ಉದ್ಯಮಿ ಮುಕೇಶ್ ಅಂಬಾನಿಯವರ ಒಡೆತನದ, ಮುಂಬೈನ ಅಲ್ಟಾಮೌಂಟ್ ರಸ್ತೆಯಲ್ಲಿರುವ ಐಷಾರಾಮಿ ಮನೆ ಅಂಟಿಲಿಯಾವನ್ನು ಇಡೀ ದೇಶದಲ್ಲೇ ಅತ್ಯಂತ ದುಬಾರಿಯಾಗಿರುವ ಖಾಸಗಿ ನಿವಾಸ ಎಂದು ಪರಿಗಣಿಸಲಾಗಿದೆ. ಈ ವೈಭವೋಪೇತ ಮನೆಯ ಬೆಲೆ 15,000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಇವರಂತೆಯೇ ವಾಣಿಜ್ಯೋದ್ಯಮಿಯಾಗಿರುವ ಬಿಲಿಯನೇರ್ ಅಜೀಂ ಪ್ರೇಮ್‌ಜಿ ಅವರು ಕೂಡಾ ಸಿಲಿಕಾನ್ ಬೆಂಗಳೂರಿನಲ್ಲಿ ಅತ್ಯಂತ ದುಬಾರಿ ಮನೆಯ ಒಡೆಯರಾಗಿದ್ದಾರೆ. ಹಲವು ಮಾಧ್ಯಮಗಳಲ್ಲಿ ವರದಿಯಾಗಿರುವ ಪ್ರಕಾರ, ವಿಪ್ರೋ ಅಧ್ಯಕ್ಷ ಮತ್ತು ಭಾರತದ ಅತ್ಯಂತ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರಾಗಿರುವ ಬಿಲಿಯನೇರ್ ಅಜೀಂ ಪ್ರೇಮ್‌ಜಿ ಅವರು ಕರ್ನಾಟಕದ ಬೆಂಗಳೂರಿನಲ್ಲಿ ಅತ್ಯಂತ ದುಬಾರಿ ಮನೆಯನ್ನು ಹೊಂದಿದ್ದು ಇದರ ಬೆಲೆ 350 ಕೋಟಿ ರೂಪಾಯಿ ಎಂದು ಊಹಿಸಲಾಗಿದೆ.

ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಅಜೀಂ ಪ್ರೇಮ್‌ಜಿಯವರ ಭವ್ಯವಾದ ಫಾರ್ಮ್‌ಹೌಸ್ 6000 ಚದರ ಅಡಿಯಿದ್ದು, ಇದು 0.5 ಎಕರೆ ಪ್ರದೇಶದಲ್ಲಿ ಹರಡಿದೆ. ಬಿಲಿಯನೇರ್‌ನ ಪ್ರೇಮ್‌ಜಿಯವರ ನಿವಾಸಕ್ಕೆ ಪುರಾತನ ಮತ್ತು ಹಳ್ಳಿಗಾಡಿನ ಸ್ಪರ್ಶ ನೀಡಲಾಗಿದ್ದು, ಇದು ಅವರ ಉದ್ಯಮಶೀಲತೆ ಮತ್ತು ಉದ್ಯಮಿಯಾಗಿ ಅವರ ಸಾಧನೆಗಳನ್ನು ಪ್ರತಿನಿಧಿಸುತ್ತವೆ.
ವಿಪ್ರೋ ಅಧ್ಯಕ್ಷರ ಐಷಾರಾಮಿ ನಿವಾಸವು ಕಲ್ಲು, ಇಟ್ಟಿಗೆ ಗೋಡೆಗಳ ಹೊರಾಂಗಣ ಹಾಗೂ ಸಾಂಪ್ರದಾಯಿಕ ಮತ್ತು ಆಧುನಿಕ ವಾಸ್ತುಶಿಲ್ಪದ ಮಿಶ್ರಣದೊಂದಿಗೆ ಒಳಾಂಗಣವನ್ನು ವಿನ್ಯಾಸಗೊಳಿಸಲಾಗಿದೆ. ಪ್ರೇಮ್‌ಜಿ ಅವರ ತಮ್ಮ ಮನೆಯ ಗ್ರ್ಯಾಂಡ್ ಹಾಲ್‌ನಲ್ಲಿ ಹಲವು ಸೌಕರ್ಯಗಳಿಂದ ಕೂಡಿದ್ದು, ಅನೇಕ ದುಬಾರಿ ಕಲಾಕೃತಿಗಳೊಂದಿಗೆ ಅಲಂಕರಿಸಿದ್ದಾರೆ.
