ಬಾಲಿವುಡ್‌ನಲ್ಲಿ ಅವಕಾಶ ಸಿಗುವುದು ಸುಲಭದ ಮಾತಲ್ಲ, ಸಿಕ್ಕರೂ ಅಲ್ಲಿ ಯಶಸ್ಸನ್ನು ದಕ್ಕಿಸಿಕೊಳ್ಳಬೇಕು. ನಟ - ನಟಿಯರಾಗಬೇಕೆಂಬ ಆಸೆಯಿಂದ ಅದೆಷ್ಟೋ ಮಂದಿ ಅವಕಾಶಕ್ಕಾಗಿ ಚಿತ್ರರಂಗದ ಬಾಗಿಲು ಬಡಿಯುತ್ತಾರೆ. ಕೆಲವರಿಗೆ ಅದೃಷ್ಟ ಕೈ ಹಿಡಿದರೆ ಇನ್ನೊಂದಷ್ಟು ಮಂದಿಗೆ ಅವಕಾಶಗಳೇ ಸಿಗುವುದಿಲ್ಲ.
ಶರ್ಮನ್ ಜೋಷಿ ಮತ್ತು ಸಾಹಿಲ್ ಖಾನ್ ಬಾಲಿವುಡ್ ನಲ್ಲಿ ನಟರಾಗುವ ಅದೃಷ್ಟ ಪರೀಕ್ಷೆಗೆ ಜೊತೆಯಾಗಿ ಇಳಿದವರು. ಶರ್ಮನ್ ಜೋಷಿ ಅವರಿಗೆ ಬಾಲಿವುಡ್ ನಲ್ಲಿ ಯಶಸ್ಸು ದೊರಕಿ ತಮ್ಮ ನಟನೆಯನ್ನೇ ವೃತ್ತಿಜೀವನವಾಗಿಸಿಕೊಂಡರು. ಆದರೆ ಸಾಹಿಲ್ ಖಾನ್ ಅವರ ನಟನಾಗಬೇಕೆಂಬ ಯತ್ನ ವಿಫಲವಾಗಿತ್ತು. ಅದಕ್ಕಾಗಿ ಕೊರಗದೇ , ಅವರು ಆಯ್ದುಕೊಂಡು ದಾರಿ ವಿಭಿನ್ನವಾಗಿತ್ತು.

ಸ್ಟೈಲ್ ಮತ್ತು ಎಕ್ಸ್‌ಕ್ಯೂಸ್ ಮಿಯಂತಹ ಸಿನಿಮಾಗಳಲ್ಲಿ ನಟಿಸಿದ್ದ ಸಾಹಿಲ್ ಖಾನ್ ಅವರು ಈಗ ಬಹುಕೋಟಿ ವ್ಯವಹಾರವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಸಾಹಿಲ್ ಖಾನ್ 2001 ರಲ್ಲಿ ಶರ್ಮನ್ ಜೋಶಿ ಜೊತೆಗೆ ಸ್ಟೈಲ್ ಚಿತ್ರದಲ್ಲಿ ನಟಿಸಿದ್ದು ಆದಾದ ಬಳಿಕ ಮುಂದೆ ಎಕ್ಸ್‌ಕ್ಯೂಸ್ ಮಿ ಸಿನಿಮಾದಲ್ಲಿ ನಟಿಸಿದರು.
ಆದರೂ, ಈ ಎರಡೂ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ಕಾಣಲು ವಿಫಲವಾಗಿವೆ. ಶರ್ಮಾನ್ ಜೋಶಿ ಅವರಿಗೆ ಅಂತಿಮವಾಗಿ ದೊಡ್ಡ ಬಜೆಟ್ ಚಿತ್ರಗಳಲ್ಲಿ ನಟಿಸಲು ಅವಕಾಶ ಸಿಕ್ಕರೆ, ಸಾಹಿಲ್ ಖಾನ್ ಅವರ ಭವಿಷ್ಯ ಬೇರೆಯದೇ ಆಗಿತ್ತು. ಸಾಹಿಲ್ ಖಾನ್ ಅವರು ನಟಿಸಿದ ಸಿನಿಮಾಗಳಿಗೆ ಯಶಸ್ಸನ್ನು ಸಿಗದ ಹಿನ್ನಲೆಯಲ್ಲಿ ಸಾಹಿಲ್ ಖಾನ್ ಹಿರಿತೆರೆ ಮತ್ತು ಕಿರುತೆರೆಯಿಂದ ಬ್ರೇಕ್ ಪಡೆಯಲು ನಿರ್ಧರಿಸಿದರು.
