ದೀರ್ಘಾವಧಿಯ ಉಳಿತಾಯ ಯೋಜನೆಗಳನ್ನು ಉತ್ತೇಜಿಸುವ ಸಲುವಾಗಿ ಮತ್ತು ಇಂತಹ ಯೋಜನೆಗಳಲ್ಲಿ ಹೂಡಿಕೆಯತ್ತ ಆಕರ್ಷಿಸಲು ಸರ್ಕಾರವು ಅಂಚೆ ಕಚೇರಿಯ ಯೋಜನೆಗಳನ್ನು ಪರಿಚಯಿಸಿದೆ. ಪರಿಣಾಮಕಾರಿಯಾಗಿರುವ, ಸುಲಭವಾಗಿ ಮತ್ತು ಸುರಕ್ಷಿತವಾಗಿ ಹೂಡಿಕೆ ಮಾಡುವ ಅನೇಕ ಯೋಜನೆಗಳ ಆಯ್ಕೆಗಳನ್ನು ಅಂಚೆ ಕಚೇರಿ ಒದಗಿಸಿದೆ. ನಿಮ್ಮ ಹೂಡಿಕೆಯ ಗುರಿಗಳಿಗೆ ನಿಕಟವಾಗಿರುವಂತಹ ಯೋಜನೆಗಳನ್ನು ನೀವಿಲ್ಲಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
1961ರ ಆದಾಯ ತೆರಿಗೆ ಕಾಯಿದೆ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಪ್ರಯೋಜನ ಲಭ್ಯವಾಗುತ್ತದೆ. ಎನ್‌ಎಸ್‌ಸಿ, ಎಸ್‌ಸಿಎಸ್‌ಎಸ್, ಎಸ್‌ಎಸ್‌ವೈ, ಮತ್ತು ಪಿಪಿಎಫ್ ಯೋಜನೆ ಸೇರಿದಂತೆ ಹಲವು ತೆರಿಗೆ ಉಳಿಸುವ ಅನುಕೂಲಕರ ಯೋಜನೆಗಳನ್ನು ಅಂಚೆ ಕಚೇರಿಯು ನೀಡುತ್ತದೆ. ಇದಕ್ಕೆ ಮತ್ತೊಂದು ಉದಾಹರಣೆಯೆಂದರೆ ಸಾರ್ವಜನಿಕ ಭವಿಷ್ಯ ನಿಧಿ. ಬಡ್ಡಿ ಸಹಿತವಾಗಿ ಇದು ಮೆಚ್ಯೂರಿಟಿ ಅವಧಿಯವರೆಗೆ ಹಣವನ್ನು ದೊಡ್ಡ ಮೊತ್ತವಾಗಿ ಕೂಡಿ ಇಡಲು ಅನುಕೂಲ ಕಲ್ಪಿಸುತ್ತದೆ. ಪಿಪಿಎಫ್ ಈಗ ಶೇಕಡ 7.1ರಷ್ಟು ಸಂಯುಕ್ತ ಬಡ್ಡಿ (ಕಾಂಪೌಡ್ ಬಡ್ಡಿ) ದರವನ್ನು ನೀಡುತ್ತದೆ. ಐಟಿ ಕಾಯ್ದೆಯ ಸೆಕ್ಷನ್ 80C ಪ್ರಕಾರ ಗರಿಷ್ಠ1.50,000 ರೂಪಾಯಿವರೆಗೆ ಮತ್ತು ಠೇವಣಿ ಮೇಲಿನ ಗಳಿಸಿದ ಬಡ್ಡಿ, ಮೆಚ್ಯೂರಿಟಿ ಮೊತ್ತ ಎಲ್ಲವೂ ತೆರಿಗೆ ಮುಕ್ತವಾಗಿದೆ.