ಅಜೀಂ ಪ್ರೇಮ್‌ಜಿ ಅವರ ಮನೆಯು ಸುಸಜ್ಜಿತವಾದ ಹಸಿರು ಹುಲ್ಲುಹಾಸು, ಅತ್ಯಾಧುನಿಕ ಹೋಮ್ ಥಿಯೇಟರ್, ಜಿಮ್ನಾಷಿಯಂ ಮತ್ತು ವಿವಿಧ ಹೂವುಗಳನ್ನು ಹೊಂದಿರುವ ಆಕರ್ಷಕ ಉದ್ಯಾನವನ ಹೀಗೆ ಹಲವು ಸೌಕರ್ಯಗಳನ್ನು ಹೊಂದಿದ್ದು ಇವೆಲ್ಲವೂ ಅವರ ಮನೆಯ ಮೌಲ್ಯವನ್ನು ಹೆಚ್ಚಿಸುತ್ತಿದ್ದು, ಇದರ ಒಟ್ಟಾರೆ ಮೌಲ್ಯ 350 ಕೋಟಿ ರೂಪಾಯಿ ಆಗಿದೆ.
ಅಜೀಂ ಪ್ರೇಮ್‌ಜಿ ಅವರು ತಮ್ಮ ತಂದೆಯ ನಿಧನದ ನಂತರ 21 ನೇ ವಯಸ್ಸಿನಲ್ಲಿ ವಿಪ್ರೋದಲ್ಲಿ ಅಧಿಕಾರ ವಹಿಸಿಕೊಂಡರು. ಐಬಿಎಂ ಭಾರತದಿಂದ ನಿರ್ಗಮಿಸಿದ ನಂತರ ಆ ಖಾಲಿ ಸ್ಥಾನ ತುಂಬಲು ಐಟಿ ವಲಯವನ್ನು ವೈವಿಧ್ಯಗೊಳಿಸಿ, ಹೇರ್ ಕೇರ್ ಮತ್ತು ಟಾಯ್ಲೆಟ್ರೀಸ್ ಉತ್ಪನಗಳನ್ನು ಪ್ರಾರಂಭಿಸುವ ಮೂಲಕ ಅಜೀಂ ಪ್ರೇಮ್‌ಜಿ ಅವರ ಸಂಸ್ಥೆ ಹೊಸ ಮಾರುಕಟ್ಟೆ ತೆರೆಯುತ್ತಿದೆ.
ಟೆಕ್ ಮ್ಯಾಗ್ನೇಟ್ ಅಜೀಂ ಪ್ರೇಮ್‌ಜಿ ಬದುಕು ಯಶಸ್ಸಿನಿಂದ ತುಂಬಿದ್ದು ಅವರ ಜೀವನ ಶೈಲಿ ಐಷಾರಾಮಿಗೆ ಸಾಕ್ಷಿಯಾಗಿದ್ದು, ಫೋರ್ಬ್ಸ್ ಪ್ರಕಾರ ಅವರ ಒಟ್ಟಾರೆ ನಿವ್ವಳ ಮೌಲ್ಯ 11.5 ಬಿಲಿಯನ್ ಯುಎಸ್ ಡಾಲರ್ ಆಗಿದೆ. ಇದು ಭಾರತೀಯ ಕರೆನ್ಸಿಯಲ್ಲಿ 95,000 ಕೋಟಿ ರೂಪಾಯಿ ಆಗಿದೆ. ಪ್ರೇಮ್‌ಜಿ ನಂತರ ಅವರ ಮಗ ರಶೀದ್ ಇತ್ತೀಚೆಗೆ ವಿಪ್ರೋ ಕಾರ್ಯಕಾರಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.


Click it and Unblock the Notifications