ಕಾಯಕವೇ ಕೈಲಾಸ ಎಂದು 12ನೇ ಶತಮಾನದಲ್ಲಿ ಬಸವಣ್ಣನವರು ಹೇಳಿದರು. ಕಷ್ಟ ಪಟ್ಟು ಕೆಲಸ ಮಾಡಿದರೆ, ಅದರ ಪ್ರತಿಫಲ ಸಿಕ್ಕೆ ಸಿಗುತ್ತದೆ ಎಂದು ಇದರ ಅರ್ಥ. ಇದನ್ನು ನಂಬಿ ಅದೆಷ್ಟೋ ಜನ ಜೀವನ ಬಂಡಿಯನ್ನು ಸಾಗಿದ್ದಾರೆ. ಅಲ್ಲದೆ ಯಶಸ್ಸಿನ ಕುದುರೆಯ ಮೇಲೂ ಸವಾರಿಯನ್ನು ಮಾಡಿದ್ದಾರೆ. ಇಲ್ಲಿ ಹೇಳಲು ಹೊರಟಿರುವ ಸ್ಟೋರಿ ಸಹ ಇಂತಹದ್ದೇ ಸಾಧಕನ್ನದಾಗಿದೆ.
ಶಾಲೆಗೆ ಹೋಗುವಾಗ ಕಿತ್ತು ತಿನ್ನುವ ಬಡತನ.. ಹೊತ್ತು ಊಟ ಕಂಡರೆ, ಇನ್ನೊಂದು ಹೊತ್ತು ನೀರೇ ಗತಿ.. ಜೀವನದಲ್ಲಿ ಏನು ಮಾಡಬೇಕು ಎಂದು ತೋರದ ಬೆಂಗಳೂರು ಮೂಲದ ವ್ಯಕ್ತಿ ತನ್ನ ಕುಲಕಸಬನ್ನೇ ವೃತ್ತಿಯನ್ನಾಗಿ ಮಾಡಿಕೊಂಡರು. ಪಿಯುಸಿ ಮುಗಿಯುತ್ತಿದ್ದಂತೆ ಪೇಪರ್ ಹಾಗೂ ಪೆನ್ನಿನ ಸಹವಾಸ ಬಿಟ್ಟ ಇವರು, ಉಪಜೀವನಕ್ಕಾಗಿ ಕುಲಕಸಬಿನತ್ತ ಮುಖ ಮಾಡಿದರು. ಇನ್ನು ಆಗ ಆ ಪೋರನ ಮುಖದ ಮೇಲೆ ಚಿಗುರು ಮೀಸೆ ಸಹ ನೆಟ್ಟಗೆ ಬೆಳೆದಿರಲಿಲ್ಲ. ಆಗಲೇ ಆತ ಮನೆಯ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಳ್ಳಲು ಪಣ ತೊಟ್ಟು. ಅಂದಿನಿಂದ ಕಷ್ಟ ಪಟ್ಟು ದುಡಿದಿದಕ್ಕೆ ಅಂತಿಮವಾಗಿ ಫಲ ಲಭಿಸಿದೆ.

ಯಾರದು ಕಷ್ಟಜೀವಿ?
ಈ ವೈಕ್ತಿ ಮಾಡುವ ಕೆಲಸ ನೋಡಿದರೆ, ಇವರ ಐಶಾರಾಮಿ ಜೀವನಕ್ಕೆ ಒಂದೊಂಕ್ಕೊಂದು ಸಂಬಂಧವೇ ಇಲ್ಲ ಎಂಬಂತೆ ಇದೆ. ಆದರೆ, ಕೆಲಸದ ಮೇಲೆ ಇವರಿಗೆ ಇದ್ದ ಶ್ರದ್ಧೆ ಇವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಇವರೇ ಭಾರತದ ಬಿಲಿಯನರ್‌ಗಳಲ್ಲಿ ಒಬ್ಬರು ಬೆಂಗಳೂರು ಮೂಲದ ರಮೇಶ್ ಬಾಬು.. ರಮೇಶ್ ಬಾಬು ಬೆಂಗಳೂರಿನಲ್ಲಿ ಸಲೂನ್ ಒಂದನ್ನು ನಡೆಸುತ್ತಾರೆ.
ಯಾವ ಕೆಲಸ ಮಾಡುತ್ತಾರೆ?
ರಮೇಶ್ ಬಾಬು ಬೆಂಗಳೂರಿನಲ್ಲಿ ಸಲೂನ್ ಒಂದನ್ನು ನಡೆಸುತ್ತಾರೆ. ಇವರು ಚಿಕ್ಕವರಿದ್ದಾಗ ಈ ಸಲೂನ್‌ನನ್ನು ಇವರ ಚಿಕ್ಕಪ್ಪ ನಡೆಸುತ್ತಾ ಇದ್ದರು. ಇವರ ತಂದೆ ಮರಣದ ನಂತರ ಬೇರೆ ಬೇರೆ ಉದ್ಯೋಗಗಳನ್ನು ಮಾಡಿ ಕೊನೆಗೆ ಕುಲಕಸಬನ್ನೇ ನಂಬಿ, ಅಂಗಡಿ ನಡೆಸಲು ಬಂದರು. ಬೆಂಗಳೂರಿನ ಹೃದಯ ಭಾಗದಲ್ಲಿರುವ ಇವರ ಶಾಪ್ ಚೆನ್ನಾಗಿ ನಡೆಯುತ್ತಿತ್ತು. ಇದರಿಂದ ಇವರಿಗೆ ಕೈ ತುಂಬ ಸಂಪಾದನೆ ಆಯಿತು.
ಎಡವಿದ್ದು ಎಲ್ಲಿ? ಮಾಡಿದ್ದೇನು?
ರಮೇಶ್ ಬಾಬು 1994ರಲ್ಲಿ ತಾವು ಕೂಡಿಟ್ಟ ಹಣದಿಂದ ಮಾರುತಿ ಕಾರ್ ಒಂದನ್ನು ಖರೀದಿಸುತ್ತಾರೆ. ಎಲ್ಲವೂ ಚೆನ್ನಾಗಿ ನಡೆದಿತ್ತು. ಆದರೆ ಕಾರಿನ ಕಂತು ತುಂಬಲು ತೊಂದರೆ ಆಗುತ್ತಿತ್ತು. ಆಗೆಲ್ಲಾ ಈ ಕಾರ್‌ನ್ನು ಎದ್ದಕ್ಕಾದ್ರೂ ಖರೀದಿಸಿದ್ದೇನೆ ಎಂಬ ಪ್ರಶ್ನೆ ಇವರ ಮನದಲ್ಲಿ ಮೂಡಿರಬಹುದು. ಆದರೆ ಹಿರಿಯರ ಆ ಒಂದು ಮಾತು ಇವರ ಬದುಕಿನ ದಿಕ್ಕನ್ನೇ ಬದಲಿಸಿತು.
ತಮ್ಮ ಬಳಿ ಇದ್ದ ಮಾರುತಿ ಕಾರ್‌ನ್ನು ರಮೇಶ್ ಬಾಡಿಗೆಗೆ ಬಿಡಲು ಆರಂಭಿಸಿದರು. ಇದರಿಂದ ಕಾರ್ ಇಎಂಐ ತುಂಬಲು ಅನುಕೂಲವಾಯಿತು. ದಿನಗಳು ಕಳೆದಂತೆ, ಸಲೂನ್ ಶಾಪ್ ಜೊತೆ ಕಾರ್ ಬಾಡಿಗೆಗೆ ಬಿಡುವುದು ದೊಡ್ಡ ಬಿಸಿನೆಸ್ ಆಯಿತು. ಇವರ ಕಾರ್ ಬಾಡಿಗೆಗೆ ಕೇಳುವ ಜನರ ಸಂಖ್ಯೆ ದ್ವಿಗುಣವಾಯಿತು.

ಇದನ್ನು ಅರಿತ ರಮೇಶ್ ಬಾಬು ಸಮಯಕ್ಕೆ ತಕ್ಕಂತೆ ಐಶಾರಾಮಿ ಕಾರ್‌ಗಳ ಖರೀದಿ ಮಾಡಿದರು. ಅಲ್ಲದೆ 2008ರಲ್ಲಂತೂ ಒಂದೇ ವರ್ಷದಲ್ಲಿ ಅತಿ ಹೆಚ್ಚು ಕಾರ್‌ಗಳನ್ನು ಖರೀದಿ ಮಾಡಿದ್ದಾರೆ. ಅಲ್ಲದೆ ಐಶಾರಾಮಿ ಕಾರ್‌ಗಳು ಸಹ ಇವರ ಪಾರ್ಕಿಂಗ್ ಸ್ಪೇಸ್‌ನಲ್ಲಿ ಸ್ಥಾನ ಪಡೆದವು.
ಯಾವ ಯಾವ ಕಾರ್‌ಗಳಿಗೆ?
ದೇಶದ ಪ್ರತಿಷ್ಠಿತಿಯ ಕಂಪನಿಗಳ ಕಾರುಗಳು ಅಷ್ಟೇ ಅಲ್ಲ ವಿಶ್ವದ ಪ್ರತಿಷ್ಠಿತ ಕಂಪನಿಯ ಕಾರುಗಳ ಸಹ ಇವರ ಪಾರ್ಕಿಂಗ್ ಸ್ಥಳದಲ್ಲಿ ಸ್ಥಾನ ಪಡೆದಿವೆ. ರೋಸ್ ರಾಯಲ್ಸ್, ಆಡಿ, ಮರ್ಸಿಡಿಸ್, ಬಿಎಂಡಬ್ಲ್ಯು ಕಂಪನಿಯ ಕಾರುಗಳನ್ನು ಸಹ ಇವರು ಹೊಂದಿದ್ದಾರೆ. ಅಲ್ಲದೆ ದುಬಾರಿ ಬೆಲೆಯ ಕಾರ್‌ಗಳನ್ನು ಬಾಡಿಗೆ ನೀಡುತ್ತಿದ್ದಾರೆ.
ಕಾರು ಬಾಡಿಗೆ ವ್ಯವಹಾರವನ್ನು ಪ್ರವೇಶಿಸಲು ಬಯಸಿದ್ದರು. ಬೆಂಗಳೂರಿನಲ್ಲಿ ಈ ವ್ಯವಹಾರಕ್ಕೆ ಅಪಾರ ಸಾಮರ್ಥ್ಯವಿದೆ ಎಂದು ಅವರು ತಿಳಿದಿದ್ದರು, ಆದರೆ ಅವರು ವಿಭಿನ್ನವಾಗಿ ಮಾಡಬೇಕಾಗಿತ್ತು. ಅವರು ಕ್ರಮೇಣ ತನ್ನ ಕಾರುಗಳ ಸಂಖ್ಯೆಯನ್ನು ಹೆಚ್ಚಿಸಲಾರಂಭಿಸಿದರು. ವ್ಯಾಪಾರವು ಉತ್ತಮವಾಗಿ ನಡೆಯಲು ಪ್ರಾರಂಭಿಸಿದಾಗ, ಅವರು ಐಷಾರಾಮಿ ಕಾರುಗಳನ್ನು ಖರೀದಿಸಲು ಪ್ರಾರಂಭಿಸಿದರು. ಈಗ ಅವರ ಬಳಿ 400 ಕಾರುಗಳಿದ್ದು, ಅದರಲ್ಲಿ 120 ಐಷಾರಾಮಿ ಕಾರುಗಳಾಗಿವೆ.
ಅಂದು ಇವರ ಬಳಿ ಒಂದು ಹೊತ್ತಿನ ಊಟಕ್ಕೆ ತೊಂದರೆ ಇತ್ತು. ಆದರೆ ಇಂದು ಇವರು 100 ಕೋಟಿ ಅಧಿಕ ಆಸ್ತಿಯ ಮಾಲೀಕರು. ಒಂದು ಯಶಸ್ವಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಕೀರ್ತಿ ಈ ಉದ್ಯಮಿಗೆ ಸಲ್ಲುತ್ತದೆ.


Click it and Unblock the Notifications