ಸುಕನ್ಯಾ ಸಮೃದ್ದಿ ಯೋಜನೆ
10 ವರ್ಷದೊಳಗಿನ ಹೆಣ್ಣು ಮಗುವಿನ ಹೆಸರಿನಲ್ಲಿ ಸುಕನ್ಯಾ ಸಮೃದ್ದಿ ಯೋಜನೆ ಖಾತೆ ತೆರೆಯಬಹುದು. ಮಗುವಿಗೆ 18 ವರ್ಷ ತುಂಬಿದಾಗ ಅವರು ಖಾತೆದಾರರಾಗುತ್ತಾರೆ. ಈ ಯೋಜನೆಯಡಿ ಗರಿಷ್ಟ ಎರಡು ಖಾತೆ ಹೊಂದಬಹುದಾದರೂ ಅವಳಿ, ತ್ರಿವಳಿ ಅಥವಾ ಅದಕ್ಕಿಂತ ಹೆಚ್ಚಿನ ಹೆಣ್ಣು ಮಗುವಿಗೆ ಜನ್ಮ ನೀಡಿದಾಗ ಹೆತ್ತವರು ಅದಕ್ಕೆ ಅನುಕೂಲವಾಗಿ ಖಾತೆ ತೆರೆಯುವ ಅವಕಾಶವಿದೆ. ಸುಕನ್ಯಾ ಸಮೃದ್ದಿ ಯೋಜನೆಯು 7.6% ದಷ್ಟು ಬಡ್ಡಿದರ ಹೊಂದಿದೆ. ಈ ಯೋಜನೆಗೆ ಕನಿಷ್ಟ 250ರೂ. ಗಳ ಆರಂಭಿಕ ಠೇವಣಿ ಮತ್ತು ಮತ್ತು ಪ್ರತಿ ಹಣಕಾಸಿನ ವರ್ಷದಲ್ಲಿ ಗರಿಷ್ಟ 1,50,000 ರೂ. ಠೇವಣಿ ಮಾಡುವ ಅವಕಾಶವಿದೆ. ಹಣಕಾಸಿನ ಉಳಿತಾಯದ ಜತೆಗೆ ಆದಾಯ ತೆರಿಗೆ ಕಾಯಿದೆ -1961 ಸೆಕ್ಷನ್ 80C ತೆರಿಗೆ ವಿನಾಯಿತಿ ಪಡೆಯುತ್ತದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆ:
60 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯೋಮಿತಿಯವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. 55 ವರ್ಷಕ್ಕಿಂತ ಮೇಲ್ಪಟ್ಟ ಆದರೆ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಿವೃತ್ತಿ ಪಡೆದವರೆಗೂ ಒಂದು ತಿಂಗಳ ಒಳಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಅವಕಾಶವಿದೆ. ಇದರಲ್ಲಿ ಕನಿಷ್ಠ ಹೂಡಿಕೆ ಮಿತಿ ಒಂದು ಸಾವಿರ ರೂಪಾಯಿಯಿಂದ ಆರಂಭವಾಗುತ್ತದೆ. ಗರಿಷ್ಠ ಮಿತಿ 15 ಲಕ್ಷ ರೂಪಾಯಿಗೂ ನಿಗದಿಪಡಿಸಲಾಗಿದೆ. ಈ ಯೋಜನೆ ಐದು ವರ್ಷಗಳಾಗಿದ್ದು ಮೆಚ್ಯೂರಿಟಿ ಅವಧಿ ತಲುಪುತ್ತಿದ್ದಂತೆ ಮತ್ತೆ ಮೂರು ವರ್ಷಗಳವರೆಗೆ ವಿಸ್ತರಿಸಬಹುದಾಗಿದೆ.
ಜನವರಿಯಿಂದ ಡಿಸೆಂಬರ್ ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಮಾಡಿದ ಠೇವಣಿಗಳಿಗೆ ಹಿರಿಯ ನಾಗರಿಕರ ಉಳಿತಾಯ ಯೋಜನೆಯು ವರ್ಷಕ್ಕೆ ಶೇಕಡ 8ರಷ್ಟು ಬಡ್ಡಿದರವನ್ನು ನೀಡುತ್ತದೆ. ಆದರೆ ಬಡ್ಡಿಗೆ ಸಂಪೂರ್ಣವಾಗಿ ತೆರಿಗೆ ವಿಧಿಸಲಾಗುತ್ತಿದ್ದು ಪ್ರತಿ ತ್ರೈಮಾಸಿಕಕ್ಕೆ ಪಾವತಿಸಬೇಕಾಗುತ್ತದೆ. ಆದರೆ ಮೆಚ್ಯೂರಿಟಿಯ ಮೇಲೆ ಯಾವುದೇ ಬಡ್ಡಿಯನ್ನು ನೀಡಬೇಕಾಗಿಲ್ಲ. ಹೂಡಿಕೆ ಮಾಡಿದಾಗ ಇರುವ ಬಡ್ಡಿದರವು ಹಾಗೆಯೇ ಉಳಿಯುತ್ತದೆ. ಇದು ಕೂಡಾ ಉಳಿತಾಯದ ಜತೆಗೆ ಆದಾಯ ತೆರಿಗೆ ಕಾಯಿದೆ -1961 ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಕಡಿತ ಪಡೆಯುತ್ತದೆ.
ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್
ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಯನ್ನು ನ್ಯಾಷನಲ್ ಸೇವಿಂಗ್ಸ್ ಟೈಮ್ ಡೆಪಾಸಿಟ್ ಅಕೌಂಟ್ ಎನ್ನುವ ಇನ್ನೊಂದು ಹೆಸರಿನಿಂದಲೂ ಕರೆಯುತ್ತಾರೆ. ಖಾತೆಯನ್ನು ಬ್ಯಾಂಕ್ ನ ನಿಶ್ಚಿತ ಠೇವಣಿ ಖಾತೆಗಳಿಗೆ ಹೋಲಿಸಬಹುದು ಮತ್ತು ಬಹುತೇಕ ಅದೇ ಅವಧಿಯನ್ನು ಕೂಡಾ ಹೊಂದಿರುತ್ತದೆ. ಇನ್ನು ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ನಂತಹ ಸಣ್ಣ ಉಳಿತಾಯ ಯೋಜನೆಯ ಬಡ್ಡಿದರವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ. ಇದರಲ್ಲಿ ಗರಿಷ್ಟ ಹೂಡಿಕೆ ಮಿತಿಯಿಲ್ಲ.
ಕನಿಷ್ಟ ಹೂಡಿಕೆ ಮಿತಿ 1000 ರೂ. ಆಗಿದೆ. ವಾರ್ಷಿಕ ಬಡ್ಡಿಯನ್ನು ಖಾತೆದಾರರ ಉಳಿತಾಯ ಖಾತೆಗೆ ಜಮೆ ಮಾಡಲಾಗುತ್ತದೆ. ಐದು ವರ್ಷಗಳ ಕಾಲವಧಿಯಲ್ಲಿ ಮಾಡಿದ ಟೈಮ್ ಡೆಪಾಸಿಟ್ ಆದಾಯ ತೆರಿಗೆ ಕಾಯಿದೆ -1961 ಸೆಕ್ಷನ್ 80C ಅಡಿಯ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ. 5 ವರ್ಷಗಳ ಅವಧಿಯ ಠೇವಣಿಗಾಗಿ 7% ರಷ್ಟು ತ್ರೈಮಾಸಿಕ ಬಡ್ಡಿವಿದೆ.
ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ:
ಇದರಲ್ಲಿ 100 ರೂ. ದ್ವಿಗುಣಗೊಳಿಸುವಂತೆ ಕನಿಷ್ಟ 1000 ರೂ. ಹೂಡಿಕೆ ಮಾಡಬಹುದು. ಗರಿಷ್ಟ ಮೊತ್ತಕ್ಕೆ ಮಿತಿಯಿಲ್ಲ. ಐದು ವರ್ಷಗಳ ಯೋಜನೆ ಇದಾಗಿದೆ. ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರದ ಹೂಡಿಕೆದಾರರು ಸಾಲಗಳನ್ನು ಪಡೆಯಲು ಭದ್ರತೆಯಾಗಿ ಅಥವಾ ಅಧಾರವಾಗಿಯೂ ಬಳಸಿಕೊಳ್ಳಬಹುದು. ಉದಾಹರಣೆಗೆ ನ್ಯಾಷನಲ್ ಸೇವಿಂಗ್ಸ್ ಸಿಸ್ಟಮ್ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರದಲ್ಲಿ7% ದಷ್ಟು ಖಚಿತಪಡಿಸಿದ ಲಾಭ ನೀಡುತ್ತದೆ . ಹೂಡಿಕೆದಾರರಿಗೆ ಸ್ಥಿರವಾದ ಆದಾಯವನ್ನು ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರದ ವಾರ್ಷಿಕ ಸ್ಥಿರ ಬಡ್ಡಿಯಿಂದ ಖಾತ್ರಿಪಡಿಸಲಾಗುತ್ತದೆ. ಈ ಯೋಜನೆಯಲ್ಲೂ 1961ರ ಆದಾಯ ತೆರಿಗೆ ಕಾಯಿದೆ ಸೆಕ್ಷನ್ 80C ಗೆ ಅನುಗುಣವಾಗಿ ತೆರಿಗೆ ಉಳಿತಾಯದ ಲಾಭವನ್ನು ಪಡೆಯಬಹುದಾಗಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications