ್‌ನ ಕಲ್ಪನಾ ಅವರು ಬಾಲ್ಯ ವಿವಾಹದ ಸಂಕೋಲೆಗೆ ಸಿಲುಕಿ ಸಾಕಷ್ಟು ಯಾತನೆ ಅನುಭವಿಸಿದ್ದರು. ಕೇವಲ 12 ವರ್ಷ ವಯಸ್ಸಿನಲ್ಲಿಯೇ ಬಲವಂತವಾಗಿ ಬಾಲ್ಯ ವಿವಾಹಕ್ಕೆ ಒಳಗಾಗಿದ್ದರು. ಇದರಿಂದ ಶಿಕ್ಷಣವೂ ಅರ್ಧಕ್ಕೆ ನಿಂತಿತ್ತು.

ಮಹಾರಾಷ್ಟ್ರದಲ್ಲಿ ಪೊಲೀಸ್‌ ಕಾನ್‌ಸ್ಟೇಬಲ್‌ನ ಮಗಳಾಗಿರುವ ಕಲ್ಪನಾ ಅವರು ಯೌವನಕ್ಕೆ ಪ್ರವೇಶಿಸುವ ಮೊದಲು ಮುಂಬೈನ ಕೊಳಚೆ ಪ್ರದೇಶದಲ್ಲಿ ಗಂಡನ ಜತೆಗೆ ವಾಸವಾಗಿದ್ದರು. ಅವರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಅತ್ತೆಯಿಂದ ಕಿರುಕುಳ ಅನುಭವಿಸಿದ್ದರು. ಈ ವೇಳೆ ತಂದೆಯು ಅವರನ್ನು ರಕ್ಷಿಸಿದ್ದರು.

ಈ ರೀತಿಯ ಕಿರುಕುಳದಿಂದ ಕಲ್ಪನಾ ಅವರು ಮಾನಸಿಕವಾಗಿ ಬಹಳಷ್ಟು ಕುಗ್ಗಿ ಹೋಗಿದ್ದರು. ಅಷ್ಟೇಅಲ್ಲ ಇಡೀ ಗ್ರಾಮಸ್ಥರಿಂದಲೂ ಬಹಿಷ್ಕಾರಕ್ಕೆ ಒಳಗಾಗಿದ್ದರು. ಈ ಎಲ್ಲ ಯಾತನೆಯಿಂದ ರೋಸಿ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುಂದಾಗಿದ್ದರು. ಈ ಎಲ್ಲ ಸಂಕಷ್ಟದ ನಡುವೆ ಕುಟುಂಬಕ್ಕೆ ಸಹಾಯ ಮಾಡುವುದಕ್ಕೆ 16ನೇ ವಯಸ್ಸಿನಲ್ಲಿ ದುಡಿಯುವುದಕ್ಕೆ ಪ್ರಾರಂಭಿಸಿದರು. ಆಗಲೇ ಅವರಲ್ಲಿ ಉದ್ಯಮಶೀಲತೆಯ ಆಸಕ್ತಿ ಹಾಗೂ ಛಲ ಬೆಳೆದಿತ್ತು.

ಬಾಲ್ಯ ವಿವಾಹವಾದರೂ 900 ಕೋಟಿ ಕಂಪೆನಿ ಒಡತಿ ಇವರು

ಕಲ್ಪನಾ ಅವರು ಕೆಎಸ್‌ ಎನ್ನುವ ಫಿಲಂ ಪ್ರೊಡಕ್ಷನ್‌ ಹೌಸ್‌ ಅನ್ನು ಪ್ರಾರಂಭಿಸಿದ್ದು, ತೆಲುಗು, ಇಂಗ್ಲಿಷ್‌ ಹಾಗೂ ಹಿಂದಿ ಚಿತ್ರಗಳನ್ನು ನಿರ್ಮಿಸಿದ್ದರು. ಬಳಿಕ ಅವರು ತಮ್ಮ ಬಿಸಿನೆಸ್‌ ಅನ್ನು ರಿಯಲ್‌ ಎಸ್ಟೇಟ್‌ಗೆ ವಿಸ್ತರಿಸಿಕೊಂಡರು. ಆ ಮೂಲಕ ಕಮನಿ ಟ್ಯೂಬ್ಸ್‌ ಎಂಬ ಕಂಪನಿಯನ್ನು ಕೂಡ ಹುಟ್ಟು ಹಾಕಿದರು.

ಕಮನಿ ಟ್ಯೂಬ್ಸ್‌ ದೊಡ್ಡ ಮಟ್ಟದ ನಷ್ಟವನ್ನು ಅನುಭವಿಸಿತ್ತು. ಆದರೆ ಕಲ್ಪನಾ ಸರೋಜ್‌ ಅವರ ನುರಿತ ಬಿಸಿನೆಸ್‌ ಮೈಂಡ್‌ ಮೂಲಕ ಕಂಪನಿಯನ್ನು ಪುನರ್‌ ರಚನೆಯನ್ನು ಮೂಡುವ ಮೂಲಕ ಕಂಪನಿಯನ್ನು ಲಾಭದೆಡೆಗೆ ಮುನ್ನಡೆಸುವಲ್ಲಿ ಯಶಸ್ವಿಯಾದರು. ಪ್ರಸ್ತುತ ಸರೋಜ್‌ ಅವರ ಕಂಪನಿಯು 100 ಕೋಟಿ ರೂ.ಗೂ ಅಧಿಕ ಆದಾಯವನ್ನು ಗಳಿಸುತ್ತಿದೆ.

ಕಲ್ಪನಾ ಸರೋಜ್‌ ಅವರ ಸ್ವಂತ ಲೆಕ್ಕಾಚಾರ ಪ್ರಕಾರ, ಅವರ ವೈಯಕ್ತಿಕ ಸಂಪಾದನೆ ಹಾಗೂ ಆಸ್ತಿಯು 112 ಮಿಲಿಯನ್‌ ಅಮೆರಿಕನ್‌ ಡಾಲರ್‌ ಹೊಂದಿದೆ. ಅಂದರೆ ಅದು ಸುಮಾರು 917 ಕೋಟಿ ರೂ. ಆಗಿದೆ. ಹೀಗಾಗಿ ಕಲ್ಪನಾ ಸರೋಜ್‌ ಅವರ ಬದುಕಿನ ಕಥೆಯು ಲಕ್ಷಾಂತರ ಜನರಿಗೆ ಮಾದರಿ ಮತ್ತು ಸ್ಫೂರ್ತಿಯನ್ನು ನೀಡುವಂತದ್ದು. ಜತೆಗೆ ಆಕೆಯನ್ನು ನಿಜವಾದ ಸ್ಲಮ್‌ಡಾಗ್‌ ಮಿಲಿಯನೇರ್‌ ಎಂದು ಕರೆಯಲಾಗುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+