2010 ರ ದಶಕದ ಆರಂಭದಲ್ಲಿ ತನ್ನ ನಟನಾ ವೃತ್ತಿಗೆ ವಿದಾಯ ಹೇಳಿದ ಖಾನ್, ತನ್ನದೇ ಆದ ಫಿಟ್‌ನೆಸ್ ಕಂಪನಿಯನ್ನು ಸ್ಥಾಪಿಸುವ ಮೂಲಕ ಉದ್ಯಮಿಯಾಗಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾದರು. ಸಾಹಿಲ್ ಖಾನ್ ಅವರ ಫಿಟ್‌ನೆಸ್ ಸಾಮ್ರಾಜ್ಯದ ಕಡೆಗೆ ಪ್ರಯಾಣವು ದೇಶಾದ್ಯಂತ ಜಿಮ್‌ಗಳಲ್ಲಿ ಅವರ ಸಣ್ಣ ಹೂಡಿಕೆಯೊಂದಿಗೆ ಪ್ರಾರಂಭವಾಯಿತು.
ಇದಾದ ನಂತರ ಶೀಘ್ರದಲ್ಲೇ ಡಿವೈನ್ ನ್ಯೂಟ್ರಿಷನ್ ಎಂಬ ತಮ್ಮದೇ ಆದ ಕಂಪನಿಯನ್ನು ಸ್ಥಾಪಿಸಿದರು. ಅವರ ಕಂಪನಿಯೂ whey protein, ಕ್ರಿಯೇಟೈನ್, ಮಸಲ್ ಗೈನೇರ್ಸ್ ಮುಂತಾದ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಹಲವಾರು ಮಾಧ್ಯಮ ವರದಿಗಳ ಪ್ರಕಾರ, ಸಾಹಿಲ್ ಖಾನ್ ಅವರ ವ್ಯವಹಾರದ ಡಿವೈನ್ ನ್ಯೂಟ್ರಿಷನ್ 100 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ್ದಾಗಿರುವುದು ಮಾತ್ರವಲ್ಲದೇ ದೇಶಾದ್ಯಂತ ಜಿಮ್ ಚೈನ್ ಗಳನ್ನು ಯಶಸ್ವಿ ನಡೆಸುತ್ತಿದ್ದಾರೆ.
ಇಷ್ಟು ಮಾತ್ರವಲ್ಲದೇ ಖಾನ್ ಅವರು ಪ್ರಮುಖ ಫಿಟ್ನೆಸ್ ಟ್ರೈನರ್ ಆಗಿದ್ದು, ಇದರೊಂದಿಗೆ ಅವರ ಯೂಟ್ಯೂಬ್ ಚಾನೆಲ್ ಕೂಡಾ ಇದೆ. ಸಾಹಿಲ್ ಖಾನ್ ಅವರ ಫಿಟ್‌ನೆಸ್ ಯೂಟ್ಯೂಬ್ ಚಾನೆಲ್ ನಲ್ಲಿ ಲೈಫ್ ಸ್ಟೈಲ್ , ಫಿಟ್‌ನೆಸ್ ಮತ್ತು ಬಾಡಿ ಬಿಲ್ಡಿಂಗ್ ವೀಡಿಯೊಗಳನ್ನು ಅಪ್‌ಲೋಡ್ ಮಾಡುತ್ತಾರೆ.
ಅವರ ಯೂಟ್ಯೂಬ್ ಚಾನೆಲ್ 3.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದು ಅವರ ವೀಡಿಯೊಗಳು 29 ಕೋಟಿಗೂ ಹೆಚ್ಚು ವೀವ್ಸೂ ಹೊಂದಿದೆ. ಸಾಹಿಲ್ ಖಾನ್ ನಿವ್ವಳ ಮೌಲ್ಯ 40-60 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಸಾಹಿಲ್ ಖಾನ್ ಯಶಸ್ವಿ ಉದ್ಯಮಿಯಾದ ಬಳಿಕ ಈಗ ಮತ್ತೊಮ್ಮ ಟಿವಿ ಶೋಗಳು ಮತ್ತು ಸಿನಿಮಾ ಕಾಣಿಸಿಕೊಳ್ಳಲು ಪ್ರಾರಂಭಿಸಿದ್ದಾರೆ. ಇದರ ಜೊತೆಗೆ ತಮ್ಮ ವ್ಯಾಪಾರ ಸಾಮ್ರಾಜ್ಯವನ್ನು ವಿಸ್ತರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.


Click it and Unblock the Notifications